ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಸೇವನೆ ಪ್ರಕರಣಗಳು,

ಬಣಕಲ್ ಪೊಲೀಸ್ ಠಾಣೆ.

ದಿನಾಂಕ;26-06-2022 ರಂದು ಬಣಕಲ್  ಠಾಣಾ ಸರಹದ್ದಿನ  ಕೊಟ್ಟಿಗೆಹಾರ ಗ್ರಾಮದ ರಸ್ತೆಯಲ್ಲಿ ಬಳಿ  1. ಬಿನು ಬಿನ್ ಲೇಟ್ ವರ್ಗಿಸ್, ವಾಸ ಕೊಟ್ಟಿಗೆಹಾರ ಬಣಕಲ್, 2. ಬಣಕಲ್ ಟೌನ್ ಸಂತೆ ಮೈದಾನದ ಹತ್ತಿರ ಅಕ್ರಂ ಬಿನ್ ಲೇಟ್ ಮಕ್ಬುಲ್ ಅಹಮ್ಮದ್ , ವಾಸ ಚರ್ಚ್ ರಸ್ತೆ ಬಣಕಲ್ ವಾಸ 3. ಚಕ್ಕಮಕ್ಕಿ ಬಗ್ಗಸಗೋಡು ಗ್ರಾಮದಲ್ಲಿ ಸಂತೋಸ ಕೆ. ಬಿನ್ ಲೇಟ್ ಕೃಷ್ಣ ಆಚಾರಿ ವಾಸ ಕೊಟ್ಟಿಗೆಹಾರ ಹಾಗೂ 4. ಅಬ್ದುಲ್ ರಹೀಂ ಬಿನ್ ಮಹಮ್ಮದ್   5. ಬಣಕಲ್ ಟೌನ್ ಶಾಂತಿನಗರದಲ್ಲಿ ಮಜೀದ್ ಬಿನ್ ಲತೀಫ್ ವಾಸ ಶಾಂತಿನಗರ, ಬಣಕಲ್. ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಆಸಾಮಿಗಳು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತರ ವಿರುದ್ದ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಗಳಲ್ಲಿ ಬಣಕಲ್ ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀಮತಿ ಗಾಯತ್ರಿ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:27-06-2022 ರಂದು ಅಜ್ಜಂಪುರ ಪೊಲೀಸ್ ಠಾಣಾ ಸರಹದ್ದಿನ ಹೊಸಹಳ್ಳಿ ತಾಂಡ್ಯ ಹತ್ತಿರ ಸೀನಾ @ ಶ್ರೀನಿವಾಸ ನಾಯ್ಕ, ಬಿನ್ ದೇಶ್ಯಾನಾಯ್ಕ  ವಾಸ ಹೊಸಹಳ್ಳಿ ತಾಂಡ್ಯ  ಗ್ರಾಮ ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು, ಅರೋಪಿತನ ವಶದಲ್ಲಿ ಇದ್ದ 3372 ರೂ ಬೆಲೆಯ 90 ಎಂ.ಎಲ್. ನ 96 ಟೆಟ್ರಾಪ್ಯಾಕ್ ಮದ್ಯವನ್ನುಅಮಾನತ್ತುಪಡಿಸಿಕೊಂಡಿದ್ದು, ಆರೋಪಿತನ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಜ್ಜಂಪುರ ಠಾಣಾ ಪಿ.ಎಸ್.ಐ. ಶ್ರೀಮತಿ ಮಂಜುಳಾ ಬಾಯಿ   ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಯಗಟಿ ಪೊಲೀಸ್ ಠಾಣೆ

