ಅಭಿಪ್ರಾಯ / ಸಲಹೆಗಳು

ಅಕ್ರಮ ಮಟ್ಕಾ ಜೂಜಾಟ ಪ್ರಕರಣ

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ;30-05-2022 ರಂದು 13.00 ಗಂಟೆ ತರೀಕೆರೆ ಠಾಣಾ ಸರಹದ್ದಿನ ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೋನಿ ಬಳಿ  ಅಕ್ರಮವಾಗಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ಅರೋಪಿ ಸುರೇಶ್ ಬಾಬು ಬಿನ್ ಈಶ್ವರಪ್ಪ, ಚೌಡೇಶ್ವರಿ ಕಾಲೋನಿ  ತರೀಕೆರೆ ಟೌನ್ ಈತನನ್ನು ವಶಕ್ಕೆ ಪಡೆದು ಅರೋಫಿತನು ಸಾರ್ಷಜನಿಕರಿಂದ ಸಂಗ್ರಹಿಸಿದ ರೂ 3100/- ನಗದು ಹಣ, ಒಂದು ಮಟ್ಕಾ ಚೀಟಿ,  ಒಂದು ಬಾಲ್ ಪೆನ್ನು ಅನ್ನು ಆಮಾನತ್ತು ಪಡಿಸಿಕೊಂಡು ಬಂದು ತರೀಕೆರೆ ಠಾಣೆಯಲ್ಲಿ ಅರೋಫಿತರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಡಿಸಿಐಬಿ ಘಟಕದ ಪಿಎಸ್.ಐ. ಗೋವಿಂದನಾಯ್ಕ ಬಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಮಹಿಳಾ ಪೊಲೀಸ್ ಠಾಣೆ.

ದಿನಾಂಕ;30/05/2022 ರಂದು ಪಿರ್ಯಾದಿ ಶ್ರೀಮತಿ ಶಹನಾಜ್ ಬಿನ್ ಸಾಧಿಕ್ ಬಲ್ಬ್ ಪ್ಯಾಕ್ಟರಿ ರಸ್ತೆ, ಚಿಕ್ಕಮಗಳೂರು ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಮಗಳು ಝಯೋ ಮದಿನಾ ಇವರು  ದಿನಾಂಕ; 29/05/2022 ರಂದು ಬೆಳಿಗ್ಗೆ 10-30 ಗಂಟೆ ಸಮಯದಲ್ಲಿ ಮನೆಯಿಂದ ಯಾರಿಗೂ ಹೇಳದೆ ಹೋದವಳು ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ಝಯೋ ಮದಿನಾ, 20 ವರ್ಷ, 5 ಅಡಿ ಎತ್ತರ,  ದುಂಡುಮುಖ, ಬಿಳಿ ಮೈಬಣ್ಣ, ಸಾದಾರಣ ಮೈ ಕಟ್ಟು,  ಕನ್ನಡ ಇಂಗ್ಲಿಷ್, ಹಿಂದಿ, ಬಾಷೆ ಮಾತನಾಡುತ್ತಾಳೆ. ನೀಲಿ ಬಣ್ಣದ ಚೂಡಿದಾರ ಮತ್ತು ವೇಲ್ ಧರಿಸಿರುತ್ತಾಳೆ. ಇರುವ ತುಂಬು ತೋಳಿನ ಶರಟು ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಮಗಳು ಝಯೋ ಮದಿನಾ ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ:29-05-2022 ರಂದು ಬಾಳೆಹೊನ್ನೂರು ಪೊಲೀಸ್ ಠಾಣಾ ಸರಹದ್ದಿನ ದೇವದಾನ ಗ್ರಾಮದಲ್ಲಿ ರಾಜು ಬಿನ್ ಮಂಜಯ್ಯ  ಒಳಗೋಡು, ದೇವದಾನ ವಾಸಿ ಇವರು  ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ಕಡಬಗೆರೆ ಚಂದನ್ ಬಾರ್ ಅಂಡ್ ರೆಸ್ಟೋರೆಂಟ್ ನಿಂದ ಕರೀದಿ ಮಾಡಿಕೊಂಡು ದೇವದಾನ ಗ್ರಾಮಕ್ಕೆ ತೆಗೆದುಕೊಂಡು ಹೋಗುತ್ತಿದ್ದು ಅರೋಪಿಯನ್ನು ವಶಕ್ಕೆ ಪಡೆದು ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 64 ಮದ್ಯವನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 2248/- ರೂ ಗಳಾಗಿರುತ್ತೆ. ಆರೋಪಿತನ ವಿರುದ್ದ ಬಾಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಬಾಳೆಹೊನ್ನೂರು ಠಾಣಾ ಪಿಎಸ್ಐ ನಿತ್ಯಾನಂದಗೌಡ. ಪಿ.ಡಿ. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಕಿಕ್ರೇಟ್ ಬೆಟ್ಟಿಂಗ್ ಜೂಜಾಟ ಪ್ರಕರಣ

