ಅಭಿಪ್ರಾಯ / ಸಲಹೆಗಳು

ಸೈಬರ್ ಪ್ರಕರಣ.

ಸಿ.ಇ.ಎನ್.ಪೊಲೀಸ್ ಠಾಣೆ.

ದಿನಾಂಕ 30-06-2022 ರಂದು  ಪಿರ್ಯಾದುದಾರರಾದ ಜಾರ್ಜ್ ಗಾಲ್ಡಿನ್ ಡಿಸೋಜಾ, ಬೆಟ್ಟದಕೊಳಲು ಕೊಪ್ಪ ತಾಲ್ಲೂಕುರವರು ನೀಡಿದ ದೂರಿನ ಸಾರಾಂಶವೇನೆಂದರೆ ದಿನಾಂಕ 01-06-2022 ರಂದು ಮೊಬೈಲ್ ಗೂಗಲ್ ನಲ್ಲಿ ಸರ್ಕಾರಿ ಯೋಜನೆಯಡಿಯಲ್ಲಿ ಯಾವುದಾದರೂ ಸವಲತ್ತುಗಳು ಇರುವ ಬಗ್ಗೆ ಸರ್ಚ್ ಮಾಡುತ್ತಿರುವಾಗ ಕುಸುಮ್ ಸೋಲಾರ್ ಯೋಜನೆಯಲ್ಲಿ ಸೋಲಾರ್ ಪ್ಯಾನಲ್ ಖರೀದಿ ಮಾಡಿದರೆ ಸಬ್ಸಿಡಿ ಸಿಗುವುದೆಂದು ಭಾವಿಸಿ ನನ್ನ ಮೊಬೈಲ್ ನಂಬರ್ ನಿಂದ ಲಿಂಕ್ ನ್ನು ಕ್ಲಿಕ್ ಮಾಡಿದಾಗ ರಿಜೀಸ್ರಟೇಷನ್ ಚಾರ್ಜ್ಸ್ ನೀಡಬೇಕೆಂದು ಹೇಳಿ  ನನ್ನ ಅಕೌಂಟ್ ನಂಬರ್ ನೀಡಬೇಕೆಂದು ತಿಳಿಸಿದ್ದು ,ದಿನಾಂಕ 14-06-2022 ಹಾಗೂ 15-06-2022 ರಂದು  ನನ್ನನ್ನು ನಂಬಿಸಿ ನನ್ನಿಂದ ಒಟ್ಟು 1,68,050 /-ರೂ ಹಣವನ್ನು ಹಾಕಿಸಿಕೊಂಡು ಮೋಸ ಮಾಡಿದ್ದು ಮೋಸ ಮಾಡಿದವರನ್ನು ಪತ್ತೆ ಮಾಡಿ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕೆಂದು ನೀಡಿದ ದೂರಿನ ಮೇರೆಗೆ  ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಜೂಜಾಟ ಪ್ರಕರಣ.

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ 29-06-2022 ರಂದು 16-00 ಗಂಟೆ ಸಮಯದಲ್ಲಿ ಬೀರೂರು ಬೈಪಾಸ್ ನಿಂದ ಕೋಡಹಳ್ಳಿ ಗ್ರಾಮಕ್ಕೆ  ಹೋಗುವ  ಸಾರ್ವಜನಿಕ ರಸ್ತೆಯ ಬದಿಯಲ್ಲಿ ಅಕ್ರಮವಾಗಿ ಹಣವನ್ನು ಪಣವಾಗಿಟ್ಟುಕೊಂಡು ಜೂಜಟವಾಡುತ್ತಿದ್ದ 1) ರಾಜೀಕ್ 2) ದರ್ಶನ್ 3) ಹಮೀರ್ 4) ಅಸ್ಲಾಂ 5) ಸಮೀರ್ 6) ಜಹೀರ್ 7)ಇರ್ಫಾನ್ 8) ಫರ್ವೀಜ್ 9) ಮುಕ್ತಿಯಾರ್  ಇವರುಗಳನ್ನು ವಶಕ್ಕೆ ಪಡೆದು ಆರೋಪಿತರುಗಳ ವಶದಲ್ಲಿದ್ದ 52 ಇಸ್ಪೀಟ್ ಎಲೆಗಳು, 19,580/ರೂ ನಗದು ಹಣ ಹಾಗೂ ಒಂದು ನೀಲಿ ಬಣ್ಣದ ಪ್ಲಾಸ್ಟಿಕ್ ಟಾಪ್ಪಲ್ನ್ನು ಅಮಾನತ್ತುಪಡಿಸಿಕೊಂಡು ಆರೋಪಿತರುಗಳ ವಿರುದ್ದ  ಸಿ.ಇ.ಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಐ. ಮುತ್ತುರಾಜು ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ.

