ಅಭಿಪ್ರಾಯ / ಸಲಹೆಗಳು

 ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಲಕ್ಕವಳ್ಳಿ ಪೊಲೀಸ್ ಠಾಣೆ.

ದಿನಾಂಕ;28/04/2022 ರಂದು ಲಕ್ಕವಳ್ಳಿ ಠಾಣಾ ಸರಹದ್ದಿನ ಭೂಸೇನಾಹಳ್ಳಿ ಗ್ರಾಮ  ಗೋಪಾಲಕೃಷ್ಣ ಸ್ವಾಮಿ ದೇವಸ್ಥಾನದ ಬಳಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ, ಆರೋಪಿತರಾದ 1] ಹರೀಶ ಬಿನ್ ಹನುಮಂತಪ್ಪ 2]ಶಿವನಾಯ್ಕ ಬಿನ್ ಬುಚೇಂದ್ರನಾಯ್ಕ 3] ಅನಂದ ಬಿನ್ ಲಕ್ಷ್ಮಪ್ಪ 4]ಶಿವರಾಜ್ ಬಿನ್ ಮಂಜುನಾಥ 4] ಚಂದ್ರನಾಯ್ಕ ಬಿನ್ ಮಂಜಾನಾಯ್ಕ ರವರನ್ನು ವಶಕ್ಕೆ ಪಡೆದು, ಅರೋಪಿ ಶಿವಕುಮಾರ್ ಬಿನ್ ಚಂದ್ರಾನಾಯ್ಕ ನು ಓಡಿ ಹೋಗಿದ್ದು, ಆರೋಪಿತರು ಅಕ್ರಮವಾಗಿ  ಜೂಜಾಡಲು ಉಪಯೋಗಿಸಿದ ಪ್ಯಾಕ್ ಮದ್ಯ ಅಂದಾಜು ಬೆಲೆ ರೂ 3650/-, 52 ಇಸ್ಪೀಟ್ ಎಲೆಗಳು, ಪ್ಲಾಸ್ಟಿಕ್ ಬ್ಯಾಗ್ ಅನ್ನು ಅಮಾನತ್ತುಪಡಿಸಿಕೊಂಡು ಬಂದು ಲಕ್ಕವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಲಕ್ಕವಳ್ಳಿ ಪಿ.ಎಸ್.ಐ. ಶಂಭುಲಿಂಗಯ್ಯ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ;29/04/2022 ರಂದು ನಗರ ಠಾಣಾ ಸರಹದ್ದಿನ ಚಿಕ್ಕಮಗಳೂರು ನಗರದ ಹಳೆ ಖಾಸಗಿ ಬಸ್ ನಿಲ್ದಾಣದ ಬಳಿ  ಕೈಮರ ಹೊಸಳ್ಳ್ಳಿ ಗ್ರಾಮ ವಾಸಿ ನಿರ್ವಾಣಪ್ಪ ಬಿನ್ ಲೇಟ್ ಜವರೇಗೌಡ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಮದ್ಯವನ್ನು ಆರೋಪಿತನನ್ನು ವಶಕ್ಕೆ ಪಡೆದು, ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್ ನ 96 ಟೆಟ್ರಾಪ್ಯಾಕ್ ಮದ್ಯ ಅಂದಾಜು ಬೆಲೆ ರೂ 3372/- ಅಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಡಿ.ಸಿ.ಐ.ಬಿ. ಪಿ.ಎಸ್.ಐ. ಶ್ರೀ ಗೋವಿಂದನಾಯ್ಕ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಗೋಣಿಬೀಡು ಪೊಲೀಸ್ ಠಾಣೆ.

