ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ .

ಬೀರೂರು ಪೊಲೀಸ್ ಠಾಣೆ.

 ದಿನಾಂಕ 30-01-2022 ರಂದು ಪಿರ್ಯಾಧಿ ಅನ್ನಪೂರ್ಣ ರವರು ನೀಡಿದ ದೂರಿನಲ್ಲಿ ದಿನಾಂಕ:30-01-2022 ರಂದು ಪಿರ್ಯಾದಿ ಮನೆಯಲ್ಲಿ ಮಗಳ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಪಿರ್ಯಾದಿ ಅಕ್ಕ ಮತ್ತು ಬಾವ ಧನಂಜಯ ರವರು ಬೆಲಗೂರು ನಿಂದ ಬಂದು ವಾಪಾಸ್ಸು ಹೋಗುತ್ತಿರುವಾಗ ಮದ್ಯಾಹ್ನ 2.45 ಗಂಟೆ ಸಮಯದಲ್ಲಿ  ಬೀರೂರು ಪಟ್ಟಣದ ಎ.ಪಿ.ಎಂ.ಸಿ. ಬಳಿ ಧನಂಜಯ ರವರು ತಮ್ಮ ಬೈಕ್ ನಂ ಕೆಎ-16-ಇಎಸ್-0406 ಬೈಕ್ ನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಿದ್ದು  ಧನಂಜಯ್ ರವರಿಗೆ ತೀವ್ರ ಪೆಟ್ಟಾಗಿದ್ದು  ಚಿಕಿತ್ಸೆಗೆ ಶಿವಮೊಗ್ಗಕ್ಕೆ ಕರೆದುಕೊಂಡು ಹೋಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ  ತಿಳಿಸಿದ್ದು, ಬೈಕ್ ಚಾಲನೆ ಮಾಡಿದ ಧನಂಜಯ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೆರೆಗೆ ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗಾಂಜಾ ಮಾರಾಟ ಪ್ರಕರಣ

ಸಿ.ಇ.ಎನ್.   ಪೊಲೀಸ್ ಠಾಣೆ.

ದಿನಾಂಕ:29-01-2022 ರಂದು ಚಿಕ್ಕಮಗಳೂರು ನಗರದ  ಖಾಸಗಿ ಬಸ್ ನಿಲ್ದಾಣ ಬಳಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ  ಅರೋಫಿ 1] ನದೀಮ್  ಬಿನ್ ಬಾಬು 2.] ಶಫಿಕ್ ಬಿನ್ ಅಬ್ದುಲ್ ರೆಹಮಾನ್ 3] ವಾಸೀಂ ಬಿನ್ ಅಬ್ಜಲ್ ವಾಸ ಚಿಕ್ಕಮಗಳೂರು ಇವರನ್ನು   ವಶಕ್ಕೆ ಪಡೆದು ಅರೋಪಿತರು ಅಕ್ರಮವಾಗಿ ಹೊಂದಿದ್ದ 1450 ಗ್ರಾಂ ಒಣಗಿದ ಗಾಂಜಾ ವನ್ನು ಮತ್ತು ಗಾಂಜಾವನ್ನು ಮಾರಾಟ ಮಾಡಿದ ಹಣ 1100/- ರೂ ವನ್ನು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತನ ವಿರುದ್ದ ಸಿ.ಇ.ಎನ್.  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಐ. ಮುತ್ತುರಾಜ್ ಹೆಚ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಅಕ್ರಮ ಮದ್ಯ ಮಾರಾಟ ಪ್ರಕರಣ

ಸಿಂಗಟಗೆರೆ  ಪೊಲೀಸ್ ಠಾಣೆ.

ದಿನಾಂಕ:29-01-2022 ರಂದು ಸಿಂಗಟಗೆರೆ ಠಾಣಾ ಸರಹದ್ದಿನ ಸೋಮನಹಳ್ಳಿ ವಾಸಿ ರವಿ ಬಿನ್ ಚೆಲುವಮೂರ್ತಿ ಎಂಬುವನು ಅವರ ಅಂಗಡಿ ಮುಂದೆ ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 46 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 1615/- ರೂ ಅಗಿದ್ದು, ಮದ್ಯವನ್ನು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತನ ವಿರುದ್ದ ಸಿಂಗಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ ಲೀಲಾವತಿ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮೂಡಿಗೆರೆ  ಪೊಲೀಸ್ ಠಾಣೆ.

ದಿನಾಂಕ:29-01-2022 ರಂದು ಮೂಡಿಗೆರೆ ಠಾಣಾ ಸರಹದ್ದಿನ ಸುಂಡೇಕೆರೆ  ಸೇತುವೆ ಹತ್ತಿರ ವಾಸಿ ವಿಜಯ್ ಎಲ್ ಬಿನ್ ಲೋಕೇಶ್ ಎಂಬುವನು ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಅಕ್ರಮವಾಗಿ ಮದ್ಯವನ್ನು ಸಾಗಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 94 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ 5316/- ರೂ ಅಗಿದ್ದು, ಮದ್ಯವನ್ನು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತನ ವಿರುದ್ದ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ  ಪಿ.ಎಸ್.ಐ. ಶ್ರೀ ರವಿ  ಜಿ.ಎ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ: 29-01-2022 ರಂದು ಗ್ರಾಮಾಂತರ ಠಾಣಾ ಸರಹದ್ದಿನ ಅಂಬಳೆ ವಾಸಿ ರತ್ನಮ್ಮ ಕೊಂ ನೀಲಕಂಠಪ್ಪ ಇವರು ನೀಡಿದ ದೂರಿನಲ್ಲಿ ಪಿರ್ಯಾಧಿ ಗಂಡ ಮನೆಯ ರಸ್ತೆಯಲ್ಲಿ ದೊಡ್ಡಗಾಡಿ ತೆಗೆದುಕೊಂಡು ಬಂದು ಅಕ್ಕಪಕ್ಕದ ಮನೆಯ ಹೆಂಚುಗಳಿಗೆ ತಾಗಿಸಿ ಡ್ಯಾಮೇಜ್ ಮಾಡಿದ್ದು ಈ ವಿಚಾರಕ್ಕೆ ಸಂಬಂದಿಸಿದಂತೆ ಮನೆಯವರು ಬೈದಿದ್ದು, ನಂತರ ದಿನಾಂಕ 27/01/2022 ರಂದು ಪಿರ್ಯಾದಿ ಗಂಡ ಬೈಕ್ ತೆಗೆದುಕೊಂಡು ಹೋದವರು ವಾಪಾಸ್ಸು ಮನೆಗೆ ಬಂದಿರುವುದಿಲ್ಲ, ಈವರೆಗೂ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಗಂಡ ನೀಲಕಂಠಪ್ಪ ನನ್ನು  ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಗ್ರಾಮಾಂತರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 30-01-2022 08:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080