ಅಭಿಪ್ರಾಯ / ಸಲಹೆಗಳು

ಅಕ್ರಮ ಇಸ್ಪೀಟ್ ಜೂಜಾಟ ಪ್ರಕರಣ.

ಸಿಂಗಟಗೆರೆ  ಪೊಲೀಸ್ ಠಾಣೆ.

ದಿನಾಂಕ:30-11-2021 ರಂದು ಸಿಂಗಟಗೆರೆ  ಠಾಣಾ ಸರಹದ್ದಿನ  ಮಲ್ಲಾಪುರದಿಂದ ವಿ ಯರದಕೆರೆ ಗೆ ಹೋಗುವ ರಸ್ತೆಯಲ್ಲಿ ಜಾಲಿ ಗಿಡದ ಹತ್ತಿರ ಬಂಡಿ ಜಾಡಿನಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಇಸ್ಪೀಟ್ ಜೂಜಾಟವನ್ನು ಆಡುತ್ತಿದ್ದ ಆರೋಫಿತರಾದ 1. ವಿ.ಟಿ. ಹೇಮಂತ್ ಕುಮಾರ್ ಬಿನ್ ತಿಮ್ಮಾಬೋವಿ  2. ಎಂ.ಎನ್. ಕುಮಾರಪ್ಪ ಬಿನ್ ಲೇಟ್ ನಿಂಗಪ್ಪ 3. ಬಿ. ಚಂದ್ರಶೇಖರ ಬಿನ್ ಬಸಪ್ಪ 4. ಎಂ ನಾಗರಾಜಪ್ಪ ಬಿನ್ ಲೇಟ್ ಮರಳುಸಿದ್ದಪ್ಪ 5.  ಧರ್ಮಪ್ಪ ಎನ್.ಬಿನ್ ರಂಗಪ್ಪ 6. ಎಂ.ಸಿ. ಗೋವಿಂದಪ್ಪ ಬಿನ್ ಲೇಟ್ ಚನ್ನಕೇಶವಯ್ಯ 7. ಮರುಳಸಿದ್ದಪ್ಪ ಬಿನ್ ಲೇಟ್ ಕಲ್ಲಪ್ಪ ರವರನ್ನು ವಶಕ್ಕೆ ಪಡೆದು ಆರೋಪಿತರ ಬಳಿಯಿದ್ದ 6750/- ರೂ ನಗದು ಹಣ 52 ಇಸ್ಪೀಟ್ ಎಲೆಗಳು  ಒಂದು ಪ್ಲಾಸ್ಟಿಕ್ ಟಾರ್ಪಲ್ ನ್ನು ವಶಕ್ಕೆ ಪಡೆದು, ಆರೋಪಿ ವಿರುದ್ದ ಸಿಂಗಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಸಿಂಗಟಗೆರೆ ಪಿ.ಎಸ್.ಐ. ಶ್ರೀಮತಿ ಲೀಲಾವತಿ   ಹಾಗೂ ಸಿಬ್ಬಂದಿಯಾದ ಗೋವಿಂದಸ್ವಾಮಿ ಡಿ.ಎಸ್., ಹರೀಶ್,ಎ.ಯು., ಧನಪಾಲನಾಯ್ಕ, ಸಂತೋಷಕುಮಾರ್  ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಬಾಳೂರು  ಪೊಲೀಸ್ ಠಾಣೆ.

ದಿನಾಂಕ:29-11-2021 ರಂದು ಬಾಳೂರು ಠಾಣಾ ಸರಹದ್ದಿನ  ಸುಂಕಸಾಲೆ  ಗ್ರಾಮದಲ್ಲಿ ಡಿ.ಪಿ. ಸ್ವಾಮಿ ಬಿನ್ ಪದ್ಮೇಗೌಡ ರವರ ದಿನಸಿ ಅಂಗಡಿಯ ಮುಂಭಾಗದಲ್ಲಿ  ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ, ಆರೋಫಿಯು ದಾಳಿ ವೇಳೆಯಲ್ಲಿ ತನ್ನ ಕೈಯಲ್ಲಿದ್ದ ಮದ್ಯದ ಚೀಲವನ್ನು  ಬಿಸಾಡಿ ಓಡಿ ಹೋಗಿದ್ದು ಅದರಲ್ಲಿ 180 ಎಂ.ಎಲ್. ನ 32 ಮತ್ತು  90 ಎಂ.ಎಲ್. 81 ಟೆಟ್ರಾಪ್ಯಾಕ್ ಮದ್ಯವನ್ನು ವಶಕ್ಕೆ ಪಡೆದು, ಮದ್ಯದ ಅಂದಾಜು ಬೆಲೆ 5756/-ರೂ ಆಗಿದ್ದು, ಆರೋಪಿ ವಿರುದ್ದ ಬಾಳೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆ ವೃತ್ತ ಸಿ.ಪಿ.ಐ.ರವರಾದ ಶ್ರೀ ಜೆ.ಸಿ. ಸೋಮಶೇಖರ ಹಾಗೂ ಸಿಬ್ಬಂದಿಯಾದ ಗೀರೀಶ್  ಹೇಮಂತ್ ಬಿ.ಸಿ. ಪ್ರದೀಪ್  ರವರು ಪಾಲ್ಗೊಂಡಿರುತ್ತಾರೆ.

ಅಕ್ರಮ  ಮಟ್ಕಾ  ಜೂಜಾಟ ಪ್ರಕರಣ

ನಗರ  ಪೊಲೀಸ್ ಠಾಣೆ.

