ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ .

ಬೀರೂರು  ಪೊಲೀಸ್ ಠಾಣೆ.

ದಿನಾಂಕ 29/06/2021 ರಂದು ಬೀರೂರು ಪಟ್ಟಣದಲ್ಲಿ ರೌಂಡ್ಸ್ ಮಾಡುತ್ತಿರುವಾಗ್ಗೆ ಕುಡ್ಲೂರಿನಿಂದ ಪುಂಡನಹಳ್ಳಿ ಕಡೆಗೆ  ಒಬ್ಬ ಆಸಾಮಿಯು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ  ದಾಳಿ ನಡೆಸಿದ್ದು ಒಬ್ಬ ಆಸಾಮಿಯು ಒಂದು ಪ್ಲಾಸ್ಟಿಕ್ ಚೀಲವನ್ನು ಹಿಡಿದುಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು ಕಂಡುಬಂದಿದ್ದು ಆತನನ್ನು ವಶಕ್ಕೆ ಪಡೆದು ಆತನ ಹೆಸರು ವಿಳಾಸ ತಿಳಿಯಲಾಗಿ ಪರಶುರಾಮ ಬಿನ್ ನಾಗರಾಜಪ್ಪ, ಕುಡ್ಲೂರು ಗ್ರಾಮ ವಾಸಿಯಾಗಿದ್ದು  ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ 90 ಎಂ.ಎಲ್.ನ  ರಾಜಾವಿಸ್ಕಿಯ   50 ಮದ್ಯದಪೌಚ್ಗಳಿದ್ದು, ಮದ್ಯದ ಅಂದಾಜು ಬೆಲೆ 1750 /- ರೂ ಅಗಿದ್ದು , ಆರೋಪಿತನಾದ ಪರಶುರಾಮನ  ವಿರುದ್ದ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲ್ಲಿ ಪಿ.ಎಸ್.ಐ. ಬಸವರಾಜಪ್ಪ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ .

ಅಕ್ರಮ ಜೂಜಾಟ  ಪ್ರಕರಣ

ಸಿ.ಇ.ಎನ್ . ಪೊಲೀಸ್ ಠಾಣೆ

ದಿನಾಂಕ 29/06/2021 ರಂದು ಸಖರಾಯಪಟ್ಟಣ ಹತ್ತಿರ ಗಸ್ತಿನಲ್ಲಿರುವಾಗ್ಗೆ ಸಖರಾಯಪಟ್ಟಣದ ಚಟ್ನಪಾಳ್ಯ ಗ್ರಾಮದಲ್ಲಿ ಹಾದುಹೋಗಿರುವ ರೈಲ್ವೇ ಟ್ರಾಕ್ನ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಸೇರಿಕೊಂಡು  ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಾಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿದ್ದು ಚಟ್ನಪಾಳ್ಯ ಗ್ರಾಮದಲ್ಲಿ ಹಾದುಹೋಗಿರುವ ರೈಲ್ವೇ ಟ್ರಾಕ್ ಪಕ್ಕದಲ್ಲಿರುವ ಸಾರ್ವಜನಿಕ ಸ್ಥಳದಲ್ಲಿ ಕಾನೂನು ಬಾಹಿರವಾಗಿ ಇಸ್ಪೀಟ್ ಜೂಜಾಟವಾಡುತ್ತಿದ್ದ  39  ಜನರನ್ನು ವಶಕ್ಕೆ ಪಡೆದಿದ್ದು ಉಳಿದ 6 ಜನರು ಓಡಿಹೋಗಿರುತ್ತಾರೆ . ಆರೋಪಿತರುಗಳ ವಶದಲ್ಲಿದ್ದ ಒಂದು ಹಳದಿ ಬಣ್ಣದ ಪ್ಲಾಸ್ಟಿಕ್ ಟಾರ್ಪಲ್ ,52 ಇಸ್ಪೀಟ್ ಎಲೆಗಳು, ವಿವಿಧ ಕಂಪನಿಯ ಒಟ್ಟು 22 ಬೈಕ್ಗಳು, ವಿವಿಧ ಕಂಪನಿಯ ಒಟ್ಟು 03 ಕಾರುಗಳು, ವಿವಿಧ ಕಂಪನಿಯ ಒಟ್ಟು 39 ಮೊಬೈಲ್ ಪೋನ್ಗಳು ಹಾಗೂ 2,30,250/-ರೂ ನಗದು ಹಣವನ್ನು ವಶಕ್ಕೆ ಪಡೆದು ಆರೋಪಿತರುಗಳ ವಿರುದ್ದ ಸಿ.ಇ.ಎನ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ರಕ್ಷಿತ್   ಪಿ.ಐ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ನಗರ ಠಾಣೆ .

