ಅಭಿಪ್ರಾಯ / ಸಲಹೆಗಳು

ಅಕ್ರಮ ಮರಳು ಕಳ್ಳತನ ಪ್ರಕರಣ.

ಶೃಂಗೇರಿ ಪೊಲೀಸ್ ಠಾಣೆ.

ದಿನಾಂಕ 27-07-2021 ರಂದು ಬೇಗಾರು ಕಡೆಯಿಂದ ಶೃಂಗೇರಿ ಕಡೆಗೆ ಬರುವ ರಸ್ತೆಯಲ್ಲಿ ಒಂದು ಮಿನಿ ಲಾರಿಯಲ್ಲಿ ಅಕ್ರಮವಾಗಿ ಕಳ್ಳತನದಿಂದ ಮರಳನ್ನು  ತುಂಬಿಕೊಂಡು ಬರುತ್ತಿರುವುದಾಗಿ ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಲಾರಿ ಚಾಲಕನ ಹೆಸರು ಕೇಳಲಾಗಿ ರಾಜೇಶ್ ಕುಮಾರ್, ಆನೆಗುಂದ, ಶೃಂಗೇರಿ ಎಂದು ತಿಳಿಸಿದ್ದು ವಾಹನದ ನಂಬರ್ ಕೆಎಲ್- 01 ಎಜೆ- 3802 ಆಗಿದ್ದು , ಯಾವುದೇ ಪರವಾನಗಿಯನ್ನು ಹೊಂದದೆ ವಾಹನದ ಮಾಲೀಕ ಆನೆಗುಂದದ ವಾಸಿ ಕುಮಾರ ರವರು ಮರಳು ತರಲು ಹೇಳಿದ್ದರಿಂದ ಮೀಗಾ ಹತ್ತಿರದ ಮಾಲತಿ ಹಳ್ಳದಿಂದ ರಾಜೇಶ್ ಕುಮಾರ್ ಹಾಗೂ ಗಣೇಶ್ ಸೇರಿಕೊಂಡು ಕಳ್ಳತನದಿಂದ ಮರಳನ್ನು ತುಂಬಿಕೊಂಡು ಸಾಗಾಟ ಮಾಡುತ್ತಿರುವುದಾಗಿ ತಿಳಿಸಿದ್ದು, ಮರಳಿನ ಅಂದಾಜು ಬೆಲೆ 8000/- ರೂ ಗಳಾಗಿರುತ್ತೆ. ಆರೋಪಿಗಳ ವಿರುದ್ದ ಶೃಂಗೇರಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಐ ರವಿ. ಬಿ.ಎಸ್.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಅಪಘಾತ ಪ್ರಕರಣ.

ಸಂಚಾರ ಪೊಲೀಸ್ ಠಾಣೆ.

ದಿನಾಂಕ27-07-2021 ರಂದು ಪಿರ್ಯಾದಿ ಮಹಮದ್ ಇರ್ಫಾನ್ ರವರು ದಿನಾಂಕ 12-07-2021 ರಂದು ತನ್ನ ಬಾಬ್ತು ಕೆಎ-18 ಇಜಿ-4948 ಮೋಟಾರ್ ಬೈಕಿನಲ್ಲಿ ಔಷಧಿಯನ್ನು ತೆಗೆದುಕೊಂಡು ಉಪ್ಪಳ್ಳಿಯ ಮಾಡೆಲ್ ಶಾಲೆಯಿಂದ ಸ್ವಲ್ಪ ಮುಂದೆ ಬರುತ್ತಿರುವಾಗ ಕಲ್ಲುದೊಡ್ಡಿ ಕಡೆಗೆ ಹೋಗಲು ಬಂದ ಕೆಎ-18 ಇಜಿ- 8186 ಮೋಟಾರ್ ವಾಹನದ ಚಾಲಕ ಅಲ್ತಾಫ್ ರವರು ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಬೈಕಿಗೆ ಡಿಕ್ಕಿ ಹೊಡೆಸಿದ್ದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಬಲಗಾಲು ಹಾಗೂ ಬಲಗೈಗೆ ಪೆಟ್ಟಾಗಿರುತ್ತೆ. ಅಲ್ತಾಫ್ ರವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನನ್ವಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ .

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ 26/07/2021 ರಂದು ಯಾರೋ ಇಬ್ಬರು ವ್ಯಕ್ತಿಗಳು ಕಡಬಗೆರೆಯಿಂದ ಖಾಂಡ್ಯ ಚೆಕ್ ಪೋಸ್ಟ್ ಕಡೆಗೆ  ಬೈಕಿನಲ್ಲಿ ಅಕ್ರಮವಾಗಿ ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ಖಾಂಡ್ಯ ಚೆಕ್ ಪೋಸ್ಟ್ನಲ್ಲಿ ಇದ್ದಾಗ ಯರೋ ಇಬ್ಬರು ಆಸಾಮಿಗಳು ಬೈಕಿನಲ್ಲಿ ಬರುತ್ತಿದ್ದು ಸಮವಸ್ರ್ತದಲ್ಲಿದ್ದ ನಮ್ಮಗಳನ್ನು ನೋಡಿ ಬೈಕಿನಲ್ಲಿದ್ದ ಒಬ್ಬ ಆಸಾಮಿಯು ಓಡಿಹೋಗಿದ್ದು ಇನ್ನೊಬ್ಬ ಆಸಾಮಿಯನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಸುನೀಲ್ ಬಿನ್ ಸುರೇಶ್, ಸಿದ್ದಾಪುರ ಗ್ರಾಮ ಎಂದು ಓಡಿ ಹೋದ ವ್ಯಕ್ತಿಯ ಹೆಸರು ಉಜ್ಜನಿ ವಾಸಿ ಸೆಬಾಸ್ಟಿನ್ ಎಂದು ತಿಳಿಸಿದ್ದು ಬೈಕನ್ನು ಪರಿಶೀಲಿಸಲಾಗಿ ಬೈಕಿನ ಮೇಲಿದ್ದ ಪ್ಲಾಸ್ಟಿಕ್ ಚೀಲದಲ್ಲಿದ್ದ 90 ಎಂ.ಎಲ್ ನ ಕ್ಯಾಪ್ಟನ್ ಮರ್ಟಿನ್ ಸ್ಪೆಷಲ್ ವಿಸ್ಕಿಯ 96 ಪೌಚ್ ಗಳಿದ್ದು, ಮದ್ಯದ ಅಂದಾಜು ಬೆಲೆ 3372/ ರೂ ಆಗಿರುತ್ತೆ, ಇವುಗಳನ್ನು ಕಡಬಗೆರೆಯ ಚಂದನ್ ಬಾರ್ ನಿಂದ ಖರೀದಿ ಮಾಡಿಕೊಂಡು ಸಿದ್ದಾಪುರದ ಅಶೋಕ್ ರವರ ಮನೆಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ನಿತ್ಯಾನಂದಗೌಡ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 27-07-2021 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080