ಅಭಿಪ್ರಾಯ / ಸಲಹೆಗಳು

ಮಾರಣಾಂತಿಕ ರಸ್ತೆ ಅಪಘಾತ ಪ್ರಕರಣ.

ಎನ್.ಆರ್. ಪುರ ಪೊಲೀಸ್ ಠಾಣೆ.

ದಿನಾಂಕ;29-06-2022 ರಂದು ಪಿರ್ಯಾದುದಾರರಾದ ಜಾನ್ಯ ನಾಯ್ಕ ಬಿನ್ ಈರ್ಯ ನಾಯ್ಕ ವಾಸ ಈಚವಾಡಿ ಗ್ರಾಮ ಶಿವಮೊಗ್ಗ  ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;29-06-2022 ರಂದು ಪಿರ್ಯಾದುದಾರರು  ತಮ್ಮ ಗಂಗಾನಾಯ್ಕ ವೀರಾಪುರಕ್ಕೆ ಹೋಗುವಾಗ ಕೆಎ-15-ಟಿ-3011 ಟ್ಯಾಕ್ಟರ್ ಅನ್ನು  ಅಫೀದ್ @ ಮಹಮ್ಮದ್ ಇಸ್ಮಾಯಿಲ್ ಜಬೀವುಲ್ಲಾ ಬಿನ್ ಮನ್ಸೂರ್ ಅಹಮದ್ ವಾಸ ಹೊನ್ನಾಪುರ ಶಿವಮೊಗ್ಗ ಈತನು ಚಾಲನೆ ಮಾಡಿಕೊಂಡು ಮುಡುಬಾ -ಶಂಕರಪುರ ರಸ್ತೆಯ ಚಬ್ಬೇನಾಡು ಬಳಿ ಚಾಲಕ ದುಡುಕು ಮತ್ತು ನಿರ್ಲಕ್ಷತನದಿಂದ ಚಾಲನೆ ಮಾಡಿದ್ದರಿಂದ  ಗಂಗಾನಾಯ್ಕನು ಟ್ರೈಲರ್ ಅನ್ನು ಕೆಳಗೆ ಬಿದ್ದನು ಟ್ರೈಲರ್ ಚಕ್ರ ಆತನ ತಲೆಗೆ ಮೇಲೆ ಹತ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದು , ಚಾಲಕನ  ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಎನ್.ಆರ್. ಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ;29-06-2022 ರಂದು ಪಿರ್ಯಾದುದಾರರಾದ ತಿಪ್ಪೇಸ್ವಾಮಿ ವಾಸ ಗೇರುಮರಡಿ ರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ;28-06-2022 ರಂದು ಪಿರ್ಯಾದುದಾರರು ಚಿಕ್ಕಪ್ಪನ ಮಗ ಹಾಲೇಶಪ್ಪ  ರವರು ಇವರ ಬಾಬ್ತು ಕೆಎ-18 ಇಸಿ-4213  ಬೈಕ್ ನಲ್ಲಿ ಚಾಲನೆ ಮಾಡಿಕೊಂಡು  ಅಜ್ಜಂಫುರದಿಂದ ತರೀಕೆರೆ ಹೋಗುತ್ತಿರುವಾಗ ಹಿಂದೆ ಬರುತ್ತಿದ್ದ ಕಾರ್ ನಂ ಕೆಎ-04-ಎಂ.ಎಸ್.-1082 ರ ಕಾರಿನ ಚಾಲಕ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಬಂದ ಹಿಂಬದಿಯಿಂದ ಡಿಕ್ಕಿ ಹೊಡೆಸಿದ ಪರಿಣಾಮ ಹಾಲೇಶಪ್ಪನಿಗೆ ತಲೆಗೆ ಬಲವಾದ ಪೆಟ್ಟು ಬಿದ್ದು ಅಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಕಾರಿನ ಚಾಲಕನ  ವಿರುದ್ದ ಕ್ರಮಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ

ದಿನಾಂಕ:29/06/2022 ರಂದು ಪಿರ್ಯಾದಿ ವಿಜಯ ಕುಮಾರ್ ಬಿನ್ ಲೇಟ್ ರಾಮಪ್ಪ, ವಾಸ ನಡ್ಲುಪಿಳ್ಳೇನಹಳ್ಳಿ ಸಖರಾಯಪಟ್ಟಣ, ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯು ದಿನಾಂಕ:12/06/2022 ರಂದು ಬಸವನಹಳ್ಳಿ ಪೊಲೀಸ್ ಠಾಣಾ ಸರಹದ್ದಿನ  ರಾಮನಹಳ್ಳಿ ಪೂಜಾ ಬಾರ್ ಹಿಂಭಾಗದಲ್ಲಿ ತನ್ನ ಬಾಭ್ತು ಕೆಎ-18-ಎಸ್-5932 ನಂಬರಿನ ಬೈಕ್ ನಿಲ್ಲಿಸಿ ಬೀಡಾ ತಿನ್ನಲು ಹೋಗಿದ್ದು,  ವಾಪಾಸ್ಸು ಬಂದು ನೋಡಲಾಗಿ   ಯಾರೋ ಕಳ್ಳರು ಬೈಕ್ ಅನ್ನು  ಕಳ್ಳತನ ಮಾಡಿಕೊಂಡು ಹೋಗಿದ್ದು, ಬೈಕಿನ ಅಂದಾಜು ಬೆಲೆ 54,000/- ರೂ ಗಳಾಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ಬೈಕ್ ಅನ್ನು ಪತ್ತೆ ಮಾಡಿಕೊಡವಂತೆ ಕೋರಿ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗಾಂಜಾ ಸೇವನೆ ಪ್ರಕರಣಗಳು,

