ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್-19 ಉಲ್ಲಂಘನೆ  ಪ್ರಕರಣ

ಲಕ್ಕವಳ್ಳಿ  ಪೊಲೀಸ್ ಠಾಣೆ.

ದಿನಾಂಕ 27/05/2021 ರಂದು ಲಕ್ಕವಳ್ಳಿ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ತಂಗವೇಲು ಬಿನ್ ಮುತ್ತುಸ್ವಾಮಿ ಮಂಡ್ರುವಳ್ಳಿ ಗ್ರಾಮರವರು ಬಿ.ಆರ್.ಪಿ ಕಡೆಯಿಂದ ಬೈಕಿನಲ್ಲಿ ಲಕ್ಕವಳ್ಳಿ ಕಡೆಗೆಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿದ್ದು ಶನೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹೋಗುತ್ತಿರುವಾಗ   ಬಿ.ಆರ್.ಪಿ ಕಡೆಯಿಂದ ಕೆಎ18 ವಿ5441 ಬೈಕಿನಲ್ಲಿ ಒಬ್ಬ ವ್ಯಕ್ತಿಯು ಬಂದಿದ್ದು ನಿಲ್ಲಿಸಿ ಹೆಸರು ವಿಳಾಸ ಕೇಳಲಾಗಿ ತಂಗವೇಲು ಬಿನ್ ಮುತ್ತುಸ್ವಾಮಿ ಮಂಡ್ರುವಳ್ಳಿ ಗ್ರಾಮ ಎಂದು ತಿಳಿಸಿದ್ದು ಸೈಡ್ ಬ್ಯಾಗನ್ನು ಪರಿಶೀಲಿಸಲಾಗಿ 90 ಎಂ.ಎಲ್ ನ ವೆಲ್ಲಿಗ್ ಟನ್ ಎಂದು ಲೇಬಲ್ ಇರುವ 45 ಮದ್ಯದ ಪೌಚ್ ಗಳನ್ನು ಇಟ್ಟುಕೊಂಡಿದ್ದು ,ಮದ್ಯದ ಅಂದಾಜು ಬೆಲೆ 1575/- ರೂ ಆಗಿರುತ್ತೆ. ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಬೈಕಿನಲ್ಲಿ  ಮದ್ಯದ ಪೌಚ್ಗಳನ್ನು ಇಟ್ಟುಕೊಂಡು ಬರುತ್ತಿದ್ದ ಆರೋಪಿ ತಂಗವೇಲು ಹಾಗೂ ಮದ್ಯವನ್ನು ವಶಪಡಿಸಿಕೊಂಡು ಬಂದು  ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ರಘುನಾಥ್ ಎಸ್.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಲಕ್ಕವಳ್ಳಿ  ಪೊಲೀಸ್ ಠಾಣೆ.

