ಅಭಿಪ್ರಾಯ / ಸಲಹೆಗಳು

 

ಕೊಲೆ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ

ದಿನಾಂಕ:29-01-2022 ರಂದು ಪಿರ್ಯಾದಿ ನೀಲಮ್ಮ ಕೊಂ ಉಮೇಶ ಜಡಗನಹಳ್ಳಿ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ:29-01-2022 ರಂದು ಪಿರ್ಯಾದಿಗೆ ಅವಿನಾಶನು ಪೋನ್ ಮಾಡಿ ಪಿರ್ಯಾದಿ ಮಗಳು ರಾತ್ರಿ ನನ್ನ ಜೊತೆ ಇದ್ದವಳು ಈಗ ಎದ್ದೇಳುತ್ತಿಲ್ಲ ಎಂದು ತಿಳಿಸಿದ್ದು ಪಿರ್ಯಾದಿ ಬಂದು ನೊಡಲಾಗಿ ಅರದಹಳ್ಳಿಯ ಗೋಮಾಳದ ಕೆರೆಯ ಪಕ್ಕ ಸುಮಾಳು ಅಂಗಾತವಾಗಿ ಬಿದಿದ್ದು, ಅವಳ ಮೂಗಿನಿಂದ ರಕ್ತ ಬರುತ್ತಿದ್ದು, ಉಸಿರಾಡುತ್ತಿರಲಿಲ್ಲ, ಅಲ್ಲೇ ಪಕ್ಕದಲ್ಲಿ ಅವಿನಾಶನು ಮಗಳನ್ನು ಕರೆದುಕೊಂಡು  ಹೋದ ಬೈಕ್ ನಿಂತಿತ್ತು. ಅವಿನಾಶನು   ಪಿರ್ಯಾದಿಗೆ ತಿಳಿಯದಂತೆ ಮದುವೆ ಅಗಿದ್ದು ಪಿರ್ಯಾದಿಗೆ ಮಗಳನ್ನು ಸಂಪರ್ಕಕ್ಕೆ ಬಿಡದೆ ಅವಿನಾಶನು ಬೀರದೇವರಹಳ್ಳಿಯ ಆರತಿ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿ ತಪ್ಪಿಸಿಕೊಂಡು ಹೋಗಿದ್ದು ಅರೋಫಿ ಅವಿನಾಶನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ: 28-01-2022 ರಂದು ಬೀರೂರು ಪಟ್ಟಣದ ಹಳೇಪೇಟೆ ವಾಸಿ ಶ್ರೀ ಶಶಿಕುಮಾರ್ ಬಿ.ಕೆ. ಬಿನ್ ಲೇಟ್ ಕೃಷ್ಣೋಜಿರಾವ್  ಇವರು ನೀಡಿದ ದೂರಿನಲ್ಲಿ ದಿನಾಂಕ 16/01/2022 ರಂದು ಪಿರ್ಯಾಧಿ ಶಬರಿಮಲೈಗೆ ಹೋಗಿದ್ದು ಪಿರ್ಯಾದಿ ಹೆಂಡತಿ ಸಿಂಧು ಮನೆಯಲ್ಲಿದ್ದು ಪಿರ್ಯಾಧಿ ದಿನಾಂಕ:19-01-2022 ರಂದು ಶಬರಿಮಲೈ ನಿಂದ ವಾಪಾಸ್ಸು ಬಂದು ನೋಡಿದಾಘ ಪಿರ್ಯಾದಿ ಹೆಂಡತಿ ಮನೆಯಲ್ಲಿ ಇರಲಿಲ್ಲ. ಈವರೆಗೂ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಹೆಂಡತಿ ಸಿಂಧು ಕೋಲುಮುಖ, ಸಾದಾರಣ ಮೈಕಟು, 4.5 ಅಡಿ ಎತ್ತರ ವಿರುತ್ತಾಳೆ. ಎಣ್ಣೆಗೆಂಪು ಮೈ ಬಣ್ಣ , ಕನ್ನಡ ಭಾಷೆ ಮಾತಾನಾಡುತ್ತಾಳೆ. ಚೂಡಿದಾರ ಧರಿಸಿರುತ್ತಾರೆ.   ಕಾಣೆಯಾಗಿರುವ ತನ್ನ ಹೆಂಡತಿ ಸಿಂಧುವನ್ನು  ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಬೀರೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 29-01-2022 07:51 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080