ಅಭಿಪ್ರಾಯ / ಸಲಹೆಗಳು

ಮರಣಾಂತಿಕ ರಸ್ತೆ ಅಪಘಾತ ಪ್ರಕರಣ

ಕಡೂರು ಪೊಲೀಸ್ ಠಾಣೆ.

ದಿನಾಂಕ:31/03/2022 ರಂದು ಪಿರ್ಯಾದಿ ಶ್ರೀಮತಿ ಭಾಗ್ಯಲಕ್ಷ್ಮಮ್ಮ ಕೋಂ ಲೇಟ್ ರಾಮಚಂದ್ರಪ್ಪ ಯಳ್ಳಂಬಳಸೆ ಗ್ರಾಮ  ವಾಸಿ  ಇವರು ನೀಡಿದ ದೂರಿನಲ್ಲಿ ದಿನಾಂಕ:30/03/2022 ರಂದು ಪಿರ್ಯಾದಿಯ ಮಗ ವಸಂತಕುಮಾರ್ ಕೆಎ-06-ಇಇ-7873 ಬೈಕಿನಲ್ಲಿ ಕಡೂರಿನಿಂದ ಸಿಂಗಟಗೆರೆ ಹೋಗಲು ಮಲ್ಲೇಶ್ವರದಿಂದ ಸ್ವಲ್ಪ ಮುಂದೆ ಟಾರು ರಸ್ತೆಯಲ್ಲಿ ರಾತ್ರಿ 08.40 ಗಂಟೆಯಲ್ಲಿ ಹೋಗುತ್ತಿರುವಾಗ್ಗೆ ಎದುರಿನಿಂದ ಬಂದ ಕೆಎ-18-ಸಿ-2619 ಕ್ಯಾಂಟರ್ ವಾಹನದ ಚಾಲಕನಾದ ಸಂತೋಷನು ತನ್ನ ವಾಹನವನ್ನು ಅತೀವೇಗ ಮತ್ತು ಅಜಾಗರುಕತೆಯಿಂದ  ಚಾಲನೆ ಮಾಡಿಕೊಂಡು ಬಂದು ಬೈಕಿಗೆ ಡಿಕ್ಕಿ ಹೊಡೆಸಿದ ಪರಿಣಾಮ ತಲೆಗೆ, ಬಲ ಕೈಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಕಡೂರಿನಲ್ಲಿರುವ ಸರ್ಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಕರೆದುಕೊಂಡು ಹೋಗುವಾಗ ಬೀರೂರು ಮಾರ್ಗ ಮದ್ಯದಲ್ಲಿ ಮೃತಪಟ್ಟಿರುತ್ತಾರೆ. ಅಪಘಾತ ಉಂಟು ಮಾಡಿದ ಕೆಎ-18-ಸಿ-2619 ಕ್ಯಾಂಟರ್ ವಾಹನದ ಚಾಲಕನ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ.

ಹರಿಹರಪುರ ಪೊಲೀಸ್ ಠಾಣೆ.

ದಿನಾಂಕ:30/03/2022 ರಂದು ಪಿರ್ಯಾದಿ ಸುರೇಶ್ ಎಸ್.ಎ. ಬಿನ್ ಅಪ್ಪಣ್ಣ ಮಡಿವಾಳ ವಾಸ ಸೋಪ್ಪಿನಮಕ್ಕಿ, ಬಿಲಗದ್ದೆ ಗ್ರಾಮ  ವಾಸ ಇವರು ನೀಡಿದ ದೂರಿನಲ್ಲಿ ಪಿರ್ಯಾದಿ ಮಗಳು ಸುನೀತಾ ಎಸ್ ಇವಳು ದಿನಾಂಕ 30-03-2022 ರಂದು ಬೆಳಿಗ್ಗೆ ಮಗಳು ಒಬ್ಬಳೇ ಇದ್ದು ವಾಪಾಸ್ಸು ಮನೆಗೆ ಬಂದು ನೋಡಲಾಗಿ ಮಗಳು ಮನೆಯಲ್ಲಿ ಇರಲಿಲ್ಲ, ಕಾಣೆಯಾಗಿರುವ ಸುನೀತಾ ಎಸ್,  25 ವರ್ಷ, 5.0 ಅಡಿ ಎತ್ತರ, ದುಂಡುಮುಖ, ಬಿಳಿ ಮೈಬಣ್ಣ  ಎರಡು ಕೆನ್ನೆಯ ಮೇಲೆ ಮೊಡವೆಗಳು ಇರುತ್ತವೆ. ಕಾಣೆಯಾಗಿರುವ ತನ್ನ ಮಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ನೀಡಿದ ದೂರಿನ ಮೇರೆಗೆ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳ್ಳತನ ಪ್ರಕರಣ

