ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಮಹಿಳಾ ಪೊಲೀಸ್ ಠಾಣೆ.

ದಿನಾಂಕ:29/03/2022 ರಂದು ಪಿರ್ಯಾದಿ ಮಹೇಶ ಬಿನ್ ಧನ ಬಹದ್ದೂರ್ ವಾಸ ಗವನಹಳ್ಳಿ ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಹೆಂಡತಿ ರೇಷ್ಮಾ ದಿನಾಂಕ 27/03/2022 ರಂದು ಮನೆಯಲ್ಲಿ ಇದ್ದವಳು ನಂತರ ಮನೆಗೆ ಹೋಗಿ ನೋಡಲಾಗಿ  ಮನೆಯಲ್ಲಿ ಕಾಣಲಿಲ್ಲ, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿರುತ್ತಾಳೆ. ಎಲ್ಲಾ ಕಡೆಯೂ ಹುಡುಕಾಡಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಶ್ರೀಮತಿ ರೇಷ್ಮಾ , 32 ವರ್ಷ, 5.4 ಅಡಿ ಎತ್ತರ, ದುಂಡುಮುಖ, ಬಿಳಿ ಮಿಶ್ರ ಬಣ್ಣ, ಸಾದಾರಣ ಮೈ ಕಟ್ಟು, ನೀಲಿ ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಹೆಂಡತಿಯನ್ನು ಪತ್ತೆ ಮಾಡಿಕೊಡ ಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ

ದಿನಾಂಕ 29/03/2022 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ ರಂಗೇನಹಳ್ಳಿ ವಾಸಿ ಮಂಜುನಾಥ ಬಿನ್ ತಿಮ್ಮೇಗೌಡ ಇವರು ನೀಡಿದ ದೂರಿನಲ್ಲಿ ದಿನಾಂಕ 23/03/2022 ರಂದು ತನ್ನ ಸಂಬಂದಿಕರಾದ ರೇಣು ಹೆಚ್. ಇವರ ಬಾಬ್ತು ಕೆಎ-13-ಇಯು-0456 ನಂಬರಿನ ರಾಯಲ್ ಎನ್ ಪೀಲ್ಡ್ ಬೈಕ್ ಅನ್ನು ರಾತ್ರಿ 10-00 ಗಂಟೆಯ ಸಮಯದಲ್ಲಿ ತನ್ನ ಬಾಬ್ತು ಬೇಕರಿ ಪಕ್ಕ ನಿಲ್ಲಿಸಿದ್ದು ದಿನಾಂಕ 24/03/2022 ರಂದು ಬೆಳಿಗ್ಗೆ ನೋಡಿದಾಗ ಸದರಿ ಬೈಕ್ ನಿಲ್ಲಿಸದ ಜಾಗದಲ್ಲಿ ಕಂಡು ಬರದೇ ಇದ್ದು, ಬೈಕ್ ನ್ನು ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು ಯಾರೋ ಕಳ್ಳರು  ಸದರಿ ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು , ಕೆಎ-13-ಇಯು-0456 ನಂಬರಿನ ರಾಯಲ್ ಎನ್ ಪೀಲ್ಡ್ ಬೈಕ್ನ ಬೆಲೆ 1,70,000 ರು ಅಗಿದ್ದು, ಕಳ್ಳರನ್ನು ಪತ್ತೆ ಮಾಡಿ ಬೈಕ್ ನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ನಿರ್ಲಕ್ಷತನದಿಂದ ಸಾವು ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:28-03-2022 ರಂದು ಗ್ರಾಮಾಂತರ ಠಾಣಾ ಬಿಂಡಿಗಾ ಗ್ರಾಮ ವಾಸಿ ಶ್ರೀಮತಿ ಮಮತ ಕೋಂ ಸಂದೀಪ, ಇವರು ನೀಡಿದ ದೂರಿನಲ್ಲಿ  ಪಿರ್ಯಾಧಿ ಗಂಡ ಸಂದೀಪ ಈತನು ಟಿಂಬರ್ ಕೆಲಸ ಮಾಡುತ್ತಿದ್ದು ದಿನಾಂಕ;28/03/2022 ರಂದು ಬೆಳಗ್ಗೆ 10-00 ಗಂಟೆಗೆ ಪಿರ್ಯಾದಿ ಗಂಡ ಸಂದೀಪ ಟಿಂಬರ್ ಕೆಲಸ ಮಾಡಲು ಟಿಂಬರ್ ವ್ಯಾಪಾರಿ ಎಂ.ಜಿ ಪ್ರಕಾಶ್ ಬಂಗೇರಾ ರವರು ಬಿಂಡಿಗಾ ಗ್ರಾಮದ ತೇಜ ಕುಮಾರ್ ತೋಟದಲ್ಲಿ ಸಿಲ್ವರ್ ಮರದ ಟಾಪ್ ಹೊಡೆಯಲು ಕರೆದುಕೊಂಡು ಹೋಗಿದ್ದು ಸಂದೀಪ ರವರು ಸಿಲ್ವರ್ ಮರವೇರಿ ಟಾಪ್ ಹೊಡೆಯುವ ಕೆಲಸ ಮಾಡುತ್ತಿರುವಾಗ ಅಕಸ್ಮಿಕವಾಗಿ ಮರದಿಂದ ಜಾರಿ ಕೆಳಗೆ ಬಿದ್ದಿದ್ದು ಕೂಡಲೇ ಸಂದೀಪರವರನ್ನು ಚಿಕಿತ್ಸೆಗೆ ಸೇರಿಸಿದ್ದು ವೈದ್ಯರು ಪರೀಕ್ಷಿಸಿ ತಲೆಗೆ ಬಲವಾದ ಹೊಡೆತ ಬಿದಿರುವುದರಿಂದ  ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿರುವುದಾಗಿ ತಿಳಿಸಿದ್ದು,  ಟಿಂಬರ್ ವ್ಯಾಪಾರಿ ಎಂ.ಜಿ ಪ್ರಕಾಶ್ ಬಂಗೇರಾ ಮತ್ತು  ತೋಟದ ಮಾಲೀಕ ತೇಜ ಕುಮಾರ್ ರವರು ಮರವೇರಿ ಕೆಲಸ ಮಾಡಲು ಯಾವುದೇ ಮುಂಜಾಗ್ರತೆ ವಹಿಸದೇ, ತನ್ನ ಗಂಡ ಸಾವಿಗೆ ಕಾರಣರಾಗಿದ್ದು ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  

ಇತ್ತೀಚಿನ ನವೀಕರಣ​ : 29-03-2022 06:47 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080