ಅಭಿಪ್ರಾಯ / ಸಲಹೆಗಳು

ಅಕ್ರಮ ಜೂಜಾಟ ಹಾಗೂ ಕೊವಿಡ್- 19 ನಿಯಮ ಉಲ್ಲಂಘನೆ ಪ್ರಕರಣ

ಅಜ್ಜಂಪುರ  ಪೊಲೀಸ್ ಠಾಣೆ .

ದಿನಾಂಕ 27/06/2021 ರಂದು ಠಾಣೆಯಲ್ಲಿರುವಾಗ್ಗೆ ಶಿವನಿ ಗ್ರಾಮದ ಕೆರೆಯ ಹಿಂಭಾಗ  ಸಾರ್ವಜನಿಕ ಸ್ಥಳದಲ್ಲಿ  ಅಕ್ರಮವಾಗಿ ಹಣವನ್ನು ಕಟ್ಟಿಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಶಿವನಿ ಗ್ರಾಮದ ಕೆರೆಯ ಹಿಂಭಾಗ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಜೂಜಾಟವಾಡುತ್ತಿದ್ದು ,ಕೊವಿಡ್-19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ, ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ಅಕ್ರಮವಾಗಿ ಜೂಜಾಟವಾಡುತ್ತಿದ್ದ 8 ಜನರಲ್ಲಿ 1)ಆಂಜನೇಯ 2) ವಿನಯ್ 3) ಚೇತನ್ 4) ಸಿದ್ರಾಮಪ್ಪ 5) ಮಂಜುನಾಥ 6) ರಘು ಬಿನ್ ಸತ್ಯನಾರಾಯಣ ಎಂಬುವವರನ್ನು  ವಶಕ್ಕೆ  ಪಡೆದಿದ್ದು,  ಉಳಿದ 1) ಸಂಜು 2) ಶಂಕರಪ್ಪ ಎಂಬುವವರು  ಓಡಿಹೋಗಿರುತ್ತಾರೆ.  ಆರೋಪಿತರ ವಶದಲ್ಲಿದ್ದ ಒಂದು ಗುಲಾಬಿ ಬಣ್ಣದ ಟವಲ್ , 52 ಇಸ್ಪೀಟ್ ಎಲೆಗಳು,  ಹಾಗೂ 3010 /-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ  ವಿರುದ್ದ ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ.ತಿಪ್ಪೇಶ್ ಡಿ.ವಿ.ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಗಾಂಜಾ ಪ್ರಕರಣ

ಮಲ್ಲಂದೂರು  ಪೊಲೀಸ್ ಠಾಣೆ.

