ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಗ್ರಾಮಾಂತರ   ಪೊಲೀಸ್ ಠಾಣೆ.

ದಿನಾಂಕ:-27-09-2021 ರಂದು ಚಿಕ್ಕಯ್ಯ ಬಿನ್ ಲೇಟ್ ಕೆಂಚಯ್ಯ, ಕಂಬುಗತ್ತಿ ಗ್ರಾಮವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ , ನನ್ನ ಮಗಳಾದ ಭವಾನಿಯನ್ನು ಈಗ್ಗೆ 3 ವರ್ಷಗಳ ಹಿಂದೆ ಬೇಲೂರು ತಾಲ್ಲೂಕು ಚಿಕ್ಕಬ್ಯಾಡಿಗೆರೆಯ ಪ್ರದೀಪನೊಂದಿಗೆ ಮದುವೆ ಮಾಡಿಕೊಟ್ಟಿದ್ದು , ಕೀರ್ತನಾಳ ಹೆರಿಗೆಗೆಂದು ತವರು ಮನೆಗೆ ಬಂದವಳು ಗಂಡನ ಮನೆಗೆ ವಾಪಾಸ್ ಹೋಗಿರುವುದಿಲ್ಲ. ದಿನಾಂಕ 16-09-2021 ರಂದು ಬೆಳಗ್ಗೆ 10-00 ಗಂಟೆ ಸಮಯದಲ್ಲಿ ಕೂಲಿ ಕೆಲಸಕ್ಕೆ ಹೋಗಿ ಬರುವುದಾಗಿ  ಹೇಳಿ ಹೋದವಳು ಸಂಜೆಯಾದರೂ ವಾಪಾಸ್ ಮನೆಗೆ ಬಂದಿರುವುದಿಲ್ಲ. ಪರಿಚಯಸ್ಥರ, ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಲ್ಲಿ ಹುಡುಕಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಮಗಳನ್ನು ಪತ್ತೆ  ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಜೂಜು ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ 25-09-2021 ರಂದು ಸಂಜೆ 04-30  ಗಂಟೆ ಸಮಯದಲ್ಲಿ ಬಾಳೆಹೊನ್ನೂರು ಪಟ್ಟಣದ  ಡೋಬಿ ಹಳ್ಳದ ಹತ್ತಿರವಿರುವ ದುರ್ಗಾ ಬೇಕರಿ ಮುಂಭಾಗ ಅಂಗಡಿಯ ಮುಂಭಾಗದಲ್ಲಿ ಅಕ್ರಮವಾಗಿ ಐ.ಪಿ.ಎಲ್, ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ  ಹಣವನ್ನು ಸಂಗ್ರಹಿಸುತ್ತಿದ್ದ   ನಾಗರಾಜ ಬಿನ್ ಲಕ್ಷ್ಣಣರಾವ್ ಹಾಗೂ ಬೆಟ್ಟಿಂಗ್ ಗೆ ಹಣವನ್ನು ಕಟ್ಟಿದ್ದ 2) ಚೋಟಾ@ ಸಂದೀಪ್  3) ಗೌತಮ್ 4) ಸಲೀಂ 5) ಜಗನ್ನಾಥ 6) ರವಿ 7) ಹಸೇನ್ 8) ಜೀವನ್ 9) ಮಂಜು @ ಸ್ಪೀಕರ್ ಮಂಜು 10) ಸಂತು ಶ್ರೀಧರ 2) ಮಹಮದ್ ಆಲಿ 3) ರೋಷನ್ ಜಮೀರ್ @ ಜಮ್ಮು ಇವರುಗಳು ಓಡಿಹೋಗಿದ್ದು ನಾಗರಾಜನನ್ನು ವಶಕ್ಕೆ ಪಡೆದು ಓಪೋ ಕಂಪೆನಿಯ ಮೊಬೈಲ್  ಹಾಗೂ 17,100/-ರೂ ನಗದು ಹಣವನ್ನು  ಅಮಾನತ್ತುಪಡಿಸಿಕೊಂಡು ಆರೋಪಿತರುಗಳ ವಿರುದ್ದ  ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ, ನಿತ್ಯಾನಂದಗೌಡ ಪಿ.ಡಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 27-09-2021 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080