ಅಭಿಪ್ರಾಯ / ಸಲಹೆಗಳು

 ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ

ದಿನಾಂಕ:28-01-2022 ರಂದು ಪಿರ್ಯಾದಿ ಯೋಗಿಶ ಬಿನ್ ಜಯಣ್ಣ ಸಿರಗುಂದ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ:27-01-2022 ರಂದು ಪಿರ್ಯಾಧಿ ತಂದೆ ಜಯಣ್ಣ ಬಿನ್ ಸಿದ್ದಯ್ಯ ರವರು ಸಾಮಾನು ತರಲೆಂದು ಅಂಗಡಿಗೆ ತಮ್ಮ ಗ್ರಾಮದ ಶನಿಮಹಾತ್ಮ ದೇವಸ್ಥಾನದ ಹತ್ತಿರ ರಸ್ತೆಯ ಎಡಬದಿಯಲ್ಲಿ ರಾತ್ರಿ 8-00 ಗಂಟೆ ಸಮಯದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕೆಎ-18-ಇಇ-7408 ಬಜಾಜ್ ಅವೆಂಜರ್ ಬೈಕಿನ ಚಾಲಕ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿ ಪಿರ್ಯಾಧಿ ತಂದೆಯವರಿಗೆ ಡಿಕ್ಕಿ ಹೊಡೆಸಿದ  ಪರಿಣಾಮ ತೀವ್ರತರವಾದ ಪೆಟ್ಟು ಬಿದ್ದು ನಂತರ ಚಿಕಿತ್ಸೆಗೆ ಅಸ್ಪತ್ರೆಗೆ ಸೇರಿಸಿದ್ದು ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ. ಬೈಕಿನ ಚಾಲಕನಿಗೂ ನನಗೂ ಸಣ್ಣಪುಟ್ಟಗಾಯವಾಗಿದ್ದು, ಅಪಘಾತಕ್ಕೆ ಕಾರಣವಾದ ಬೈಕಿನ ಚಾಲಕ ಶಿವುಶೆಟ್ಟಿ ನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ: 27-01-2022 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಬ್ಯಾಗದಹಳ್ಳಿ ಗ್ರಾಮ ವಾಸಿ ಶ್ರೀಮತಿ ಜಾನಕಿ ಕೋಂ ನಾಗರಾಜು ಇವರು ನೀಡಿದ ದೂರಿನಲ್ಲಿ ದಿನಾಂಕ 20/01/2022 ರಂದು ಪಿರ್ಯಾಧಿ ಗಂಡ ನಾಗರಾಜ್ ಮದ್ಯಾಹ್ನ 2.40 ಗಂಟೆಗೆ ಚಿಕ್ಕಮಗಳೂರಿಗೆ ಹೋಗಿ ಪೋಟೋ ತೆಗೆದ್ದುಕೊಂಡು ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಮನೆಗೆ ಬಾರದೇ ಇದ್ದು, ಈವರೆಗೂ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ನಾಗರಾಜ್ ದುಂಡುಮುಖ, ಧೃಡಕಾಯ ಶರೀರ, ಬಲ ಗಲ್ಲದ ಬಳಿ ಕಪ್ಪು ಮಚ್ಚೆ ಇರುತ್ತೆ, ಕನ್ನಡ ತಮಿಳು, ಮಲೆಯಾಳಿ  ಮಾತಾನಾಡುತ್ತಾಳೆ.ಕಿತ್ತಳೆ ಬಣ್ಣದ ಶರ್ಟ ಮತ್ತು ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.   ಕಾಣೆಯಾಗಿರುವ ತನ್ನ ಗಂಡನನ್ನು  ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ.

ನಗರ ಪೊಲೀಸ್ ಠಾಣೆ.

ದಿನಾಂಕ: 28-01-2022 ರಂದು ನಗರ ಠಾಣಾ ಸರಹದ್ದಿನ ಸಂತೆ ಮೈದಾನದಲ್ಲಿರುವ ಕಾಲೋನಿಯಲ್ಲಿರುವ ಜಾವೀದ್ ಬಿನ್ ಫಜಲೂರ್ ರೆಹಮಾನ್ ರವರು ಮನೆಯಲ್ಲಿ ಅಕ್ರಮವಾಗಿ ಆರೋಪಿತನು ದನದ ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಇಟ್ಟುಕೊಂಡಿದ್ದು,  ಆರೋಪಿತನನ್ನು ವಶಕ್ಕೆ ಪಡೆದು, ಸುಮಾರು 95 ಕೆ.ಜಿ. ತೂಕದ ಮಾಂಸವನ್ನು  ಮತ್ತು ಇತರೆ ಪರಿಕರಗಳನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶರತ್ ಎಲ್.ಎಂ. ಪ್ರೋಬೆಷನರಿ ಪಿ.ಎಸ್.ಐ. ಆದರ್ಶ ಸಜಿತ್ ಮತ್ತು ಸಿಬ್ಬಂದಿಯವರಾದ ಲೋಹಿತ್, ಶಶಿಧರ, ನವೀನ್ ರವರು  ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 28/01/2022 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಕಳಸಾಪುರ ವಾಸಿ ಆದರ್ಶ ಕೆ.ವಿ. ಬಿನ್ ವಿಶ್ವೇಶ್ವರಯ್ಯ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಬಾಬ್ತು ಅಡಿಕೆ ತೋಟದಲ್ಲಿ ದಿನಾಂಕ:26/01/2022 ರಂದು ಅಡಿಕೆ ಕೊನೆಯನ್ನು 50 ಕೆ.ಜಿಯ 45 ಚೀಲಗಳಲ್ಲಿ ತುಂಬಿಸಿ ರಾತ್ರ್ರಿ ತೋಟದಲ್ಲೆ ಬಿಟ್ಟು ಬಂದಿದ್ದು ದಿನಾಂಕ 27/01/2022 ರಂದು ಬೆಳಿಗ್ಗೆ ನೋಡಿದಾಗ ಅದರಲ್ಲಿ 10 ಚೀಲ ಅಡಿಕೆ ಕಳ್ಳತನವಾಗಿದ್ದು  ಕಳುವಾಗಿರುವ ಸ್ವತ್ತು 40,000/- ಬೆಲೆಯದ್ದಾಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಅಡಿಕೆ ಚೀಲಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 28-01-2022 07:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080