ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಸಾಗಾಣಿಕೆ ಪ್ರಕರಣ.

ಬಾಳೆಹೊನ್ನೂರು  ಪೊಲೀಸ್ ಠಾಣೆ.

ದಿನಾಂಕ:27-11-2021 ರಂದು ಬಾಳೆಹೊನ್ನೂರು  ಠಾಣಾ ಸರಹದ್ದಿನ ಸಂಗಮೇಶ್ವರ ಪೇಟೆ  ಗ್ರಾಮದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ಮದ್ಯವನ್ನು ಕೆ.ಎ. 21 ಹೆಚ್. 9616 ಹಿರೋಹೊಂಡಾ ಸ್ಲೆಂಡರ್ ಪ್ಲಸ್ ಬೈಕಿನಲ್ಲಿ ಸಾಗಾಣಿಕೆ ಮಾಡುತ್ತಿದ್ದ ಆರೋಪಿತರಾದ  ರಾಜೇಶ್ ಬಿನ್ ಶಂಕರೇಗೌಡ ಮತ್ತು ಕೆ.ಎಸ್. ವೆಂಕಟೇಶ ಬಿನ್ ಶಿವಣ್ಣ ರವರನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 96 ಟೆಟ್ರಾಪ್ಯಾಕ್ ಮದ್ಯವಿರುವ 3 ಬಾಕ್ಸ್ ಮದ್ಯವನ್ನು  ಮತ್ತು ಬೈಕ್ ನ್ನು  ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 10,117/-ರೂ ಆಗಿದ್ದು, ಆರೋಪಿತರ ವಿರುದ್ದ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಾಳೆಹೊನ್ನೂರು  ಪಿ.ಎಸ್.ಐ. ಶ್ರೀ ನಿತ್ಯಾನಂದ ಗೌಡ ಪಿ.ಡಿ. ಹಾಗೂ ಸಿಬ್ಬಂದಿಯಾದ ಬಸವರಾಜ್, ಯಾಕೂಬ್ ತಾಂಬೂಲಿ,  ಪ್ರದೀಪ್ , ಶಶಿಕುಮಾರ್ ರವರು ಪಾಲ್ಗೊಂಡಿರುತ್ತಾರೆ..

ಅಕ್ರಮ ಮದ್ಯ ಮಾರಾಟ ಪ್ರಕರಣ

ಕಡೂರು  ಪೊಲೀಸ್ ಠಾಣೆ.

ದಿನಾಂಕ:27-11-2021 ರಂದು ಕಡೂರು ಠಾಣಾ ಸರಹದ್ದಿನ ಬುಕ್ಕಸಾಗರ ಕೊರಚರಹಟ್ಟಿ ಗ್ರಾಮದ ರಂಗನಾಥ ಬಿನ್ ಗೌರಪ್ಪರವರು  ತಮ್ಮ ಅಂಗಡಿಯ ಹಿಂಭಾಗದ ಶೆಡ್ಡಿನಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಆರೋಪಿತನನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 650 ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 22,834/-ರೂ ಆಗಿದ್ದು, ಆರೋಪಿ ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕಡೂರು ಪಿ.ಎಸ್.ಐ. ಶ್ರೀಮತಿ ರಮ್ಯ ಎನ್. ಕೆ. ಹಾಗೂ ಪ್ರೋ; ಪಿ.ಎಸ್.ಐ.ನವೀನ್ , ಮತ್ತು ಸಿಬ್ಬಂದಿಗಳಾದ ಉಮೇಶ್ , ರಮೇಶ್ ನಾಯ್ಕ, ಓಂಕಾರಮೂರ್ತಿ, ಈಶ್ವರ, ಕಿಶೋರ್, ಅರುಣ್, ನಾಗೇಗೌಡ ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ಸಿ.ಇ.ಎನ್.   ಪೊಲೀಸ್ ಠಾಣೆ.