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ;29-06-2022 ರಂದು ಪಿ.ಎಸ್.ಐ. ಬಸವನಹಳ್ಳಿ ರವರು ನೀಡಿದ ದೂರಿನಲ್ಲಿ ಠಾಣಾ ಸರಹದ್ದಿನ  ಚಿಕ್ಕಮಗಳೂರು ನಗರದ ವಿಜಯಪುರದ ತಿಲಕ್ ಪಾರ್ಕ್ ಬಳಿ ಖಲಂದರ್ ಖಾನ್ @ ಪೈಜಲ್ ಖಾನ್ ಬಿನ್ ಅಬ್ದುಲ್ ವಾಹಿದ್, ವಾಸ ರಜೀಯಾ ಮುಸ್ತಾಫ ಮಸೀದಿ ಹಿಂಭಾಗ, ಚಿಕ್ಕಮಗಳೂರು ಈತನು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತುವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಆಸಾಮಿಯನ್ನು ವಶಕ್ಕೆ ಪಡೆದು, ಸದರಿ ಆಸಾಮಿಯು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತನ ವಿರುದ್ದ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಗಳಲ್ಲಿ ಬಸವನಹಳ್ಳಿ ಪೊಲೀಸ್ ಠಾಣಾ ಪಿ.ಎಸ್.ಐ. ಶ್ರೀಮತಿ ರೇಣುಕಾ ಡಿ.ವಿ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮಲ್ಲಂದೂರು ಪೊಲೀಸ್ ಠಾಣೆ.

ದಿನಾಂಕ;28-06-2022 ರಂದು ಪಿ.ಎಸ್.ಐ.ಮಲ್ಲಂದೂರು ರವರು ನೀಡಿದ ದೂರಿನಲ್ಲಿ ಠಾಣಾ ಸರಹದ್ದಿನ  ಶಿರವಾಸೆಯ ಗ್ರಾಮಪಂಚಾಯಿತಿ ಮುಂಭಾಗದ ರಸ್ತೆಯಲ್ಲಿ  1.] ರಬಿಕುಲ್ ಬಿನ್ ಮುಜಿಬುಲ್ ರೆಹಮಾನ್ ವಾಸ ಗಂಧದಖಾನ್ ಎಸ್ಟೇಟ್, ಗಾಳಿಗುಡ್ಡೆ, 2.] ಶಿರವಾಸೆಯ ಸರ್ಕಾರಿ ಶಾಲೆಯ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಗಪೂರ್ ಅಲಿ ಬಿನ್ ಅಜಗರ್ ಅಲಿ ವಾಸ ಗಂಧದಖಾನ್ ಎಸ್ಟೇಟ್, ಗಾಳಿಗುಡ್ಡೆ, 3.] ಶಿರವಾಸೆ ಸೋಸೈಟಿ ಮುಂಭಾಗದಲ್ಲಿ ಮಹಮದ್ ಅಲಿ ಬಿನ್ ಜಿನತ್ ಅಲಿ, ವಾಸ ಗಂಧದಖಾನ್ ಎಸ್ಟೇಟ್, ಗಾಳಿಗುಡ್ಡೆ,   ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಆಸಾಮಿಗಳು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತರ ವಿರುದ್ದ ಮಲ್ಲಂದೂರು  ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಗಳಲ್ಲಿ ಮಲ್ಲಂದೂರು ಪೊಲೀಸ್ ಠಾಣಾ ಪಿ.ಎಸ್.ಐ. ರವೀಶ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ;28-06-2022 ರಂದು ಪಿ.ಎಸ್.ಐ. ಮೂಡಿಗೆರೆ ರವರು ನೀಡಿದ ದೂರಿನಲ್ಲಿ ಠಾಣಾ ಸರಹದ್ದಿನ  ಮೂಡಿಗೆರೆ ಪಟ್ಟಣದ ಛತ್ರಮೈದಾನದ ಹತ್ತಿರ 1] ಸಚಿನ್ ಬಿ ಬಿನ್ ಬಿಜ್ಜು ವಾಸ ಛತ್ರ ಮೈದಾನ ಚೌಡೇಶ್ವರಿ ದೇವಸ್ಥಾನದ  ಹತ್ತಿರ ಮೂಡಿಗೆರೆ 2] ಸಾಗರ್ ಹೆಚ್.ಆರ್.ಬಿನ್ ರಾಜೇಶ್, ವಾಸ ಛತ್ರ ಮೈದಾನ, ಮೂಡಿಗೆರೆ ಇವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಾದಕ ವಸ್ತವನ್ನು ಸೇವನೆ ಮಾಡಿ ಅಮಲಿನಲ್ಲಿ ಇರುವಂತೆ ವರ್ತಿಸುತ್ತಿದ್ದ, ಸದರಿ ಆಸಾಮಿಗಳನ್ನು ವಶಕ್ಕೆ ಪಡೆದು, ಸದರಿ ಆಸಾಮಿಗಳು ಮಾದಕ ವಸ್ತವನ್ನು ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟಿದ್ದು, ಆರೋಪಿತರ ವಿರುದ್ದ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಗಳಲ್ಲಿ ಮೂಡಿಗೆರೆ ಪೊಲೀಸ್ ಠಾಣಾ ಪಿ.ಎಸ್.ಐ. ಆದರ್ಶ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 29-06-2022 08:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080