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ:29-05-2022 ರಂದು ಚಿಕ್ಕಮಗಳೂರು ಹೊಸಳ್ಳಿ ಪೇಟೆ ಗ್ರಾಮದ ಮಸೀದಿ ಹತ್ತಿರ ರಸ್ತೆಯ ಪಕ್ಕ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಕ್ರಿಕೇಟ್ ಬೆಟ್ಟಿಂಗ್ ಜೂಜಾಟ ಆಡುತ್ತಿದ್ದ ಆರೋಪಿತರಾದ 1.] ಎಸ್.ಕೆ. ಭಟ್ಟಿ ಬಿನ್ ಸಲಾಂ ಅಬ್ದುಲ್ಲಾ, ವಾಸ ಹೊಸಳ್ಳಿ ಪೇಟೆ ಗ್ರಾಮ, 2] ನಿಜಾಮ್ ಬಿನ್ ಲೇಟ್ ಮಹಮ್ಮದ್ ಬುಡೇನ್, ಗಾಳಿ ಪೇಟೆ ಗ್ರಾಮ ಹೊಸಳ್ಳಿ ಪೇಟೆ, ರವರನ್ನು ವಶಕ್ಕೆ ಪಡೆದು ಅರೋಪಿತರು ಜೂಜಾಟಕ್ಕೆ ಬಳಸಿದ 16,000/- ರೂ ನಗದು ಹಣ 2] ವಿವೋ ಕಂಪನಿಯ ನೀಲಿ ಬಣ್ಣದ ವಿವೋ ವೈ 20 ಜಿ ಮೊಬೈಲ್, ಅನ್ನು ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತರ ವಿರುದ್ದ ಸಿ.ಇ.ಎನ್. ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿ.ಇ.ಎನ್. ಠಾಣಾ ಪಿಎಸ್ಐ ನಾಜೀರ್ ಹುಸೇನ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಗೋ ಮಾಂಸ ಮಾರಾಟ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ:29-05-2022 ರಂದು ಕಡೂರು ಪೊಲೀಸ್ ಠಾಣಾ ಸರಹದ್ದಿನ ಕಡೂರುರು ಟೌನ್ ಪ್ಲೆಗಿನಮ್ಮ ದೇವಸ್ಥಾನದ ಬೀದಿ ಕೊಟೆಯಲ್ಲಿ ಪಿರ್ಯಾದಿ ದರ್ಶನ್ ಆರ್ ಬಿನ್ ರಮೇಶ ರವರ ಮನೆ ಎದುರು ಜಮೀರ್ ಬಿನ್ ಸಾಹೇಬ್ ಜಾನ್ ಎಂಬುವರು ಪ್ರತಿ ಶುಕ್ರವಾರ ಭಾನುವಾರ ಕೆಎ-18-ಇಜಿ-6579 ರ ಸ್ಕೂಟಿಯಲ್ಲಿ ಸುಮಾರು 1 ಕೆ.ಜಿ. 5 ಪ್ಯಾಕೇಟ್ ದನದ ಮಾಂಸವನ್ನು  ಮಾರಾಟ ಮಾಡುತ್ತಿದ್ದು, ಆರೋಪಿತನನ್ನು ಮತ್ತು ಅರೋಪಿತನು ದನದ ಮಾಂಸವನ್ನು ತಂದ ಕೆಎ-18-ಇ-ಜಿ-6579 ಸ್ಕೂಟಿ 5 ಕೆ.ಜಿ. ಮಾಂಸವನ್ನು ತಂದು ಠಾಣೆಗೆ ಹಾರ್ಪಡಿಸಿ ಅರೋಪಿ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನಿ ಮೇರೆಗೆ ಅರೋಫಿತನ ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ:29-05-2022 ರಂದು ಕಡೂರು ಪೊಲೀಸ್ ಠಾಣಾ ಬಳ್ಳೆಕೆರೆ ಗ್ರಾಮದ ಸಾಮಾಜಿಕ ಅರಣ್ಯ ಸಮೀಪ ಜಮೀನಿನ ಪಕ್ಕದಲ್ಲಿರುವ ಜಾಗದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ, ಆರೋಪಿತರಾದ 1.] ಮಲ್ಲೇಶ ಬಿನ್ ಲಕ್ಷ್ಮಯ್ಯ  ವಾಸ ಯಾಳಗೊಂಡನಹಳ್ಳಿ ಗ್ರಾಮ, 2] ರವಿ ಬಿನ್ ಲೇಟ್ ಜಯರಾಮಪ್ಪ ಕೋಟೆ ಬೀದಿ, ಅಜ್ಜಂಫುರ 3] ಶಾಂತಕುಮಾರ್ ಬಿನ್ ಅಜ್ಜಪ್ಪ, ವಡೆರಹಳ್ಳಿ ಗ್ರಾಮ ಅಜ್ಜಂಪುರ 4] ಸಚಿನ್ ಬಿನ್ ಬಸವರಾಜ್, ಜಿ. ತಿಮ್ಮಾಪುರ ಕಡೂರು 5] ಬಾಲಾಜಿನಾಯ್ಕ ಬಿನ್ ನಾಗರಾಜನಾಯ್ಕ, ಗುಡ್ಡದಹಟ್ಟಿ, ಮತಿಘಟ್ಟ 6] ಯೋಗೀಶ್ ಬಿನ್ ನಾಗರಾಜ , ನೇರ್ಲಿಗೆ, ಜಾವಗಲ್ ರವರನ್ನು ವಶಕ್ಕೆ ಪಡೆದು ಅರೋಪಿತರು ಜೂಜಾಟಕ್ಕೆ ಬಳಸಿದ 5100/- ರೂ ನಗದು ಹಣ, 52 ಇಸ್ಪೀಟ್ ಎಲೆಗಳು, ಒಂದು ಬಿಳಿ ಟಾರ್ಪಲ್ ಅನ್ನು  ಅಮಾನತ್ತುಪಡಿಸಿಕೊಂಡಿದ್ದು, ಆರೋಪಿತರ ವಿರುದ್ದ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಕಡೂರು. ಠಾಣಾ ಪಿಎಸ್ಐ ಶ್ರೀಮತಿ ರಮ್ಯ ಎನ್.ಕೆ.  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರ

ಇತ್ತೀಚಿನ ನವೀಕರಣ​ : 30-05-2022 07:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080