ಅಭಿಪ್ರಾಯ / ಸಲಹೆಗಳು

ಅಕ್ರಮ ಜೂಜಾಟ  ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಅಜ್ಜಂಪುರ   ಪೊಲೀಸ್ ಠಾಣೆ

ದಿನಾಂಕ:26/06/2021 ರಂದು ಅಜ್ಜಂಪುರದಿಂದ ಗೆಜ್ಜೆಗೊಂಡನಹಳ್ಳಿ ತೋಟಗಳಿಗೆ ಹೋಗುವ ಬಂಡಿ ದಾರಿಯಲ್ಲಿ ಹುಣಸೇಮರದ ಕೆಳಗೆ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದು ,  ಸರ್ಕಾರವು ಕೊವಿಡ್-19 ಸಾಂಕ್ರಾಮಿಕ ರೋಗ ಹರಡದಂತೆ 2 ಕ್ಕಿಂತ ಹೆಚ್ಚು ಜನರು ಒಂದು ಕಡೆ ಸೇರದಂತೆ ಆದೇಶಮಾಡಿದ್ದರೂ ಸಹ ಅಕ್ರಮವಾಗಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ 5 ಜನ ಆರೋಪಿಗಳ ಮೇಲೆ ದಾಳಿ ಮಾಡಿದ್ದು 5 ಜನರನ್ನು ವಶಕ್ಕೆ ಪಡೆದಿದ್ದು , ಆರೋಪಿತರುಗಳ ವಶದಲ್ಲಿದ್ದ ಒಂದು ಬಿಳಿಬಣ್ಣದ ಪ್ಲಾಸ್ಟಿಕ್ ಚೀಲ  .52 ಇಸ್ಪೀಟ್ ಎಲೆಗಳು ಹಾಗೂ 6.050 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ. ತಿಪ್ಪೇಶ್. ಡಿ.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 ಅಕ್ರಮ ಮದ್ಯ ಮಾರಾಟ ಪ್ರಕರಣ .

ಬಾಳೂರು  ಪೊಲೀಸ್ ಠಾಣೆ.

ದಿನಾಂಕ 26/06/2021 ರಂದು ಜಾವಳಿ ಮಲೆಮನೆ ಗ್ರಾಮದಲ್ಲಿರುವ ಶ್ರೀಕಂಠ ಹಾಗೂ ಅವರ ಮಗ ಆದಿತ್ಯ ಎಂಬುವವರು ಜಾವಳಿಮಲೆಮನೆ ಗ್ರಾಮದಲ್ಲಿರುವ ಶ್ರೀಕಂಠರವರ ಕಾಫಿತೋಟದ ಪಕ್ಕದ ಹೊಳೆಯ ದಡದಲ್ಲಿ ಅಕ್ರಮವಾಗಿ ಕಳ್ಳಭಟ್ಟಿ ಬೇಯಿಸಿ  ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಸಮವಸ್ರ್ತದಲ್ಲಿದ್ದ ನಮ್ಮಗಳನ್ನು ನೋಡಿ ಶ್ರೀಕಂಠ ಹಾಗೂ ಅವರ ಮಗ ಆದಿತ್ಯರವರು ಓಡಿಹೋಗಿದ್ದು ತೋಟದೊಳಗೆ ಹೋಗಿ ಪರಿಶೀಲಿಸಲಾಗಿ 5 ಲೀಟರ್ ನ ಬಿಳಿಯ ಪ್ಲಾಸ್ಟಿಕ್ ಕ್ಯಾನ್ ನಲ್ಲಿ ಸುಮಾರು 5 ಲೀಟರ್ ನಷ್ಟು ಕಳ್ಳಭಟ್ಟಿ ಸಾರಾಯಿಯಿದ್ದು ,ಕಳ್ಳಭಟ್ಟಿ ತಯಾರಿಸಲು ಬೇಕಾದ ಕಚ್ಚಾವಸ್ತುಗಳಾದ 10 ಪ್ಲಾಸ್ಟಿಕ್ ಕೊಡಗಳಲ್ಲಿ  ಸಂಪೂರ್ಣವಾಗಿ ತುಂಬಿಸಿಟ್ಟಿರುವ ಕಳ್ಳಭಟ್ಟಿ ಕೊಳೆ ಸುಮಾರು 150 ಲೀಟರ್ ನಷ್ಟಿರುತ್ತದೆ. ಸುಮಾರು 250 ಗ್ರಾಂನಷ್ಟು ಬಿಳಿಬಣ್ಣದ ಅಮೋನಿಯಂ ಪುಡಿ , ಹೊಳೆಯ ದಡದಲ್ಲಿ ಒಂದು ಕಲ್ಲಿನ ಒಲೆ ಇದ್ದು ಕಳ್ಳಭಟ್ಟಿ ಸಾರಾಯಿಯ  ಅಂದಾಜು ಬೆಲೆ 500 ರೂ ಆಗಿರುತ್ತೆ.  ಆರೋಪಿತರುಗಳ  ವಿರುದ್ದ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ರೇಣುಕಮ್ಮ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

