ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ  ಪ್ರಕರಣ.

ಸಿ.ಇ.ಎನ್ . ಪೊಲೀಸ್ ಠಾಣೆ.

ದಿನಾಂಕ 26-08-2021 ರಂದು 16-00 ಗಂಟೆ ಸಮಯದಲ್ಲಿ  ಕರ್ತಿಕೆರೆ ಗ್ರಾಮದಲ್ಲಿರುವ ಬೀ ಹೈವ್ ಹೋಂಸ್ಟೇ ಮುಂಭಾಗದಲ್ಲಿರುವ ಚಿಕ್ಕಮಗಳೂರು - ಬೇಲೂರು ಕಡೆಗೆ ಹಾದು ಹೋಗಿರುವ  ರಸ್ತೆಯಲ್ಲಿ ಬೇಲೂರು ಕಡೆಯಿಂದ ಚಿಕ್ಕಮಗಳೂರು ಕಡೆಗೆ ಕೆಎ-03 ಎಂಕ್ಯೂ- 519 ರ ಕಾರು ಬಂದಿದ್ದು ದಾಳಿ ನಡೆಸಲಾಗಿ ಕಾರಿನಲ್ಲಿದ್ದ  1) ಸುಹೇಲ್ ಪಾಷಾ ಬಿನ್ ಬಾಷಾ , ಚನ್ನೇಗೌಡ ಬಡಾವಣೆ, ಮದ್ದೂರು 2) ಆಸೀಫ್ @ಮುತ್ತನ್ @ ಪೈಲೆಟ್ ಬಿನ್ ಅಮೀರ್ ಪಾಷಾ, ಮಾರ್ಕೆಟ್ ರೋಡ್ , ಚಿಕ್ಕಮಗಳೂರು  3) ಅತೀಕ್ ಅಹಮದ್ ಬಿನ್ ಲೇಟ್ ಅಮೀರ್ ಪಾಷಾ, ಶಾಂತಿನಗರ, ಚಿಕ್ಕಮಗಳೂರು ಇವರುಗಳನ್ನು ವಶಕ್ಕೆ ಪಡೆದು ಕಾರಿನಲ್ಲಿ 4 ಬಿಳಿ ಪ್ಲಾಸ್ಟಿಕ್ ಚೀಲಗಳಲ್ಲಿದ್ದ ಸುಮಾರು 25,00,000/- ರೂ ಮೌಲ್ಯದ ಒಟ್ಟು 101 ಕೆ.ಜಿ. 20 ಗ್ರಾಂನಷ್ಟು ಗಾಂಜಾ ಹಾಗೂ ಕಾರನ್ನು ಅಮಾಣತ್ತುಪಡಿಸಿಕೊಂಡು ಗಾಂಜಾವನ್ನು ಆಂದ್ರಪ್ರದೇಶದಿಂದ ತರಲು ಹೇಳಿದ್ದ ಗೌರಿಬಿದನೂರು ವಾಸಿಯಾದ ಇಸ್ಮಾಯಿಲ್, ಹಾಗೂ ಗಾಂಜಾವನ್ನು ತರಲು ಹಣ ಸಹಾಯ ಮಾಡಿದ್ದ ಮೋಸೀನಾ ಹಾಗೂ 3 ಜನ ಆರೋಪಿತರ ವಿರುದ್ದ ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.ಈ ಕಾರ್ಯಾಚರಣೆಯಲ್ಲಿ ಪಿ.ಐ. ರಕಿತ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.   

ಕಳ್ಳತನ  ಪ್ರಕರಣ

ಮಲ್ಲಂದೂರು   ಪೊಲೀಸ್ ಠಾಣೆ.

ದಿನಾಂಕ: 26/08/2021 ರಂದು ಪಿರ್ಯಾದಿ ಸುಜಾತ, ಮೇಲುಹೊಲದಗದ್ದೆ ವಾಸಿರವರು ಠಾಣೆಗೆ ಹಾಜರಾಗಿ ನೀಡಿದ ದೂರಿನಲ್ಲಿ ದಿನಾಂಕ 24-08-2021 ರಂದು ಮನೆಯವರೆಲ್ಲಾ ಮಗನ ಚಿಕಿತ್ಸೆಗಾಗಿ ಹಾಸನಕ್ಕೆ ಹೋಗಿದ್ದೆವು.ನಮ್ಮ  ಮನೆಯ ಪಕ್ಕದಲ್ಲಿರುವ ಕೂಲಿಲೈನ್ ನಲ್ಲಿ ರತ್ನಮ್ಮ ಹಾಗೂ ಆಕೆಯ ಮಗ ಚಂದ್ರ ಎಂಬುವವರು ತೋಟದ ಕೆಲಸ ಮಾಡಿಕೊಂಡು ವಾಸವಾಗಿದ್ದರು. ದಿನಾಂಕ 25-08-2021 ರಂದು ಸಂಜೆ 04-00 ಗಂಟೆ ಸಮಯದಲ್ಲಿ   ಮಗನಿಗೆ ಚಿಕಿತ್ಸೆ ಕೊಡಿಸಿಕೊಂಡು ವಾಪಾಸ್ ಮನೆಗೆ ಬಂದಾಗ ಯಾರೋ ಕಳ್ಳರು ನಮ್ಮ ಮನೆಯ ಬಾತ್ ರೂಂನ ಕಿಟಕಿಯ ಗಾಜನ್ನು ತೆಗೆದು ವರಾಂಡದಲ್ಲಿಟ್ಟಿದ್ದ ಕಭ್ಭಣದ ಗಾಡ್ರೇಜ್ ಬೀರುವನ್ನು ಯಾವುದೋ ಅಯುಧದಿಂದ   ಮೀಟಿ ಮುರಿದು ಬೀರುವಿನಲ್ಲಿದ್ದ 89 ಗ್ರಾಂ ತೂಕದ ಚಿನ್ನದ ವಡವೆಗಳು , 35 ಗ್ರಾಂ ತೂಕದ ಬೆಳ್ಳಿಯ  ಆಭರಣಗಳನ್ನು ಹಾಗೂ ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು. ಕೂಲಿಲೈನ್  ನಲ್ಲಿ ವಾಸವಾಗಿರುವ ರತ್ನಮ್ಮ ಹಾಗೂ ಆಕೆಯ ಮಗ ಚಂದ್ರರವರು ಮನೆಬಿಟ್ಟು ಹೋಗಿದ್ದು ಅವರೇ ಈ ಕಳ್ಳತನವನ್ನು ಮಾಡಿರುತ್ತಾರೆಂದು ಅನುಮಾನವಿದ್ದು   ಕಳುವಾಗಿರುವ ಚಿನ್ನದ ಹಾಗೂ ಬೆಳ್ಳಿಯ ಆಭರಣಗಳನ್ನು  ಪತ್ತೆ ಮಾಡಬೇಕೆಂದು ನೀಡಿದ ಪಿರ್ಯಾದುವಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 27-08-2021 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080