ಅಭಿಪ್ರಾಯ / ಸಲಹೆಗಳು

ಅಕ್ರಮ ಮದ್ಯ ಮಾರಾಟ ಪ್ರಕರಣ.

ಬಾಳೆಹೊನ್ನೂರು ಪೊಲೀಸ್ ಠಾಣೆ.

ದಿನಾಂಕ:30-05-2022 ರಂದು ಮಲ್ಲಂದೂರು ಪೊಲೀಸ್ ಠಾಣಾ ಸರಹದ್ದಿನ ದಾನಿಹಳ್ಳಿ  ಗ್ರಾಮದಿಂದ ಮಸಗಲಿ ಮತ್ತು  ಅವತಿ ಹೋಗುವ ರಸ್ತೆಯ ಸೇತುವೆ ಬಳಿ ರವಿಬಿನ್ ತನಿಯಾ ದಾನಿಹಳ್ಳಿ ಗ್ರಾಮ ವಾಸಿ ಇವರು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು, ಅರೋಪಿಯನ್ನು ವಶಕ್ಕೆ ಪಡೆದು ಅರೋಪಿತನ ವಶದಲ್ಲಿ ಇದ್ದ 90 ಎಂ.ಎಲ್. ನ 17 ಮದ್ಯವನ್ನು ಹಾಗೂ ಮದ್ಯ ಮಾರಾಟ ಮಾಡಿ ಸಂಗ್ರಹಿಸಿದ 120/- ರೂ ಗಳನ್ನು ಅಮಾನತ್ತುಪಡಿಸಿಕೊಂಡಿದ್ದು, ಮದ್ಯದ ಅಂದಾಜು ಬೆಲೆ 300/- ರೂ ಗಳಾಗಿರುತ್ತೆ. ಆರೋಪಿತನ ವಿರುದ್ದ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಮಲ್ಲಂದೂರು ಠಾಣಾ ಪಿಎಸ್ಐ ರವೀಶ್  ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಅಕ್ರಮ ಗಾಂಜಾ ಸೇವನೆ ಪ್ರಕರಣಗಳು,

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ:30-05-2022 ರಂದು ಚಿಕ್ಕಮಗಳೂರು ಕೈಮರ ಕಡೆಯಿಂದ ಮುಳ್ಳಯ್ಯನ ಗಿರಿ ಕಡೆಗೆ ಕೆಎ-34-ಎಂ-6676 ನಂಬರಿನ ಬುಲೋರೋ ವಾಹನದ ಚಾಲಕ ವಾಹನವನ್ನು ನಿರ್ಲಕ್ಷತನ ಮತ್ತು ಅತೀವೇಗವಾಗಿ ಚಲಾಯಿಸುತ್ತಿದ್ದು,  ವಾಹನವನ್ನು ವಶಕ್ಕೆ ಪಡೆದು ವಾಹನ ಚಾಲಕ 1] ಸೈಯದ್ ಸುಹೇಬ್ ಬಿನ್ ಎಸ್.ಎಂ. ಪಾಷಾ , ಮಾರ್ಕೇಸ್ ರೋಡ್, ಚಿಕ್ಕಮಗಳೂರು ವಾಸಿ, 2] ಕೆ. ಸತೀಶ್ ಕುಮಾರ್ ಬಿನ್ ಪಿ. ಕುಮಾರ್, ಕಮಲ ನಿವಾಸ, ಲಕ್ಷ್ಮೀಪುರಂ, ಇಂದಿರಾನಗರ, ಬೆಂಗಳೂರು ವಾಸಿ, 3] ದೇಲ್ಹಾ ಅಬ್ಬಾಸ್ ಬಿನ್ ಅಬ್ಬಾಸ್, ಶ್ರೀ ಜೆಂಟ್ಸ್ , ಪಿ.ಜಿ. ಸೆಕ್ಟರ್ ಹೆಚ್.ಎಸ್.ಆರ್. ಲೇ ಔಟ್, ಬೆಂಗಳೂರು ವಾಸಿ,ಮತ್ತು 4] ರವಿ ಯಾದವ್ ಬಿನ್ ದಿಲೀಪ್ ಯಾದವ್, ಸೆಲ್ಸ್ ಕನ್ಸಂಟೆಂಟ್ ವೃತ್ತಿ, ವಾಸ ವೆಂಕಟಾದ್ರಿ ಪಾಮ್ ಗ್ರೂವ್ಸ್, ಅಪಾರ್ಟ್ ಮೆಂಟ್, ಸಿಗೇಹಳ್ಳಿ ಬೆಂಗಳೂರು ಇವರುಗಳ ಗಾಂಜಾ ಸೇವನೆ ಮಾಡಿದ್ದು, ವೈದ್ಯಕೀಯ ಪರೀಕ್ಷೆಯಿಂದ ದೃಡಪಟ್ಟಿದ್ದು ಆರೋಪಿತರುಗಳ ವಿರುದ್ದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಗ್ರಾಮಾಂತರ ಠಾಣಾ ಪಿ.ಐ. ಶ್ರೀಮತಿ ಸ್ವರ್ಣ ಜಿ.ಎಸ್. ಮತ್ತು ಪಿ.ಎಸ್.ಐ. ಚಿಂತನ್ ಕೆ.ಆರ್. ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿರುತ್ತಾರೆ.

ಮನುಷ್ಯ ಕಾಣೆ ಪ್ರಕರಣ

ಗ್ರಾಮಾಂತರ ಪೊಲೀಸ್ ಠಾಣೆ.

ದಿನಾಂಕ;31/05/2022 ರಂದು ಪಿರ್ಯಾದಿ ಶ್ರೀಮತಿ ಜಯಂತಿ ಕೋಂ ವಿವೇಕ್, ಕೋಟನಕಾಲ್ , ತೋಗರಿಹಂಕಲ್ ವಾಸಿ ಇವರು ನೀಡಿದ ದೂರಿನಲ್ಲಿ ಪಿರ್ಯಾದಿಯ ಗಂಡ ವಿವೇಕ್ ಇವರು  ದಿನಾಂಕ; 04/04/2022 ರಂದು ಬೆಳಿಗ್ಗೆ  ಮನೆಯಿಂದ ಹೋದವರು, ವಾಪಾಸ್ಸು ಮನೆಗೆ ಬಾರದೇ ಕಾಣೆಯಾಗಿದ್ದು, ಈವರೆಗೆ ಹುಡಕಲಾಗಿ ಪತ್ತೆಯಾಗಿರುವುದಿಲ್ಲ. ಕಾಣೆಯಾಗಿರುವ ವಿವೇಕ್,  32 ವರ್ಷ,  ಕೋಲುಮುಖ, ಸದಾರಣ ಮೈಕಟ್ಟು, ಎಣ್ಣೆಗೆಂಪು ಬಣ್ಣ,ಬಲಗೈ ಮೇಲೆ ಅಮ್ಮ ಎಂಬ ಅಚ್ಚೆ ಗುರುತು ಇರುತ್ತೆ.  ಕನ್ನಡ, ತಮಿಳು, ತುಳು ಬಾಷೆ ಮಾತನಾಡುತ್ತಾರೆ. ಹಳದಿ ಬಣ್ಣದ ಬಿಳಿ ಗೆರೆಗಳ್ಳುಳ್ಳ ಟೀ ಶರಟು , ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುತ್ತಾರೆ. ಕಾಣೆಯಾಗಿರುವ ತನ್ನ ಗಂಡ ವಿವೇಕ್ ರವರನ್ನು ಪತ್ತೆ ಮಾಡಿ ಕೊಡುವಂತೆ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 31-05-2022 07:40 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080