ದಿನಾಂಕ:27/06/2021 ರಂದು ಮಲ್ಲಂದೂರು ಪಿಎಸ್ಐ ರವರಿಗೆ ಬೆಟ್ಟದಮಳಲಿ -ಕಣತಿ ರಸ್ತೆಯ ನಾಗೇಶ್ ಗೌಡರವರ ಕಾಫಿ ತೋಟಕ್ಕೆ ಹೋಗುವ ಕ್ರಾಸ್ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಪ್ರತಿದಿನ ರಸ್ತೆಯಲ್ಲಿ ಓಡಾಡುವ ಕಾಫಿ ತೋಟದ ಕೂಲಿಕಾರ್ಮಿಕರಿಗೆ ಹಾಗೂ ಸಾರ್ವಜನಿಕರಿಗೆ ಎಲ್ಲಿಂದಲ್ಲೋ ಗಾಂಜಾವನ್ನು ತಂದು ಅಕ್ರಮವಾಗಿ ಮಾರಾಟ ಮಾಡುತ್ತಿರುತ್ತಾರೆಂದು ಪೊಲೀಸ್ ಬಾತ್ನೀದಾರರಿಂದ ಮಾಹಿತಿ ಬಂದಿದ್ದನ್ನು  ತಿಳಿಸಿದ ಮೇರೆಗೆ ದಾಳಿ ನಡೆಸಿದ್ದು ಬೆಟ್ಟದಮಳಲಿ -ಕಣತಿ ರಸ್ತೆಯ ನಾಗೇಶ್ ಗೌಡರವರ ಕಾಫಿ ತೋಟಕ್ಕೆ ಹೋಗುವ ಕ್ರಾಸ್ ರಸ್ತೆಯಲ್ಲಿ ಇಬ್ಬರು ವ್ಯಕ್ತಿಗಳು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ನಿಂತಿದ್ದು ಸಮವಸ್ತ್ರದಲ್ಲಿದ್ದ ನಮ್ಮಗಳನ್ನು ನೋಡಿ ಓಡಿ ಹೋಗಲು ಪ್ರಯತ್ನಿಸಿದವರನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ 1) ನೂಕಮಾನ್ಆಲಿ ಬಿನ್ ಅಬ್ದುಲ್ ಮಜೀದ್ , ನಾಗೇಶ್ ಗೌಡರವರ ಕೂಲಿಲೈನ್ , ಬೆಟ್ಟದಮಳಲಿ ಗ್ರಾಮ  ಸ್ವಂತ ಊರು ಕೊಸಲಿಬರಗಾವ್ ಗ್ರಾಮ ,ದರಾಂಗ್ ಜಿಲ್ಲೆ , ಅಸ್ಸಾಂರಾಜ್ಯ ಎಂದು, ತಿಳಿಸಿದ್ದು  2) ಸೂಲೇಮಾನ್ಆಲಿ ಬಿನ್ ನೂರ್ಮಹಮದ್ ಆಲಿ , ನಾಗೇಶ್ ಗೌಡರವರ ಕೂಲಿಲೈನ್, ಬೆಟ್ಟದಮಳಲಿ ಗ್ರಾಮ , ಸ್ವಂತ ಊರು ಶಾಂಪುರ್ ಗ್ರಾಮ , ದರಾಂಗ್ ಜಿಲ್ಲೆ , ಅಸ್ಸಾಂರಾಜ್ಯ ಎಂದು ತಿಳಿಸಿದ್ದು, ನೂಕಮಾನ್ಆಲಿಯನ್ನು ಅಂಗಶೋಧನೆ ಮಾಡಲಾಗಿ ಆತನ ಪ್ಯಾಂಟಿನ ಜೇಬಿನಲ್ಲಿ 750 ರೂ ನಗದು ದೊರೆತಿದ್ದು ಹಣದ ಬಗ್ಗೆ ಕೇಳಲಾಗಿ ಸದರಿ ಹಣವು ಗಾಂಜಾ ಮಾರಾಟದಿಂದ ಬಂದಿದ್ದು ಎಂದು ತಿಳಿಸಿದ್ದು ,ಸೂಲೇಮಾನ್ಆಲಿಯ ಅಂಗಶೋಧನೆ ಮಾಡಲಾಗಿ ಆತನ ಪ್ಯಾಂಟಿನ ಜೇಬಿನಲ್ಲಿ 275 ರೂ ನಗದು ದೊರೆತಿದ್ದು ಹಣದ ಬಗ್ಗೆ ಕೇಳಲಾಗಿ ಸದರಿ ಹಣವು ಗಾಂಜಾ ಮಾರಾಟದಿಂದ ಬಂದಿದ್ದು ಎಂದು ತಿಳಿಸಿದ್ದು ಪ್ಲಾಸ್ಟಿಕ್ ಚೀಲದಲ್ಲಿದ್ದ ಗಾಂಜಾವನ್ನು ಪರಿಶೀಲಿಸಲಾಗಿ ಕಾಂಡ, ಹೂವು, ಬೀಜ ಮಿಶ್ರಿತ ಒಣಗಿರುವ ಗಾಂಜಾ ಸೊಪ್ಪು ಇದ್ದು ,  ತೂಕ ಮಾಡಲಾಗಿ 01 ಕೆಜಿ. 240 ಗ್ರಾಂ ಇದ್ದು, ಸದರಿ ಗಾಂಜಾದ ಅಂದಾಜು ಬೆಲೆ 25000/ರೂ ಗಳಾಗಿರುತ್ತೆ. ಸದರಿ ಗಾಂಜಾವನ್ನು ಸೊಪ್ಪನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಆಲ್ದೂರುವೃತ್ತದ ಸಿ.ಪಿ.ಐ ಸತ್ಯನಾರಾಯ.ಕೆ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ .

ಕಡೂರು ಪೊಲೀಸ್ ಠಾಣೆ .

ದಿನಾಂಕ 28-06-2021 ರಂದು ಕಡೂರು ಠಾಣಾ ಸರಹದ್ದಿನ ದೊಡ್ಡಬುಕ್ಕಸಾಗರ ವಾಸಿಯಾದ ಮಂಜುನಾಥ ಬಿನ್ ರಂಗಪ್ಪ ರವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ತಂದೆ ರಂಗಪ್ಪರವರ ಹೆಸರಿನಲ್ಲಿ ದೊಡ್ಡಬುಕ್ಕಸಾಗರ ಗ್ರಾಮದ ಸರ್ವೇ ನಂಬರ್ 17/ಪಿ 91 ರಲ್ಲಿ ಅಡಿಕೆ ,ತೆಂಗಿನ ತೋಟವಿದ್ದು, ತೋಟದ ಮನೆಯಿರುತ್ತೆ. ದಿನಾಂಕ 18-05-2021 ರಂದು ಸಂಜೆ ಸದರಿ ತೋಟದಲ್ಲಿ ಕೋಳಿಫಾರಂ ಮಾಡುವ ಉದ್ದೇಶದಿಂದ ಪಕ್ಕದ ತೆರೆದ ಶೆಡ್ನಲ್ಲಿ 1 ಮರಕೊಯ್ಯುವ ಮಿಷನ್,  2 ಡ್ರಿಲ್ಲಿಂಗ್ ಮಿಷನ್ , 2 ಕಬ್ಬಿಣ ಕೊಯ್ಯುವ ಹ್ಯಾಂಡ್ ಮಿಷನ್ , ಗರಗಸ 2, ಮೈನ್ಸ್ ವೈರ್ 1000ಮೀ, 3 ಫೇಸ್ ಕೇಬಲ್ -300 ಮೀ, ಔಷಧಿ ಪಂಪ್ 1, ಜಿ.ಐ. ಪೈಪ್-6 ಸಬ್ ಮರ್ಸಿಬಲ್ ಮೋಟಾರ್ 3, ಚೈನ್ ರಿಂಚ್ -2,ಧರ್ಮಸ್ಥಳ ಸೌವ್ -1,22ಅಡಿ ಉದ್ದದ ಪೋಲ್ಸ್ -4 ಟನ್ , ಟ್ರಾಕ್ಟರ್ ಟಾಪ್ ಲಿಂಕ್ ವಸ್ತುಗಳನ್ನು ಇಟ್ಟು ಹೋಗಿದ್ದು ಮಾರನೇ ದಿನ ಅಂದರೆ ದಿನಾಂಕ 19-05-2021 ರಂದು ಬೆಳಿಗ್ಗೆ ಬಂದು ನೋಡಲಾಗಿ ಯಾರೋ ಕಳ್ಳರು ತೆರೆದ ಶೆಡ್ನಲ್ಲಿಟ್ಟಿದ್ದ ವಸ್ತಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ , ಕಳ್ಳತನವಾಗಿರುವ ವಸ್ತುಗಳ ಅಂದಾಜು ಬೆಲೆ 1 ಲಕ್ಷ ರೂ ಗಳಾಗಿರುತ್ತೆ. ಅನಾರೋಗ್ಯದ ನಿಮಿತ್ತ ಸಂಬಂದಿಕರ ಮನೆಯಲ್ಲಿದ್ದು ಹಾಗೂ ಲಾಕ್ ಡೌನ್ ಇದ್ದುದ್ದರಿಂದ ತಡವಾಗಿ ನೀಡಿದ ದೂರನ್ನು ಸ್ವೀಕರಿಸಿಕೊಂಡು ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

 

ಇತ್ತೀಚಿನ ನವೀಕರಣ​ : 28-06-2021 06:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080