ಅಭಿಪ್ರಾಯ / ಸಲಹೆಗಳು

ಅಕ್ರಮ ಗಾಂಜಾ ಮಾರಾಟ  ಪ್ರಕರಣ

ಕಡೂರು ಪೊಲೀಸ್ ಠಾಣೆ

ದಿನಾಂಕ:28/10/2021 ರಂದು ಕಡೂರು ಠಾಣಾ ವ್ಯಾಪ್ತಿಯ ಸುಭಾಷ್ ನಗರದ ಸುಭಾಷ್ ಸರ್ಕಲ್ ಸಮೀಪ ಅಕ್ರಮವಾಗಿ ಗಾಂಜಾ ಸೋಪ್ಪನ್ನು ಮಾರಾಟ ಮಾಡುತ್ತಿದ್ದ ಆರೋಪಿತರಾದ ಪರಮೇಶ ಬಿನ್ ರಾಮಬೋವಿ ಮತ್ತು ಜೀವನ್ ಸಾಬ್ ದುಗ್ಲಾಪುರ ವಾಸಿಯವರನ್ನು  ವಶಕ್ಕೆ ಪಡೆದು  504 ಗ್ರಾಮ್ ಗಾಂಜಾಸೋಪ್ಪನ್ನು ಬೆಲೆ ಸುಮಾರು 15,000/- ರೂ ಅಗಿದ್ದು ಅಮಾನತ್ತುಪಡಿಸಿಕೊಂಡು ಬಂದು   ಅರೋಪಿತರ ವಿರುದ್ದ  ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ  ರಮ್ಯ ಎನ್. ಕೆ.  ಹಾಗೂ ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ
ಯಗಟಿ ಪೊಲೀಸ್ ಠಾಣೆ
ದಿನಾಂಕ 27/10/2021 ರಂದು ಸಂಜೆ ಯಗಟಿ ಠಾಣಾ ಸರಹದ್ದಿನ ಯಗಟಿಪುರದಿಂದ  ಸೀತಾಪುರಕ್ಕೆ ಹೋಗುವ ಕರೀಂ ರವರ ಮನೆಯಿಂದ ಸ್ವಲ್ಪ ಮುಂದೆ ತೆಂಗಿನ ತೋಟದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಆಟ ಆಡುತ್ತಿದ್ದು ಆರೋಪಿತರಾದ 1. ಚಂದ್ರಶೇಖರ್ ಬಿನ್ ಕಲ್ಲೇಶಪ್ಪ 2. ಧರ್ಮೇಶ ಬಿನ್ ದೊಡ್ಡಯ್ಯ  3. ಮೆಹಬೂಬ್ ಖಾನ್ ಬಿನ್ ಅಯೂಬ್ ಖಾನ್  ರವರನ್ನು ವಶಕ್ಕೆ ಪಡೆದು ಅರೋಪಿತರು ಜೂಜಾಡಲು ಬಳಸಿದ 1100/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿ ವಿರುದ್ದ ಯಗಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿಎಸ್ಐ  ಶಶಿಕುಮಾರ್ ವೈ.ಎಸ್.   ಹಾಗೂ ರವರು ಸಿಬ್ಬಂದಿಗಳು ಪಾಲೊಂಡಿರುತ್ತಾರೆ.
ಮನುಷ್ಯ ಕಾಣೆ  ಪ್ರಕರಣ
ಗೋಣಿಬೀಡು ಪೊಲೀಸ್ ಠಾಣೆ
ದಿನಾಂಕ:27/10/2021 ರಂದು ಪಿರ್ಯಾದಿ ಹೆಚ್.ಡಿ. ಶಶಿಕುಮಾರ್ ಬಿನ್ ಲೇ ಧರ್ಮಪ್ಪ ಹೊಸಪುರ ಗ್ರಾಮ ಗೋಣಿಬೀಡು ಹೋಬಳಿ ಮೂಡಿಗೆರೆ ತಾಲ್ಲೋಕು  ರವರು ನೀಡಿದ ದೂರಿನಲ್ಲಿ ದಿನಾಂಕ 25/10/2021 ರಂದು ಬೆಳಿಗ್ಗೆ ಪಿರ್ಯಾದಿಯವರ ಹೆಂಡತಿ ಪವಿತ್ರ , 8 ವರ್ಷದ ಮಗನನ್ನು ಕರೆದುಕೊಂಡು ಗೋಣೀಬೀಡಿಗೆ ಹೋಗಿದ್ದು ವಾಪಾಸ್ಸು ಮನೆಗೆ ಬಾರದೇ ಇದ್ದು ಈವರೆಗೂ  ಹುಡುಕಿದರೂ  ಪತ್ತೆಯಾಗಿಲ್ಲವೆಂದು  ಕಾಣೆಯಾಗಿರುವ ತನ್ನ ಹೆಂಡತಿ ಮತ್ತು ಮಗನನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
 

ಇತ್ತೀಚಿನ ನವೀಕರಣ​ : 28-10-2021 08:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080