ಅಭಿಪ್ರಾಯ / ಸಲಹೆಗಳು

ಅಕ್ರಮ ಜಾನುವಾರು ಸಾಗಾಟ ಹಾಗೂ ಹತ್ಯಾ ಪ್ರಕರಣ.

ಯಗಟಿ  ಪೊಲೀಸ್ ಠಾಣೆ.

ದಿನಾಂಕ:28-08-2021 ರಂದು ಬೆಳಗ್ಗೆ 06-00 ಗಂಟೆ ಸಮಯದಲ್ಲಿ ಯಗಟಿಪುರದಿಂದ ಸ್ವಲ್ಪ ಮುಂದೆ ಹರಿಸಮುದ್ರ ಕಡೆಗೆ ಹೋಗುವ ಸಂತೆ ಮೈದಾನದ ತಿರುವಿನಲ್ಲಿ ಬಂದ ಕೆಎ- 41 ಎ- 3621 ಟಾಟಾ ಏಸ್ ವಾಹನವನ್ನು ನಿಲ್ಲಿಸಿ ವಾಹನದಲ್ಲಿದ್ದ 1) ಇಮ್ರಾನ್ ಬಿನ್ ರೀಯಾಜ್ ಪಾಷಾ, ಬಳ್ಳಾರಿ ಕ್ಯಾಂಪ್, ಬೀರೂರು 2) ಅಕ್ರಮ್ ಬಿನ್ ಅಬ್ದುಲ್ ಸತಾರ್, ಕಲ್ಲಾಪುರ, ಕಡೂರು ತಾಲ್ಲೂಕು ಇವರುಗಳನ್ನು ವಶಕ್ಕೆ ಪಡೆದು ವಾಹನದಲ್ಲಿ ಎರಡು ಜಾನುವಾರುಗಳಿದ್ದು , ಕಟಾವು ಮಾಡುವ ಉದ್ದೇಶದಿಂದ ಹಿಂಸಾತ್ಮಕವಾಗಿ ತುಂಬಿಕೊಂಡು ಬಂದಿದ್ದು ಯಾವುದೇ ಪರವಾನಗಿಯನ್ನು ಹೊಂದದೆ ಹಿಂಸಾತ್ಮಕವಾಗಿ ಜಾನುವಾರುಗಳನ್ನು ತುಂಬಿಕೊಂಡು ವಾಹನದಲ್ಲಿ ಸಾಗಾಟ ಮಾಡುತ್ತಿದ್ದ  ಇಮ್ರಾನ್ ಹಾಗೂ ಅಕ್ರಮ್ ರವರ ವಿರುದ್ದ  ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಶಶಿಕುಮಾರ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ಬಸವನಹಳ್ಳಿ  ಪೊಲೀಸ್ ಠಾಣೆ

ದಿನಾಂಕ28/08/2021 ರಂದು ಪಿರ್ಯಾದಿ ರುದ್ರೇಶ್  ಎ. ಹೆಚ್. ರವರು ನೀಡಿದ ದೂರಿನಲ್ಲಿ ದಿನಾಂಕ 23/08/2021 ರಂದು ಪಿರ್ಯಾದಿಯ ಬಾಬ್ತು ಬೈಕ್ ನಂಬರ್ ಕೆಎ-18-ಕ್ಯೂ-3150 -ಹಿರೋ ಹೊಂಡಾ ಸ್ಲೆಂಡರ್ ಪ್ಲೇಸ್ ಸಿಲ್ವರ್ ಬಣ್ಣದ ಬೈಕ್ ನ್ನು ಕರ್ನಾಟಕ ಪಾನಿಯ ನಿಗಮ ಮಂಡಳಿಯ ಡಿಪೋ ಕಾಪೌಂಡ್ ಒಳಭಾಗದಲ್ಲಿ ನಿಲ್ಲಿಸಿ ಕೆಲಸಕ್ಕೆ ಹೋಗಿ ಕೆಲಸ ಮುಗಿಸಿ ವಾಪಾಸ್ಸು ಬಂದು ನೋಡಲಾಗಿ ಬೈಕ್ ನಿಲ್ಲಿಸಿದ್ದ ಸ್ಥಳದಲ್ಲಿ ಇಲ್ಲದೆ ಇದ್ದು ಯಾರೋ ಕಳ್ಳರು ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈವರೆಗೂ ಹುಡುಕಾಡಲಾಗಿ ಪತ್ತೆ ಅಗಿಲ್ಲವೆಂದು, ಕಳುವಾಗಿರುವ ಬೈಕನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತಾರೆ.