ದಿನಾಂಕ 27/05/2021 ರಂದು ಲಕ್ಕವಳ್ಳಿ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಬಿ.ಆರ್.ಪಿ  ಕಡೆಯಿಂದ ಯಾರೋ ಒಬ್ಬ ಆಸಾಮಿಯು  ಬೈಕಿನಲ್ಲಿ ಲಕ್ಕವಳ್ಳಿ ಕಡೆಗೆ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿದ್ದು ಬಿ.ಆರ್.ಪಿ ಕಡೆಯಿಂದ ಬೈಕ್ ಬರುತ್ತಿದ್ದು  ಜೀಪನ್ನು ನೋಡಿ ಡ್ಯಾಂ ಕಡೆಗೆ ಚಾಲನೆ ಮಾಡಿಕೊಂಡು ಹೋಗಿದ್ದು ಹಿಂಬಾಲಿಸಿಕೊಂಡು ಹೋಗಿ ಆತನನ್ನು ನಿಲ್ಲಿಸಿ  ಹೆಸರು ವಿಳಾಸ ಕೇಳಲಾಗಿ ನವೀನ್ ಬಿನ್ ವೆಂಕಟಾನಾಯ್ಕ, ಯೆಲಿಗೆರೆ ಗ್ರಾಮ  ಎಂದು ತಿಳಿಸಿದ್ದು ಬೈಕ್ ನಂಬರ್ ಕೆಎ66 ಜೆ2532 ಆಗಿದ್ದು ,ಬೈಕಿನಲ್ಲಿ  2 ರಟ್ಟಿನ ಬಾಕ್ಸ್ ಗಳಿದ್ದು ಒಂದೊಂದು ರಟ್ಟಿನ ಬಾಕ್ಸ್ ನಲ್ಲಿ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿ ಯ 96 ಪೌಚ್ ಗಳಿದ್ದು ಒಟ್ಟು 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 192 ಪೌಚ್ಗಳಿದ್ದು ಮದ್ಯದ ಅಂದಾಜು ಬೆಲೆ 6720/- ರೂ ಆಗಿರುತ್ತೆ.   ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಬೈಕಿನಲ್ಲಿ ಮದ್ಯದ ಪೌಚ್ಗಳನ್ನು ಇಟ್ಟುಕೊಂಡು ಬರುತ್ತಿದ್ದ ಆರೋಪಿ ನವೀನ್ ಹಾಗೂ ಮದ್ಯವನ್ನು ವಶಪಡಿಸಿಕೊಂಡು ಬಂದು  ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ .ರಘುನಾಥ್ .ಎಸ್.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಲಕ್ಕವಳ್ಳಿ  ಪೊಲೀಸ್ ಠಾಣೆ.

ದಿನಾಂಕ 27/05/2021 ರಂದು ಲಕ್ಕವಳ್ಳಿ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಬಿ.ಆರ್.ಪಿ ಕಡೆಯಿಂದ ಯಾರೋ ಒಬ್ಬ ಆಸಾಮಿಯು ಬೈಕಿನಲ್ಲಿ ಲಕ್ಕವಳ್ಳಿ ಕಡೆಗೆ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿದ್ದು ಬಿ.ಆರ್.ಪಿ ಕಡೆಯಿಂದ ಬೈಕ್ ಬರುತ್ತಿದ್ದು  ಜೀಪನ್ನು ನೋಡಿ ಡ್ಯಾಂ ಕಡೆಗೆ ಚಾಲನೆ ಮಾಡಿಕೊಂಡು ಹೋಗಿದ್ದು ಹಿಂಬಾಲಿಸಿಕೊಂಡು ಹೋಗಿ ಆತನನ್ನು ನಿಲ್ಲಿಸಿ  ಹೆಸರು ವಿಳಾಸ ಕೇಳಲಾಗಿ ಮಂಜಾನಾಯ್ಕ ಬಿನ್ ಕೀಮ್ಯಾನಾಯ್ಕ ವಾಸ ಕರಕುಚ್ಚಿ ತಾಂಡ್ಯ  ಎಂದು ತಿಳಿಸಿದ್ದು ಬೈಕ್ ನಂಬರ್ ಕೆಎ66 ಜೆ9737  ಆಗಿದ್ದು ಬೈಕಿನಲ್ಲಿ  2 ರಟ್ಟಿನ ಬಾಕ್ಸ್ ಗಳಿದ್ದು ಒಂದೊಂದು ರಟ್ಟಿನ ಬಾಕ್ಸ್ ನಲ್ಲಿ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿ ಯ 96 ಪೌಚ್ ಗಳಿದ್ದು ಒಟ್ಟು 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 192 ಪೌಚ್ಗಳಿದ್ದು ಮದ್ಯದ ಅಂದಾಜು ಬೆಲೆ 6720 /-ರೂ ಆಗಿರುತ್ತೆ.   ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಬೈಕಿನಲ್ಲಿ  ಮದ್ಯದ ಪೌಚ್ಗಳನ್ನು ಇಟ್ಟುಕೊಂಡು ಬರುತ್ತಿದ್ದ ಆರೋಪಿ ಮಂಜಾನಾಯ್ಕ  ಹಾಗೂ ಮದ್ಯವನ್ನು ವಶಪಡಿಸಿಕೊಂಡು ಬಂದು  ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ .ರಘುನಾಥ್ .ಎಸ್.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಲಕ್ಕವಳ್ಳಿ  ಪೊಲೀಸ್ ಠಾಣೆ.

