ಅಭಿಪ್ರಾಯ / ಸಲಹೆಗಳು

ಗೋ ಹತ್ಯಾ  ಪ್ರಕರಣ

ಕೊಪ್ಪ ಪೊಲೀಸ್ ಠಾಣೆ

 ದಿನಾಂಕ;28-02-2022 ರಂದು ಕೊಪ್ಪ ಠಾಣಾ ಸರಹದ್ದಿನ ಪ್ರವೀಣ ಬಿನ್ ಚಂದ್ರಶೇಖರ ಚೌಕಿ ಕೆಸವೆ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;28-02-2022 ರಂದು ಪಿರ್ಯಾದಿ ಕೊಪ್ಪಕ್ಕೆ ಊರಿನಿಂದ ಬರುವಾಗ ಸಹಕಾರ ಸಾರಿಗೆ ಕಛೇರಿ ಬಳಿ ಇರುವ ಸೇತುವೆ ಕೆಳಭಾಗದಲ್ಲಿ ಯಾರೋ ಕಸವನ್ನು ಎಸೆಯುತ್ತಿದ್ದು ಕಸವನ್ನು ಹಾಕಬಾರದೆಂದು ನಾಮಫಲಕವಿದ್ದರು ಏಕೆ ಕಸವನ್ನು ಎಸೆಯುತ್ತಿರಿ ಎಂದು ಅವರಿಗೆ ತಿಳುವಳಿಕೆ ಹೇಳಿದಾಗ  ಕಸವನ್ನು ವಾಪಾಸು ತೆಗೆಯುವ ಸಮಯದಲ್ಲಿ ಕಸದ ಪಕ್ಕದಲ್ಲಿ ಹಸುವಿನ ಎರಡು ತಲೆ ಹಗೂ ಕಾಲುಗಳು ಮತ್ತು ಚರ್ಮ ಬಿದ್ದಿರುವುದು ಕಂಡು ಬಂದಿದ್ದು ಯಾರೋ ಹಸುವನ್ನು  ಮಾಂಸ ಮಾಡಿ ತಿನ್ನುವ ಹಾಗೂ ಮಾರಾಟ ಮಾಡುವ ಉದ್ದೇಶದಿಂದ ಕಡಿದು ಮಾಂಸ ಮಾಡಿ ಉಳಿದ ಹಸುವಿನ ಭಾಗಗಳನ್ನು ಎಸೆದು ಹೋಗಿರುವುದಾಗಿ  ಈ  ಕೃತ್ಯ ಮಾಡಿದವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ವಂಚನೆ ಪ್ರಕರಣ

ಸಿ.ಎ. ಎನ್. ಪೊಲೀಸ್ ಠಾಣೆ.

ದಿನಾಂಕ;28-02-2022 ರಂದು ಪಿರ್ಯಾದಿ ಶ್ರೀಮತಿ ಮೇಹರ್ ತಾಜ್ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರಿಗೆ ಅಪರಿಚಿತ ವ್ಯಕ್ತಿ ಪೋನ್ ನಿಂದ ಪೇಸ್ ಬುಕ್ ನಲ್ಲಿ ಪರಿಚಯವಾಗಿದ್ದು, ದಿನಾಂಕ;06-02-2022 ರಂದು ಪಿರ್ಯಾದಿ ಹುಟ್ಟು ಹಬ್ಬದ ದಿನ ಗಿಪ್ಟ್ ಕಳುಹಿಸುವುದಾಗಿ ನಂಬಿಸಿ ಯಾವುದೋ ಅಪರಿಚಿತ ನಂಬರ್ ನಿಂದ ಯಾರೋ ಕರೆಗಳನ್ನು ಮಾಡಿ ಕಸ್ಟಮ್,ಜಿ.ಎಸ್.ಟಿ, ಟ್ಯಾಕ್ಟ್. ಅಪ್ರೂವಲ್  ಚಾರ್ಜಸ್ ಎಂದು ಹೇಳಿ ದಿನಾಂಕ:09-02-2022 ರಿಂದ ದಿನಾಂಕ:25-02-2022  ವರೆಗೆ ಸುಮಾರು ಪಿರ್ಯಾದಿಯ ವಿವಿಧ ಬ್ಯಾಂಕ್ ಗಳ ಖಾತೆಯಿಂದ ಸುಮಾರು 5,53,000/- ರೂ ಗಳನ್ನು ಹಾಕಿಸಿಕೊಂಡು ಮೋಸ ಮಾಡಿರುವುದಾಗಿ ಪಿರ್ಯಾದಿಗೆ ಗಿಪ್ಟ್ ಕಳುಹಿಸುವುದಾಗಿ ಹೇಳಿ ನಂಬಿಸಿ ಪಿರ್ಯಾದಿ ಅಕೌಂಟ್ ನಿಂದ ಹಣವನ್ನು ಪಡೆದ ವ್ಯಕ್ತಿಯನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಸಿ.ಇ.ಎನ್. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 28-02-2022 08:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080