ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ .

ಶೃಂಗೇರಿ ಪೊಲೀಸ್ ಠಾಣೆ.

 ದಿನಾಂಕ 31-01-2022 ರಂದು ಪಿರ್ಯಾಧಿ ರಾಜಶೇಖರ್  ರವರು ನೀಡಿದ ದೂರಿನಲ್ಲಿ ದಿನಾಂಕ:31-01-2022 ರಂದು ಶೃಂಗೇರಿಯ ಬಾರತೀ ಬೀದಿಯಲ್ಲಿ  ಕೆಎ-18-ಪಿ 5091 ರ ಕಾರಿನಲ್ಲಿ ಹೋಗುತ್ತಿರುವಾಗ ಕೆಎ-20- ಎಂಬಿ 4175 ರ ಕಾರು ಚಾಲಕ ಕಾರನ್ನು ಅತೀವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ನನ್ನ ಕಾರಿಗೆ ಅಪಘಾತಪಡಿಸಿ ನಂತರ ಕೆಎ-18 ಇ-7776 ಹಿರೋ ಹೊಂಡಾ ಬೈಕಿಗೆ ಡಿಕ್ಕಿ ಹೊಡೆಸಿದ್ದು ಜಿಎ-08 ಡಬ್ಲ್ಯೂ1892 ಸ್ಕೂಟಿ ಮತ್ತು ಕೆಎ-ಇಸಿ 9741 ಟಿ.ವಿ.ಎಸ್. ಬೈಕಿಗೆ ಅಪಘಾತ ಉಂಟು ಮಾಡಿದ್ದು  ಬೈಕ್ ಚಾಲಕ ನಾಗೇಶ್ ಹೆಬ್ಬಿಗೆ ರವರಿಗೆ ತೀವ್ರ ಪೆಟ್ಟಾಗಿದ್ದು  ಮೃತಪಟ್ಟಿರುವುದಾಗಿ  ತಿಳಿಸಿದ್ದು, ಅಪಘಾತಕ್ಕೆ ಕಾರಣನಾದ  ಕಾರು ಚಾಲಕ ಹೆಚ್.ಎಸ್. ವಿಶ್ವನಾಥರಾವ್ ವಿರುದ್ದ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೆರೆಗೆ ಶೃಂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

ಕಳಸ  ಪೊಲೀಸ್ ಠಾಣೆ.

ದಿನಾಂಕ:30-01-2022 ರಂದು ಕಳಸ ಠಾಣಾ ಸರಹದ್ದಿನ ಹೆಮ್ಮಕ್ಕಿ ಕೊಟೆಮನೆ ಇಡಕಿಣಿ ವಾಸಿ ಸಂದೀಪ್ ಬಿನ್ ವೀರಪ್ಪಗೌಡ ಎಂಬುವನು ಮನೆಯಲ್ಲಿ ಅಕ್ರಮವಾಗಿ ಮದ್ಯವನ್ನು ಸಂಗ್ರಹಿಸಿಕೊಟ್ಟುಕೊಂಡು ಸಾರ್ವಜನಿಕರಿಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಆರೋಪಿತನನ್ನು ವಶಕ್ಕೆ ಪಡೆದು ಅರೋಪಿತನು ಅಕ್ರಮವಾಗಿ ಹೊಂದಿದ್ದ 90 ಎಂ.ಎಲ್. ನ 29 ಟೆಟ್ರಾಪ್ಯಾಕ್ ಮದ್ಯವನ್ನು ಅಂದಾಜು ಬೆಲೆ /- ರೂ ಅಗಿದ್ದು, ಮದ್ಯವನ್ನು ಅಮಾನತ್ತುಪಡಿಸಿಕೊಂಡು, ಬಂದು ಅರೋಫಿತನ ವಿರುದ್ದ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಚರಣೆಯಲ್ಲಿ ಪಿ.ಎಸ್.ಐ. ಹರ್ಷವರ್ಧನ್  ಮತ್ತು  ಸಿಬ್ಬಂದಿಯವರುಗಳಾದ ಉಮೇಶ್ ಕರಿಗೂಳಿ, ಚಂದ್ರಕಾಂತ್ ಪೂಜಾರಿ ಮತ್ತು ಚಂದ್ರಶೇಖರ್ ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಅಜ್ಜಂಪುರ ಪೊಲೀಸ್ ಠಾಣೆ.

ದಿನಾಂಕ: 30-01-2022 ರಂದು ಅಜ್ಜಂಪುರ ಠಾಣಾ ಸರಹದ್ದಿನ ಹುಣಸಘಟ್ಟ ಗ್ರಾಮದ ವಾಸಿ ಲೋಹಿತ್ ಕುಮಾರ್  ಇವರು ನೀಡಿದ ದೂರಿನಲ್ಲಿ ಪಿರ್ಯಾದಿಗೂ & ಹೆಂಡತಿಗೂ ದಿನಾಂಕ:27-01-2022 ಮಾತಿಗೆ ಮಾತಾಗಿದ್ದು ದಿನಾಂಕ;28-01-2022 ರಂದು ಪಿರ್ಯಾದಿ ಹೆಂಡತಿ ಮಧುಮತಿ 1 ವರ್ಷದ ಮಗಳು ಹನ್ವಿತಾ ಳನ್ನು ಕರೆದುಕೊಂಡು ಮನೆ ಬಿಟ್ಟು ಹೋಗಿದ್ದು,   ಈವರೆಗೂ ಹುಡುಕಾಡಿದರೂ ಸಹ ಪತ್ತೆಯಾಗಿಲ್ಲವೆಂದು ಕಾಣೆಯಾಗಿರುವ ತನ್ನ ಹೆಂಡತಿ ಮಧುಮತಿ 27ವರ್ಷ, ಸುಮಾರು 5 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಸಾದಾರಣ ಮೈಕಟ್ಟು ಕೋಲುಮುಖ, ಕನ್ನಡ ಮಾತಾನಾಡುತ್ತಾಳೆ. ಹನ್ವಿತಾ 1ವರ್ಷ 2.5 ಅಡಿ ಎತ್ತರ. ಎಣ್ಣೆಗೆಂಪು ಮೈ ಬಣ್ಣ, ದುಂಡು ಮುಖ ಬಿಳಿ ಬಣ್ಣದ ಪ್ರಾಕ್ ಧರಿಸಿರುತ್ತಾರೆ.  ಇವರನ್ನು  ಪತ್ತೆ ಮಾಡಿಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಅಜ್ಜಂಪುರ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 31-01-2022 08:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080