ದಿನಾಂಕ 27/05/2021 ರಂದು ಲಕ್ಕವಳ್ಳಿ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಲಕ್ಕವಳ್ಳಿ ಪಟ್ಟಣದ ಕದಲಿರಂಗನಾಥಸ್ವಾಮಿ ದೇವಸ್ಥಾನದ ಕಡೆಗೆ ಹೋಗುವ ಭದ್ರಾ ಚಾನೆಲ್ ಸೇತುವೆ ಬಳಿ ಒಬ್ಬ ಆಸಾಮಿಯು ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಸದರಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಆಸಾಮಿಯನ್ನು ವಶಕ್ಕೆ ಪಡೆದು ಹೆಸರು ವಿಳಾಸ ಕೇಳಲಾಗಿ ಮಧುನಪಾಟೀಲ್ ಬಿನ್ ರೇವಣ್ಣ ಎಂದು ತಿಳಿಸಿದ್ದು ಆತನ ಬಳಿಯಿದ್ದ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿ ಯ 40ಪೌಚ್ ಗಳಿದ್ದು ,ಮದ್ಯದ ಅಂದಾಜು ಬೆಲೆ 1405 /-ರೂ ಆಗಿರುತ್ತೆ.   ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಜನರನ್ನು ಗುಂಪುಕಟ್ಟಿಕೊಂಡು ಅಕ್ರಮವಾಗಿ ಮದ್ಯವನ್ನು   ಮಾರಾಟ ಮಾಡುತ್ತಿದ್ದ  ಆರೋಪಿ ಮಧುನಪಾಟೀಲ   ಹಾಗೂ ಮದ್ಯವನ್ನು ವಶಪಡಿಸಿಕೊಂಡು ಬಂದು  ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ .ಮೇಘ.ಟಿ.ಎನ್.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಲಕ್ಕವಳ್ಳಿ  ಪೊಲೀಸ್ ಠಾಣೆ.

ದಿನಾಂಕ 27/05/2021 ರಂದು ಲಕ್ಕವಳ್ಳಿ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಬೊಮ್ಮನಹಳ್ಳಿ  ಕಡೆಯಿಂದ ಹುರುಳಿಬೋರೆ ಕಡೆಗೆ ಯಾರೋ ಒಬ್ಬ ಆಸಾಮಿಯು ಬೈಕಿನಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿದ್ದು ಬೊಮ್ಮನಹಳ್ಳಿ  ಕಡೆಯಿಂದ ಹುರುಳಿಬೋರೆ ಕಡೆಗೆ  ಒಬ್ಬ ಆಸಾಮಿಯು ಬೈಕಿನಲ್ಲಿ ಬರುತ್ತಿದ್ದು ಜೀಪನ್ನು ನೋಡಿ ಬೈಕ್ ಮತ್ತು ಚೀಲವನ್ನು ಬಿಟ್ಟು ಓಡಿಹೋಗಿದ್ದು ಸದರಿ ಆಸಾಮಿಯ ಹೆಸರು ವಿಳಾಸ ತಿಳಿಯಲಾಗಿ ರಮೇಶ ಬಿನ್ ಪಿಚ್ಚಿ ಶಾಂತಿನಗರ ವಾಸಿ ಎಂದು ತೀಳೀದಿರುತ್ತೆ.  ಬಿಟ್ಟುಹೋಗಿದ್ದ ಚೀಲವನ್ನು ಪರಿಶೀಲಿಸಲಾಗಿ ಚೀಲದಲ್ಲಿ  90 ಎಂ. ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 95 ಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 3330/-ರೂ ಆಗಿರುತ್ತೆ. ಬೈಕ್ ನ್ನು ಪರಿಶೀಲಿಸಲಾಗಿ ಕೆಎ 05 ಇಕೆ 9621 ಟಿವಿಎಸ್ ಮ್ಯಾಕ್ಸ್ 100 ಆಗಿರುತ್ತೆ.  ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಬೈಕಿನಲ್ಲಿ  ಮದ್ಯದ ಪೌಚ್ಗಳನ್ನು ಇಟ್ಟುಕೊಂಡು ಬರುತ್ತಿದ್ದ ಆರೋಪಿ ರಮೇಶನ  ವಿರುದ್ದ   ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಮೇಘ.ಟಿ.ಎನ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಲಕ್ಕವಳ್ಳಿ  ಪೊಲೀಸ್ ಠಾಣೆ.

