Feedback / Suggestions

ಅಕ್ರಮ ಮದ್ಯ ಮಾರಾಟ ಮತ್ತು ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

ಅಲ್ದೂರು ಪೊಲೀಸ್ ಠಾಣೆ.

ದಿನಾಂಕ 30/05/2021 ರಂದು ಅಲ್ದೂರು  ಠಾಣಾ ಸರಹದ್ದಿನಲ್ಲಿ ಕಬ್ಬಿಣ ಸೇತುವೆ ವಾಸಿ ಪೂರ್ಣೇಶ್ ಬಿನ್ ಮೊಗಪ್ಪಗೌಡ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನನ್ನು  ವಶಕ್ಕೆ ಪಡೆದು ಆತನು ಯಾವುದೇ ಪರವಾನಗಿಯನ್ನು  ಇಲ್ಲದೆ  ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 74 ಟೆಟ್ರಾ ಪೌಚ್ ಮದ್ಯವಿದ್ದು, ಅಂದಾಜು ಬೆಲೆ 2498.00 ರೂ ಆಗಿರುತ್ತೆ. ಸದರಿ ಮದ್ಯವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಅಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ. ಶ್ರೀಮತಿ ಶಿವರುದ್ರಮ್ಮ  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಪಂಚನಹಳ್ಳಿ ಪೊಲೀಸ್ ಠಾಣೆ.

ದಿನಾಂಕ 30/05/2021 ರಂದು ಪಂಚನಹಳ್ಳಿ  ಠಾಣಾ ಪಂಚನಹಳ್ಳಿ ಗ್ರಾಮದ ಶಾಂತಪ್ಪ ರವರ ಜಮೀನಿನಲ್ಲಿರುವ ಪಂಪ್ ಸೆಟ್ ಮನೆಯ ಮುಂಭಾಗದಲ್ಲಿ  ವಾಸಿ ಶಾಂತಪ್ಪರವರು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನನ್ನು  ವಶಕ್ಕೆ ಪಡೆದು ಆತನು ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು  ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು  ಇಲ್ಲದೆ  ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬ್ಲಾಕ್ ಮ್ಯಾಜಿಕ್ ವಿಸ್ಕಿಯ  146 ಟೆಟ್ರಾ ಪೌಚ್ ಮದ್ಯವಿದ್ದು, ಅಂದಾಜು ಬೆಲೆ 5129.00 ರೂ ಆಗಿರುತ್ತೆ. ಸದರಿ ಮದ್ಯವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಪಂಚನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಡಿ.ಸಿ.ಐ.ಬಿ ವಿಭಾಗದ ಪಿಎಸ್ಐ. ಕೆ ಪುದ್ದು  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಸಖರಾಯಪಟ್ಟಣ ಪೊಲೀಸ್ ಠಾಣೆ.

ದಿನಾಂಕ 30/05/2021 ರಂದು ಸಖರಾಯಪಟ್ಟಣ  ಠಾಣಾ ದೇವನೂರು ಗ್ರಾಮದ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯಲ್ಲಿ  ಗ್ರಾಮದ ಪಾಪಣ್ಣ ಬಿನ್ ಅಜ್ಜಣ್ಣ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು ಮಾಹಿತಿ ಬಂದ ಮೇರೆಗೆ ದಾಳಿ ನಡೆಸಿ ಆರೋಪಿತನನ್ನು  ವಶಕ್ಕೆ ಪಡೆದು ಆತನು ಕೊವಿಡ್ -19 ಸಾಂಕ್ರಾಮಿಕ ರೋಗವು ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರವು  ಹೊರಡಿಸಿರುವ ಆದೇಶಗಳನ್ನು ಉಲ್ಲಂಘಿಸಿ ಯಾವುದೇ ಪರವಾನಗಿಯನ್ನು  ಇಲ್ಲದೆ  ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 32 ಟೆಟ್ರಾ ಪೌಚ್ ಮದ್ಯವಿದ್ದು, ಮದ್ಯವನ್ನು ಮಾರಾಟ ಮಾಡಿದ 250/- ರೂ ನಗದು ಹಣವನ್ನು ಮತ್ತು ಮದ್ಯವನ್ನು ವಶಕ್ಕೆ ಪಡೆದು ಆರೋಪಿ ವಿರುದ್ದ ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ  ಪಿಎಸ್ಐ. ಹರೀಶ್ ಆರ್.   ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

Last Updated: 30-05-2021 09:47 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Chikkamagaluru District Police
Designed, Developed and Hosted by: Center for e-Governance - Web Portal, Government of Karnataka © 2022, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080