ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ 29/05/2021 ರಂದು ನಗರ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಐ.ಜಿ ರಸ್ತೆಯಲ್ಲಿರುವ ಮಥಾಯಿಸ್ ಟವರ್ ಬಳಿ ಒಬ್ಬ ಆಸಾಮಿಯು ಪ್ಲಾಸ್ಟಿಕ್ ಬ್ಯಾಗನ್ನು ಹಿಡಿದುಕೊಂಡು ಹೋಗುತ್ತಿದ್ದು ಜೀಪನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದವನನ್ನು ಹಿಡಿದು ಹೆಸರು ವಿಳಾಸ ತಿಳಿಯಲಾಗಿ ಸುರೇಶ ಬಿನ್ ಲೇಟ್ ಕರಿಸಿದ್ದಪ್ಪ , ಅರವಿಂದನಗರ  ಎಂದು ತಿಳಿಸಿದ್ದು ಬ್ಯಾಗನ್ನು ಪರಿಶೀಲಿಸಲಾಗಿ 180 ಎಂ.ಎಲ್ ನ ಓಲ್ಡ್ ತವೆರಿನ್ ವಿಸ್ಕಿಯ 48 ಟೆಟ್ರಾ ಪೌಚ್ಗಳಿದ್ದು, ಮದ್ಯದ ಅಂದಾಜು ಬೆಲೆ 4,164 ರೂ ಆಗಿರುತ್ತೆ. ಆರೋಪಿ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಶಂಭುಲಿಂಗಯ್ಯ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ನಗರ ಪೊಲೀಸ್ ಠಾಣೆ.

ದಿನಾಂಕ 29/05/2021 ರಂದು ನಗರ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಗುರುನಾಥ ಟಾಕೀಸ್ ನ ಆಟೋ ಸರ್ಕಲ್ ಹತ್ತಿರ ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿದ್ದು ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದುದು ಕಂಡುಬಂದಿದ್ದು ಆತನನ್ನು ವಶಕ್ಕೆ ಪಡೆದು ಹೆಸರು ವಿಳಾಸ  ಶರತ್ ಬಿನ್ ಗಣೇಶ್ ,ಉಂಡೇದಾಸರಹಳ್ಳಿ ವಾಸಿ  ಎಂದು ತಿಳಿಸಿದ್ದು ಬ್ಯಾಗನ್ನು ಪರಿಶೀಲಿಸಲಾಗಿ 180 ಎಂ.ಎಲ್ ನ ಆಪೀಸರ್ಸ್ ಚಾಯ್ಸ್  ವಿಸ್ಕಿಯ 47 ಟೆಟ್ರಾ ಪೌಚ್ಗಳಿದ್ದು, ಮದ್ಯದ ಅಂದಾಜು ಬೆಲೆ 4,992 ರೂ ಆಗಿರುತ್ತೆ. ಮದ್ಯ ಮಾರಾಟದಿಂದ ಬಂದ 200 ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಶಂಭುಲಿಂಗಯ್ಯ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 28/05/2021 ರಂದು ಅಜ್ಜಂಪುರ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಗುಮ್ಮನಹಳ್ಳಿ ಬೋವಿಕಾಲೋನಿಯಲ್ಲಿ ಕೃಷ್ಣಪ್ಪರವರು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಮದ್ಯವನ್ನು ಮಾರಾಟ ಮಾಡುತ್ತಿದ್ದ ಆಸಾಮಿಯು ನಮ್ಮಗಳನ್ನು ನೋಡಿ ಓಡಿ ಹೋಗಿದ್ದು ಆತನು ಬಿಟ್ಟುಹೋಗಿದ್ದ ಪ್ಲಾಸ್ಟಿಕ್  ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್ ರಾಜಾವಿಸ್ಕಿಯ 34 ಪೌಚ್ ಗಳಿದ್ದು ,ಮದ್ಯದ ಅಂದಾಜು ಬೆಲೆ 1194 /-ರೂ ಆಗಿರುತ್ತೆ. ಓಡಿಹೋದ ಆಸಾಮಿಯ ಹೆಸರು ತಿಳಿಯಲಾಗಿ ಕೃಷ್ಣಪ್ಪ ಬಿನ್ ಈರಾಬೋವಿ, ಗುಮ್ಮನಹಳ್ಳಿ ಬೋವಿಕಾಲೋನಿವಾಸಿ ಎಂದು ತಿಳಿದಿರುತ್ತೆ. ಆರೋಪಿ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ತಿಪ್ಪೇಶ್ .ಡಿ.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಜ್ಜಂಪುರ   ಪೊಲೀಸ್ ಠಾಣೆ.