 

ತರೀಕೆರೆ   ಪೊಲೀಸ್ ಠಾಣೆ.

ದಿನಾಂಕ 26.06.2021 ರಂದು ಜೋಡಿಕೋಡಿಹಳ್ಳಿ ಗ್ರಾಮದಲ್ಲಿ  ಯಾರೋ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ದಾಳಿ ಮಾಡಿದ್ದು  ಜೋಡಿಕೋಡಿಹಳ್ಳಿ ಗ್ರಾಮದ ರಾಜು ಬಿನ್ ರಾಮನಾಯ್ಕರವರು ತಮ್ಮ ಮನೆಯ ಮುಂದೆ  ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯವನ್ನು ಮಾರಾಟ ಮಾಡುತ್ತಿದ್ದು  ಆತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ಪ್ಲಾಸ್ಟಿಕ್ ಕವರ್ ಅನ್ನು  ಪರಿಶೀಲಿಸಲಾಗಿ 90  ಎಂ.ಎಲ್ ನ ಒರಿಜಿನಲ್ ಚಾಯ್ಸ್ ವಿಸ್ಕಿಯ 40  ಟೆಟ್ರಾ  ಪೌಚ್ ಗಳಿದ್ದು , ಮದ್ಯದ ಅಂದಾಜು ಬೆಲೆ 1405 /- ರೂ ಆಗಿದ್ದು ಆರೋಪಿತ ರಾಜುರವರ  ವಿರುದ್ದ ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಐ. ರಾಘವೇಂದ್ರ.   ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ:27/06/2021 ರಂದು ಬೆಳಗ್ಗೆ 11-00 ಗಂಟಯಲ್ಲಿ ಪಿಎಸ್ಐ ಲಿಂಗದಹಳ್ಳಿ ಪೊಲೀಸ್ ಠಾಣೆ ರವರು ಲಿಂಗದಹಳ್ಳಿ ಪೊಲೀಸ್ ಠಾಣಾ ಸರಹದ್ದಿನ ವರ್ತೆಗುಂಡಿ ಗ್ರಾಮದ ಕಡೆ ಸಿಬ್ಬಂದಿಗಳೊಂದಿಗೆ ಗಸ್ತಿನಲ್ಲಿರುವಾಗ, ನಂದಿಬಟ್ಟಲು ಸರ್ಕಲ್ ಬಳಿ ಮದ್ಯದ ಪಾಕೆಟ್ ಇರುವ ಬಾಕ್ಸನ್ನು ಎಸ್ಟೇಟ್ ಕಡೆ ತೆಗೆದುಕೊಂಡು ಹೋಗಿ ಮಾರಾಟ ಮಾಡಲು ಇಟ್ಟುಕೊಂಡಿರುವ ಬಗ್ಗೆ ಮಾಹಿತಿ ಖಚಿತ ಮಾಹಿತಿ ಸಂಗ್ರಹಿಸಿ ಪಂಚರೊಂದಿಗೆ ಹೋಗಿ ಧಾಳಿ ಮಾಡಲಾಗಿ ಸದರಿ ಅಸಾಮಿಯು ಪೊಲೀಸ್ ಜೀಪನ್ನು ನೋಡಿ ಮಧ್ಯ ಇರುವ ರಟ್ಟಿನ ಬಾಕ್ಸನ್ನು ತೆಗೆದುಕೊಂಡು ಓಡುತ್ತಿರುವಾಗ ಹಿಡಿದು  ವಿಚಾರಿಸಲಾಗಿ ಹೆಸರು ದೊರೆಸ್ವಾಮಿ, ಎಸ್ಟೇಟ್ನಲ್ಲಿ ಕೆಲಸ ಮಾಡುವವರಿಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದರಿಂದ ಮಧ್ಯ  ಸಾಗಾಟ ಮತ್ತು ಮಾರಾಟ ಮಾಡಲು ಪರವಾನಗಿ ಕೇಳಲಾಗಿ ಇಲ್ಲವೆಂದು ನುಡಿದಿದ್ದರಿಂದ ಪಂಚರ ಸಮಕ್ಷಮ ಪರಿಶೀಲಿಸಲಾಗಿ  ಮಧ್ಯ ತುಂಬಿದ 90 ಎಂ.ಎಲ್.ನ 96 ಒರಿಜಿನಲ್ ಚಾಯ್ಸ್ ವಿಸ್ಕಿಯ ಪೌಚ್ಗಳಿದ್ದು ಇವುಗಳ ಅಂದಾಜು ಬೆಲೆ 3372 ಆಗಿರುತ್ತದೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಶ್ರೀ ರಫೀಕ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