ದಿನಾಂಕ 27/06/2022 ರಂದು ಪಿರ್ಯಾದಿ ಕೆ.ಓ. ಸತೀಶ ಬಿನ್ ಓಂಕಾರಪ್ಪ, ವಾಸ ಚೌಳಹಿರಿಯೂರು, ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯು ದಿನಾಂಕ:25/06/2022 ರಂದು ಒಂದು ಕರು 3 ಹಸುಗಳನ್ನು ಕೊಟ್ಟಿಗೆ ಹೊರಗೆ ಕಟ್ಟಿದ್ದು ದಿನಾಂಕ;26/06/2022 ರಂದು ಬೆಳಿಗ್ಗೆ ನೋಡಲಾಗಿ ಯಾರೋ ಕಳ್ಳರು ಕರು ಮತ್ತು ಮೂರು ಹಸುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಜಾನುವಾರುಗಳ ಅಂದಾಜು ಬೆಲೆ 30,000/- ರೂ ಗಳಾಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಜಾನುವಾರುಗಳನ್ನು ಪತ್ತೆ ಮಾಡಿಕೊಡವಂತೆ ಕೋರಿ ನೀಡಿದ ದೂರಿನ ಮೇರೆಗೆ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ನಗರ ಪೊಲೀಸ್ ಠಾಣೆ

ದಿನಾಂಕ 27/06/2022 ರಂದು ಪಿರ್ಯಾದಿ ಶರತ್ ಬಿನ್ ಲೇಟ್ ನಂಜುಂಡಯ್ಯ, ವಾಸ ವಿಜಯನಗರ, ಚಿಕ್ಕಮಗಳೂರು ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯು ದಿನಾಂಕ:23/06/2022 ರಂದು ಮನೆಗೆ ಬೀಗ ಹಾಕಿಕೊಂಡು  ಬೆಂಗಳೂರಿಗೆ ಹೋಗಿದ್ದು ದಿನಾಂಕ;26/06/2022 ರಂದು ಬೆಳಿಗ್ಗೆ ನೋಡಲಾಗಿ ಯಾರೋ ಕಳ್ಳರು ಯಾವುದೋ ಅಯುಧದಿಂದ ಮನೆಯ ಬಾಗಿಲನ್ನು ಮತ್ತು ಬೀರುವಿನ ಬಾಗಿಲನ್ನು ಹೊಡೆದು ತೆಗೆದು ಮನೆಯಲ್ಲಿ ಇಟ್ಟಿದ್ದ 329 ಗ್ರಾಂ ತೂಕದ ಚಿನ್ನದ ವಡವೆಗಳನ್ನು ಅಂದಾಜು ಬೆಲೆ 13,16,000/- ರೂ ಗಳನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದು,  ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಚಿನ್ನದ ವಡವೆಗಳನ್ನು ಪತ್ತೆ ಮಾಡಿಕೊಡವಂತೆ ಕೋರಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಯಗಟಿ  ಪೊಲೀಸ್ ಠಾಣೆ.

ದಿನಾಂಕ;27/06/2022 ರಂದು 20.00 ಗಂಟೆಗೆ ಪಿರ್ಯಾದಿ ದೇವರಾಜ್ ಬಿನ್ ವೆಂಕಟೇಶ್, ಪಿ.ಕೋಡಿಹಳ್ಳಿ ಗ್ರಾಮ ಯಗಟಿ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;27/06/2022 ರಂದು ಪಿರ್ಯಾದಿ ತಾಯಿಯವರನ್ನು  ಕೆಎ-18-ಇಜೆ-9563 ರಲ್ಲಿ  ರಾಕೇಶ ಮೋಟಾರು ಬೈಕ್ ನ್ನು ಚಾಲನೆ ಮಾಡಿಕೊಂಡು ಕರೆದುಕೊಂಡು ಬರುತ್ತಿರುವಾಗ ಪಿ. ಮಲ್ಲಾಫುರದ ಹತ್ತಿರ ಬರುತ್ತಿರುವಾಗ  ಚಾಲಕ ಬೈಕ್ ನ್ನು  ಅತೀವೇಗ ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು ಬೈಕಿನ ಮುಂದಿನ ಚಕ್ರದ ಟಯರ್ ಸಿಡಿದ ಪರಿಣಾಮ ರಸ್ತೆಯ ಬಲಭಾಗದ ಕಲಿನ ಮೇಲೆ ತಾಯಿ ಕಮಲಮ್ಮ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಕಮಲಮ್ಮ ಸ್ಥಳದಲ್ಲೇ ಮೃತಪಟ್ಟಿದ್ದು  ರಾಕೇಶನಿಗೆ ತಲೆಗೆ  ಕೈ ಕಾಲಿಗೆ ಪೆಟ್ಟಾಗಿದ್ದು, ಅಪಘಾತಪಡಿಸಿದ ಬೈಕಿನ ಚಾಲಕನ ರಾಕೇಶನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿರುತ್ತಾರೆ.

