ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಕೊಪ್ಪ ಪೊಲೀಸ್ ಠಾಣೆ.

ದಿನಾಂಕ: 27-01-2022 ರಂದು ಕೊಪ್ಪ ಠಾಣಾ ಸರಹದ್ದಿನ ಆರ್ಡಿಕೊಪ್ಪ ವಾಸಿ ಶ್ರೀಮತಿ ಜಯಲಕ್ಷ್ಮಿ ನೀಡಿದ ದೂರಿನಲ್ಲಿ ದಿನಾಂಕ 21/01/2022 ರಂದು ಪಿರ್ಯಾಧಿ ಗಂಡ ಮಹೇಶ್ ಆರೋಗ್ಯ  ಸರಿಯಿಲ್ಲದೆ ನನ್ನ ಗಂಡ ನಾರ್ವೆ ಅಂಗಡಿ ಹೋಗಿ ಬರುತ್ತೇನೆಂದು ಹೇಳಿ ಹೋದವರು ಈ ವರೆಗೂ ಹುಡುಕಲಾಗಿ  ಪತ್ತೆ ಅಗಿಲ್ಲವೆಂದು ಕಾಣೆಯಾಗಿರುವ ತನ್ನ ಗಂಡ ಮಹೇಶ್ ಬಿನ್ ಸಿನಾ ನಾಯ್ಕ, 40 ವರ್ಷ, 5.3. ಅಡಿ ಎತ್ತರ, ಗೋದಿ ಮೈ ಬಣ್ಣ , ಬಿಳಿ ಹಾಗೂ ಕೆಂಪು ಬಣ್ಣದ ಗೇರೆಗಳುಳ್ಳ ತುಂಬು ತೋಳಿನ ಷರಟು ಕಪ್ಪು ಕಲರ್ ಪ್ಯಾಂಟು ಧರಿಸಿದ್ದು, ಕನ್ನಡ , ಮರಾಠಿ, ತುಳು ಬಾಷೆ ಮಾತನಾಡುತ್ತಾರೆ. ಕಾಣೆಯಾಗಿರುವ ತನ್ನ ಗಂಡನನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಕಳ್ಳತನ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ 27/01/2022 ರಂದು ಪಿರ್ಯಾಧಿ ಟಿ.ಅರ್. ವಿವೇಕ್ ಕುಮಾರ್ ನೀಡಿದ ದೂರಿನಲ್ಲಿ ಪಿರ್ಯಾಧಿ ಕೆಎ-14-ಎ-3260 ಪ್ಯಾಸೆಂಜರ್ ಆಟೋವನ್ನು ಹೊಂದಿದ್ದು , ಸದರಿ ಆಟೋವನ್ನು ದಿನಾಂಕ 26/01/2022 ರಂದು ಬೆಳಿಗ್ಗೆ ಗುಡ್ ಶೆಡ್ ಆಟೋ ನಿಲ್ದಾಣದಕ್ಕೆ ಹೋಗಲು ಶೃಂಗೇರಿ ಶಾರದ ಭವನದ ಹತ್ತಿರ ಟೀ ಯನ್ನು ಕುಡಿಯಲೆಂದು ನಿಲ್ಲಿಸಿ, ಟೀ ಕುಡಿದು ಬಂದು ನೋಡಲಾಗಿ ನಿಲ್ಲಿಸಿದ್ದ ಅಟೋ ಕಾಣೆಯಾಗಿದ್ದು ಎಲ್ಲಾ ಕಡೆ ಹುಡುಕಿದರೂ ಸಹ ಅಟೋ ಪತ್ತೆಯಾಗದೆ ಇದ್ದು, ಯಾರೋ ಕಳ್ಳರು ಅಟೋವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಟೋದ ಬೆಲೆ ಸುಮಾರು 60,000/- ರೂ ಗಳಾಗಿರುತ್ತದೆ. ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಅಟೋವನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮಧ್ಯ ಮಾರಾಟ ಪ್ರಕರಣ.

ಬಣಕಲ್ ಪೊಲೀಸ್ ಠಾಣೆ.

ದಿನಾಂಕ: 26-01-2022 ರಂದು ಬಣಕಲ್ ಪೊಲೀಸ್ ಠಾಣಾ ಸರಹದ್ದಿನ ಬೆಟ್ಟಗೆರೆ ಗ್ರಾಮದಲ್ಲಿ ಬಿ.ಕೆ. ಸುಂದ್ರೇಶ ಬಿನ್ ಲೇಟ್ ಕಾಳೆಗೌಡ ಎಂಬುವರು ಅವರ ದಿನಸಿ ಅಂಗಡಿಯಲ್ಲಿ ಅಕ್ರಮವಾಗಿ ಮಧ್ಯ ಇಟ್ಟುಕೊಂಡು ಲಾಭ ಗಳಿಸುವ ಉದ್ದೇಶದಿಂದ ಮದ್ಯ ಮಾರಾಟ  ಮಾಡುತ್ತಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆರೋಪಿತನು ಹೊಂದಿದ್ದ  180 ಎಂ.ಎಲ್.ನ 12 ಟೆಟ್ರಾ ಪ್ಯಾಕ್ ಮತ್ತು 90 ಎಂ.ಎಲ್. ನ 14 ಟೆಟ್ರಾ ಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1571/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಗಾಯತ್ರಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಕಡೂರು ಪೊಲೀಸ್ ಠಾಣೆ.

