ಅಭಿಪ್ರಾಯ / ಸಲಹೆಗಳು

ಜಿಲ್ಲಾ ಪೊಲೀಸ್ ಇಲಾಖಾ ವತಿಯಿಂದ ದಿನಾಂಕ:-31/10/2021 ರಂದು ದಿವಂಗತ ಸರ್ದಾರ್  ವಲ್ಲಭಭಾಯಿ ಪಟೇಲ್ ರವರ ಜನ್ಮ ದಿನದ ಸ್ಮರಣೆಗಾಗಿ ಪ್ರತಿ ವರ್ಷದಂತೆ ಅಕ್ಟೋಬರ್ 31 ರಂದು ರಾಷ್ಟ್ರೀಯ ಏಕತಾ ದಿವಸ ವನ್ನಾಗಿ ಆಚರಿಸಿ ಪ್ರತಿಜ್ಞೆಯನ್ನು ಸ್ವೀಕರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಮಧ್ಯಾಹ್ನ 04.00 ಗಂಟೆಗೆ ನಗರದ ಹನುಮಂತಪ್ಪ ಸರ್ಕಲ್ನಿಂದ ಪ್ರಾರಂಭಗೊಂಡು ಜಿಲ್ಲಾ ಪೊಲೀಸ್ ಕಛೇರಿಯವರೆಗೆ   “ ಮಾರ್ಚ್ ಪಾಸ್ಟ್ “  ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತೆ. ನಂತರ ಜಿಲ್ಲಾ ಪೊಲೀಸ್ ಕಛೇರಿಯ ಮುಂಭಾಗದ ವೃತ್ತದಲ್ಲಿ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞೆಯನ್ನು ಸ್ವೀಕರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಪತ್ರಿಕಾ ವರದಿಗಾರರು ಮತ್ತು ಮಾದ್ಯಮ ಮಿತ್ರರು ಅಗಮಿಸಿ ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕಾಗಿ ಎಲ್ಲರನ್ನೂ  ಆಹ್ವಾನಿಸಿರುತ್ತೆ.

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ

ತರೀಕೆರೆ ಪೊಲೀಸ್ ಠಾಣೆ

ದಿನಾಂಕ:30/10/2021 ರಂದು ಮದ್ಯಾಹ್ನ ತರೀಕೆರೆ  ಠಾಣಾ ವ್ಯಾಪ್ತಿಯ ಚೌಡೇಶ್ವರಿ ಕಾಲೋನಿ  ಬಳಿ ದೇವೆಂದ್ರ ಕುಮಾರ್  ಬಿನ್ ದಶರಥರಾವ್ ತಮ್ಮ ಕ್ಯಾಂಟಿನ್ ಮುಂಭಾಗದಲ್ಲಿ  ಅಕ್ರಮವಾಗಿ ಮಟ್ಕಾ ಜೂಜಾಟ ಆಡುತ್ತಿದ್ದು ದೇವೆಂದ್ರ ಕುಮಾರ್  ನನ್ನು ವಶಕ್ಕೆ ಪಡೆದು ಆರೋಪಿ ಹೊಂದಿದ್ದ ಮಟ್ಕಾ ಚೀಟಿ ಸಾರ್ವಜನಿಕರಿಂದ ಸಂಗ್ರಹಿಸಿದ 1840/- ರೂ ನಗದು ಹಣ ಮತ್ತು ಒಂದು ಬಾಲ್ ಪೆನ್ನು ಗಳನ್ನು  ಅಮಾನತ್ತುಪಡಿಸಿಕೊಂಡು ಬಂದು ಆರೋಪಿತನ ವಿರುದ್ದ ತರೀಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತೆ. ಈ ಕಾರ್ಯಚರಣೆಯಲ್ಲಿ ಪಿ.ಐ. ರಾಘವೇಂದ್ರ  ಹಾಗೂ ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ವರದಕ್ಷಿಣೆ ಕಿರುಕುಳ ಸಾವು ಪ್ರಕರಣ

ಮಹಿಳಾ ಪೊಲೀಸ್ ಠಾಣೆ

ದಿನಾಂಕ 30/10/2021 ರಂದು ಚಿಕ್ಕಮಗಳೂರು ಕರ್ತಿಕೆರೆ ವಾಸಿ ಪಿರ್ಯಾದಿ ಸೋಮಶೇಖರ್ ಶೆಟ್ಟಿ ಬಿನ್ ಲೇಟ್ ವೆಂಕಟಶೆಟ್ಟಿ  ರವರು ನೀಡಿದ ದೂರಿನಲ್ಲಿ ಪಿರ್ಯಾದಿ ರವರ ಮಗಳೂ ಪೂಜಾಳು ಈಗ್ಗೆ 3 ವರ್ಷಗಳ ಹಿಂದೆ ಸಂತೋಷ್ ನನ್ನು ಪ್ರೀತಿಸಿ ಮದುವೆ ಅಗಿದ್ದು, ನಂತರ ನಾವು ಮಗಳು ಚೆನ್ನಾಗಿರಲೆಂದು ಮೂರು -ನಾಲ್ಕು ಬಾರಿ ಹಣ ಮತ್ತು ಚಿನ್ನಾಭರಣಗಳನ್ನು ಕೊಟ್ಟಿದ್ದು, ಇದನ್ನು ಸಂತೋಷ ದುರುಪಯೋಗ ಮಾಡಿಕೊಂಡು ಪದೇ ಪದೇ ಹಣಕ್ಕಾಗಿ ಪೀಡಿಸುತ್ತಿದ್ದನು. ಚಿಕ್ಕಮಗಳೂರು ವಿಜಯನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ಇತ್ತಿಚಿಗೆನನ್ನ ಮಗಳ ಗಂಡ ಸಂತೋಷ ವರದಕ್ಷಿಣೆಗೆ ತರುವಂತೆ  ಕಿರುಕುಳ ಕೊಟ್ಟಿದ್ದರಿಂದಲೇ ನನ್ನ ಮಗಳು ದಿನಾಂಕ:29/10/2021 ರಂದು ನೇಣು ಹಾಕಿಕೊಂಡು ಅತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದು ಸಂತೋಷನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಆರೋಪಿತನ ವಿರುದ್ದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಇಸ್ಫೀಟ್ ಜೂಜಾಟ  ಪ್ರಕರಣ