ದಿನಾಂಕ 27/05/2021 ರಂದು ಲಕ್ಕವಳ್ಳಿ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಒಬ್ಬ ಆಸಾಮಿಯು ಎಂ.ಸಿ ಹಳ್ಳಿ ಕಡೆಯಿಂದ ಗೋಪಾಲ ಕಾಲೋನಿ  ಮೂಲಕ ಹುರುಳಿಬೋರೆ ಕಡೆಗೆ  ಬೈಕಿನಲ್ಲಿ ಅಕ್ರಮವಾಗಿ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿದ್ದು ಎಂ.ಸಿ ಹಳ್ಳಿ ಕಡೆಯಿಂದ ಗೋಪಾಲ ಕಾಲೋನಿ  ಮೂಲಕ ಹುರುಳಿಬೋರೆ ಕಡೆಗೆ ಒಬ್ಬ ಆಸಾಮಿಯು ಬೈಕಿನಲ್ಲಿ ಬಂದಿದ್ದು ಆನನನ್ನು ತಡೆಹಿಡಿದು ಹೆಸರು ವಿಳಾಸ ಕೇಳಲಾಗಿ ನವೀನ ಬಿನ್ ನಾಗಾನಾಯ್ಕ, ತಿಮ್ಲಾಪುರ ವಾಸಿ ಎಂದು ತಿಳಿಸಿದ್ದು ಬೈಕ್ ನಂಬರ್ ಕೆಎ 18 ಯು 5864 ಆಗಿದ್ದು ಬೈಕಿನ ಮೇಲೆ ಇಟ್ಟುಕೊಂಡಿದ್ದ   4 ರಟ್ಟಿನ ಬಾಕ್ಸ್ ಗಳನ್ನು ಪಪಿಶೀಲಿಸಲಾಗಿ ಒಂದೊಂದು ರಟ್ಟಿನ ಬಾಕ್ಸ್ ನಲ್ಲಿ 90 ಎಂ.ಎಲ್ ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿ ಯ 96 ಪೌಚ್ ಗಳಿದ್ದು ಮದ್ಯದ ಅಂದಾಜು ಬೆಲೆ 13440 /-ರೂ ಆಗಿರುತ್ತೆ.   ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಬೈಕಿನಲ್ಲಿ  ಮದ್ಯದ ಪೌಚ್ಗಳನ್ನು ಇಟ್ಟುಕೊಂಡು ಬರುತ್ತಿದ್ದ ಆರೋಪಿ ನವೀನ ಹಾಗೂ ಮದ್ಯವನ್ನು ವಶಪಡಿಸಿಕೊಂಡು ಬಂದು  ಲಕ್ಕವಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ .ರಘುನಾಥ್ .ಎಸ್.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಸಿಂಗಟಗೆರೆ   ಪೊಲೀಸ್ ಠಾಣೆ.

