ಅಭಿಪ್ರಾಯ / ಸಲಹೆಗಳು

ಬೈಕ್ ಕಳ್ಳತನ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

 ದಿನಾಂಕ 27/05/2021 ರಂದು ಅಜ್ಜಂಪುರ ಠಾಣಾ ಸರಹದ್ದಿನ ಗೆಜ್ಜೆಗೊಂಡನಹಳ್ಳಿ ವಾಸಿ ಶ್ರೀ ಮರಳಸಿದ್ದಪ್ಪ ಜಿ.ಬಿ  ರವರು ನೀಡಿದ ದೂರಿನಲ್ಲಿ ದಿನಾಂಕ;19/05/2021 ರಂದು ಮದ್ಯಾಹ್ನ 4-30 ಗಂಟೆಗೆ ಹಣ್ಣೆ ಗ್ರಾಮದಿಂದ ನೀರು ತಂದು ತಮ್ಮ ಬೈಕ್ ನಂ ಕೆಎ-66-ಹೆಚ್-2339 ನ್ನು ರಾತ್ರಿ  ಸುಮಾರು 9-30 ಗಂಟೆ ಬೈಕ್  ನ್ನು ಮನೆಯ ಮುಂದೆ ನಿಲ್ಲಿಸಿ ಮಲಗಿದ್ದು,  ದಿನಾಂಕ; 20/05/2021 ರಂದು  ಬೆಳಿಗ್ಗೆ ಎದ್ದು ನೋಡಿದಾಗ ಬೈಕ್ ನ್ನು ನೋಡಲಾಗಿ ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಬೈಕ್ ನ್ನು ಅಕ್ಕಪಕ್ಕ ಗ್ರಾಮಗಳಲ್ಲಿ ಹುಡುಕಿದರೂ ಪತ್ತೆ ಅಗದೇ ಇದ್ದು, ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಬೈಕಿನ ಬೆಲೆ ಸುಮಾರು 40,000/-ರೂ ಗಳಾಗಿದ್ದು, ಕಳ್ಳತನವಾಗಿರುವ ತನ್ನ ಬೈಕ್ ಅನ್ನು ಪತ್ತೆ ಮಾಡಿ ಕೊಡುವಂತೆ ಪಿರ್ಯಾದಿಯವರು ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಗ್ರಾಮಾಂತರ ಪೊಲೀಸ್ ಠಾಣೆ.

 ದಿನಾಂಕ 27/05/2021 ರಂದು ಗ್ರಾಮಾಂತರ  ಠಾಣಾ ಸರಹದ್ದಿನ ಕಳಸಾಪುರ ಗ್ರಾಮದ ವಾಸಿ ರವಿಕುಮಾರ್ ಕೆ.ಎಸ್. ರವರು   ರವರು ನೀಡಿದ ದೂರಿನಲ್ಲಿ ದಿನಾಂಕ;23/05/2021 ರಂದು 9-30 ಗಂಟೆ ಸಮಯದಲ್ಲಿ ಕಳಸಾಪುರ ಗ್ರಾಮದ ಹತ್ತಿರ ಇರುವ ಚಿಕ್ಕಮಗಲೂರು ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಪಿರ್ಯಾದಿ ಜಮೀನಿನ ಗೇಟಿನ ಮುಂಭಾಗದಲ್ಲಿ ಬೈಕ ನಂ ಕೆಎ-18-ಇಜೆ-3769 ಬಜಾಜ್ ಸಿ.ಟಿ. 100 ಸಿಸಿ ಅನ್ನು ನಿಲ್ಲಿಸಿ ಲಾಕ್ ಮಾಡಿ ಜಮೀನಿಗೆ ಹೋಗಿ ಕೆಲಸ ಮುಗಿಸಿಕೊಂಡು ವಾಪಾಸ್ಸು ಬಂದು ನೋಡಲಾಗಿ ನಿಲ್ಲಿಸಿದ್ದ ಸ್ಥಳದಲ್ಲಿ ಬೈಕ್ ಇರಲಿಲ್ಲ. ಬೈಕ್ ನ್ನು ಈವೆರೆಗೂ ಹುಡುಕಿದರೂ ಪತ್ತೆ ಅಗದೇ ಇದ್ದು, ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ಬೈಕಿನ ಬೆಲೆ ಸುಮಾರು 50,000/-ರೂ ಗಳಾಗಿದ್ದು , ಕಳ್ಳತನವಾಗಿರುವ ತನ್ನ ಬೈಕ್ ಅನ್ನು ಪತ್ತೆ ಮಾಡಿ ಕೊಡುವಂತೆ ಪಿರ್ಯಾದಿಯವರು ನೀಡಿದ ದೂರಿನ ಮೆರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಅಕ್ರಮ ಮದ್ಯ ಮಾರಾಟ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ 27/05/2021 ರಂದು ಮೂಡಿಗೆರೆ ಠಾಣಾ ಸರಹದ್ದಿನ ಬಿಜುವಳ್ಳಿ ಗ್ರಾಮದಲ್ಲಿ ಮಹೇಶ ಬಿನ್ ಬಸವರಾಜ ಎಂಬುವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಸುಂಡೆಕೆರೆ ಹಳ್ಳದ ಪಕ್ಕದಲ್ಲಿರುವ ಸಶ್ಮಾನಕ್ಕೆ ಹೋಗುವ ಗೇಟ್ ಬಳಿ ಇದ್ದ ಸಿಮೆಂಟ್ ಕಟ್ಟೆಯ ಹತ್ತಿರ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಅರೋಫಿಯನ್ನು ವಶಕ್ಕೆ ಪಡೆದು ಅರೋಫಿತನಿಂದ 1. 180 ಎಂ.ಎಲ್. ನ ಓಲ್ಡ್ ತವೆರಾ ವಿಸ್ಕಿ ಯ 28 ಟೆಟ್ರಾ ಪ್ಯಾಕ್ 2. ಮೆಕ್ ಡಲ್ ತ್ರಿಬಲ್ ಎಕ್ಸ್ ರಮ್ ನ 180 ಎಂ.ಎಲ್. ನ 18 ಟೆಟ್ರಾ  ಪ್ಯಾಕ್ 3. ಬ್ಲಾಕ್ ಪೇಪರ್ ನ 180 ಎಂ.ಎಲ್. ನ 42  ಟೆಟ್ರಾ ಪ್ಯಾಕ್ ಹಾಗೂ ಕ್ಯಾಪ್ಟನ್ ಮಾರ್ಟಿನ್ ವಿಸ್ಕಿಯ 90 ಎಂ.ಎಲ್.  2 ಟೆಟ್ರಾ ಪ್ಯಾಕ್ ಒಟ್ಟು  16 ಲೀಟರ್ 200 ಮಿಲಿಲೀಟರ್  ಮದ್ಯ ಅಂದಾಜು ಬೆಲೆ 8873/- ರೂ ಅಗಿದ್ದು , ಮದ್ಯವನ್ನು ವಶಪಡಿಸಿಕೊಂಡು ಬಂದು ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಕೋವಿಡ್ ಉಲ್ಲಂಘನೆ ಪ್ರಕರಣ.