ದಿನಾಂಕ 28/05/2021 ರಂದು ಅಜ್ಜಂಪುರ ಠಾಣಾಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಗುಮ್ಮನಹಳ್ಳಿ ಬೋವಿಕಾಲೋನಿಯ ನೀರಿನ ಟ್ಯಾಂಕ್ ಹತ್ತಿರ ಕರಿಯಮ್ಮ ಎಂಬುವವರು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಮದ್ಯವನ್ನು ಮಾರಾಟ ಮಾಡುತ್ತಿದ್ದ ಮಹಿಳೆಯು  ನಮ್ಮಗಳನ್ನು ನೋಡಿ ಓಡಿ ಹೋಗಿದ್ದು ಆತನು ಬಿಟ್ಟುಹೋಗಿದ್ದ ಪ್ಲಾಸ್ಟಿಕ್  ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್ ರಾಜಾವಿಸ್ಕಿಯ 33 ಪೌಚ್ ಗಳಿದ್ದು ,ಮದ್ಯದ ಅಂದಾಜು ಬೆಲೆ 1159 /-ರೂ ಆಗಿರುತ್ತೆ. ಓಡಿಹೋದ ಮಹಿಳೆಯ ಹೆಸರು ತಿಳಿಯಲಾಗಿ ಕರಿಯಮ್ಮ ಕ್ಣೊಂ ಲೇಟ್ ರೇವಣ್ಣ ,ಗುಮ್ಮನಹಳ್ಳಿ ಬೋವಿಕಾಲೋನಿವಾಸಿ ಎಂದು ತಿಳಿದಿರುತ್ತೆ.  ಆರೋಪಿತಳ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ತಿಪ್ಪೇಶ್ .ಡಿ.ವಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಗ್ರಾಮಾಂತರ   ಪೊಲೀಸ್ ಠಾಣೆ.

ದಿನಾಂಕ 28/05/2021 ರಂದು ಗ್ರಾಮಾಂತರ  ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಕಲ್ಲುದೊಡ್ಡಿಯ ಅರುಣಾಚಲಂ ಬಡಾವಣೆಯ ರಸ್ತೆಯಲ್ಲಿ ರೌಂಡ್ಸ್ ಮಾಡುತ್ತಿರುವಾಗ ಒಬ್ಬ ಆಸಾಮಿಯು ಜೀಪನ್ನು ನೋಡಿ ಓಡಿಹೋಗಲು ಪ್ರಯತ್ನಿಸಿದ್ದು ಆತನನ್ನು ಹಿಡಿದು ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ. ಎಲ್. ರಾಜಾವಿಸ್ಕಿಯ 24 ಪೌಚ್ಗಳು ಹಾಗೂ 90 ಎಂ.ಎಲ್ ನ ಹೈವಡ್ರ್ಸ ಚೀರ್ ವಿಸ್ಕಿಯ 24 ಪೌಚ್ಗಳಿದ್ದು ,ಮದ್ಯದ ಅಂದಾಜು ಬೆಲೆ 1686 /-ರೂ ಆಗಿರುತ್ತೆ. ಆರೋಪಿಯ ಹೆಸರು ತಿಳಿಯಲಾಗಿ ಅರುಲ್ ದಾಸ್ , ಕಲ್ಲುದೊಡ್ಡಿ ವಾಸಿ ಎಂದು ತಿಳಿದಿರುತ್ತೆ. ಆರೋಪಿತನ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಶ್ರೀಮತಿ.ಸ್ವರ್ಣ. ಸಿ.ಪಿ.ಐ. ಗ್ರಾಮಾಂತರ ವೃತ್ತ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್-19 ನಿಯಮ ಉಲ್ಲಂಘನೆ ಪ್ರಕರಣ

ಸಿಂಗಟಗೆರೆ   ಪೊಲೀಸ್ ಠಾಣೆ.