ದಿನಾಂಕ 27/05/2021 ರಂದು ಸಿಂಗಟಗೆರೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಮತ್ತಿಹಳ್ಳೀ ಗೇಟ್ ಬಳಿ ಸಿಂಗಟಗೆರೆ ವಾಸಿಯಾದ ರವಿ @ಅಣ್ಣಾಚಿ ಎಂಬುವವರು ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಸಿಂಗಟಗೆರೆ ಬಾಣಾವರ ರಸ್ತೆಯಲ್ಲಿ ಒಬ್ಬ ಅಸಾಮಿಯು ಮದ್ಯವನ್ನು ಮಾರಾಟ ಮಾಡುತ್ತಿದ್ದು ಆನತನ್ನು ಹಿಡಿದು ಹೆಸರು ವಿಳಾಸ ಕೇಳಲಾಗಿ ಡಿ.ರವಿ ಬಿನ್ ಲೇಟ್ ದಿನಕರ್ ಎಂದು ತಿಳಿಸಿದ್ದು  ಆತನ ಬಳಿಯಿದ್ದ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್ ನ ರಾಜಾವಿಸ್ಕಿಯ  11 ಪೌಚ್ಗಳೂ ಹಾಗೂ 180 ಎಂ.ಎಲ್ ನ ಓಲ್ಡ್ ಅಡ್ಮಿರಲ್ ವಿಯರ್ಒಪಿ ಬ್ರಾಂದಿಯ 12 ಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 1040 /-ರೂ ಆಗಿರುತ್ತೆ.   ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಜನರನ್ನು ಗುಂಪುಕಟ್ಟಿಕೊಂಡು ಅಕ್ರಮವಾಗಿ ಮದ್ಯವನ್ನು   ಮಾರಾಟ ಮಾಡುತ್ತಿದ್ದ  ಆರೋಪಿ ರವಿ @ಅಣ್ಣಾಚಿ ಹಾಗೂ ಮದ್ಯವನ್ನು ವಶಪಡಿಸಿಕೊಂಡು ಬಂದು  ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ .ಲೀಲಾವತಿ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೋವಿಡ್ ಉಲ್ಲಂಘನೆ ಪ್ರಕರಣ.

ಲಿಂಗದಹಳ್ಳಿ ಪೊಲೀಸ್ ಠಾಣೆ

ದಿನಾಂಕ:27/05/2021 ರಂದು ಠಾಣೆಯಲ್ಲಿರುವಾಗ್ಗೆ ಜೈಪುರ ತಣಿಗೆಬೈಲು ವಾಸಿಯಾದ ಕೃಷ್ಣಾನಾಯ್ಕ ರವರು ತಮ್ಮ ದಿನಸಿ ಅಂಗಡಿ ಹಾಗೂ ಕೋಳಿಅಂಗಡಿಯನ್ನು ತೆಗೆದುಕೊಂಡು ಸಾರ್ವಜನಿಕರಿಗೆ ದಿನಸಿ ಹಾಗೂ ಕೋಳಿಮಾಂಸವನ್ನು ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ ಕೃಷ್ಣಾನಾಯ್ಕ ರವರು ತಮ್ಮ ದಿನಸಿ ಅಂಗಡಿ ಹಾಗೂ ಕೋಳಿಅಂಗಡಿಯನ್ನು ತೆಗೆದುಕೊಂಡು ದಿನಸಿ ಹಾಗೂ ಕೋಳಿಮಾಂಸವನ್ನು ಮಾರಾಟ ಮಾಡುತ್ತಿದ್ದು ,ಕೊವಿಡ್-19 ಸಾಂಕ್ರಾಮಿಕ  ರೋಗವು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಕರ್ಾರವು ಲಾಕ್ ಡೌನ್ ಆದೇಶವನ್ನು ಹೊರಡಿಸಿದ್ದರೂ ಸಹ ಆದೇಶವನ್ನು ಉಲ್ಲಂಘಿಸಿರುವ ಕೃಷ್ಣಾನಾಯ್ಕರವರ ವಿರುದ್ದ  ಲಿಂಗದಹಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ .ರಫೀಕ್ .ಎಂ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕೋವಿಡ್ ಉಲ್ಲಂಘನೆ ಪ್ರಕರಣ.