ನ.ರಾ.ಪುರ ಪೊಲೀಸ್ ಠಾಣೆ

ದಿನಾಂಕ:29/10/2021 ರಂದು ಎನ್. ಅರ್ ಪುರ ಠಾಣಾ ವ್ಯಾಪ್ತಿಯ ಆಳಲಗೆರೆ ಗ್ರಾಮದ ಸರ್ಕಾರಿ ಕಾಡಿನಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟ ಆಡುತ್ತಿದ್ದ 8 ಜನ  ಆರೋಫಿತರನ್ನು ವಶಕ್ಕೆ ಪಡೆದು ಆರೋಪಿ ಇಸ್ಫಿಟ್ ಆಡಲು ಬಳಿಸಿದ  55,490/- ರೂ ನಗದು ಹಣ , ಒಂದು ಟವೆಲ್, 3 ಅರ್ದ ಉರಿದ ಕ್ಯಾಂಡಲ್ ಗಳು , 52 ಇಸ್ಪೀಟ್ ಎಲೆಗಳನ್ನು ಅಮಾನತ್ತುಪಡಿಸಿಕೊಂಡು ಬಂದು ಆರೋಪಿತರ ವಿರುದ್ದ ನ.ರಾ.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.  ಈ ಕಾರ್ಯಚರಣೆಯಲ್ಲಿ ಪಿಎಸ್ಐ ದಿಲೀಪ್ ಕುಮಾರ್ .ವಿ.ಟಿ.  ಹಾಗೂ ಸಿಬ್ಬಂದಿಗಳು ಪಾಲೊಂಡಿರುತ್ತಾರೆ.

ಕಳ್ಳತನಕ್ಕೆ ಪ್ರಯತ್ನ  ಪ್ರಕರಣ

ಜಯಪುರ ಪೊಲೀಸ್ ಠಾಣೆ

ದಿನಾಂಕ 30/10/2021 ರಂದು ಪಿರ್ಯಾದಿ ರಾಜ ಬಿನ್ ರಾಮಕೃಷ್ಣ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ಶಶಿಧರ ರವರ ದಿನಸಿ ಅಂಗಡಿ ನಡೆಸುತ್ತಿದ್ದು ದಿನಾಂಕ 29/10/2021 ರಾತ್ರಿ 8-00 ಗಂಟೆಗೆ ಅಂಗಡಿ ಬಾಗಿಲನ್ನು ಹಾಕಿ ಮನೆಗೆ ಹೋಗಿದ್ದು ನಂತರ ರಾತ್ರಿ 8.45 ಗಂಟೆ ಸಮಯದಲ್ಲಿ ಪಿರ್ಯಾದಿ ಜಯಪುರದಿಂದ ಮನೆಗೆ ಹೋಗುವಾಗ ಮಾವನವರ ಅಂಗಡಿ ಬಾಗಿಲು ತೆರೆದಿದ್ದನ್ನು ಕಂಡು ಹೋಗಿ ಹತ್ತಿರ ನೋಡಲಾಗಿ ಆರೋಪಿತರಾದ ಕೆಎ-18-ಇಹೆಚ್-3697 ರ ಬೈಕಿನಲ್ಲಿ  ಬಂದ ಇಬ್ಬರು ಅಂಗಡಿ ಬಾಗಿಲನ್ನು ತಳ್ಳಿ ಒಳ ಪ್ರವೇಶಿಸಿ ಕ::ತನ ಮಾಡಲು ಪ್ರಯತ್ನಿಸಿದ್ದು ಪಿರ್ಯಾದಿ ಯವರನ್ನು ಕಂಡ  ಆರೋಪಿತರು ಓಡಲು ಪ್ರಯತ್ನಿಸಿದ್ದು ಪಿರ್ಯಾದಿ ಅಲ್ಲಿಂದ ಸ್ಥಳಿಯರಿಂದ  ಸಹಾಯ ಪಡೆದು ಆರೋಪಿತರನ್ನು ಹಿಡಿದು ಠಾಣೆಗೆ ಬಂದು ಆರೋಪಿತರಾದ ಸುರಕ್ಷಾ ಮತ್ತು ಸಂದೀಪ ರವರ  ಕ್ರಮ ಕೈಗೊಳ್ಳು ನೀಡಿದ ದೂರಿನ ಮೇರೆಗೆ ಆರೋಪಿತರ ವಿರುದ್ದ ಜಯಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 30-10-2021 06:54 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080