ದಿನಾಂಕ;29/04/2022 ರಂದು ಪಿರ್ಯಾದಿ ರಮೇಶ ಬಿನ್ ಹಾಲಪ್ಪಗೌಡ ಯು. ಹೊಸಳ್ಳಿ ಗ್ರಾಮ ಗೋಣಿಬೀಡು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗ ಪೂರ್ಣೇಶ, ಎಸ್.  ದಿನಾಂಕ; 26/04/2022 ರಂದು ಮನೆಯಿಂದ ಐ.ಟಿ.ಐ ಕಾಲೇಜಿಗೆ ಮೂಡಿಗೆರೆ ಹೋದವನು, ವಾಪಾಸ್ಸು ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಪೂರ್ಣೇಶ ಎಸ್, ಬಿನ್ ರಮೇಶ 19 ವರ್ಷ, , 5.0 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡುಮುಖ, ಸಾದಾರಣ ಮೈಕಟ್ಟು ಆಕಾಶ್ ನೀಲಿ ಕಲರ್ ಶರಟು ಮತ್ತು ಪ್ಯಾಂಟ್ (ಶಾಲಾ ಸಮವಸ್ತ್ರ) ಧರಿಸಿರುತ್ತಾನೆ.  ಕಾಣೆಯಾಗಿರುವ ತನ್ನ ಮಗ ಪೂರ್ಣೇಶ ಎಸ್, ನನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ;28/04/2022 ರಂದು ಪಿರ್ಯಾದಿ ಅಶೋಕ ಕುಮಾರ್ ಜೈನ್  ಎಂ.ಜಿ.ರಸ್ತೆ ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ;24/04/2022 ರಂದು ತನ್ನ ಮಗ ದೀಕ್ಷಿತ್ ಜೈನ್  ಇತನು ಅಂಗಡಿ ವ್ಯಾಪಾರ ನೋಡಿಕೊಂಡಿದ್ದವನು  ಗಲಾಟೆ ಮಾಡಿಕೊಂಡು ರಾತ್ರಿ 8-00 ಗಂಟೆಗೆ ಮನೆಯಿಂದ ಹೋದವನು, ವಾಪಾಸ್ಸು ಮನೆಗೆ ಬಾರದೆ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ದೀಕ್ಷಿತ್ ಜೈನ್ , 28 ವರ್ಷ, 5 ಅಡಿ ಎತ್ತರ, ಗೋದಿ ಮೈಬಣ್ಣ, ದುಂಡುಮುಖ, ಕನ್ನಡ , ಇಂಗ್ಲಿಷ್ ಮಾತನಾಡುತ್ತಾನೆ. ಬಿಳಿ ಬಣ್ಣದ ಶರಟು ಮತ್ತು ಜಿನ್ಸ್ ಪ್ಯಾಂಟು ಧರಿಸಿರುತ್ತಾನೆ. ಕಾಣೆಯಾಗಿರುವ ತನ್ನ ಮಗ ದೀಕ್ಷಿತ್ ಜೈನ್ ನನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:28/04/2022 ರಂದು ಪಿರ್ಯಾದಿ ಶ್ರೀಮತಿ ಗೀತಾ ಕೋಂ ಲೇಟ್ ಸಿದ್ದೇಶ್  ಗರುಡನಗಿರಿ ಕಣಕಟ್ಟೆ ಟೌನ್ ವಾಸಿ,  ಇವರು ನೀಡಿದ ದೂರಿನಲ್ಲಿ, ಸಂತೋಷ ರವರು ತಮ್ಮ ಬಾಬ್ತು ಕೆಎ-18-ಟಿಬಿ 0538 ಟ್ಯಾಕ್ಟರ್  ಗೆ ಪಿರ್ಯಾದಿ ಮಗನಿಗೆ ಡಿ.ಎಲ್. ಇಲ್ಲದೆ ಇದರೂ ಸಹ ಟ್ಯಾಕ್ಟರ್ ಚಾಲನೆ ಮಾಡಲು ಕೆಲಸಕ್ಕೆ ಕರೆದುಕೊಂಡು ಹೋಗಿದ್ದು,ದಿನಾಂಕ:28/04/2022 ರಂದು 10.30 ಗಂಟೆಗೆ ಪಿರ್ಯಾದಿಯ ತಮ್ಮ ಮಗ  ಪ್ರಜ್ವಲ್ ಸಂತೋಷ ರವರು ತಮ್ಮ ಬಾಬ್ತು ಕೆಎ-18-ಟಿಬಿ 0538 ಟ್ಯಾಕ್ಟರ್ ನ್ನು ಸಿಂದಿಗೆರೆ ಗ್ರಾಮದಲ್ಲಿ ಕೆರೆಯಿಂದ ಗೋಡ್ ಮಣ್ಣು ಹೊಡೆಯುಲು ತಿಳಿಸಿದ್ದು ಪ್ರಜ್ವಲ್ ಜಮೀನಿಗೆ ಮಣ್ಣು ಹೊಡೆಯುವಾಗ ಟ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು ಪರಿಣಾಮ, ಪ್ರಜ್ವಲನು ಟ್ಯಾಕ್ಟರ್ ಇಂಜಿನ್ ಕೆಳಕ್ಕೆ ಸಿಲುಕಿಕೊಂಡು ಮೃತಪಟ್ಟಿರುತ್ತಾನೆ. ಅಪಘಾತಕ್ಕೆ ಕಾರಣನಾದ ಕೆಎ-18-ಟಿಬಿ 0538 ಟ್ಯಾಕ್ಟರ್ ಮಾಲೀಕರ ವಿರುದ್ದ ಕ್ರಮ ಕೈಗೊಳ್ಳಲು, ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ;08/04/2022 ರಂದು ತರೀಕೆರೆ ಪಟ್ಟಣದ ಬಯಲು ರಂಗ ಮಂದಿರದ  ಹತ್ತಿರ  ಶಿವರಾಜ್ ಬಿನ್ ಮಂಜುನಾಥ ನಾಗಪ್ಪ ಕಾಲೊನಿ ತರೀಕೆರೆ ಟೌನ್ ವಾಸಿ ಈತನು ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದು,  ಅರೋಪಿತನನ್ನು ವಶಕ್ಕೆ ಪಡೆದು, ಅರೋಪಿತನಿಂದ ಮಟ್ಕಾ ಚೀಟಿ, ಒಂದು ಬಾಲ್ ಪೆನ್ನು ಮತ್ತು 3450/- ರೂ ನಗದು ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ತರೀಕೆರೆ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ತರೀಕೆರೆ ಪಿ.ಎಸ್.ಐ. ಅನಿಲ್ ಕುಮಾರ್ ನಾಯ್ಕ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 29-04-2022 07:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080