ಆಲ್ದುರು ಪೊಲೀಸ್ ಠಾಣೆ

ದಿನಾಂಕ:27/05/2021 ರಂದು ಆಲ್ದುರು ಠಾಣೆ ವಾಪ್ತಿಯ ನೆರಡಿ ಗ್ರಾಮದಲ್ಲಿ ಪಿರ್ಯಾಧಿ, ಶ್ರೀ ದಯಾನಂದ, ವಿಶೇಷ ಕಾರ್ಯ ನಿವರ್ಾಹಕ ಅಧಿಕಾರಿ ಹಾಗೂ ಇತರರು ಗಸ್ತಿನಲ್ಲಿರುವಾಗ, ಆರೋಪಿ ಮನೆಯಲ್ಲಿ ರಂಜಿತನ ಬಗ್ಗೆ ವಿಚಾರಿಸಿದಾಗ ಆತನು ಮನೆಯಲ್ಲಿ ಇಲ್ಲದೆ ಇರುವುದು ಕಂಡುಬಂದಿದ್ದು,  ಆರೋಪಿ ರಂಜಿತನು ಕೋವಿಡ್ ಸೋಂಕಿತ ವ್ಯಕ್ತಿಯಾಗಿದ್ದು, ನಿರ್ಲಕ್ಷತನದಿಂದ ರಸ್ತೆಯಲ್ಲಿ ತಿರುಗಾಡುತ್ತಿದ್ದವನ್ನು ಪಿರ್ಯಾದಿ ಹಾಗು ಇತರರು ವಿಚಾರಿಸಿದಾಗ ತನಗೆ ಯಾವುದೇ ಕೊರೊನಾ ಇಲ್ಲಾ ತೋಟಕ್ಕೆ ಹೋಗಿದ್ದೆ ಎಂದು ಉದ್ದಟತನದಿಂದ ಮಾತನಾಡಿ, 14 ದಿನಗಳು ಮನೆಯಲ್ಲಿ ಕ್ವಾರಂಟೈನ್ ಇರಬೇಕಾದವರು ಮನೆಯಲ್ಲಿ ಇರದೆ ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿ ಕರ್ನಾಟಕ ವಿಪತ್ತು ನಿರ್ವಾಹಣ ಕಾಯ್ದೆ 2005 ರ ಕಲಂಗಳನ್ನು ಉಲ್ಲಂಘಿಸಿರುವುದರಿಂದ ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 27-05-2021 07:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080