ಗ್ರಾಮಾಂತರ  ಪೊಲೀಸ್ ಠಾಣೆ.

ದಿನಾಂಕ;26-06-2022 ರಂದು ಗ್ರಾಮಾಂತರ ಠಾಣಾ ಸರಹದ್ದಿನ  ವಾಜಪೇಯಿ ಬಡಾವಣೆ ಬಳಿ  1. ಝಬಿವುಲ್ಲಾ ಬಿನ್ ಯಕ್ಬಾಲ್ ಆಶ್ರಯ ಬಡಾವಣೆ, ಕಲ್ಯಾಣ ನಗರ, ಚಿಕ್ಕಮಗಳೂರು, 2. ಶರತ್ ಬಿನ್ ಪ್ರಭುದೇವ, ವಾಸ  ಹೌಸಿಂಗ್ ಬೋರ್ಡ್ ಚಿಕ್ಕಮಗಳೂರು ಟೌನ್ 3. ಚಂದ್ರಶೇಖರ ಬಿನ್ ನಂಜುಂಡಸ್ವಾಮಿ, ವಾಸ ದಂಟರಮಕ್ಕಿ ಚಿಕ್ಕಮಗಳೂರು ಹಾಗೂ 4. ಶಿವಕುಮಾರ ಡಿ.ಎ. ಬಿನ್ ಅಜ್ಜೇಗೌಡ, ವಾಸ ದಂಟರಮಕ್ಕಿ ಚಿಕ್ಕಮಗಳೂರು ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಆಸಾಮಿಗಳು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತರ ವಿರುದ್ದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಗಳಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ. ಚಿಂತನ್ ಕೆ.ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ;26-06-2022 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಕಲ್ಲುದೊಡ್ಡಿ ಶಾಂತಿನಗರ ಅಟೋನಿಲ್ದಾಣದ ಹತ್ತಿರ ಟೀ ಕ್ಯಾಂಟೀನ್ ಬಳಿ ಮುಬಾರಕ್ ಬಿನ್ ಹಯಾತ್ ಸಾಬ್, ವಾಸ ಕಲ್ಲುದೊಡ್ಡಿ ಶಾಂತಿ ನಗರ ಚಿಕ್ಕಮಗಳೂರು ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಆಸಾಮಿಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀಮತಿ ಗೇನೋಜಾ ಕೆ.ಟಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ;26-06-2022 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಬಂಡೀಹಳ್ಳಿ ಕೆರೆ ಏರಿ ಬಳಿ ಸಂತೋಷ ಕೆ. ಬಿನ್ ಲೇಟ್ ಕೃಷ್ಣಮೂರ್ತಿ, ವಾಸ ಪಟೇಲರ ಬೀದಿ ದಂಟರಮಕ್ಕಿ ಚಿಕ್ಕಮಗಳೂರು ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಆಸಾಮಿಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಗ್ರಾಮಾಂತರ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಪೊಲೀಸ್ ಠಾಣಾ ಪಿ.ಎಸ್.ಐ. ಮುದ್ದಪ್ಪ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ;26-06-2022 ರಂದು ಅಲ್ದೂರು ಠಾಣಾ ಸರಹದ್ದಿನ ಹಾಂದಿ ಸಂತೇ ಮೈದಾನದಲ್ಲಿ  ಅವೇಶ್ ಖಾನ್ ಬಿನ್ ಸಮರ್ ಅಲಿ ವಾಸ ಹಾಂದಿ ಗ್ರಾಮ ಅಲ್ದೂರು ಹೋಬಳಿ  ಚಿಕ್ಕಮಗಳೂರು ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಆಸಾಮಿಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಅಲ್ದೂರು  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಅಲ್ದೂರು ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀಮತಿ ಶಿವರುದ್ರಮ್ಮ ಎಸ್.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಬಾಳೆಹೊನ್ನೂರು  ಪೊಲೀಸ್ ಠಾಣೆ.