ದಿನಾಂಕ 28/05/2021 ರಂದು ಸಿಂಗಟಗೆರೆ ಠಾಣಾ ಸರಹದ್ದಿನಲ್ಲಿ ಬಾಣಾವರದಿಂದ ಸಿಂಗಟಗೆರೆ ಕಡೆಗೆ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ಸೋಮನಹಳ್ಳಿಯಿಂದ ಬಾಣಾವರಕ್ಕೆ  ಹೋಗುವ  ರಸ್ತೆಯಲ್ಲಿರುವ ರಂಗಪ್ಪರವರ ತೋಟದ ಪಕ್ಕದ ರಸ್ತೆಯಲ್ಲಿ ನಿಂತು ನೋಡುತ್ತಿರುವಾಗ ಒಬ್ಬ ಆಸಾಮಿಯು ಬೈಕಿನಲ್ಲಿ ಬರುತ್ತಿದ್ದು ಆತನನ್ನು ತಡೆದು ನಿಲ್ಲಿಸಿ ಬೈಕ್ ನ ಟ್ಯಾಂಕ್ ಮೇಲೆ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್ ನ 160 ರಾಜಾವಿಸ್ಕಿ ಟೆಟ್ರಾ ಪೌಚ್ ಗಳಿದ್ದು ,ಮದ್ಯದ ಬೆಲೆ 5620/- ರೂ ಆಗಿರುತ್ತೆ. ಕೆಎ-18 ಕ್ಯೂ5698 ಹಿರೋ ಹೊಂಡಾ ಬೈಕ್ ಆಗಿರುತ್ತೆ. ಆರೋಪಿಯ  ಹೆಸರು ಕೇಳಲಾಗಿ ಕಲ್ಲೇಶ ಬಿನ್ ಬಸಪ್ಪ ಚಟ್ಟನಹಳ್ಳಿ ಗ್ರಾಮ ವಾಸಿ ಎಂದು ತಿಳಿಸಿರುತ್ತಾನೆ.  ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಬೈಕಿನಲ್ಲಿ  ಮದ್ಯದ ಪೌಚ್ಗಳನ್ನು ಇಟ್ಟುಕೊಂಡು ಬರುತ್ತಿದ್ದ ಆರೋಪಿ ಕಲ್ಲೇಶನ  ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸತ್ಯನಾರಾಯಣ ಪಿ.ಐ. ಡಿ.ಸಿ.ಐ.ಬಿ.ಘಟಕ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಸಿಂಗಟಗೆರೆ   ಪೊಲೀಸ್ ಠಾಣೆ.

