ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:27/03/2022 ರಂದು ಪಿರ್ಯಾದಿ ರೋಜಾ ಬಿನ್ ವೀರವೇಲು, ಹೀರೆಗೌಜ ಗ್ರಾಮ ಲಕ್ಯಾ ಹೋಬಳಿ ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ:27/03/2022 ರಂದು ಬೆಳಿಗ್ಗೆ ಪಿರ್ಯಾದಿ ತಮ್ಮ ಕಾರ್ತಿಕ್ ಮನೆ ಕೆಲಸಕ್ಕಾಗಿ ಸಿಮೆಂಟ್ ತರಲೆಂದು ಉದ್ದೋಬೋರನಹಳ್ಳಿಗೆ ತನ್ನ ಬಾಬ್ತು ಹೊಂಡಾ ಅಕ್ಟಿವಾ ಕೆಎ-18-ಇಹೆಚ್-3188 ಸ್ಕೂಟರ್ ನಲ್ಲಿ  ಉದ್ದೋಬೋರನಹಳ್ಳಿ ಎನ್.ಹೆಚ್. ಹೈವೇ ಹಾಸನಾಂಬ ಬೇಕರಿ ಹತ್ತಿರ ರಸ್ತೆಯ ಬಲಭಾಗಕ್ಕೆ ಸ್ಕೂಟರ್ ನ್ನು ತಿರುಗಿಸಿಕೊಳ್ಳುವಾಗ  ಅದೇ ಸಮಯಕ್ಕೆ ಚಿಕ್ಕಮಗಳೂರು ಕಡೆಯಿಂದ ಬಂದ ಕೆಎ-19 ಎಂಇ-6997 ರ ಕಾರಿನ ಚಾಲಕ ಕಾರನ್ನು  ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕಾರ್ತಿಕ್ ಚಾಲಾಯಿಸುತ್ತಿದ್ದ  ಬೈಕಿಗೆ ಡಿಕ್ಕಿ ಪರಿಣಾಮ ಕಾರ್ತಿಕ್  ತಲೆಗೆ ಮುಖಕ್ಕೆ ಕೈ ಕಾಲಿಗೆ  ಅತಿಯಾಗಿ ಪೆಟ್ಟಾಗಿ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯದಲ್ಲಿ  ಮೃತಪಟ್ಟಿರುತ್ತಾನೆ. ಅಪಘಾತ ಉಂಟು ಮಾಡಿದ ಕೆಎ-19 ಎಂಇ-6997 ರ ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಸಿಂಗಟಗೆರೆ ಪೊಲೀಸ್ ಠಾಣೆ.

ದಿನಾಂಕ:26-03-2022 ರಂದು ಸಿಂಗಟಗೆರೆ ಠಾಣಾ ಸರಹದ್ದಿನ ನಂಜಪ್ಪನಹಳ್ಳಿ ಗ್ರಾಮದ ವಾಸಿ ಶ್ರೀಧರ ಎನ್.ಟಿ. ಬಿನ್ ತಿಮ್ಮಪ್ಪ  ನಂಜಪ್ಪನಹಳ್ಳಿ ಮಲ್ಲಾಘಟ್ಟ ತಿರುವು ರಸ್ತೆಯ ಪಕ್ಕದಲ್ಲಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು , ಅರೋಪಿತನನ್ನು ವಶಕ್ಕೆ ಪಡೆದು, ಆರೋಪಿಯು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 48 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1680/- ರೂ ಅಗಿದ್ದು ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು  ಅರೋಪಿತನ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆ ಸಿಂಗಟಗೆರೆ ಠಾಣಾ ಪಿ.ಎಸ್.ಐ. ಶ್ರೀಮತಿ ಲೀಲಾವತಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ:26-03-2022 ರಂದು ತರೀಕೆರೆ ಠಾಣಾ ಸರಹದ್ದಿನ ಗಿರಿನಗರದ ಎಸ್.ಜೆ.ಎಂ. ಕಾಲೇಜು ಮುಂಭಾಗದಲ್ಲಿ ಪ್ರಕಾಶ ಬಿನ್ ರಾಮಕೃಷ್ಣಪ್ಪ, ಬಿ.ಎಂ. ಕೋಡಿಕ್ಯಾಂಪ್ ತರೀಕೆರೆ ವಾಸಿ ಈತನು ಅಕ್ರವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದು  ಅರೋಪಿತನನ್ನು ವಶಕ್ಕೆ ಪಡೆದು ಆರೋಪಿತನು ಸಾರ್ವಜನಿಕರಿಂದ ಸಂಗ್ರಹಿಸಿದ  4310/- ರೂ ನಗದು ಹಣ,  ಮಟ್ಕಾ ಚೀಟಿ ಮತ್ತು ಬಾಲ್ ಪೆನ್ನು ಅನ್ನು  ಅಮಾನತ್ತುಪಡಿಸಿಕೊಂಡು ಬಂದು  ಅರೋಪಿತನ ವಿರುದ್ದ ಸಿ.ಇ.ಎನ್.  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆ ಸಿ.ಇ.ಎನ್.  ಠಾಣಾ ಪಿ.ಎಸ್.ಐ ನಾಸೀರ್ ಹುಸೇನ್   ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಮನುಷ್ಯ ಕಾಣೆ ಪ್ರಕರಣ

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:27/03/2022 ರಂದು ಪಿರ್ಯಾದಿ  ಕು; ಪ್ರೀತಿಕಾ ಕೆ. ಬಿನ್  ಕೃಷ್ಣಮೂರ್ತಿ ಕಲ್ಕರೆ ಕಡೂರು ತಾಲ್ಲೋಕು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ತಂದೆ ಕೃಷ್ಣಮೂರ್ತಿ ದಿನಾಂಕ:22/03/2022 ರಂದು ಸಂಜೆ ಸಮಯದಲ್ಲಿ ಮನೆಯಲ್ಲಿ ಯಾರಿಗೂ ತಿಳಿಸದೆ ಮನೆಯಿಂದ ಹೊರಗೆ ಹೋದವರು  ವಾಪಾಸ್ಸು ಮನೆಗೆ ಬಂದಿರುವುದಿಲ್ಲ, ಈ ವರೆಗೂ  ಎಲ್ಲಾ ಕಡೆ ಹುಡುಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ನನ್ನ ತಂದೆ ಕೃಷ್ಣಮೂರ್ತಿ,  56 ವರ್ಷ, ಕೋಲುಮುಖ, ಎಣ್ಣೆಗೆಂಪು ಮೈಬಣ್ಣ, ಕಪ್ಪು ಕೂದಲು, ಬಿಳಿಬಣ್ಣದ ತುಂಬು ತೋಳಿನ ಶರಟು, ನೀಲಿ ಬಣ್ಣದ ಪಟ್ಟೆಪಟ್ಟೆ ಗೀರುಳ್ಳ ಪಂಜೆ ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ತಂದೆಯನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 27-03-2022 07:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080