 ಕರ್ನಾಟಕ ಜಾನುವಾರು ಹತ್ಯಾ ಪ್ರತಿಬಂಧಕ ಸಂರಕ್ಷಣಾ ಅಧ್ಯಾದೇಶ-2020.

ಬಸವನಹಳ್ಳಿ ಪೊಲೀಸ್ ಠಾಣೆ.

 ದಿನಾಂಕ:27/06/2021 ರಂದು ಬೆಳಗ್ಗೆ 09-00 ಗಂಟೆಗೆ ಪಿಎಸ್ಐ ಬಸವನಹಳ್ಳಿ ಪೊಲೀಸ್ ಠಾಣೆರವರು ಬಸವನಹಳ್ಳಿ ಪೊಲೀಸ್ ಠಾಣಾ ಸಹರದ್ದಿನ ಚಿಕ್ಕಮಗಳೂರು ನಗರದ ಮಲ್ಲಂದೂರು ರಸ್ತೆ ಕಡೆ ಗಸ್ತಿನಲ್ಲಿರುವಾಗ ಉಪ್ಪಳ್ಳಿ ಜಾಯ್ ಕಾಫಿ ಹಿಂಬಾಗದ ದೇವಿರಮ್ಮ ದೇವಸ್ಥಾನದ ರಸ್ತೆಯಲ್ಲಿರುವ ಅಜಾದ್ ರವರ ಮನೆಯಲ್ಲಿ ಬಾಡಿಗೆಗೆ ಇರುವ ಖಲೀಮ್ ಎಂಬುವವರು ದನದ ಮಾಂಸವನ್ನು  ಮನೆಯಲ್ಲಿ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ವರ್ತಮಾನವನ್ನು ಆಧರಿಸಿ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಧಾಳಿ ಮಾಡಿದಾಗ ಆತನ ಮನೆಯಲ್ಲಿದ್ದ ಸುಮಾರು  25 ಕೆ ಜಿ. ಧನದ ಮಾಂಸ ಬೆಲೆ ಸುಮಾರು ಬೆಲೆ 3750-00, ಅದರೊಂದಿಗೆ ಮಾಂಸ ಮಾರಾಟ ಮಾಡಲು ಉಪಯೋಗಿಸುತ್ತಿದ್ದ 1/2  ಕೆ.ಜಿ. ತೂಕದ ಬಟ್ಟು, ಒಂದು ಸ್ಕೇಲ್ನ್ನು ಪಂಚರ ಸಮಕ್ಷಮ ಅಮಾನತ್ತುಪಡಿಸಿಕೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಶ್ರೀ ಅಕ್ತರ್ ಪಟೇಲ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 27-06-2021 08:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080