ಅಭಿಪ್ರಾಯ / ಸಲಹೆಗಳು

 

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ

ನಗರ ಪೊಲೀಸ್ ಠಾಣೆ.

 ದಿನಾಂಕ;29/12/2021  ರಂದು  ಚಿಕ್ಕಮಗಳೂರು ನಗರದ ಸಂತೆ ಮೈದಾನದ ತಮಿಳು ಕಾಲೋನಿಯಲ್ಲಿ ಮಹಮ್ಮದ್ ಇಕ್ಬಾಲ್ ಬಿನ್ ಫಜಲೂರ್ ರೆಹಮಾನ್ ಎಂಬುವರು ಚಾಮುಂಡಿ ಕಾಫಿ ಕ್ಯೂರಿಂಗ್ ಪಕ್ಕದಲ್ಲಿರುವ ಶೆಡ್  ನಲ್ಲಿ ಗೋಮಾಂಸವನ್ನು ಮಾರಾಟ ಮಾಡುತ್ತಿದ್ದು ,ಆರೋಪಿಯನ್ನು ವಶಕ್ಕೆ ಪಡೆದು ಅರೋಪಿಯ ಅಕ್ರಮವಾಗಿ ಹೊಂದಿದ್ದ 70 ಕೆ.ಜಿ. ಮಾಂಸ , 2 ಬಾಲ, 2 ಕೊಂಬುಗಳು, ಸುಲಿದಿರುವ ತಲೆ, ದಂತದ ಕೆಳಭಾಗ ಒಂದು ಕಬ್ಬಿಣ ಕತ್ತಿ, ಒಂದು ತಕ್ಕಡಿ, ಒಂದು ಕೆ.ಜಿಯ ಬಟ್ಟು ಹಾಗೂ ಒಂದು ಮಸ್ಕುಲ್ಲಾ ವನ್ನು ಅಮಾನತ್ತುಪಡಿಸಿಕೊಂಡು ಬಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ದೇವರಾಜ್ ಸಿದ್ದಣ್ಣ ಬಿರಾದಾರ್, ಪ್ರೊಬೆಷನರಿ ಪಿ.ಎಸ್.ಐ. ಆದರ್ಶ್, ಎ.ಎಸ್.ಐ. ಬಿ.ಕೆ. ಶೇಷಪ್ಪಶೆಟ್ಟಿ, ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮರಣಾಂತಿಕ ರಸ್ತೆ ಅಪಘಾತ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ 29-12-2021 ರಂದು ಪಿರ್ಯಾದಿ ಶ್ರೀಮತಿ ಸಣ್ಣಮ್ಮ ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರ ಮಗ ರಮೇಶ ಕುರಿಮೇಯಿಸಲು ಬಂದಿದ್ದು ದಿನಾಂಕ:27-12-2021 ರಂದು 12.00 ಗಂಟೆಗೆ ತರೀಕೆರೆ ತಾಲ್ಲೋಕು ಬೆಟ್ಟದಹಳ್ಳಿ ಗ್ರಾಮದ ಕ್ಯಾಂಟಿನ್ ಮುಂಭಾಗದಲ್ಲಿ ಕೆಎ-16-ಇಎಫ್-8745 ಬೈಕ್ ನ್ನು ನಿಲ್ಲಿಸಿಕೊಂಡು ನಿಂತಿರುವಾಗ್ಗೆ  ಬೀರೂರು ಕಡೆಯಿಂದ ತರೀಕೆರೆ ಕಡೆಗೆ ಕೆಎ-18 ಇಬಿ-8302 ರ ಬೈಕ್ ಚಾಲಕನು ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಡಿಕ್ಕಿ ಹೊಡೆಸಿದ ಪರಿಣಾಮ ಪಿರ್ಯಾದಿ ಮಗನಿಗೆ ಬಲಕಾಲಿಗೆ ಮತ್ತು ಮೈಕೈಗೆ ಗಾಯವಾಗಿದ್ದು ಅಪಘಾತ ಪಡಿಸಿದ ಬೈಕ್ ಚಾಲಕ ಮತ್ತು ಹಿಂಬದಿ ಕುಳಿತಿದ್ದ ಮಹಿಳೆಗೆ ಗಾಯವಾಗಿದ್ದು,  ಪಿರ್ಯಾಧಿ ಮಗನನ್ನು ಚಿಕಿತ್ಸೆಗೆ ಸೇರಿಸಿದ್ದು ರಮೇಶನು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ;29/12/2021 ರಂದು ಮೃತಪಟ್ಟಿದ್ದು ಅಪಘಾತಪಡಿಸಿದ ಬೈಕ್ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಕಡೂರು ಪೊಲೀಸ್ ಠಾಣೆ.