ದಿನಾಂಕ;26-06-2022 ರಂದು ಬಾಳೆಹೊನ್ನೂರು  ಠಾಣಾ ಸರಹದ್ದಿನ ಬಾಳೆಹೊನ್ನೂರು ಪಟ್ಟಣದ ಮಾರ್ಕೇಟ್ ಬಳಿ ಇಮ್ರಾನ್ ಬಿನ್ ಇಸ್ಮಾಯಿಲ್, ವಾಸ ಕಡ್ಲೆಮಕ್ಕಿ ರೇಣುಕಾ ನಗರ ಬಾಳೆಹೊನ್ನೂರು 2. ಬಾಳೆಹೊನ್ನೂರು ಪಟ್ಟಣದ ವಿವೇಕನಗರದ ಬಳಿ   ಅಬ್ದುಲ್ ಪೈಯಾಜ್ ಬಿನ್ ಕೆ.ಎಂ. ಅಬೂಬಕರ್, ವಾಸ ವಿವೇಕನಗರ ಬಾಳೆಹೊನ್ನೂರು ಕಣಬೂರು 3. ಬಾಳೆಹೊನ್ನೂರು ಪಟ್ಟಣದ ಬಿ.ಎಸ್.ಎನ್.ಎಲ್. ಕಛೇರಿಯ ಮುಂಭಾಗ 3. ಮಹ್ಮದ್ ಹುಸೇನ್ ಬಿನ್ ಅಬ್ದುಲ್ ರೌಪ್ ವಾಸ ಕಡ್ಲೆಮಕ್ಕಿ ಬಿ. ಕಣಬೂರು ಗ್ರಾಮ 4. ಸಿದ್ದಿಕ್ ಬಿನ್ ಉಸ್ಮಾನ್ ,ವಾಸ ಕಡ್ಲೆಮಕ್ಕಿ ಬಿ . ಕಣಬೂರು ಗ್ರಾಮ ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಆಸಾಮಿಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಾಳೆಹೊನ್ನೂರು ಪೊಲೀಸ್ ಠಾಣಾ ಪಿ.ಎಸ್.ಐ. ನಿತ್ಯಾನಂದಗೌಡ ಪಿ.ಡಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮಹಿಳಾ ಪೊಲೀಸ್ ಠಾಣೆ.

