ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ 30-12-2021 ರಂದು ಪಿರ್ಯಾದುದಾರರಾದ ಲಕ್ಷ್ಣಣಶೆಟ್ಟಿ,ಕಡವಂತಿ ಗ್ರಾಮವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ ನನಗೆ ಎರಡು ಜನ ಗಂಡು  ಮಕ್ಕಳಿದ್ದು , ಮೊದಲನೇ ಮಗನಾದ ದೀಕ್ಷಿತ್ , 26 ವರ್ಷ ಈತನು  ಐಬಿಎಕ್ಸ್ ತಂತಿ ಬೇಲಿ ಹಾಕುವ ಕೆಲಸ ಮಾಡಿಕೊಂಡಿದ್ದು , ಈಗ್ಗೆ 15 ದಿನಗಳ ಹಿಂದೆ ಮನೆಗೆ ಬಂದಿದ್ದವನು ದಿನಾಂಕ:18-12-2021 ರಂದು ತಾಯಿಯ ಬಳಿ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಮೂರು ದಿನವಾದರೂ ಮನೆಗ ವಾಪಾಸ್ ಬಾರದೇ ಇದ್ದುದ್ದರಿಂದ ಆತನ ಮೊಬೈಲ್ ಗೆ ಕರೆ ಮಾಡಲಾಗಿ ರಿಸೀವ್ ಮಾಡದೆ ಕಟ್ ಮಾಡಿರುತ್ತಾನೆ. ಈವರೆವಿಗೂ ಎಲ್ಲಿರುವನೆಂದು ತಿಳಿದಿರುವುದಿಲ್ಲ. ಆದ್ದರಿಂದ ಕಾಣೆಯಾಗಿರುವ ನನ್ನ ಮಗನಾದ ದೀಕ್ಷಿತ್ ನನ್ನು ಪ್ತತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ  ಬಾಳೆಹೊನ್ನೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಮರಣಾಂತಿಕ ರಸ್ತೆ ಅಪಘಾತ

ಅಜ್ಜಂಪುರ  ಪೊಲೀಸ್ ಠಾಣೆ.

ದಿನಾಂಕ 29-12-2021 ರಂದು ಪಿರ್ಯಾದಿ ಹೇಮಂತ್ ಕುಮಾರ್ ರವರು ನೀಡಿದ ದೂರಿನಲ್ಲಿ ದಿನಾಂಕ 29-12-2021ರಂದು ಪಿರ್ಯಾದಿಯವರು ತಮ್ಮ ಬಾಬು ರವರು ಸ್ನೇಹಿತರಾದ ಸೇಠುರವರೊಂದಿಗೆ ಗಾರೆ ಕೆಲಸ ಮುಗಿಸಿಕೊಂಡು ಬೈಕ್ ಕೆಎ-18 ಇಬಿ- 9007 ರಲ್ಲಿ ಬೀರೂರಿಗೆ ಹೊರಟಿದ್ದು ವೀರಾಪುರ ಹೊಸೂರು ಗೇಟ್ ಬಳಿ ರಾಜ್ಯಹೆದ್ದಾರಿ 76 ರಲ್ಲಿ ಹೋಗುತ್ತಿರುವಾಗ ಬೀರೂರು ಕಡೆಯಿಂದ ಬಂದ ಕೆಎ-14 ಜಡ್-3880 ಕಾರಿನ ಚಾಲಕ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಹಿಂದಿನಿಂದ ಪಿರ್ಯಾದಿಯವರ ಬೈಕಿಗೆ  ಡಿಕ್ಕಿ ಹೊಡೆಸಿದ ಪರಿಣಾಮ ಬೈಕಿನಲ್ಲಿ ನನ್ನ  ತಮ್ಮ ಬಾಬು ಹಾಗೂ ಆತನ ಸ್ನೇಹಿತನಾದ ಸೇಠುರವರಿಗೆ ಹೊಟ್ಟೆ ಹಾಗೂ ಎಡಗಾಲಿಗೆ ಪೆಟ್ಟು  ಬಿದ್ದು ಸ್ಥಳದಲ್ಲಿಯೇ  ಮೃತಪಟ್ಟಿದ್ದು, ಕಾರಿನ ಚಾಲಕನ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:29/12/2021 ರಂದು ಪಿರ್ಯಾದಿ ಚೆಲುವರಾಜ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ತಮ್ಮ ಅಯ್ಯಪ್ಪ ಇವರು ದಿನಾಂಕ:29/12/2021 ಸಂಜೆ ಮನೆಗೆ ರೆಷನ್ ತರಲು ಕೆಎ-66-ಜೆ-5870 ಟಿವಿಎಸ್ ಬೈಕ್  ನಲ್ಲಿ ಯಲುಗೆರೆ ಕೆರೆಕೋಡಿ ಹತ್ತಿರ ಟಾರ್ ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ  ಕೆಎ-66-1271 ರ ಟ್ಯಾಕ್ಟರ್ ಚಾಲಕ ಚಿಕ್ಕತ್ತೂರು ಕಡೆಯಿಂದ ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಟಿ.ವಿಎಸ್. ಬೈಕ್ ಗೆ ಡಿಕಿ ಹೊಡೆಸಿದ್ದು  ಪಿರ್ಯಾದಿ ತಮ್ಮನಿಗೆ ತೀವ್ರತರವಾದ ಗಾಯವಾಗಿ ಮೃತಪಟ್ಟಿದ್ದು ಟ್ಯಾಕ್ಟರ್ ಚಾಲಕ ನಿಲ್ಲದೆ ಹೋಗಿದ್ದು ಟ್ಯಾಕ್ಟರ್ ಚಾಲಕನ ಮೇಲೆ ಕಾನೂನು ಕ್ರಮಕೈಗೊಳ್ಳಲು ಕೋರಿ ನೀಡಿದ ದೂರಿನ ಮೇರೆಗೆ ತರೀಕೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಕಳ್ಳತನ ಪ್ರಕರಣ