ಬಸವನಹಳ್ಳಿ ಪೊಲೀಸ್ ಠಾಣೆ

ದಿನಾಂಕ:30/03/2022 ರಂದು ಬಸವನಹಳ್ಳ್ಳಿ ಠಾಣಾ ಸರಹದ್ದಿನ ಗೌರಿ ಕಾಲುವೆ ವಾಸಿ ಮಹಮ್ಮದ್ ಅಪ್ಸರ್  ಇವರು ನೀಡಿದ ದೂರಿನಲ್ಲಿ ದಿನಾಂಕ:14/03/2022 ರಂದು ತನ್ನ ಬಾಬ್ತು ಕೆಎ-13-ಆರ್-1076 ನಂಬರಿನ ಬಜಾಜ್ ಸಿ.ಟಿ. 100 ನೀಲಿ ಬಣ್ಣದ ಬೈಕ್ ಅನ್ನು ರಾತ್ರಿ 10-00 ಗಂಟೆಯ ಸಮಯದಲ್ಲಿ ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದು ದಿನಾಂಕ 15/03/2022 ರಂದು ಬೆಳಿಗ್ಗೆ ನೋಡಿದಾಗ ಸದರಿ ಬೈಕ್ ನಿಲ್ಲಿಸದ ಜಾಗದಲ್ಲಿ ಕಂಡು ಬಾರದೇ ಇದ್ದು, ಬೈಕ್ ನ್ನು ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು ಯಾರೋ ಕಳ್ಳರು  ಸದರಿ ಬೈಕ್ ನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕೆಎ-13-ಆರ್-1076 ನಂಬರಿನ ಬಜಾಜ್ ಸಿ.ಟಿ. 100 ನೀಲಿ ಬಣ್ಣದ  ಬೈಕ್ ನ ಬೆಲೆ 15000 ರೂ ಅಗಿದ್ದು, ಕಳ್ಳರನ್ನು ಪತ್ತೆ ಮಾಡಿ ಬೈಕ್ ನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ತರೀಕೆರೆ ಪೊಲೀಸ್ ಠಾಣೆ.

ದಿನಾಂಕ:30/03/2022 ರಂದು ತರೀಕೆರೆ ಠಾಣಾ ಸರಹದ್ದಿನ ರಾಮದೇವರ ರಸ್ತೆ ವಾಸಿ ಟಿ.ಎಂ. ಸುಧಾಕರ  ಇವರು ನೀಡಿದ ದೂರಿನಲ್ಲಿ ದಿನಾಂಕ:28/03/2022 ರಂದು ತನ್ನ ಬಾಬ್ತು ಕೆಎ-18-ಬಿ 5410  ನಂಬರಿನ ಮಹೇಂದ್ರಾ ಪಿಕ್ ಅಪ್ ಗೂಡ್ಸ್  ಅನ್ನು ರಾತ್ರಿ 09.30 ಗಂಟೆಯ ಸಮಯದಲ್ಲಿ ಮನೆಯ ಹತ್ತಿರ ಇರುವ ಚಿಕನ್ ಅಂಗಡಿ ಎದುರು ನಿಲ್ಲಿಸಿದ್ದು ದಿನಾಂಕ 29/03/2022 ರಂದು ಬೆಳಿಗ್ಗೆ 8.30 ಗಂಟೆಗೆ ನೋಡಿದಾಗ ಸದರಿ ಮಹೇಂದ್ರ ಪಿಕ್ ಅಪ್ ವಾಹನ ನಿಲ್ಲಿಸದ ಜಾಗದಲ್ಲಿ ಕಂಡು ಬಾರದೇ ಇದ್ದು, ಮಹೇಂದ್ರ ಪಿಕ್ ಅಪ್ ವಾಹನ ವನ್ನು ಹುಡುಕಿದರೂ ಸಹ ಪತ್ತೆಯಾಗಿಲ್ಲವೆಂದು ಯಾರೋ ಕಳ್ಳರು  ಸದರಿ ಮಹೇಂದ್ರ ಪಿಕ್ ಅಪ್ ವಾಹನವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಕೆಎ-18-ಬಿ 5410  ನಂಬರಿನ ಮಹೇಂದ್ರಾ ಪಿಕ್ ಅಪ್ ಗೂಡ್ಸ್  ಬೆಲೆ 2,50,000 ರೂ ಅಗಿದ್ದು, ಮಹೇಂದ್ರಾ ಪಿಕ್ ಅಪ್ ಗೂಡ್ಸ್ ಅನ್ನು ಪತ್ತೆ ಮಾಡಿಕೊಡುವಂತೆ ನೀಡಿದ ದೂರಿನ ಮೇರೆಗೆ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

 

ಇತ್ತೀಚಿನ ನವೀಕರಣ​ : 31-03-2022 07:26 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080