ದಿನಾಂಕ:29-11-2021 ರಂದು ನಗರ ಠಾಣಾ ಸರಹದ್ದಿನ  ಚಿಕ್ಕಮಗಳೂರು ನೇಕಾರರ ಬೀದಿಯಲ್ಲಿರುವ ವಾಸವಿ ಕೋ ಆಪರೇಟಿವ್ ಬ್ಯಾಂಕ್ ಹತ್ತಿರ  ಶ್ರೀಧರ ಬಿನ್ ನಕ್ಕುರ ರವರು ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಮಟ್ಕಾ ಜೂಜಾಟವನ್ನು ಆಡಿಸುತ್ತಿದ್ದು,  ಆರೋಫಿಯನ್ನು ವಶಕ್ಕೆ ಪಡೆದು ಆರೋಪಿ ಬಳಿಯಿದ್ದ 1650/- ರೂ ನಗದು ಹಣ ಒಂದು ಮಟ್ಕಾ ಚೀಟಿ ಮತ್ತು ಬಾಲ್ ಪೆನ್ ನ್ನು ವಶಕ್ಕೆ ಪಡೆದು, ಆರೋಪಿ ವಿರುದ್ದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ನಗರ ಪಿ.ಎಸ್.ಐ. ಶ್ರೀ ದೇವರಾಜ್ ಎಸ್,ಬಿರಾದಾರ್  ಹಾಗೂ ಸಿಬ್ಬಂದಿಯಾದ ಪ್ರವೀಣ್ ಯು.ಪಿ. ಸುಮ ಎಂ.ಹೆಚ್. ನವೀನ್ ರವರು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಕಡೂರು ಪೊಲೀಸ್ ಠಾಣೆ

 ದಿನಾಂಕ:29-11-2021 ರಂದು ಲಕ್ಮೀಪುರ ವಾಸಿ ಪಿರ್ಯಾದಿ ರವಿ ಬಿನ್ ಯಲ್ಲಪ್ಪ  ಎಂಬುವರು ನೀಡಿದ ದೂರಿನಲ್ಲಿ ದಿನಾಂಕ:27-11-2021ರಂದು ಬೆಳಿಗ್ಗೆ ಮನೆಯಲ್ಲಿದ್ದ  ತನ್ನ ತಂದೆ ಯಲ್ಲಪ್ಪ ಹುಷಾರಿಲ್ಲದೆ ಇದ್ದು ಕಡೂರಿಗೆ ಅಸ್ಪತ್ರೆಗೆ ಹೋಗಿ ಬರುವುದಾಗಿ ಮನೆಯಿಂದ ಹೋದವರು ವಾಪಾಸ್ಸು ಬಂದು ಬಾರದೇ ಇದ್ದು ಈವರೆಗೂ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದರೂ ತನ್ನ ತಂದೆ ಪತ್ತೆಯಾಗಿಲ್ಲವೆಂದು,  ಕಾಣೆಯಾಗಿರುವ ತನ್ನ ತಂದೆ ಹೆಸರು ಯಲ್ಲಪ್ಪ, 45 ವರ್ಷ, ಎತ್ತರ - 5.5 ಅಡಿ, ಕಪ್ಪು ಮೈ ಬಣ್ಣ, ತೆಲಗು, ಕನ್ನಡ, ಭಾಷೆ ಮಾತಾನಾಡುತ್ತಾರೆ. ಕಾಣೆಯಾಗಿರುವ ತನ್ನ ತಂದೆಯವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಕಡೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಗ್ರಾಮಾಂತರ ಪೊಲೀಸ್ ಠಾಣೆ

 ದಿನಾಂಕ:30-11-2021 ರಂದು ನರಸೀಪುರ ವಾಸಿ  ಪಿರ್ಯಾದಿ ಶ್ರೀಮತಿ ಸುಮಲತಾ ಕೊಂ ಎನ್.ಎಸ್. ಚೇತನ ಕುಮಾರ್ ಎಂಬುವರು ನೀಡಿದ ದೂರಿನಲ್ಲಿ ದಿನಾಂಕ:01/10/2021 ರಂದು ಪಿರ್ಯಾಧಿಯ ಗಂಡ ಚಿಕ್ಕಮಗಳೂರಿಗೆ ಹೋಗಿದ್ದು ಮನೆಯಿಂದ ಹೋದವರು ವಾಪಾಸ್ಸು ಬಂದು ಬಾರದೇ ಇದ್ದು ಈವರೆಗೂ ಎಲ್ಲಾ ಕಡೆಗಳಲ್ಲಿಯೂ ಹುಡುಕಾಡಿದರೂ ತನ್ನ ಗಂಡ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಗಂಡ ಹೆಸರು ಚೇತನ ಕುಮಾರ್ ಎನ್.ಎಸ್.  ಎತ್ತರ-5.6 ಅಡಿ, ದೃಡಕಾಯ ಶರೀರ  ಕಪ್ಪು ಬಣ್ಣದ ಜರ್ಕಿ ಮತ್ತು ಜಿನ್ಸ್ ಪ್ಯಾಂಟ್ ಧರಿಸಿರುತ್ತಾರೆ.  ಕನ್ನಡ, ಭಾಷೆ ಮಾತಾನಾಡುತ್ತಾರೆ. ಗಂಡನನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 30-11-2021 08:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080