ಮೂಡಿಗೆರೆ ಪೊಲೀಸ್ ಠಾಣೆ.

ದಿನಾಂಕ;30-12-201 ರಂದು ಪಿರ್ಯಾದಿ ಶ್ರೀಮತಿ ಭಾಗ್ಯ ಜಿ.ಎನ್. ಕೊಂ ವಿ.ಪಿ. ನಾರಾಯಣ ಕುರುಮಕ್ಕಿ ವಾಸಿ ಇವರು ನೀಡಿದ ದೂರಿನಲ್ಲಿ ದಿನಾಂಕ:29-12-2021 ರಂದು ಪಿರ್ಯಾದಿಯವರಿಗೆ ಪರಿಚಯವಿರುವ ಸಣ್ಣಣ್ಣ ಬಿನ್ ಹೆಬ್ಬಣ್ಣ ವಾಸ ಕೆ.ಬಿ. ಹಾಳ್ ಇವರು ಪಿರ್ಯಾದಿಯವರ ಮನೆಗೆ ವ್ಯಾಪಾರ ಮಾಡಲು ಬಂದಿದ್ದು, ಪಿರ್ಯಾದಿ ಮನೆಯ ಟೇಬಲ್ ಮೇಲೆ ಇಟ್ಟಿದ್ದ ಒಡವೆಬಾಕ್ಸ್ ನ್ನು ಪಿರ್ಯಾದಿ ಅಡುಗೆ ಮನೆಗೆ ಹೋದಾಗ ಕಳ್ಳತನ ಮಾಡಿಕೊಂಡು ವ್ಯಾಪಾರಕ್ಕೆ ತಂದಿದ್ದ ಚೀಲಗಳನ್ನು ಬಿಟ್ಟು ಹೋಗಿದ್ದು ಅರೋಫಿತನು ಸುಮಾರು 1,10,000/- ರೂ  ಬೆಲೆಯ ವಡೆವೆಗಳನ್ನು ಹಾಗೂ 4800/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡಿ ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಮೂಡಿಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಇತ್ತೀಚಿನ ನವೀಕರಣ​ : 30-12-2021 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080