ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ಕಳಸ ಪೊಲೀಸ್ ಠಾಣೆ.

ದಿನಾಂಕ;27/04/2022 ರಂದು ಕಳಸ ಠಾಣಾ ಸರಹದ್ದಿನ ಸುಂಕಸಾಲೆ ಗ್ರಾಮ  ಬಲಿಗೆ ವಾಸಿ ಇತಿಹಾಸ್ ಬಿನ್ ಮಂಜುನಾಥಗೌಡ ಈತನು ಕಳಸ ಪಟ್ಟಣದಿಂದ ಮದ್ಯ ಖರಿದಿಸಿ ಬಲಿಗೆಯಲ್ಲಿ ಮದ್ಯ ಮಾರಾಟ ಮಾಡಲು ಅಕ್ರಮವಾಗಿ ಮಧ್ಯ ಸಾಗಾಟ ಮಾಡುತ್ತಿದ್ದು ಕಳಸ ಕೈಮರ ಸರ್ಕಲ್ ಸಮೀಪ ಅರೋಪಿಯನ್ನು ವಶಕ್ಕೆ ಪಡೆದು, ಆರೋಪಿ ಅಕ್ರಮವಾಗಿ  ಹೊಂದಿದ್ದ 90 ಎಂ.ಎಲ್ ನ 50 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ ರೂ 1399/- ಅಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಕಳಸ ಪಿ.ಎಸ್.ಐ. ಹರ್ಷವರ್ಧನ್ ಹೆಚ್.ಕೆ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ;27/04/2022 ರಂದು ಗ್ರಾಮಾಂತರ ಠಾಣಾ ಸರಹದ್ದಿನ ವೆಂಕಟೇಶ ಬಿನ್ ತಿಮ್ಮೇಗೌಡ , ಹಳುವಳ್ಳಿ ಗ್ರಾಮ ವಾಸಿ ಈತನು ತೇಗೂರಿನಿಂದ ಕೆ.ಎಸ್.ಆರ್.ಟಿ.ಸಿ. ಡಿಪೋ ಕಡೆಗೆ  ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ತೆಗೆದುಕೊಂಡು ಹೋಗುತ್ತಿದ್ದು ,ಆರೋಪಿತನನ್ನು ವಶಕ್ಕೆ ಪಡೆದು, ಆರೋಪಿತ ಅಕ್ರಮವಾಗಿ  ಹೊಂದಿದ್ದ 90 ಎಂ.ಎಲ್ ನ 60 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ ರೂ 2107/- ಅಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಗ್ರಾಮಾಂತರ ಪಿ..ಐ. ಶ್ರೀಮತಿ ಸ್ವರ್ಣ ಜಿ.ಎಸ್. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 28-04-2022 01:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080