ಜಯಪುರ ಪೊಲೀಸ್ ಠಾಣೆ.

ದಿನಾಂಕ 29-06-2022 ರಂದು ಸಂಜೆ 04-30 ಗಂಟೆ ಸಮಯದಲ್ಲಿ ಜಯಪುರ ಠಾಣಾ ಸರಹದ್ದಿನ ಭುವನಕೋಟೆ ಗ್ರಾಮದ ಮುತ್ತೂರು ವಾಸಿ ತಮ್ಮಯ್ಯಗೌಡ ಎಂಬುವವರು ತಮ್ಮ ವಾಸದ ಮನೆಯ ಮುಂಭಾಗ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು  ಸದರಿ ಆಸಾಮಿಯನ್ನು ವಶಕ್ಕೆ ಪಡೆದು , 90 ಎಂ.ಎಲ್ ನ  ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ 96 ಮದ್ಯದ ಪ್ಯಾಕೆಟ್ ಗಳನ್ನು ವಶಕ್ಕೆ ಪಡೆದು ಮದ್ಯದ ಅಂದಾಜು ಬೆಲೆ           3372/- ರೂ ಗಳಾಗಿರುತ್ತೆ. ಆರೋಪಿತನ ವಿರುದ್ದ  ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಶ್ರೀಮತಿ.ಜ್ಯೋತಿ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ನಗರ ಪೊಲೀಸ್ ಠಾಣೆ.

ದಿನಾಂಕ 29-06-2022 ರಂದು  ಪಿರ್ಯಾದುದಾರರಾದ ದೇವರಾಜೇಗೌಡ ಬಿನ್ ಮೊಗಣ್ಣಗೌಡ ರವರು ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದುದಾರರ ಮಗನಾದ ಸುದರ್ಶನ್ ರವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಹಾಗೂ ಸೊಸೆ ದಿವ್ಯರವರು ಐಡಿಎಸ್ ಜಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,  3 ನೇಹಂತ ಕಲ್ಯಾಣನಗರ, ಚಿಕ್ಕಮಗಳೂರಿನಲ್ಲಿ ವಾಸವಾಗಿರುತ್ತಾರೆ, ಈಗ್ಗೆ 2 ವಾರಗಳ ಹಿಂದೆ ಸುದರ್ಶನ್ ರವರಿಗೆ ಮೈಸೂರಿಗೆ ವರ್ಗಾವಣೆಯಾಗಿದ್ದರಿಂದ  ದಿನಾಂಕ 18-06-2022 ರಂದು ಮನೆಯರೆಲ್ಲಾ ಕೆಲಸದ ನಿಮಿತ್ತ ಮನೆಗೆ ಬೀಗ ಹಾಕಿಕೊಂಡು ಮೈಸೂರಿಗೆ ಹೋಗಿದ್ದು , ದಿನಾಂಕ 29-06-2022 ರಂದು ಮದ್ಯಾಹ್ನ 13-00 ಗಂಟೆ ಸಮಯದಲ್ಲಿ ಮನೆಯ ಕೆಲಸದವಳಾದ ಹೇಮಮ್ಮ ರವರು ಮನೆಯ ಬಾಗಿಲನ್ನು ಹೊಡೆದಿರುವ ಬಗ್ಗೆ ನನ್ನ ಸೊಸೆಗೆ ತಿಳಿಸಿದ್ದು ನಾವುಗಳು ಮನೆಯ ಬಳಿ ಹೋಗಿ ನೋಡಲಾಗಿ ಯಾರೋ ಕಳ್ಳರು ಮನೆಯ ಬಾಗಿಲು ತೆರೆದು  ಮನೆಯ ವಾಡ್ ರೂಫ್ ಗಳನ್ನು ಯಾವುದೋ ಆಯುಧದಿಂದ ಮೀಟಿ ಲಾಖ್ ಮುರಿದು 50.000/ರೂ ನಗದು ಹಣ ಹಾಗೂ ಚಿನ್ನದ ವಡವೆಗಳನ್ನು  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

 

ಇತ್ತೀಚಿನ ನವೀಕರಣ​ : 30-06-2022 06:02 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080