ಅಭಿಪ್ರಾಯ / ಸಲಹೆಗಳು

ಸೈಬರ್ ಪ್ರಕರಣ.

ಸಿ.ಇ.ಎನ್. ಪೊಲೀಸ್ ಠಾಣೆ.

ದಿನಾಂಕ 31-08-2021 ರಂದು ಮನೋಜ್ ಬಿನ್ ಸುರೇಶ್, ಹಾದಿಕೆರೆ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 27-08-2021 ರಂದು ನನ್ನ ಮೊಬೈಲ್ ನಂಬರ್ ಗೆ ಅಮ್ ಜಾನ್ ಪ್ಲಾಟ್ ಫಾರಂ ಎಂಬುದಾಗಿ ಮೆಸೇಜ್ ಬಂದಿದ್ದು ವರ್ಕ್ ಪ್ರಂ ಹೋಮ್ ಬಗ್ಗೆ ಆಫರ್ ನೀಡಿದ್ದು ಜಾಬ್ ಗೆ ಮೊದಲು ಇನ್ ವೆಸ್ಟ್ ಮಾಡಬೇಕೆಂದು ತಿಳಿಸಿದ್ದು ನಾನು ನನ್ನ ಅಕೌಂಟ್ ನಂಬರ್ ನಿಂದ 1.06.790 /- ರೂಗಳನ್ನು ವರ್ಗಾವಣೆ ಮಾಡಿಸಿಕೊಂಡಿದ್ದು , ವರ್ಕ್ ಫ್ರಂ ಹೋಮ್  ಜಾಬ್ ನೀಡುವುದಾಗಿ  ನಂಬಿಸಿ ಒಟ್ಟು 1.06.790 /-ರೂಗಳನ್ನು  ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಸಿ.ಇ.ಎನ್ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಪಘಾತ ಪ್ರಕರಣ.

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ 31-08-2021 ರಂದು ಲೋಕೇಶ್, ಕೆ.ಬಿ.ಹಾಳ್ ವಾಸಿರವರು ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ 30-08-2021 ರಂದು ತನ್ನ ಬಾಬ್ತು ಕೆಎ- 13 ಡಿ-5778 ರಲ್ಲಿ ತೂಫನ್ ವಾಹನದಲ್ಲಿ 6-7 ಜನರನ್ನು ಕೂರಿಸಿಕೊಂಡು ಬಂದಿದ್ದು ಸಂಜೆ 04-00 ಗಂಟೆ ಸಮಯದಲ್ಲಿ ಕಬ್ಬಿಗೆರೆ ಬಸ್ ನಿಲ್ದಾಣದ ಬಳಿ ವಾಹನವನ್ನು ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿ ಚಿಲ್ಲರೆ ನೀಡುತ್ತಿರುವಾಗ ಮಾಗಡಿ ಹ್ಯಾಂಡ್ ಪೋಸ್ಟ್ ಕಡೆಯಿಂದ ಬಂದ ಕೆಎ-18 ಇಎಫ್- 7836 ಬೈಕಿನ ಚಾಲಕ ಬೈಕನ್ನು ಅತಿವೇಗ  ಹಾಗೂ ಅಜಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ತೂಫನ್ ವಾಹನಕ್ಕೆ ಡಿಕಿ ಹೊಡೆಸಿದ ಪರಿಣಾಮ ಬೈಕ್ ಚಾಲಕನ ಮುಖಕ್ಕೆ ಹಾಗೂ ಮೈಕೈಗೆ ಪೆಟ್ಟಾಗಿದ್ದು ಬೈಕ್ ಚಾಲಕ ಧರ್ಮಯ್ಯರವರ ವಿರುದ್ದ ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ  ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 31-08-2021 06:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080