ಲಿಂಗದಹಳ್ಳಿ ಪೊಲೀಸ್ ಠಾಣೆ

ದಿನಾಂಕ:27/05/2021 ರಂದು ಜೈಪುರ ತಣಿಗೆಬೈಲು ವಾಸಿಯಾದ ಕೃಷ್ಣಾನಾಯ್ಕರವರು ಸಕರ್ಾರವು ಹೊರಡಿಸಿರುವ ಲಾಕ್ ಡೌನ್ ಆದೇಶವನ್ನು ಉಲ್ಲಂಘಿಸಿ ತಮ್ಮ ದಿನಸಿ ಅಂಗಡಿ ಹಾಗೂ ಕೋಳಿಅಂಗಡಿಯನ್ನು ತೆಗೆದುಕೊಂಡು ಸಾರ್ವಜನಿಕರಿಗೆ ದಿನಸಿ ಹಾಗೂ ಕೋಳಿಮಾಂಸವನ್ನು ಮಾರಾಟ ಮಾಡುತ್ತಿದ್ದರಿಂದ ಆರೋಪಿಯನ್ನು ವಶಕ್ಕೆ ಪಡೆದ ನಂತರ ಜೈಪುರ ತಣಿಗೆಬೈಲು ವಾಸಿಯಾದ ಕುಮಾರನಾಯ್ಕ ಎಂಬುವವರು  ತಮ್ಮ ದಿನಸಿ ಅಂಗಡಿ ಹಾಗೂ ಕೋಳಿಅಂಗಡಿಯನ್ನು ತೆಗೆದುಕೊಂಡು ದಿನಸಿ ಹಾಗೂ ಕೋಳಿಮಾಂಸವನ್ನು ಮಾರಾಟ ಮಾಡುತ್ತಿದ್ದಾರೆಂಬ ಬಗ್ಗೆ ಮಾಹಿತಿ ಮೇರೆಗೆ  ಹೋಗಿ ನೋಡಲಾಗಿ ಕುಮಾರನಾಯ್ಕ ಎಂಬುವವರು  ತಮ್ಮ ದಿನಸಿ ಅಂಗಡಿ ಹಾಗೂ ಕೋಳಿಅಂಗಡಿಯನ್ನು ತೆಗೆದುಕೊಂಡು ಸಾರ್ವಜನಿಕರಿಗೆ ದಿನಸಿ ಹಾಗೂ ಕೋಳಿಮಾಂಸವನ್ನು ಮಾರಾಟ ಮಾಡುತ್ತಿದ್ದು ,ಕೊವಿಡ್-19 ಸಾಂಕ್ರಾಮಿಕ  ರೋಗವು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಕರ್ಾರವು ಲಾಕ್ ಡೌನ್ ಆದೇಶವನ್ನು ಹೊರಡಿಸಿದ್ದರೂ ಸಹ ಆದೇಶವನ್ನು ಉಲ್ಲಂಘಿಸಿರುವ ಕುಮಾರನಾಯ್ಕ್ಕರವರ ವಿರುದ್ದ  ಲಿಂಗದಹಳ್ಳಿ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ .ರಫೀಕ್.ಎಂ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಅಕ್ರಮ ಅಯುಧ  ಪ್ರಕರಣ.

ಎನ್.ಆರ್.ಪುರ  ಪೊಲೀಸ್ ಠಾಣೆ

ದಿನಾಂಕ:28/05/2021 ರಂದು ಎನ್. ಆರ್. ಪುರ ಠಾಣಾ ವ್ಯಾಪ್ತಿಯ ವಿಠಲ ಗ್ರಾಮ ಮಾಕೋಡು ವಾಸಿ ಅನ್ಸನ್ ಬಿನ್ ಜೋಸೆಫ್ ಎಂಬುರು ತಮ್ಮ ವಾಸದ ಮನೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಬಂದೂಕನ್ನು ಇಟ್ಟುಕೊಂಡಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ  ಅರೋಪಿಯನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ ಎಸ್.ಬಿ.ಎಂ.ಎಲ್. ಬಂದೂಕನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ  ಎನ್. ಆರ್. ಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ. ದಿಲೀಪ್ ಕುಮಾರ್ .ಡಿ.ವಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 28-05-2021 07:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080