ರಸ್ತೆ ಅಪಘಾತ ಪ್ರಕರಣ.

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ 27-08-2021 ರಂದು ಮಹೇಶ್ ಕುಮಾರ್ ರವರು ನೀಡಿದ ದೂರೇನೆಂದರೆ ದಿನಾಂಕ 26-08-2021 ರಂದು ಸಂಜೆ 05-30 ಗಂಟೆ ಸಮಯದಲ್ಲಿ ಜೇನುಬೈಲ್ ಗ್ರಾಮದ ಹತ್ತಿರ ಕೆಎ-35 ಎ-1419 ಲಾರಿಯಲ್ಲಿ ಬರುತ್ತಿರುವಾಗ ಎದುರುಗಡೆಯಿಂದ ಬಂದ ಕೆಎ- 14 ಸಿ - 0464 ಪಿಕಪ್ ವಾಹನದ ಚಾಲಕ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಲಾರಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಪಿಕಪ್ ವಾಹನದಲ್ಲಿದ್ದ ಇಬ್ಬರಿಗೂ ಪೆಟ್ಟಾಗಿದ್ದು ನನಗೆ ಹಾಗೂ ಕ್ಲೀನರ್ ಗೆ ಯಾವುದೇ ಪೆಟ್ಟಾಗಿರುವುದಿಲ್ಲ. ಲಾರಿಯ ಮುಂಭಾಗ ಜಖಂ ಆಗಿರುತ್ತೆ, ಪಿಕಪ್ ವಾಹನದ ಚಾಲಕನ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮಾರಣಾಂತಿಕರಸ್ತೆ ಅಪಘಾತ ಪ್ರಕರಣ.

ಜಯಪುರ  ಪೊಲೀಸ್ ಠಾಣೆ.

ದಿನಾಂಕ 27-08-2021 ರಂದು ಸಂಜೆ 06-30 ಗಂಟೆ ಸಮಯದಲ್ಲಿ ಸುಮಂತ್, ಜಯಪುರ ವಾಸಿ ಇವರ ತಂದೆ ಮೃತ್ಯಂಜಯ ರವರು ತಮ್ಮ ಬಾಬ್ತು ಕೆಎ-09 ಜಡ್ -1976 ಕಾರಿನಲ್ಲಿ ಕೂಳೂರಿಗೆ ಹೋಗಲೆಂದು ಜಯಪುರದ ಸುರಗಂಧ ಸೇತುವೆ ಬಳಿ ತಮ್ಮ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಕಾರನ್ನು ಚಾಲನೆ ಮಾಡಿಕೊಂಡು ಹೋಗಿ ಸುರಗಂಧ ಸೇತುವೆಗೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನ ಮುಂಭಾಗದ ಗ್ಲಾಸ್ ಹೊಡೆದು ಕೆಳಗೆ ಬಿದ್ದಿದ್ದರಿಂದ ತಲೆಗೆ ,ಎದೆಗೆ ಹಾಗೂ ಕುತ್ತಿಗೆಗೆ ತೀವ್ರತರಹದ ಪೆಟ್ಟಾಗಿ ಮೃತಪಟ್ಟಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ಮನುಷ್ಯ ಕಾಣೆ ಪ್ರಕರಣ.

ದಿನಾಂಕ 27-08-2021 ರಂದು ಶ್ರೀಮತಿ,ಸರಿತಾ, ಜಂಬದಹಳ್ಳ ವಾಸಿರವರು ಠಾಣೆಗೆ ಹಾಜರಾಗಿ ನೀಡಿದ ದೂರೇನೆಂದರೆ ದಿನಾಂಕ 24-08-2021 ರಂದು ಮದ್ಯಾಹ್ನ 02-00 ಗಂಟೆ ಸಮಯದಲ್ಲಿ  ನನ್ನ ಗಂಡನಾದ ಅರುಣಾಚಲ, 40 ವರ್ಷ ಇವರು ಮನೆಯಿಂದ ಹೊರಗೆ ಹೋದವರು ಇದುವರೆಗೂ ವಾಪಾಸ್ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ ಹಾಗೂ ಸ್ನೇಹಿತರುಗಳ ಮನೆಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಗಂಡ ಅರಣಾಚಲರವರನ್ನು ಪತ್ತೆ ಮಾಡಿಕೊಡಬೇಕೆಂದು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 28-08-2021 05:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080