ದಿನಾಂಕ:26-11-2021 ರಂದು ಸಂಜೆ ತರೀಕೆರೆ ಠಾಣಾ ಸರಹದ್ದಿನ ತರೀಕೆರೆ ಪಟ್ಟಣದ ಕೋಡಿ ಕ್ಯಾಂಪ್ ಬಳಿ  ಅಕ್ರಮವಾಗಿ ಮಟ್ಕಾ  ಜೂಜಾಟ ಆಡಿಸುತ್ತಿದ್ದ  ಆರೋಪಿತರಾದ 1. ಮುಸ್ತಾಪ್ ಬಿನ್ ಲೇಟ್ ಅಹಮ್ಮದ್  2. ಕೃಷ್ಣಮೂರ್ತಿ ಟಿ.ಎನ್. @ ಸುನೀಲ್ ಬಿನ್  ಲೇಟ್ ನಾಗರಾಜ್  3. ಟಿ.ವಿ. ಗಿರೀಶ್ ಬಿನ್ ವಿರೂಪಾಕ್ಷಪ್ಪ  ರವರನ್ನು ವಶಕ್ಕೆ ಪಡೆದು ಆರೋಪಿತರು  ಮಟ್ಕಾ ಜೂಜಾಡಲು ಬಳಸಿದ್ದ 7850/-ರೂ ನಗದು ಹಣ,  ಮಟ್ಕಾ ನಂಬರ್ ಹಾಳೆ  ಹಾಗೂ ಒಂದು ಪೆನ್ ಅನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್.  ಠಾಣಾ ಪಿ.ಎಸ್.ಐ. ಶ್ರೀ ರಫಿಕ್ ಎಂ.  ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ಸಿ.ಇ.ಎನ್.   ಪೊಲೀಸ್ ಠಾಣೆ.

ದಿನಾಂಕ:26-11-2021 ರಂದು ಸಂಜೆ ತರೀಕೆರೆ ಠಾಣಾ ಸರಹದ್ದಿನ ತರೀಕೆರೆ ಪಟ್ಟಣದಿಂದ ದವಡಕೆರೆಗೆ ಹೋಗುವ ರಸ್ತೆಯಲ್ಲಿ ಕನಕದಾಸ ಯುವಕ ಸಂಘದ ದ್ವಜ ಸ್ತಂಭದ ಬಳಿ   ಅಕ್ರಮವಾಗಿ ಮಟ್ಕಾ   ಜೂಜಾಟ ಆಡಿಸುತ್ತಿದ್ದ  ಆರೋಪಿತರಾದ 1. ದೇವೇಂದ್ರರಾವ್ ಬಿನ್ ಲೇಟ್ ದಶರಥರಾವ್   2. ಮಧು ಟಿ.ಎಂ.  @ ಮಸಾಲೆ ಮಧು  ಬಿನ್  ಲೇಟ್ ಮಂಜುನಾಥ  ರವರನ್ನು ವಶಕ್ಕೆ ಪಡೆದು ಆರೋಪಿತರು ಮಟ್ಕಾ ಜೂಜಾಡಲು ಬಳಸಿದ್ದ 12160/-ರೂ ನಗದು ಹಣ,  ಮಟ್ಕಾ ನಂಬರ್ ಹಾಳೆ  ಹಾಗೂ ಒಂದು ಪೆನ್ ಅನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್.  ಠಾಣಾ ಪಿ.ಎಸ್.ಐ. ನೀತು ಆರ್. ಗುಡೆ. ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

 ಲಿಂಗದಹಳ್ಳಿ  ಪೊಲೀಸ್ ಠಾಣೆ

 ದಿನಾಂಕ 26-11-2021 ರಂದು ಲಿಂಗದಹಳ್ಳಿ ಠಾಣಾ ಸರಹದ್ದಿನ ನಂದಿಹೊಸಳ್ಳಿ ವಾಸಿಯಾದ ಪಿರ್ಯಾದಿ ಶ್ರೀಮತಿ ಶೋಭಾ ರವರು ನೀಡಿದ ದೂರಿನಲ್ಲಿ ದಿನಾಂಕ:26-11-2021 ರಂದು ಸಂಜೆ ಮನೆಯಲ್ಲಿ ಇದ್ದ ಪಿರ್ಯಾದಿಯ ಹಿರಿಯ ಮಗಳು ವೈಶಾಲಿಯು ಪಿರ್ಯಾದಿ ಪಕ್ಕದ ಮನೆಗೆ ಹೋಗಿ ವಾಪಾಸ್ಸು ಬಂದು ನೋಡಲಾಗಿ ಮಗಳು ಮನೆಯಲ್ಲಿ ಇಲ್ಲದೆ ಕಾಣೆಯಾಗಿದ್ದು, ಪಿರ್ಯಾದಿ ಮಗಳು ವೈಶಾಲಿ 18 ವರ್ಷ ಇವಳನ್ನು ಪತ್ತೆ ಮಾಡಿಕೊಂಡುವಂತೆ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. 

ಇತ್ತೀಚಿನ ನವೀಕರಣ​ : 27-11-2021 07:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080