ದಿನಾಂಕ 28/05/2021 ರಂದು ಸಿಂಗಟಗೆರೆ ಠಾಣಾ ಸರಹದ್ದಿನಲ್ಲಿ ಬಾಣಾವರದಿಂದ ಸಿಂಗಟಗೆರೆ ಕಡೆಗೆ ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ಸೋಮನಹಳ್ಳಿಯಿಂದ ಬಾಣಾವರಕ್ಕೆ ಹೋಗುವ ಟಾರು  ರಸ್ತೆಯಲ್ಲಿರುವ ರಂಗಪ್ಪರವರ ತೋಟದ ಪಕ್ಕದ ರಸ್ತೆಯಲ್ಲಿ ನಿಂತು ನೋಡುತ್ತಿರುವಾಗ ಒಬ್ಬ ಆಸಾಮಿಯು ಬೈಕಿನಲ್ಲಿ ಬರುತ್ತಿದ್ದು ಆತನನ್ನು ತಡೆದು ನಿಲ್ಲಿಸಿ ಬೈಕ್ ನ ಟ್ಯಾಂಕ್ ಮೇಲೆ ಇದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 180 ಎಂ.ಎಲ್ ನ ಓಲ್ಡ್ ತವೆರಿನ್ ವಿಸ್ಕಿ ಯ 48  ಟೆಟ್ರಾ ಪೌಚ್ ಗಳಿದ್ದು ಮದ್ಯ ಮಾರಾಟದ ಬಗ್ಗೆ ಯಾವುದೇ ಪರವಾನಗಿ ಇರುವುದಿಲ್ಲ.ಆರೋಪಿಯ  ಹೆಸರು ಕೇಳಲಾಗಿ ವಿಜಯಕುಮಾರ ಬಿನ್ ಈಶ್ವರಪ್ಪ, ಸಿಂಗಟಗೆರೆ ಗ್ರಾಮ ವಾಸಿ ಯಾಗಿದ್ದು ಬೈಕ್ ನ್ನು ಪರಿಶೀಲಿಸಿಲಾಗಿ, ಕೆಎ-18 ಇಬಿ- 5622 ಹೊರೋ ಹೊಂಡಾ ಬೈಕ್ ಆಗಿರುತ್ತೆ., ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಬೈಕಿನಲ್ಲಿ  ಮದ್ಯದ ಪೌಚ್ಗಳನ್ನು ಇಟ್ಟುಕೊಂಡು ಬರುತ್ತಿದ್ದ ಆರೋಪಿ ವಿಜಯಕುಮಾರನ  ವಿರುದ್ದ ಸಿಂಗಟಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸತ್ಯನಾರಾಯಣ ಪಿ.ಐ. ಡಿ.ಸಿ.ಐ.ಬಿ.ಘಟಕ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ 28/05/2021 ರಂದು ತರೀಕೆರೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ  ಜೋಡಿಕೋಡಿಹಳ್ಳಿ ಗ್ರಾಮದ ರೇಣುಕಮ್ಮ ರವರು ತಮ್ಮ ಮನೆಯಲ್ಲಿ ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ನಮ್ಮಗಳನ್ನು ನೋಡಿ ರೇಣುಕಮ್ಮರವರು ಓಡಿಹೋಗಿದ್ದು ಮನೆಯ ಪಡಸಾಲೆಯಲ್ಲಿ ಪರಿಶೀಲಿಸಲಾಗಿ ಮದ್ಯದ ಬಾಕ್ಸ್ಗಳಿದ್ದು .  ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಜನರನ್ನು ಗುಂಪುಕಟ್ಟಿಕೊಂಡು ಅಕ್ರಮವಾಗಿ ಮದ್ಯವನ್ನು   ಮಾರಾಟ ಮಾಡುತ್ತಿದ್ದ  ಆರೋಪಿ ರೇಣುಕಮ್ಮರವರ ವಿರುದ್ದ   ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ತರೀಕೆರೆ  ಪೊಲೀಸ್ ಠಾಣೆ.

ದಿನಾಂಕ 28/05/2021 ರಂದು ತರೀಕೆರೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ  ಕೋಡಿಕ್ಯಾಂಪ್ 1 ನೇ ಕ್ರಾಸ್ ನಲ್ಲಿರುವ ಹನುಮಂತಪ್ಪರವರು ತಮ್ಮ ಮನೆಯಲ್ಲಿ ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ನಮ್ಮಗಳನ್ನು ನೋಡಿ ಆರೋಪಿ ಹನುಂತಪ್ಪ ಓಡಿಹೋಗಿದ್ದು ಆತನ ಮನೆಯ ಪಡಸಾಲೆಯಲ್ಲಿ ಪರಿಶೀಲಿಸಲಾಗಿ ಮದ್ಯದ ಬಾಕ್ಸ್ಗಳಿದ್ದು . ಅದರಲ್ಲಿ 90 ಎಂ.ಎಲ್ ನ 96 ಒರಿಜಿನಲ್ ಚಾಯ್ಸ್ ವಿಸ್ಕಿಯ ಪೌಚ್ಗಳು ಹಾಗೂ 180 ಎಂ.ಎಲ್ ನ 30 ಓಲ್ಡ್ ತವೆರಿನ್ ಪೌಚ್ ಗಳನ್ನು ವಶಪಡಿಸಿಕೊಂಡಿದ್ದು,  ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು ಹೊಂದದೆ ಜನರನ್ನು ಗುಂಪುಕಟ್ಟಿಕೊಂಡು ಅಕ್ರಮವಾಗಿ ಮದ್ಯವನ್ನು   ಮಾರಾಟ ಮಾಡುತ್ತಿದ್ದ  ಆರೋಪಿ ಹನುಂತಪ್ಪರವರ ವಿರುದ್ದ   ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಕೋವಿಡ್ ಉಲ್ಲಂಘನೆ ಪ್ರಕರಣ.