ದಿನಾಂಕ: 26-01-2022 ರಂದು ಕಡೂರು ಪೊಲೀಸ್ ಠಾಣಾ ಸರಹದ್ದಿನ ಮಲ್ಲಿದೇವಿಹಳ್ಳಿ ಗ್ರಾಮದಲ್ಲಿ ತಿಮ್ಮಯ್ಯ ಬಿನ್ ಹನುಮಯ್ಯ  ಎಂಬುವರು ಮನೆಯ ಮುಂದೆ ಇರುವ ಬಂಡಿಜಾಡಿ ರಸ್ತೆಯಲ್ಲಿ  ಅಕ್ರಮವಾಗಿ ಮಧ್ಯ ಇಟ್ಟುಕೊಂಡು ಮದ್ಯ ಮಾರಾಟ  ಮಾಡುತ್ತಿದ್ದು ಆರೋಪಿಯನ್ನು ವಶಕ್ಕೆ ಪಡೆದು ಆರೋಪಿತನು ಹೊಂದಿದ್ದ 90 ಎಂ.ಎಲ್. ನ 48 ಟೆಟ್ರಾ ಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1686/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ರಮ್ಯ ಮತ್ತು ಪ್ರೋಬೆಷನರಿ ಪಿ.ಎಸ್.ಐ. ಗುರು ಸಜ್ಜನ್, ಮಂಜುನಾಥ ,ಸಿಬ್ಬಂದಿಯವರಾದ ರಮೇಶನಾಯ್ಕ, ಓಂಕಾರ ಎಲ್.ಎಸ್., ನಿಂಗರಾಜ್ ರವರು ಪಾಲ್ಗೊಂಡಿರುತ್ತಾರೆ.

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ: 26-01-2022 ರಂದು ಲಕ್ಕವಳ್ಳಿ ಪೊಲೀಸ್ ಠಾಣಾ ಸರಹದ್ದಿನ ಬರ್ಗೇನಹಳ್ಳಿ ಗ್ರಾಮದಲ್ಲಿ ಜ್ಯೋತಿ ಕೊಂ ಲೇಟ್ ಅರುಣ  ಎಂಬುವರು ಮನೆಯ ಮುಂದೆ ಅಕ್ರಮವಾಗಿ ಮಧ್ಯ ಇಟ್ಟುಕೊಂಡು ಮದ್ಯ ಮಾರಾಟ  ಮಾಡುತ್ತಿದ್ದು ಆರೋಪಿತಳು ಮದ್ಯದ ಚೀಲವನ್ನು ಬಿಸಾಡಿ ಓಡಿ ಹೋಗಿದ್ದು ಆರೋಪಿತಳನು ಹೊಂದಿದ್ದ 90 ಎಂ.ಎಲ್. ನ 35 ಟೆಟ್ರಾ ಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1229/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಲಕ್ಕವಳ್ಳಿ ಪಿ.ಎಸ್.ಐ. ಶ್ರೀ ಶಂಭುಲಿಂಗಯ್ಯ ಎಂ.ಈ. ಮತ್ತು  ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ: 26-01-2022 ರಂದು ತರೀಕೆರೆ ಠಾಣಾ ಸರಹದ್ದಿನ ಅಮೃತಾಪುರ ವಾಸಿ ಶ್ರೀಮತಿ ಸಾವಿತ್ರಮ್ಮ ಕೋಂ ಲೇಟ್ ಮಹಾದೇವಪ್ಪ ಇವರು ನೀಡಿದ ದೂರಿನಲ್ಲಿ ದಿನಾಂಕ 25/01/2022 ರಂದು ಪಿರ್ಯಾಧಿ ಮಗಳಾದ ಶೀಲಾ ಎನ್.ಎಂ. ಇವಳು ಆಂಚೆ ಕಛೇರಿ ಕೆಲಸಕ್ಕೆ ಹೋಗಿದ್ದು ವಾಪಾಸ್ಸು ಮನೆಗೆ ಬಾರದೇ ಇದ್ದು, ಈವರೆಗೂ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ಶೀಲಾ ಎನ್.ಎಂ. 30 ವರ್ಷ, 5.5. ಅಡಿ ಎತ್ತರ, ಕಪ್ಪು ಕೂದಲು, ಕೋಲುಮುಖ, ಗೋದಿ ಮೈ ಬಣ್ಣ , ತೆಳ್ಳನೆಯ ಶರೀರ, ಕನ್ನಡ ಬéಾಷೆ ಮಾತಾನಾಡುತ್ತಾಳೆ. ಎಡ ಮೊಣ ಕೈಯಲ್ಲಿ ಹಳೆ ಗಾಯದ ಗುರುತು ಇರುತ್ತದೆ.  ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.    

ಅಕ್ರಮ ಗೋ ಮಾಂಸ ಪ್ರಕರಣ.

ಜಯಪುರ ಪೊಲೀಸ್ ಠಾಣೆ.

ದಿನಾಂಕ: 26-01-2022 ರಂದು ಜಯಪುರ ಠಾಣಾ ಸರಹದ್ದಿನ ಜಲದುರ್ಗದಲ್ಲಿ ಷರೀಪ್ ಉದ್ದಿನ್ ಅಲಿ ಬಿನ್ ಇದುಷೇಕ್  ವಾಸ ಗುತ್ತಿಖಾನ್ ಎಸ್ಟೇಟ್ ಈತನು  ಅನಿತಾಂಜಲಿ ಎಸ್ಟೇಟ್ ಹೋಗುವ ರಸ್ತೆಯ ಪಕ್ಕದಲ್ಲಿ ಆರೋಪಿತನು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದು,  ಆರೋಪಿತನನ್ನು ವಶಕ್ಕೆ ಪಡೆದು, ಸುಮಾರು 12 ಕೆ.ಜಿ. ತೂಕದ ಮಾಂಸವನ್ನು ಅಂದಾಜು 2400/- ರೂ  ವನ್ನು ಅಮಾನತ್ತುಪಡಿಸಿಕೊಂಡು ಬಂದು ಜಯಪುರ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಜ್ಯೋತಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 27-01-2022 07:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080