ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಮಹಿಳಾ  ಪೊಲೀಸ್ ಠಾಣೆ.

ದಿನಾಂಕ:- 29-03-2022 ರಂದು ಗವನಹಳ್ಳಿ ಗ್ರಾಮ ವಾಸಿಯಾದ ಮಹೇಶ ಬಿನ್ ಬಹದ್ದೂರ್ರವರು ನೀಡಿದ ದೂರಿನ ಸಾರಾಂಶವೇನೆಂದರೆ, ನನ್ನ ಹೆಂಡತಿ ರೇಷ್ಮಾ , 32 ವರ್ಷ ಈಕೆಯನ್ನು 18 ವರ್ಷಗಳ ಹಿಂದೆ ಮದುವೆಯಾಗಿದ್ದು, 3 ಜನ ಮಕ್ಕಳಿರುತ್ತಾರೆ.  ದಿನಾಂಕ 27-03-2022  ರಂದು ನನ್ನ ಹೆಂಡತಿ ಮನೆಯಲ್ಲಿ ಇರಲಿಲ್ಲ. ಯಾರಿಗೂ  ತಿಳಿಸದೆ ಎಲ್ಲಿಗೋ ಹೋಗಿರುತ್ತಾಳೆ. ಸಂಬಂಧಿಕರ, ಪರಿಚಯಸ್ಥರ ಮನೆಗಳಲ್ಲಿ ಹುಡುಕಿದರೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ನನ್ನ ಹೆಂಡತಿ ರೇಷ್ಮಾರವರನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನನ್ವಯ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕೊಪ್ಪ  ಪೊಲೀಸ್ ಠಾಣೆ.

ದಿನಾಂಕ:-29-03-2022 ರಂದು ರವೀಂದ್ರ ಬಿನ್ ಬಸವರವರು ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 11-03-2022 ರಂದು ನನ್ನ ತಂದೆಯಾದ  ಬಸವ ಬಿನ್ ಕೊರಗ, 75 ವರ್ಷ ರವರು ಮಾಮೂಲಿನಂತೆ ಗಡಿಕ್ಲಲು ಕಡೆ ಹೋಗಿದ್ದವರು   ಇದುವರೆವಿಗೂ  ವಾಪಾಸ್ ಮನೆಗೆ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಸ್ನೇಹಿತರುಗಳಲ್ಲಿ ವಿಚಾರ ಮಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ. ಆದ್ದರಿಂದ ನನ್ನ ತಂದೆಯನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನನ್ವಯ ಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಗೋ ಮಾಂಸ ಮಾರಾಟ  ಪ್ರಕರಣ

ನಗರ ಪೊಲೀಸ್ ಠಾಣೆ.

ದಿನಾಂಕ:30-03-2022 ರಂದು ನಗರ ಠಾಣಾ ಸರಹದ್ದಿನ ನಾಗಲಕ್ಷ್ಮೀ ಪೀಲಂ ಥಿಯೇಟರ್ ಹೋಟೆಲ್ ಎವರೆಸ್ಟ್ ನಲ್ಲಿ ದನದ ಮಾಂಸವನ್ನು ಬೇಯಿಸಿ ಸಾರ್ವಜನಿಕರಿಗೆ ಊಟಕ್ಕೆ ನೀಡುತ್ತಿದ್ದ  ಹೋಟೇಲ್ ಒಳಗೆ ಹೋದಾಗ  ಹೋಟೇಲ್ ಮಾಲೀಕರು ಲತೀಫ್ ಬಿನ್ ಮೊಹಮ್ಮದ್ ಅಲಿ ನೆಹರು ನಗರ ಇದ್ದು ಹೋಟೆಲ್ ಅಡುಗೆ ಮನೆಯಲ್ಲಿ 2 ಪಾತ್ರೆಗಳಲ್ಲಿ ಸುಮರು 15 ಕೆ.ಜಿ ಅಕ್ಕಿ ಮತ್ತು 12 ಕೆ.ಜಿ ದನದ ಮಾಂಸವನ್ನು ಹಾಕಿ ಬಿರಿಯಾನಿ ಮಾಡಿದ್ದು ಹಾಗೂ ಇನ್ನೊಂದು ಪಾತ್ರೆಯಲ್ಲಿ ಮಾಂಸ ಮತ್ತು ಮೂಳೆಯನ್ನು ಹಾಕಿ ಸಂಬಾರು ಪಧಾರ್ಥ ಮಾಡಿದ್ದು ಸುಮಾರು 7 ಕೆ.ಜಿ. ದನದ ಮಾಂಸವಿದ್ದು, ಮತ್ತೊಂದು ಪಾತ್ರೆಯಲ್ಲಿ 4 ಕೆ.ಜಿ. ದನದ ಮಾಂಸ ಇದ್ದು,  ಸದರಿ ದನದ ಮಾಂಸವನ್ನು ಚಿಕ್ಕಮಗಳೂರು ನಗರದ ಟಿಪ್ಪು ನಗರ ವಾಸಿ ಮಜೀದ್ ರವರಿಂದ ಖರಿದೀಸಿರುವುದಾಗಿ ತಿಳಿಸಿದ್ದು, ಬೇಯಿಸಿದ ದನದ ಮಾಂಸ ಮತ್ತು ವ್ಯಾಪಾರದಿಂದ ಸಂಗ್ರಹಿಸಿದ ಹಣ 1,600/- ರೂ ವನ್ನು ಅಮಾನತ್ತುಪಡಿಸಿಕೊಂಡು ಬಂದು  ಅರೋಪಿತರ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆ ನಗರ ಪಿ.ಎಸ್.ಐ. ನಾಗೆಂದ್ರನಾಯ್ಕ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 30-03-2022 06:43 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080