ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಬಾಳೂರು  ಪೊಲೀಸ್ ಠಾಣೆ.

ದಿನಾಂಕ:29-11-2021 ರಂದು ಬಾಳೂರು ಠಾಣಾ ಸರಹದ್ದಿನ  ಸುಂಕಸಾಲೆ  ಗ್ರಾಮದಲ್ಲಿ ಎಲಿಯಸ್ ಫರ್ನಾಂಡಿಸ್  ಬಿನ್ ಜಿ ಫರ್ನಾಂಡಿಸ್  ರವರು ತಮ್ಮ ದಿನಸಿ ಅಂಗಡಿಯಲ್ಲಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 180 ಎಂ.ಎಲ್. ನ 25 ಮತ್ತು  90 ಎಂ.ಎಲ್. 33 ಟೆಟ್ರಾಪ್ಯಾಕ್ & 750 ಎಂ.ಎಲ್. ನ 2 ಬಾಟಲಿಯನ್ನು  ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 4578/-ರೂ ಆಗಿದ್ದು, ಆರೋಪಿ ವಿರುದ್ದ ಬಾಳೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ವೃತ್ತ ಸಿ.ಪಿ.ಐ.ರವರಾದ ಶ್ರೀ ಜೆ.ಸಿ. ಸೋಮಶೇಖರ ಹಾಗೂ ಸಿಬ್ಬಂದಿಯಾದ ರಾಜೇಂದ್ರ ,  ಗೀರೀಶ್  ಹೇಮಂತ್ ಬಿ.ಸಿ. ಪ್ರದೀಪ್  ರವರು ಪಾಲ್ಗೊಂಡಿರುತ್ತಾರೆ.

ಸಿಂಗಟಗೆರೆ  ಪೊಲೀಸ್ ಠಾಣೆ.

ದಿನಾಂಕ:28-11-2021 ರಂದು ಸಿಂಗಟಗೆರೆ ಠಾಣಾ ಸರಹದ್ದಿನ  ಸೋಮನಹಳ್ಳಿ  ಗ್ರಾಮದ ಸಣ್ಣಕ್ಕಿಕೊಪ್ಪಲು ಗೇಟ್ ಬಳಿ ಸೋಮನಹಳ್ಳಿ ವಾಸಿ ಎಸ್.  ದೇವರಾಜ್ ಬಿನ್ ಸಿದ್ದಮಲ್ಲಪ್ಪ ರವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 90 ಎಂ.ಎಲ್. 144 ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 5040/-ರೂ ಆಗಿದ್ದು, ಆರೋಪಿ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿಂಗಟಗೆರೆ ಪಿ.ಎಸ್.ಐ. ಶ್ರೀಮತಿ ಲೀಲಾವತಿ  ಹಾಗೂ ಸಿಬ್ಬಂದಿಯಾದ ಗೋವಿಂದಸ್ವಾಮಿ, ಕಿರಣ್ ಕುಮಾರ್, ಧನಪಾಲನಾಯ್ಕ ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ  ಇಸ್ಪೀಟ್  ಜೂಜಾಟ ಪ್ರಕರಣ

ಸಿ.ಇ.ಎನ್.   ಪೊಲೀಸ್ ಠಾಣೆ.

ದಿನಾಂಕ:28-11-2021 ರಂದು ತರೀಕೆರೆ ಠಾಣಾ ಸರಹದ್ದಿನ  ಜಂಬದಹಳ್ಳ ಕೋಡಿ  ಸಮೀಪ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ  ಆರೋಪಿತರಾದ 1. ಸುಮಂತ್ ಬಿನ್ ರಾಮನಾಯ್ಕ  2. ಅರುಣ ಬಿನ್ ಚಿನ್ನತಂಬಿ ರವರನ್ನು ವಶಕ್ಕೆ ಪಡೆದು ಆರೋಪಿತರಾದ  ಅಂಜನಿ ತಿಲಕ ರವಿ ಎಂಬುವರು ಓಡಿ ಹೋಗಿದ್ದು ಆರೋಪಿತರು  ಇಸ್ಪೀಟ್ ಜೂಜಾಡಲು ಬಳಸಿದ್ದ 16230/-ರೂ ನಗದು ಹಣ, 52 ಇಸ್ಫೀಟ್ ಎಲೆಗಳು ಹಾಗೂ ಒಂದು ಪ್ಲಾಸ್ಟಿಕ್ ಟಾರ್ಪಾಲ್ ಅನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ತರೀಕೆರೆ  ಠಾಣಾ ಪಿ.ಐ. ಶ್ರೀ ರಾಘವೇಂದ್ರ ಕೆ.ಎನ್. ಹಾಗೂ ಸಿಬ್ಬಂದಿಯವರು  ಲಿಂಗಮೂರ್ತಿ, ಕಾಂತೇಶ, ಅಣ್ಣಪ್ಪ ನಾಯ್ಕ ಪಾಲ್ಗೊಂಡಿರುತ್ತಾರೆ.

 

ಕಳ್ಳತನ ಪ್ರಕರಣ

ಬಣಕಲ್ ಪೊಲೀಸ್ ಠಾಣೆ.

 ದಿನಾಂಕ 29-11-2021 ರಂದು ಬಣಕಲ್ ಠಾಣಾ ವ್ಯಾಫ್ತಿ ಎನ್.ಜಿ.ಮಹೇಶ್  ರವರು ನೀಡಿದ ದೂರಿನಲ್ಲಿ ದಿನಾಂಕ:28-11-2021 ರಂದು ರಾತ್ರಿ ತಮ್ಮ ಬಾಬ್ತು ಸಂಬ್ರಮ್ ಬಾರ್ & ರೆಸ್ಟೋರೆಂಟ್ ಹೆಸರಿನ ಬಾರ್ ನ್ನು ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ 29-11-2021 ರ ಬೆಳಗಿನ ಜಾವದ ಒಳಗೆ ಯಾರೋ ಕಳ್ಳರು ರೋಲಿಂಗ್ ಷಟರ್ ಮುರಿದು ಬಾರ್ ನ ಗಲ್ಲದಲ್ಲಿದ್ದ 9800/- ಮತ್ತು 5 ಬಾಟಲಿ ಮದ್ಯ ಬೆಲೆ 12,350/- ರೂ ಗಳಾಗಿದ್ದು ಕಳ್ಳತನ ಮಾಡಿಕೊಂಡಿರುತ್ತಾರೆ. ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

 ಬಾಳೂರು ಪೊಲೀಸ್ ಠಾಣೆ

 ದಿನಾಂಕ :28-11-2021 ರಂದು ಪಿರ್ಯಾದಿ ಸುಮ ಕೊಂ ನಾಗೇಶ್ ಆಚಾರ್ ಬಿ.ವಿ  ಎಂಬುವರು ನೀಡಿದ ದೂರಿನಲ್ಲಿ ದಿನಾಂಕ: 25-11-2021ರಂದು ಬೆಳಿಗ್ಗೆ ಮನೆಯಲ್ಲಿದ್ದ  ತನ್ನ ಗಂಡ ನಾಗೇಶ್ ಆಚಾರ್  ಮನೆಯಿಂದ ಕೆಲಸಕ್ಕೆ ಹೋದವರು ವಾಪಾಸ್ಸು ಬಂದು  ಬಾರದೇ ಇದ್ದು ಈವರೆಗೂ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದರೂ ತನ್ನ ಗಂಡ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಗಂಡ ನಾಗೇಶ್ ಆಚಾರ್ ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 29-11-2021 07:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080