ದಿನಾಂಕ 29.06.2021 ರಂದು ಪ್ರೀತಮ್ ಬಿನ್ ರಘು, ಲಕ್ಷ್ಮೀಶನಗರ, ಚಿಕ್ಕಮಗಳೂರು ನಗರವಾಸಿರವರು ಠಾಣೆಗೆ ಹಾಜರಾಗಿ ನೀಡಿದದೂರಿನ ಸಾರಾಂಶವೇನೆಂದರೆ ,ಪಿರ್ಯಾದುದಾರರು ತಮ್ಮ ತಂದೆ ತಾಯಿಯವರೊಂದಿಗೆ ಚಿಕ್ಕಮಗಳೂರಿನ ಲಕ್ಷ್ಮೀಶನಗರದಲ್ಲಿ ವಾಸವಾಗಿದ್ದು,  ಪಿರ್ಯಾದುದಾರರ ತಂದೆ ರಘು ಹೆಚ್,ಆರ್ ರವರು ಪಶು ವೈದ್ಯಕೀಯ ಜಾನುವಾರು ಅಭಿವೃದ್ದಿ ಅಧಿಕಾರಿಯಾಗಿದ್ದು ನಿವೃತ್ತರಾಗಿ ಮನೆಯಲ್ಲಿಯೇ ಇದ್ದರು, ದಿನಾಂಕ 28-06-2021 ರಂದು ಬೆಳಿಗ್ಗೆ ತಿಂಡಿ ತಿಂದು ಹೊರಗಡೆ ಹೋಗಿದ್ದು ಸಂಜೆಯಾದರೂ ಮನೆಗೆ ವಾಪಾಸ್ ಬಾರದ ಕಾರಣ ಸಂಬಂಧಿಕರು, ಸ್ನೇಹಿತರು ಹಾಗೂ ಚಿಕ್ಕಮಗಳೂರು ನಗರದಲ್ಲಿ ಎಲ್ಲಾ ಕಡೆ ಹುಡುಕಾಡಿದ್ದು ಎಲ್ಲಿಯೂ ಸಿಕ್ಕಿರುವುದಿಲ್ಲ, ಅವರ ಮೊಬೈಲ್ ನಂಬರ್ 7619582592 ಗೆ ಕರೆ ಮಾಡಿದರೆ ಸ್ವಿಚ್ ಆಫ್ ಆಗಿರುತ್ತೆ, ಅದ್ದರಂದ ಕಾಣೆಯಾಗಿರುವ  ತಮ್ಮ ತಂದೆಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ಪಿರ್ಯಾದಿನ ಮೇರೆಗೆ  ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಪಘಾತ ಪ್ರಕರಣ .

ಸಂಚಾರ ಪೊಲೀಸ್ ಠಾಣೆ .

ದಿನಾಂಕ 30-06-2021 ರಂದು ಗಾಯಾಳು ಮಹೇಶರವರು ಎಂಜಿ ಆಸ್ಪತ್ರೆಯಲ್ಲಿ ನೀಡಿದ ಹೇಳಿಕೆಯ ಸಾರಾಂಶವೇನೆಂದರೆ ಈ ದಿನ ಬೆಳಿಗ್ಗೆ ತನ್ನ ಬಾಬ್ತು ಬೈಕ್ ನಂಬರ್ ಕೆಎ-18 ಇಹೆಚ್-9811 ನಲ್ಲಿ ಸ್ನೇಹಿತರಾದ ಕೃಷ್ಣರವರನ್ನು ಹಿಂಬದಿಯಲ್ಲಿ  ಕೂರಿಸಿಕೊಂಡು ಚಿಕ್ಕಮಗಳೂರಿನ ಬೈಪಾಸ್ ರಸ್ತೆಯ ನಗರಸಭೆಯ ಕಮೀಷನರ್ ರವರ  ಮನೆಯ ಮುಂಭಾಗದ ಟಾರು ರಸ್ತೆಯಲ್ಲಿ ಹೋಗುತ್ತಿರುವಾಗ ಎದುರುಗಡೆಯಿಂದ  ಬಂದ ಕೆಎ 20 ಬಿ-2123 ಟಿಪ್ಪರ್ ಲಾರಿಯ ಚಾಲಕ ತನ್ನ ವಾಹನವನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ಬೈಕ್ ಸಮೇತ ನಾನು ಹಾಗೂ ಕೃಷ್ಣರವರು ಕೆಳಗೆ ಬಿದ್ದಿದ್ದು , ನನಗೆ  ಹಾಗೂ ಕೃಷ್ಣರವರಿಗೆ ತಲೆಗೆ , ಮುಖಕ್ಕೆ ಹಾಗೂ ಕೈಕಾಲುಗಳಿಗೆ ಪೆಟ್ಟಾಗಿದ್ದು , ಟಿಪ್ಪರ್ ಚಾಲಕ ಅನಿಲ್ ರವರ ವಿರುದ್ದ ಕಾನೂನು  ರೀತ್ಯಾ ಕ್ರಮಕೈಗೊಳ್ಳಬೇಕೆಂದು ನೀಡಿದ ಹೇಳಿಕೆ ದೂರಿನನ್ವಯ ಆರೋಪಿ ಚಾಲಕನ ವಿರುದ್ದ  ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 30-06-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080