ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ.

ಬಾಳೆಹೊನ್ನೂರು  ಪೊಲೀಸ್ ಠಾಣೆ.

ದಿನಾಂಕ 29-07-2021 ರಂದು ನೀಲಮ್ಮ ರವರು ತಮ್ಮ ಸಂಸಾರದೊಂದಿಗೆ ಹೊರನಾಡು ದೇವಸ್ಥಾನಕ್ಕೆ ಹೋಗಲೆಂದು ಕೆಎ-18 ಎಂಕ್ಯೂ 7495 ಕಾರಿನಲ್ಲಿ ಬೆಳಗಿನ ಜಾವ 04-40 ಗಂಟೆ ಸಮಯದಲ್ಲಿ ಬಾಳೆಹೊನ್ನೂರು    ಹತ್ತಿರ ಬರುತ್ತಿರುವಾಗ ಕಾರನ್ನು ಚಾಲನೆ ಮಾಡುತ್ತಿದ್ದ ಶಿವಕುಮಾರ್  ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿದ ಪರಿಣಾಮ ವಾಹನ ನಿಯಂತ್ರಣ ತಪ್ಪಿ ವಾಟಕೂಡಿಗೆ ಹತ್ತಿರ ಹರಿಯುತ್ತಿರುವ ಹಳ್ಳಕ್ಕೆ ಬಿದ್ದಿದ್ದರಿಂದ ನೀಲಮ್ಮರವರಿಗೆ ಕೈಕಾಲುಗಳಿಗೆ ಪೆಟ್ಟಾಗಿದ್ದು ಈ ಬಗ್ಗೆ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿರುತ್ತಾರೆ.

ಸಂಚಾರ ಪೊಲೀಸ್ ಠಾಣೆ.

ದಿನಾಂಕ 28-07-2021 ರಂದು ರಾತ್ರಿ 21-00 ಗಂಟೆ ಸಮಯದಲ್ಲಿ  ಲಲಿತರವರು ತಮ್ಮ ತಂದೆ ಜನಾರ್ಧನರವರೊಂದಿಗೆ  ಕೆಎ-18 ಪಿ-3069 ಕಾರಿನಲ್ಲಿ ಸಖರಾಯಪಟ್ಟಣಕ್ಕೆ ಹೋಗುತ್ತಿರುವಾಗ ಚಿಕ್ಕಮಗಳೂರಿನ ಕೋಟೆ ಕೆರೆಯ ಕೆಳಗೆ ಹೋಗುತ್ತಿರುವಾಗ ಜನಾರ್ಧನರವರು ಕಾರನ್ನು ದುಡುಕುತನದಿಂದ ಚಾಲನೆ ಮಾಡಿಕೊಂಡು ಹೋಗಿ ಎಡಭಾಗದ ಸೇತುವೆಗೆ ಡಿಕ್ಕಿ ಹೊಡೆಸಿದ ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿರುತ್ತೆ, ಯಾರಿಗೂ ಪೆಟ್ಟಾಗಿರುವುದಿಲ್ಲ.ಚಾಲಕನ ವಿರುದ್ದ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಹುಡುಗಿ ಕಾಣೆ ಪ್ರಕರಣ.

ಬೀರೂರು ಪೊಲೀಸ್ ಠಾಣೆ.

ದಿನಾಂಕ 29-07-2021 ರಂದು ಕೋರನಹಳ್ಳಿ ಚಂದ್ರಶೇಖರರವರ ಮಗಳಾದ ಸಹನಾ, 21 ವರ್ಷ ಈಕೆಯು ರಾತ್ರಿ ಮನೆಯವರೆಲ್ಲಾ ಮಲಗಿರುವಾಗ ಮನೆಯಿಂದ ಹೊರಗೆ ಹೋದವಳು ಇದುವರೆಗೂ ಮನೆಗೆ ವಾಪಾಸ್ ಬಂದಿರುವುದಿಲ್ಲ. ಆಕೆಯ ಸ್ನೇಹಿತರ ಮನೆಗಳಲ್ಲಿ, ಅಕಪಕ್ಕ್ಕದವರ ಮನೆಗಳಲ್ಲಿ ಹಾಗೂ ನೆಂಟರಿಷ್ಟರ ಮನೆಗಳಲ್ಲಿ ಹುಡುಕಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ, ಆದ್ದರಿಂದ ಕಾಣೆಯಾಗಿರುವ ಸಹನಾಳ ಪತ್ತೆ ಬಗ್ಗೆ ನೀಡಿದ ದೂರಿನ ಮೇರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 30-07-2021 07:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080