ದಿನಾಂಕ 28-12-2021 ರಂದು ಪಿರ್ಯಾದಿ ಮನೋಜ್ ಕೆ.ಕೆ. ರವರು ನೀಡಿದ ದೂರಿನಲ್ಲಿ ಪಿರ್ಯಾದಿಯವರು ತಮ್ಮ ಬಾಬ್ತು ಕೆಎ-66-ಕೆ-3241 ರ ಹಿರೋ ಸ್ಲೆಂಡರ್ ಬೈಕಿನಲ್ಲಿ ಅವರ ತಾಯಿ ಶ್ರೀಮತಿ ಮಂಜುಳ ರವರನ್ನು ಕೂರಿಸಿಕೊಂಡು 7-00 ಗಂಟೆ ಸಮಯದಲ್ಲಿ ಹರುವನಹಳ್ಳಿ ಗೇಟ್ ಸಮೀಪ ಎನ್.ಹೆಚ್. 206 ರಸ್ತೆಯಲ್ಲಿ ಹೋಗುತ್ತಿರುವಾಗ ಹಿಂದಿನಿಂದ ಬಂದ ಕೆಎ-14-ಎ-1628 ವಾಟರ್ ಟ್ಯಾಂಕ್ ಲಾರಿಯ ಚಾಲಕ ಲಾರಿಯನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆಸಿದ ಪರಿಣಾಮ ಬೈಕಿನಿಂದ ಪಿರ್ಯಾದಿ ತಾಯಿ ರಸ್ತೆಯ ಬಲಭಾಗಕ್ಕೆ ಬಿದ್ದಾಗ ಲಾರಿಯು ದೇಹದ ಮೇಲೆ ಹರಿದು ರಕ್ತಗಾಯವಾಗಿ ಮೃತಪಟ್ಟಿದ್ದು, ಲಾರಿಯ ಚಾಲಕ ಓಡಿ ಹೋಗಿದ್ದು , ಅಪಘಾತಪಡಿಸಿದ ಲಾರಿ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಕಳ್ಳತನ ಪ್ರಕರಣ.

ಹರಿಹರಪುರ  ಪೊಲೀಸ್ ಠಾಣೆ.

ದಿನಾಂಕ: 28-12-2021 ರಂದು ಹರಿಹರಪುರ ಠಾಣಾ ಸರಹದ್ದಿನ ಬೋಳಾಪುರ ವಾಸಿ  ಶಿವಶಂಕರ್ ಹೆಚ್.ಸಿ. ರವರು ನೀಡಿದ ದೂರಿನಲ್ಲಿ  ಪಿರ್ಯಾದಿ ಬಾಬ್ತು ತೋಟದಲ್ಲಿ ಕೊನೆ ತೆಗೆದು ಮಾರನೇ ದಿನ ಮನೆಗೆ ಸಾಗಿಸುತ್ತಿದ್ದು, ದಿನಾಂಕ:26/12/2021 ರಂದು ರಾತ್ರಿ ಅಡಿಕೆ ಕೊನೆ ಕಳ್ಳತನವಾಗಿದ್ದು, ದಿನಾಂಕ:27/12/2021 ರಂದು ಕೊನೆ ತೆಗೆದಿದ್ದು ಕೊನೆಯನ್ನು ಕಾಯುತ್ತಿದ್ದಾಗ ಬೋಳಾಪುರ ವಾಸಿ ಸದಾಶಿವ ಈತನು ತೋಟಕ್ಕೆ ಬಂದು ಅಡಿಕೆ ಕೊನೆಗಳನ್ನು ಚೀಲಕ್ಕೆ ತುಂಬಿಸಿ ತೆಗೆದುಕೊಂಡು ಹೋಗುತ್ತಿದ್ದಾಗ ಪಿರ್ಯಾದಿಯವರು ಅಲ್ಲಿಗೆ ಹೋಗಿದ್ದು ಆತನು ಚೀಲವನ್ನು ಬಿಸಾಡಿ ಹೋಗಿದ್ದು ಸದಾಶಿವನು ಅಡಿಕೆ ತೋಟದಿಂದ ಸುಮಾರು 125 ಅಡಿಕೆ ಕೊನೆಗಳನ್ನು ಅಂದಾಜು 65 ರಿಂದ 70 ಸಾವಿರ ರೂ ಗಳಷ್ಟು ನ್ನು ಕಳ್ಳತನ ಮಾಡಿದ್ದು ಆರೋಪಿತನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಹರಿಹರಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಕಳ್ಳತನ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ:28/12/2021 ರಂದು ಸಂಕ್ಲಾಪುರ ವಾಸಿ ಪಿರ್ಯಾಧಿ ಪರಮೇಶ್ವರಪ್ಪ ಎಸ್.ಟಿ. ಬಿನ್ ತಿಮ್ಮಪ್ಪ ಇವರು ನೀಡಿದ ದೂರಿನಲ್ಲಿ ತಮ್ಮ ಮನೆಯಲ್ಲಿ ಕೆಲಸಕ್ಕೆ ಇದ್ದ ಕೊಟ್ರಪ್ಪ ನಾಯಕನಹಟ್ಟಿ ವಾಸಿ ಈತನು ದಿನಾಂಕ:25/12/2021 ರಂದು ರಾತ್ರಿ ಪಿರ್ಯಾದಿ ಮಗಳ ಬಾಬ್ತು ಮನೆಯಲ್ಲಿಟ್ಟಿದ್ದ ಚಿನ್ನದ ವಡವೆಗಳನ್ನು ಒಂದು ಜೊತೆ ಬಳೆ 40 ಗ್ರಾಂ, ಒಂದು ಜೊತೆ ಓಲೆ 08 ಗ್ರಾಂ, ಐದು ಮಕ್ಕಳ ಉಂಗುರ 10 ಗ್ರಾಂ, ಮೂರು ಜೊತೆ ಓಲೆ ಜುಮಕಿ 30 ಗ್ರಾಂ ಒಟ್ಟು 88 ಗ್ರಾಂ ತೂಕದ ಚಿನ್ನದ ವಡವೆಗಳನ್ನು ಅಂದಾಜು ಬೆಲೆ 3,93,000/-ರೂ ಗಳಾಗಿದ್ದು,  ಕಳ್ಳತನ ಮಾಡಿಕೊಂಡು ಹೋಗಿರುವುದಾಗಿ ಆರೋಪಿತನನ್ನು ಪತ್ತೆ ಮಾಡಿ ಕಳುವಾಗಿರುವ ವಡವೆಗಳನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಇತ್ತೀಚಿನ ನವೀಕರಣ​ : 29-12-2021 08:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080