ದಿನಾಂಕ;27/06/2022 ರಂದು ಪಿರ್ಯಾದಿ ಕೆ. ಚಂದ್ರಶೇಖರ್ ವಾಸ ಗೌರಿ ಕಾಲುವೆ ಚಿಕ್ಕಮಗಳೂರು ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಹೆಂಡಿ ಚೈತ್ರ @ ಛಾಯಾದೇವಿ  ಗೌರಿ ದಿನಾಂಕ; 18/06/2022 ರಂದು ರಾತ್ರಿ 10.30 ಗಂಟೆ ಸಮಯದಲ್ಲಿ  ಮನೆಯಿಂದ ಮಕ್ಕಳಾದ ಜಿ.ಸಿ. ಚಿರಶ್ರೀ ಮತ್ತು ಜಿ.ಸಿ. ಚಿರಾಯುಷ್  ರವರನ್ನು ಜೊತೆಯಲ್ಲಿ ಕರೆದುಕೊಂಡು ಹೋದವಳು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಹೆಂಡತಿ; ಚೈತ್ರ , 33 ವರ್ಷ,  5 ಅಡಿ ಎತ್ತರ, ದುಂಡುಮುಖ, ಸಾದಾರಣ ಮೈ ಕಟ್ಟು, ಕಪ್ಪು ತಲೆ ಕೂದಲು, ಗೋದಿ ಬಣ್ಣ  ಕನ್ನಡ, ತುಳು, ಮಲೆಯಾಳಿ, ಬಾಷೆ ಮಾತಾನಾಡುತ್ತಾಳೆ,  ಎಡಗಣ್ಣು ಮಾಲುಗಣ್ಣು, ಅಗಿರುತ್ತದೆ. ಕಡು ಸಿಮೆಂಟ್ ಬಣ್ಣದ ಚೂಡಿದಾರ ಧರಿಸಿರುತ್ತಾರೆ. ಮಗಳು ಚಿರಶ್ರೀ, ,8 ವರ್ಷ, ದುಂಡುಮುಖ, ಸಾದಾರಣ ಮೈ ಕಟ್ಟು, ಕಪ್ಪು ತಲೆ ಕೂದಲು, ಗೋದಿ ಬಣ್ಣ, ಕನ್ನಡ ಬಾಷೆ ಮಾತನಾಡುತ್ತಾರೆ. ಕ್ರೀಂ ಕಲರ್ ಮಿಡಿ ಧರಿಸಿರುತ್ತಾರೆ. ಮಗ ಚಿರಾಯುಷ್ , 7 ವರ್ಷ, ದುಂಡುಮುಖ, ಸದಾರಣ ಮೈ ಕಟ್ಟು ಕಪ್ಪು ಕೂದಲು, ಗೋದಿ ಬಣ್ಣ , 3 1/2  ಅಡಿ ಎತ್ತರ, ಕನ್ನಡ ಮಲೆಯಾಳಿ ಬಾಷೆ ಮಾತನಾಡುತ್ತಾರೆ. ಕ್ರೀಂ ಮತ್ತು ಕಪ್ಪು ಬಣ್ಣದ ಟೀ ಶರಟು , ಕಂದು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.  ಕಾಣೆಯಾಗಿರುವ ತನ್ನ ಹೆಂಡತಿ ಮತ್ತು ಮಕ್ಕಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಮಹಿಳಾ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳಸ ಪೊಲೀಸ್ ಠಾಣೆ.

ದಿನಾಂಕ;27/06/2022 ರಂದು ಪಿರ್ಯಾದಿ ಸುಮ ಕೊಂ ನಾಗೇಶ ವಾಸ ಯಡದಾಳು ಮಾವಿನಕೆರೆ ಗ್ರಾಮ ಕಳಸ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗ ಶರತ್ ನು ದಿನಾಂಕ; 19/06/2022 ರಂದು ಕೆಲಸಕ್ಕೆಂದು ಟ್ಯಾಕ್ಟರ್ ತೆಗೆದಕೊಂಡು ಹೋಗಿದ್ದ, ದಿನಾಂಕ;25/06/2022 ರಂದು ಪೋನ್ ನಲ್ಲಿ ಮಾತನಾಡಿದವನು ನಂತರ ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಮಗ; ಶರತ್  23 ವರ್ಷ,  168 ಸೆಂ. ಮೀ.  ಎತ್ತರ,  ಸಾಧಾರಣ ಶರೀರ, ಎಣ್ಣೆಗೆಂಪು ಬಣ್ಣ, ಕುರುಚಲು ಗಡ್ಡ, ಕೋಲುಮುಖದ ಚಹರೆ ಹೊಂದಿರುತ್ತಾನೆ.  ಕಾಣೆಯಾಗಿರುವ ತನ್ನ ಮಗ ಶರತ್ ನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಕಳಸ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 28-06-2022 07:15 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080