ಅಜ್ಜಂಪುರ  ಪೊಲೀಸ್ ಠಾಣೆ

ದಿನಾಂಕ:29/05/2021 ರಂದು ಕೊರೊನಾ ಲಾಕ್ ಡೌನ್ ಸಂಬಂಧ ಬುಕ್ಕಾಂಬೂದಿ ಚೆಕ್ ಪೋಸ್ಟ್ ಬಳಿ ವಾಹನಗಳನ್ನು ತಪಾಸಣೆ ಚನ್ನಗಿರಿ ಕಡೆಯಿಂದ ಬಂದ ಕೆಎ-06 ಸಿ-0562 ಟಿಪ್ಪರ್ ಲಾರಿಯನ್ನು ನಿಲ್ಲಿಸಿ ತಪಾಸಣೆ ಮಾಡಿಲಗಿ ಲಾರಿಯಲ್ಲಿ 20-25 ಜನರು ಇದ್ದು ,ಕೊವಿಡ್-19 ಸಾಮಕ್ರಾಮಿಕ ರೋಗವು ವ್ಯಾಪಕವಾಗಿ ಹರಡುತ್ತಿರುವುದರಿಂದ ಸರ್ಕಾರವು ಲಾಕ್ ಡೌನ್  ಆದೇಶವನ್ನು ಮಾಡಿ ಕೆಲವೊಂದು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರವು ಆದೇಶ ಮಾಡಿದ್ದರೂ  ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ಲಾರಿಯಲ್ಲಿ 20-25 ಜನರನ್ನು ತುಂಬಿಸಿಕೊಂಡು ಬಂದಿದ್ದ ಲಾರಿಯ ಚಾಲಕ ಮುನಾವರ ಪಾಷಾ, ಲಾರಿಮಾಲೀಕ ರುದ್ರೇಶ ಹಾಗೂ ಮನುರವರ ವಿರುದ್ದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳತನ ಹಾಗೂ ಕೊವಿಡ್ -19 ನಿಯಮ ಉಲ್ಲಂಘನೆ ಪ್ರಕರಣ

