ಅಭಿಪ್ರಾಯ / ಸಲಹೆಗಳು

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ

ನಗರ ಪೊಲೀಸ್ ಠಾಣೆ

ದಿನಾಂಕ:26/10/2021 ರಂದು ನಗರ ಠಾಣಾ ವ್ಯಾಪ್ತಿಯ ಬೆಲ್ಟ್ ರಸ್ತೆಯಲ್ಲಿ ಬಿ.ಎಸ್.ಎನ್. ಎಲ್. ಕಛೇರಿ ಪಕ್ಕದ ರಸ್ತೆಯ ಆಂಚೆ ನೌಕರರ ವಸತಿ ಗೃಹಗಳ ಮುಂಭಾಗದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟ ಆಡುತ್ತಿದ್ದ ಮಂಜುನಾಥ ಪಿ. ಬಿನ್ ಪರಶುರಾಮ್ ಶಂಕರಪುರ ಚಿಕ್ಕಮಗಳೂರು ವಾಸಿ ಯನ್ನು ವಶಕ್ಕೆ ಪಡೆದು ಆರೋಪಿ ಹೊಂದಿದ್ದ ಮಟ್ಕಾ ಚೀಟಿ ಸಾರ್ವಜನಿಕರಿಂದ ಸಂಗ್ರಹಿಸಿದ 1650/- ರೂ ನಗದು ಹಣ ಮತ್ತು ಒಂದು ಬಾಲ್ ಪೆನ್ನು ಗಳನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ ಶಂಭುಲಿಂಗಯ್ಯ  ಹಾಗೂ ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ  ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ

ದಿನಾಂಕ:26/10/2021 ರಂದು ಗ್ರಾಮಾಂತರ ಠಾಣಾ ವ್ಯಾಪ್ತಿಯ ಚಿಕ್ಕೋಳಲೆ  ಗ್ರಾಮದಲ್ಲಿ ಸೋಮಶೇಖರ್ ಮತ್ತು ವಿಶಾಲಾಕ್ಷಿ ಎಂಬುವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿ ಸೋಮಶೇಖರ್ ನನ್ನು ವಶಕ್ಕೆ ಪಡೆದು ವಿಶಾಲಾಕ್ಷಿ ತಪ್ಪಿಸಿಕೊಂಡಿದ್ದು  ಆರೋಪಿತರ ಬಳಿ ಇದ್ದ ಓರಿಜನಲ್ ಚಾಯ್ಸ್ ಡಿಲಕ್ಸ್ ವಿಸ್ಕಿಯ 36 ಮದ್ಯದ ಅವುಗಳ ಬೆಲೆ 1264/- ರೂ ಅಗಿದ್ದು ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ  ಅನಿಲ್ ಕುಮಾರ್ ಟಿ ನಾಯ್ಕ   ಹಾಗೂ ರವರು ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ಕಡೂರು ಪೊಲೀಸ್ ಠಾಣೆ

ದಿನಾಂಕ:26/10/2021 ರಂದು ಕಡೂರು ಠಾಣಾ ವ್ಯಾಪ್ತಿಯ ಸಾದರಹಳ್ಳಿ ಗ್ರಾಮದಿಂದ ಮಾಡಾಳು ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ  ಮಂಜನಾಯ್ಕ ಬಿನ್ ತಿಮ್ಮಾನಾಯ್ಕ ಮಾಡಾಳು ಗ್ರಾಮ ವಾಸಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಆರೋಪಿಯನ್ನು ವಶಕ್ಕೆ ಪಡೆದು ಆರೋಪಿ ಬಳಿ ಇದ್ದ ರಾಜಾ ವಿಸ್ಕಿಯ 38 ಮದ್ಯದ ಅವುಗಳ ಬೆಲೆ 1335/- ರೂ ಅಗಿದ್ದು ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ  ರಮ್ಯ ಎನ್. ಕೆ.  ಹಾಗೂ ರವರು ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ಮನುಷ್ಯ ಕಾಣೆ  ಪ್ರಕರಣ

ಮಲ್ಲಂದೂರು ಪೊಲೀಸ್ ಠಾಣೆ

ದಿನಾಂಕ:26/10/2021 ರಂದು ಪಿರ್ಯಾದಿ ಲಕ್ಷ್ಮಣ ಬಿನ್ ಸಿದ್ದಯ್ಯ  ರವರು ನೀಡಿದ ದೂರಿನಲ್ಲಿ ದಿನಾಂಕ 24/10/2021 ರಂದು ಬೆಳಿಗ್ಗೆ ಪಿರ್ಯಾದಿಯವರ ಮಗ ಶರತ್ ರವರು ಮನೆಯಲ್ಲಿ ಯಾರು ಇಲ್ಲದ ಸಮಯದಲ್ಲಿ ಮನೆಯಿಂದ ಹೊರಗೆ ಹೋದವನು ವಾಪಾಸ್ಸು ಬಂದಿರುವುದಿಲ್ಲ ಈವರೆಗೂ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಚಹರೆ ಹೆಸರು:ಶರತ್ ವಯಸ್ಸು; 19 ವರ್ಷ  ಕನ್ನಡ  ಬಾಷೆ ಮಾತಾನಾಡುತ್ತಾನೆ. ಕೋಲುಮುಖ, ಕಪ್ಪು ಮೈ ಬಣ್ಣ 5 ಅಡಿ ಎತ್ತರ, ಸಾದಾರಣ ಮೈಕಟ್ಟು ಬಟ್ಟೆ: ಬಿಳಿ ಬಣ್ಣದ ಶರಟು, ಕಪ್ಪು ಬಣ್ಣದ ಪ್ಯಾಂಟು ಧರಿಸಿರುತ್ತಾನೆ.  ಎಂದು ನೀಡಿದ ದೂರಿನ ಮೇರೆಗೆ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 27-10-2021 07:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080