ಅಭಿಪ್ರಾಯ / ಸಲಹೆಗಳು

ಅಕ್ರಮ ಗೋ ಸಾಗಾಣಿಕೆ  ಪ್ರಕರಣ

ಕಳಸ ಪೊಲೀಸ್ ಠಾಣೆ.

ದಿನಾಂಕ;30/04/2022 ರಂದು ಬೆಳಗಿನ ಜಾವ 12.00 ಗಂಟೆ ಸಮಯದಲ್ಲಿ ಕಳಸ ಠಾಣಾ ಸರಹದ್ದಿನ ಗೀತೋಟ ಬಳಿ ಪಿಕ್ ಅಪ್ ವಾಹನದಲ್ಲಿ 2 ದನಗಳನ್ನು (ಹೋರಿ) ಕೆಎ-15-ಎ-4624 ಪಿಕ್ ಆಪ್  ವಾಹನದಲ್ಲಿ  ದನಗಳನ್ನು ಕಡಿದು ಮಾಂಸ ಮಾರಾಟ ಮಾಡುವ ಉದ್ದೇಶದಿಂದ ಸಾಗಾಣಿಕೆ ಮಾಡುತ್ತಿದ್ದು , ಅರೋಪಿತರಾದ 1] ಅರುಣ್ ಬಿನ್ ಮಂಜಪ್ಪ ,ಕೊಗ್ರೆ ಬೈರದೇವರು ಗ್ರಾಮ ವಾಸಿ  2]ಪ್ರಮೋದ ನರೇರ ಬಿನ್ ಚಂದ್ರಪ್ಪ , ವಾಸ ಶಕನಹಳ್ಳಿ ಸೊರಬ ತಾಲ್ಲೋಕು 3] ಬಸವರಾಜ್ ಬಿನ್ ಮೈಲಾರಪ್ಪ ವಾಸ ಚಿಕ್ಕಂಶಿ,ಹಾಣಗಲ್ ತಾಲ್ಲೋಕು  ಇವರನ್ನು ವಶಕ್ಕೆ   ಪಡೆದು ಅರೋಪಿತರು ದನಗಳನ್ನು ಸಾಗಿಸಲು ಉಪಯೋಗಿಸಿದ ವಾಹನ ಸಮೇತ ದನಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಕಳಸ ಪಿ.ಎಸ್.ಐ. ಶ್ರೀ ಹರ್ಷವರ್ಧನ್ ಹೆಚ್.ಕೆ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ;30/04/2022 ರಂದು ಪಿರ್ಯಾದಿ ಶ್ರೀ ಎಸ್. ಶ್ರೀಧರ್ ತೇಗೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ 29/04/2022 ರಂದು ಮನೆಗೆ ಬೀಗ ಹಾಕಿಕೊಂಡು ಹೋಗಿದ್ದು ದಿನಾಂಕ:30/04/2022 ರಂದು ಬೆಳಿಗ್ಗೆ ವಾಪಾಸ್ಸು ಬಂದು ನೋಡಲಾಗಿ ಯಾರೋ ಕಳ್ಳರು ಮನೆಯ ಕಿಡಿಕಿಯ ಮೇಲಿನಿಂದ ಹತ್ತಿ ಮಹಡಿ ಭಾಗದಲ್ಲಿ ಟೆರಸ್ ಗೆ ಬಂದು ಮಹಡಿ ಮೇಲಿನ ಬಾಗಿಲಿನ ಡೋರ್ಲಾಕ್  ಅನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಮನೆಯಲ್ಲಿದ್ದ 181 ಗ್ರಾಂ ಚಿನ್ನ ವಡವೆಗಳನ್ನು 680 ಗ್ರಾಂ ಬೆಳ್ಳಿಯ ಅಭರಣಗಳು,, ಸಿ.ಸಿ. ಟಿ.ವಿ. ರೆಕಾಡರ್ , ನಗದು 85,000 ಮತ್ತು ಮನೆಯ ಮುಂದೆ ನಿಲ್ಲಿಸಿದ್ದ ಕೆಎ-18-ಇಜಿ-6331 ನಂಬರ್ ಟಿವಿಎಸ್ ಜ್ಯೂಪಿಟರ್ ವಾಹನವನ್ನು ಕಳವು ಮಾಡಿಕೊಂಡು ಹೋಗಿದ್ದು ಒಟ್ಟು  7,80,500/- ರೂ ಬೆಲೆಬಾಳುವ ವಸ್ತುಗಳಾಗಿದ್ದು, ಕಳ್ಳರನ್ನು ಪತ್ತೆ ಮಾಡಿ ಕಳುವಾಗಿರುವ ವಸ್ತುಗಳನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ.

ದಿನಾಂಕ;29/04/2022 ರಂದು ಪಿರ್ಯಾದಿ ಮಮ್ತಾಜ್ ಉನ್ನಿಸಾ ಕೊಂ ಲೇಟ್ ಅಬುಬೇಕರ್ , ನೆಹರು ನಗರ ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗ ಮೊಹಮ್ಮದ್ ತೌಫಿಕ್ ದಿನಾಂಕ; 28/04/2022 ರಂದು ಬೆಳಗಿನ ಜಾವ ಮನೆಯಿಂದ ಹೋದವನು, ವಾಪಾಸ್ಸು ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಮೊಹಮ್ಮದ್ ತೌಫಿಕ್ 18 ವರ್ಷ,  5.5 ಅಡಿ ಎತ್ತರ, ಗೋದಿ ಮೈಬಣ್ಣ, ಸಾದಾರಣ ಮೈಕಟ್ಟು ಬಲಗೈ ಯಲ್ಲಿ  ಅಕ್ಸಿಡೆಂಟ್ ಗಾಯದ ಗುರುತು ಇದೆ. ಕಾಣೆಯಾಗಿರುವ ತನ್ನ ಮಗ ಮೊಹಮ್ಮದ್ ತೌಫಿಕ್ ನನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 30-04-2022 08:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080