ಬಾಳೂರು ಪೊಲೀಸ್ ಠಾಣೆ

ದಿನಾಂಕ 28/05/2021 ರಂದು ಬಾಳೂರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಪ್ರಶಾಂತ್ @ ಗುಂಡ ರವರು ಗಬ್ಗಲ್ ಗ್ರಾಮದ ವಾಸಿಯಾದ ಜಾನಕಿ ಕೋಂ ಶೇಖರ್ ರವರ ಮನೆಯ ಮುಂದೆ ಅಂಗಳದಲ್ಲಿ ಅಕ್ರಮವಾಗಿ ಮರಳನ್ನು ಸಂಗ್ರಹ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ 1 ಟ್ರಾಕ್ಟರ್ ಲೋಡ್ ನಷ್ಟು ಮರಳು ಸಂಗ್ರಹವಾಗಿರುವುದು ಕಂಡುಬಂದಿದ್ದು ಯಾವುದೇ ಪರವಾನಗಿ ಇಲ್ಲದೆ ಪ್ರಶಾಂತ್ @ಗುಂಡ ರವರು ಗಬ್ಗಲ್ ಗಾಮ್ರದಲ್ಲಿ ಹರಿಯುವ ಚಿಕ್ಕ ಹೊಳೆಯಿಂದ ತೆಗೆದುಕೊಂಡು ಬಂದಿದ್ದು ಸದರಿ ಮರಳಿನ ಮೌಲ್ಯ 2000/- ರೂ ಆಗಿರುತ್ತೆ. ಸರ್ಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ ಗಬ್ಗಲ್ ಹೊಳೆಯಿಂದ ತೆಗೆದು ಸಾಗಾಣಿಕೆ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದಲ್ಲದೆ ಸರ್ಕಾರದ ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿರುವ ಪ್ರಶಾಂತ್ @ ಗುಂಡ ರವರ ವಿರುದ್ದ  ಬಾಳೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಶ್ರೀಮತಿ. ರೇಣುಕಮ್ಮ .ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮರಳು ಕಳ್ಳತನ ಹಾಗೂ ಕೊವಿಡ್ -19 ನಿಯಮ ಉಲ್ಲಂಘನೆ ಪ್ರಕರಣ

ಬಾಳೂರು ಪೊಲೀಸ್ ಠಾಣೆ

ದಿನಾಂಕ 28/05/2021 ರಂದು ಬಾಳೂರು ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಮಾಡುತ್ತಿರುವಾಗ ಹಾದೋಣಿ ಗ್ರಾಮದ ವಾಸಿಯಾದ ಶ್ರೀಧರ್ ಸನೀಲ್ ಬಿನ್ ಲೇಟ್ ಮೋನಪ್ಪ ಪೂಜಾರಿ ರವರ ಹೊಸದಾಗಿ ನಿಮರ್ಾಣ ಮಾಡುತ್ತಿರುವ ಮನೆಯ ಒಳಗಡೆ ಅಕ್ರಮವಾಗಿ ಮರಳನ್ನು ಸಂಗ್ರಹ ಮಾಡಿರುತ್ತಾರೆಂದು ಪ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಲಾಗಿ 2 ಟ್ರಾಕ್ಟರ್ ಲೋಡ್ ನಷ್ಟು ಮರಳು ಸಂಗ್ರಹವಾಗಿರುವುದು ಕಂಡುಬಂದಿದ್ದು ಯಾವುದೇ ಪರವಾನಗಿ ಇಲ್ಲದೆ ಶ್ರೀಧರ್ ಸನೀಲ್ ರವರು ಹಾದೋಣಿ ಗ್ರಾಮದಲ್ಲಿ ಹರಿಯುವ ಸಣ್ಣ ಹೊಳೆಯಿಂದ ತೆಗೆದುಕೊಂಡು ಬಂದಿದ್ದು ಸದರಿ ಮರಳಿನ ಮೌಲ್ಯ 4000/- ರೂ ಆಗಿರುತ್ತೆ. ಸರ್ಕಾರದ ಸ್ವತ್ತಾದ ಮರಳನ್ನು ಯಾವುದೇ ಪರವಾನಗಿ ಇಲ್ಲದೆ ಗಬ್ಗಲ್ ಹೊಳೆಯಿಂದ ತೆಗೆದು ಸಾಗಾಣಿಕೆ ಮಾಡುವ ಉದ್ದೇಶದಿಂದ ಸಂಗ್ರಹಿಸಿಟ್ಟಿದ್ದಲ್ಲದೆ ಸರ್ಕಾರದ ಲಾಕ್ ಡೌನ್ ಆದೇಶವನ್ನು ಉಲ್ಲಂಘನೆ ಮಾಡಿರುವ ಶ್ರೀಧರ್ ಸನೀಲ್ ಬಿನ್ ಲೇಟ್ ಮೋನಪ್ಪ ಪೂಜಾರಿ ರವರ ವಿರುದ್ದ   ಬಾಳೂರುಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಶ್ರೀಮತಿ.ರೇಣುಕಮ್ಮ .ಪಿ.ಎಸ್.ಐ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 29-05-2021 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080