ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:27/03/2022 ರಂದು ಪಿರ್ಯಾದಿ ಸಯ್ಯಾದ ಸಾದತ್ ಬಿನ್ ಲೇಟ್ ಮಹಬೂಬ್ ಸಾಬ್ ಅರಸೀಕೆರೆ ಟೌನ್ ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ:27/03/2022 ರಂದು 11.00 ಗಂಟೆಗೆ ಪಿರ್ಯಾದಿಯ ಹೆಂಡತಿ ಮಮ್ತಾಜ್ ಳು ಅವಳ ತಮ್ಮ ಜಾಬೀರ್ ರವರೊಂದಿಗೆ ಕೆಎ-25-ಎಸ್-4665 ರ ಬೈಕಿನಲ್ಲಿ ಹೊರಟು ನಿಡಘಟ್ಟ- ಜೋಡಿ ಹೊಚಿಹಳ್ಳಿ ಮಾರ್ಗವಾಗಿ ನಾಗರಾಳು ಕ್ರಾಸ್ ಹತ್ತಿರದ ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಕೆಎ-46-7908 ಮಹೇಂದ್ರ  ಗೂಡ್ಸ್  ವಾಹನ  ಚಾಲಕ ವಾಹನವನ್ನು  ಅತೀವೇಗ ಮತ್ತು ಬೇಜಾಬ್ದಾರಿಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿನ ಹ್ಯಾಂಡಲ್ ಗೆ  ಡಿಕ್ಕಿ ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೂ ಪೆಟ್ಟಾಗಿ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ಮಮ್ತಾಜ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಕೆಎ-46-7908 ಮಹೇಂದ್ರ  ಗೂಡ್ಸ್  ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ:27/03/2022 ರಂದು ಪಿರ್ಯಾದಿ ಅಬ್ರಾರ್ ಅಹಮ್ಮದ್ ಬಿದರಹಳ್ಳಿ ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ: 26/03/2022 ರಂದು ರಾತ್ರಿ 11.30 ಗಂಟೆಗೆ ಪಿರ್ಯಾದಿಯ ಪರಿಚಯವಿರುವ ಅಪ್ಸರ್ ಅಹಮ್ಮದ್ ಹಾಗೂ 3 ಜನರು ವ್ಯಾಗನರ್  ಕಾರಿನಲ್ಲಿ ಚಿಕ್ಕಮಗಳೂರಿನಿಂದ ಮದರಸ ಕಾರ್ಯಕ್ರಮ ಮುಗಿಸಿಕೊಂಡು ಬರುತ್ತಿರುವಾಗ ಮೂಡಿಗೆರೆ ಬಿದರಹಳ್ಳಿ ಕೆ.ಎಸ್.ಆರ್.ಟಿ.ಸಿ.ಡಿಪೋ ಹತ್ತಿರ ಬರುತ್ತಿರುವಾಗ ಎಪಿ-09-ಸಿಎಂ-3276 ರ ಐ20 ಕಾರಿನ ಚಾಲಕ ಕಾರನ್ನು  ದುಡುಕು ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಅಪ್ಸರ್ ಅಹಮ್ಮದ್  ಕಾರಿಗೆ ಡಿಕ್ಕಿ ಪರಿಣಾಮ ಕಾರಿನಲ್ಲಿದ್ದ ಎಲ್ಲರಿಗೂ ಪೆಟ್ಟಾಗಿ ಅಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಿದ್ದು ಅಪ್ಸರ್ ಅಹಮ್ಮದ್ ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ  ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಎಪಿ-09-ಸಿಎಂ-3276 ರ ಐ20 ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ:28/03/2022 ರಂದು ಪಿರ್ಯಾದಿ ವಿ ಶಾಂತಕುಮಾರ್ ಉಡೆವಾ ಗ್ರಾಮ ಲಿಂಗದಹಳ್ಳಿ ಹೋಬಳಿ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗಳು ಚಂದನಳು ದಿನಾಂಕ 26.03.2022 ರಂದು ಎಂದಿನಂತೆ ಕಾಲೇಜಿಗೆ ಹೋಗಿದ್ದು ಕಾಲೇಜಿಗೆ ಹೋದವಳು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆಯೂ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಕು: ಚಂದನ ಯು.ಎಸ್. 19 ವರ್ಷ, 5 ಅಡಿ ಎತ್ತರ,  ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ:28-03-2022 ರಂದು ಸಖರಾಯಪಟ್ಟಣ ಠಾಣಾ ಸರಹದ್ದಿನ ಬಾಣೂರು ಗ್ರಾಮದ ವಾಸಿ ಉಮೇಶ ಬಿ.ಆರ್.  ಬಿನ್ ಜಿ ರುದ್ರಪ್ಪ ಬಾಣೂರು ಗ್ರಾಮದ ಹಾಸ್ಟೇಲ್ ಬಳಿ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು , ಅರೋಪಿತನನ್ನು ವಶಕ್ಕೆ ಪಡೆದು, ಆರೋಪಿಯು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 40 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1405/- ರೂ ಅಗಿದ್ದು ಮದ್ಯವನ್ನು  ಮತ್ತು ಮದ್ಯ ಮಾರಾಟ ಹಣ 90.00 ರೂ ವನ್ನು ಅಮಾನತ್ತುಪಡಿಸಿಕೊಂಡು ಬಂದು  ಅರೋಪಿತನ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆ ಸಖರಾಯಪಟ್ಟಣ ಠಾಣಾ ಪಿ.ಎಸ್.ಐ. ಹರೀಶ್ ಆರ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 28-03-2022 07:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080