ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಕೊಪ್ಪ   ಪೊಲೀಸ್ ಠಾಣೆ,

ದಿನಾಂಕ 29-09-2021 ರಂದು 17-40   ಗಂಟೆ ಸಮಯದಲ್ಲಿ ನೇತಾಜಿನಗರದಲ್ಲಿ ಪಾಪಚ್ಚನ್  ಎಂಬುವವರು ಮನೆಯ ಮುಂಭಾಗ  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಸದರಿ ಆರೋಪಿಯನ್ನು  ವಶಕ್ಕೆ ಪಡೆದು ಆತನ ಬಳಿಯಿದ್ದ   90 ಎಂ.ಎಲ್ ನ ಹೈವರಸ್ಡ್ ಚೀರ್ಸ್ ವಿಸ್ಕಿಯ 80 ಮದ್ಯದ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು ಮದ್ಯದ ಅಂದಾಜು ಬೆಲೆ 2810/-  ರೂ ಹಾಗೂ ನಗದು ಹಣ 500/- ರೂ ನ್ನು  ಅಮಾನತ್ತುಪಡಿಸಿಕೊಂಡಿದ್ದು ಆರೋಪಿ ವಿರುದ್ದ ಕೊಪ್ಪ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಶ್ರೀನಾಥರೆಡ್ಡಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ  ಪ್ರಕರಣ.

ಸಖರಾಯಪಟ್ಟಣ  ಪೊಲೀಸ್ ಠಾಣೆ,

ದಿನಾಂಕ 29-09-2021 ರಂದು ರಾತ್ರಿ 08-15 ಗಂಟೆ ಸಮಯದಲ್ಲಿ ಬ್ಯಾಲದಾಳು ಗ್ರಾಮದ ಇಂದ್ರ ಎಂಬ ಹೆಂಗಸು    ಮನೆಯಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಸದರಿ ಆರೋಪಿತಳು ನಮ್ಮಗಳನ್ನು ನೋಡಿ ಓಡಿಹೋಗಿದ್ದು ಆಕೆಯು   ಬೀಳಿಸಿ ಹೋಗಿದ್ದ ಬ್ಯಾಗಿನಲ್ಲಿದ್ದ 90 ಎಂ.ಎಲ್.ನ ರಾಜಾವಿಸ್ಕಿಯ 42 ಮದ್ಯದ ಪೌಚ್ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು ಮದ್ಯದ ಅಂದಾಜು ಬೆಲೆ 1,470/-  ರೂ ಹಾಗೂ ನಗದು ಹಣ 150/- ರೂ ನ್ನು  ಅಮಾನತ್ತುಪಡಿಸಿಕೊಂಡಿದ್ದು ಆರೋಪಿತಳ ವಿರುದ್ದ ಸಖರಾಯಪಟ್ಟಣ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪ್ರೊ.ಡಿವೈ.ಎಸ್.ಪಿ. ಗಿರಮಲ್ಲ.ಹೆಚ್.ತಲಕಟ್ಟಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಕಳ್ಳತನ ಪ್ರಕರಣ.

ನಗರ ಪೊಲೀಸ್ ಠಾಣೆ.

ದಿನಾಂಕ 30-09-2021 ರಂದು ಮಲ್ಲೇಶಪ್ಪ ಬಿನ್ ನಂಜುಂಡಪ್ಪ, ಹೌಸಿಂಗ್ ಬೋರ್ಡ್ ವಾಸಿರವರು ನೀಡಿದ ದೂರಿನ ಸಾರಾಂಶವೆನೆಂದರೆ , ದಿನಾಂಕ 29-09-2021 ರಂದು ಬೆಳಗ್ಗೆ 9-15 ಗಂಟೆ ಸಮಯದಲ್ಲಿ ಮನೆಗೆ ಬೀಗ ಹಾಕಿಕೊಂಡು ಹೊರಗಡೆ ಹೋಗಿದ್ದು, ಬೆಳಗ್ಗೆ 11-30 ಗಂಟೆ ಸಮಯದಲ್ಲಿ ಯಾರೋ ಒಬ್ಬ ವ್ಯಕ್ತಿ ತಲೆಗೆ ಹೆಲ್ಮೆಟ್ ಧರಿಸಿ ಮನೆಯ ಒಳಗೆ ಪ್ರವೇಶಿಸಿ ಹೊರಗೆ ಹೋಗಿರುವುದನ್ನು ನಮ್ಮ ಎದುರು ಮನೆಯ ವಾಸಿ ಶ್ರೀಮತಿ, ಪೂಜಾರವರು  ನೋಡಿದ್ದು, ನಮ್ಮ ಮಗನು ಪೂಜರವರ ಮನೆಗೆ ಹೋದಾಗ ನಿಮ್ಮ ಮನೆಗೆ ಯಾರಾದರೂ ನೆಂಟರು ಬಂದಿದ್ದರ ಎಂದು ಕೇಳಿದ್ದು , ಆಗ ನನ್ನ ಹೆಂಡತಿ ಗಾಬರಿಯಿಂದ ಮನೆಯ ಬೀರುವನ್ನು ತೆಗೆದು ನೋಡಿದಾಗ ಬೀರುವಿನಲ್ಲಿದ್ದ ಒಟ್ಟು 42 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಯಾರೋ ಕಳ್ಳನು ಕಳ್ಳತನ ಮಾಡಿಕೊಂಡು ಹೋಗಿದ್ದು, ಇದರ ಅಂದಾಜು ಬೆಲೆ 1,45.000/0 ರೂಗಳಾಗುತ್ತೆ, ಕಳ್ಳತನವಾಗಿರುವ ಚಿನ್ನದ ಆಭರಣಗಳನ್ನು ಹಾಗೂ ಕಳ್ಳನನ್ನು ಪತ್ತೆ ಮಾಡಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ನಗರ   ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 30-09-2021 08:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080