ಅಭಿಪ್ರಾಯ / ಸಲಹೆಗಳು

ಅಕ್ರಮ  ಇಸ್ಪೀಟ್  ಜೂಜಾಟ ಪ್ರಕರಣ

ಸಿ.ಇ.ಎನ್.   ಪೊಲೀಸ್ ಠಾಣೆ.

ದಿನಾಂಕ:28-11-2021 ರಂದು ಮದ್ಯಾಹ್ನ ಚಿಕ್ಕಮಗಳೂರು ನಗರದ ಬಾರ್ ಲೈನ್ ರಸ್ತೆ ಹಿಂಭಾಗದ ಪೆನ್ಷನ್ ಮೊಹಲ್ಲಾ ಕ್ಕೆ ಹೋಗುವ ರಸ್ತೆಯಲ್ಲಿ ಸನ್ ರೈಸ್ ಶಾಲೆಯ ಸಮೀಪ ಹೇಮಂತ್ ರವರ ಮನೆಯ ಮೊದಲನೇ ಮಹಡಿಯಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ  ಆರೋಪಿತರಾದ 1. ಏಜಾಜ್ ಬಿನ್ ಲೇಟ್ ಮೊಹಮ್ಮದ್ ದಸ್ತಗಿರ್ 2. ರೆಹಮಾನ್ ಶರೀಪ್ ಬಿನ್ ಲೇಟ್ ಅಮಾನ್ ಶರೀಪ್ 3. ಬಾಷಾ ಬಿನ್ ರಹಿಂ ಸಾಬ್ 4. ಇಕ್ರಾಂ ಅಹಮ್ಮದ್ ಬಿನ್ ವಾಜಿದ್ ಅಹಮ್ಮದ್ 5. ಅಜ್ಜು ಬಿನ್ ಮಹಬೂಬ್  6. ಮುಕ್ತಯಾರ್ ಬಿನ್ ಅಬ್ದುಲ್ ಖರಿಂ ರವರನ್ನು ವಶಕ್ಕೆ ಪಡೆದು ಆರೋಪಿತರು  ಇಸ್ಪೀಟ್ ಜೂಜಾಡಲು ಬಳಸಿದ್ದ 10690/-ರೂ ನಗದು ಹಣ,  52 ಇಸ್ಫೀಟ್ ಎಲೆಗಳು  ಹಾಗೂ ಒಂದು ಪ್ಲಾಸ್ಟಿಕ್ ಚಾಪೆಯನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್.ಠಾಣಾ ಪಿ.ಎಸ್.ಐ. ಶ್ರೀ ರಫಿಕ್ ಎಂ.  ಹಾಗೂ ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

 ಕಡೂರು ಪೊಲೀಸ್ ಠಾಣೆ

ದಿನಾಂಕ :28-11-2021 ರಂದು ಪಿರ್ಯಾದಿ ಸುಹೇಲ್ ಎಂಬುವರು ನೀಡಿದ ದೂರಿನಲ್ಲಿ ದಿನಾಂಕ: 25-11-2021ರಂದು ಬೆಳಿಗ್ಗೆ ಮನೆಯಲ್ಲಿದ್ದ  ತನ್ನ ಹೆಂಡತಿ ತಸ್ಲಿಮಾ ಇವಳು  ಕೆಲಸಕ್ಕೆ ಹೋಗಿ ವಾಪಾಸ್ಸು ಬಂದು ನೋಡಲಾಗಿ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಹೋಗಿದ್ದು ,ನಾನು ಇವರೆಗೂ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದರೂ ತನ್ನ ಹೆಂಡತಿ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಹೆಂಡತಿ ತಸ್ಲಿಮಾ , 26 ವರ್ಷ, ಕನ್ನಡ ಹಿಂದಿ ಬಾಷೆ ಮಾತಾನಾಡುತ್ತಾಳೆ 5.4 ಅಡಿ ಎತ್ತರವಿರುತ್ತಾಳೆ ಬಿಳಿ ಮೈ ಬಣ್ಣ ಬುರ್ಕಾ ಧರಿಸಿರುತ್ತಾಳೆ ಎಂದು ಕಾಣೆಯಾಗಿರುವ ತನ್ನ ಹೆಂಡತಿಯನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಅಜ್ಜಂಫುರ ಪೊಲೀಸ್ ಠಾಣೆ.

ದಿನಾಂಕ 28-11-2021 ರಂದು ಸಂಜೆ ಪಿರ್ಯಾದಿ ಕಾಂತರಾಜ್ ಬಿನ್ ನಾಗರಾಜಪ್ಪ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯು ಗಿರಿಯಾಪುರದಲ್ಲಿ ಇವರು ತಮ್ಮ ಮನೆಯನ್ನು ದಿನಾಂಕ 27-11-021 ರಂದು ಬೀಗ ಹಾಕಿಕೊಂಡು  ಶಿವಮೊಗ್ಗಕ್ಕೆ ಹೋಗಿದ್ದು ದಿನಾಂಕ 28-11-2021 ರಂದು ಬೆಳಿಗ್ಗೆ ಬಂದು ನೋಡಲಾಗಿ ಮನೆಯ ಮುಂದಿನ ಬಾಗಿಲಿನ ಚೀಲಕವನ್ನು ಯಾವುದೋ ಆಯುಧದಿಂದ ಮುರಿದು ಒಳ ಪ್ರವೇಶಿಸಿ ಮನೆಯ ಗ್ರಾಡೇಜ್ ಬೀರುವನ್ನು ಹೊಡೆದು ಬೀರುವಿನಲ್ಲಿ ಇದ್ದ 42 ಗ್ರಾಂ ಚಿನ್ನ ದ ಅಭರಣಗಳು ಅಂದಾಜು ಬೆಲೆ 1,88,000 ರೂ ಗಳಾಗಿದ್ದು ಮತ್ತು ಬೆಳ್ಳಿಯ ಸುಮಾರು   130 ಗ್ರಾಂ ತೂಕದ  ಅಭರಣಗಳನ್ನು ಹಾಗೂ 10,000/- ರೂ ನಗದು ಹಣವನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು ಕಳುವಾಗಿರುವ ಸ್ವತ್ತನ್ನು ಮತ್ತು ಕಳ್ಳರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಫುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 28-11-2021 07:59 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080