ಅಭಿಪ್ರಾಯ / ಸಲಹೆಗಳು

ಮನುಷ್ಯ ಕಾಣೆ ಪ್ರಕರಣ.

ಕಡೂರು  ಪೊಲೀಸ್ ಠಾಣೆ.

ದಿನಾಂಕ: 31-12-2021 ರಂದು  ಕಡೂರು ಠಾಣಾ ವ್ಯಾಪ್ತಿಯ ಶ್ರೀಮತಿ.ಹೇಮಾವತಿರವರು ನೀಡಿದ ದೂರಿನಲ್ಲಿ  ದಿನಾಂಕ 29-12-2021 ರಂದು ಮದ್ಯಾಹ್ನ 12-30 ಗಂಟೆಗೆ ಪಿರ್ಯಾದಿಯವರ ಮಗಳಾದ ಸಂದ್ಯಾ, 26 ವರ್ಷ, ಹಾಗೂ ಮೊಮ್ಮಕ್ಕಳಾದ ಬೃಂದಾ, 3ವರ್ಷ. ಡಿಂಪಲ್, 1 ವರ್ಷ, 6 ತಿಂಗಳು ಇವರುಗಳನ್ನು ಶಿಕಾರಿಪುರ ತಾಲ್ಲೂಕು ಕೆಂಗೆಟ್ಟೆ ಗ್ರಾಮಕ್ಕೆ  ಹೋಗಲು ಕಡೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ನಲ್ಲಿ ಕಳುಹಿಸಿದ್ದು ಸಂಜೆ ನನ್ನ ಮಗಳು ಊರನ್ನು ತಲುಪಿರಬಹುದೆಂದು ಆಕೆಯ ಗಂಡನಾದ ಸುರೇಶರವರಿಗೆ ಕರೆ ಮಾಡಿ ವಿಚಾರಿಸಿದಾಗ ಇನ್ನು ಸಂದ್ಯಾ ಹಾಗೂ ಮಕ್ಕಳು ಬಂದಿಲ್ಲ ಎಂದು ತಿಳಿಸಿದ್ದು , ಸಂಬಂದಿಕರ, ಸ್ನೇಹಿತರ ಮನೆಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ, ಆಸ್ಪತ್ರೆ ಇತ್ಯಾದಿ ಕಡೆಗಳಲ್ಲಿ  ಹುಡುಕಡಲಾಗಿ ಎಲ್ಲಿಯೂ ಪತ್ತೆಯಾಗಿಲ್ಲವೆಂದು  ಕಾಣೆಯಾಗಿರುವ ನನ್ನ ಮಗಳು  ಸಂದ್ಯಾ ಇವರ ಚಹರೆ  ಗೋಧಿಮೈಬಣ್ಣ, 26 ವರ್ಷ, ಸಾದಾರಣ ಮೈ ಕಟ್ಟು 5 ಅಡಿ ಎತ್ತರವಿದ್ದು ,ಕನ್ನಡ , ತೆಲುಗು ಬಾಷೆ ಮಾತನಾಡುತ್ತಾರೆ. ಗುಲಾಬಿ ಬಣ್ಣದ ಟಾಪ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದು , ಬೃಂದಾ, 3 ವರ್ಷ, ಕೆಂಪು ಮೈಬಣ್ಣ, 2 ಅಡಿ ಎತ್ತರ, ಸಪೂರ ಮೈಕಟ್ಟು, ತೆಲುಗು ಭಾಷೆ ಮಾತನಾಡುತ್ತಾಳೆ. ಬಿಸ್ಕೆಟ್ ಕಲ್ಲರ್ ಫ್ರಾಕ್ ಧರಿಸಿರುತ್ತಾಳೆ, ಡಿಂಪಲ್ ಬಿನ್ ಸುರೇಶ, 1 ವರ್ಷ, 6 ತಿಂಗಳು, ಗೋಧಿಮೈಬಣ್ಣ, 2 ಅಡಿ ಎತ್ತರ, ಸಾಧಾರಣ ಮೈಕಟ್ಟು, ಬಿಳಿ ಬಣ್ಣದ ಪ್ರಾಕ್ ಧರಿಸಿದ್ದು  ಇವರನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ,

ಕಡೂರು  ಪೊಲೀಸ್ ಠಾಣೆ.

ದಿನಾಂಕ: 31-12-2021 ರಂದು  ಬೆಳವಾಡಿ ಗ್ರಾಮ ವಾಸಿಯಾದ ಮಂಜುನಾಥರವರು ನೀಡಿದ ದೂರಿನಲ್ಲಿ  ನನ್ನ ಮಗಳಾದ ಬಿಂದು ಇವಳಿಗೆ 18 ವರ್ಷ ತುಂಬಿದ್ದು , ಅವಳು ನನ್ನ ಹೆಂಡತಿಯ ತವರು ಮನೆಯಾದ ಕಡೂರು ತಾಲ್ಲೂಕು ದೊಡ್ಡಪಟ್ಟಣಗೆರೆ  ಗ್ರಾಮದಲ್ಲಿಯೇ ಹುಟ್ಟಿನಿಂದಲೂ ಅಲ್ಲಿಯೇ ವಾಸವಾಗಿದ್ದು, ದೊಡ್ಡಪಟ್ಟಣಗೆರೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದು .ದಿನಾಂಕ 29-12-2021 ರಂದು  ಬೆಳಿಗ್ಗೆ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು  ವಾಪಾಸ್ ಮನೆಗ ಬಂದಿರುವುದಿಲ್ಲ . ಸಂಬಂದಿಕರ, ಸ್ನೇಹಿತರ ಮನೆಗಳಲ್ಲಿ ಹುಡುಕಡಲಾಗಿ ಎಲ್ಲಿಯೂ ಪತ್ತೆಯಾಗಿಲ್ಲವೆಂದು  ಕಾಣೆಯಾಗಿರುವ ನನ್ನ ಮಗಳು  ಬಿಂದು  ಇವರ ಚಹರೆ  ಎಣ್ಣೆಗೆಂಪು ಮೈಬಣ್ಣ,  ಸಾಧಾರಣ ಮೈಕಟ್ಟು, 4.5 ಅಡಿ ಎತ್ತರ, ಕನ್ನಡ  ಬಾಷೆ ಮಾತನಾಡುತ್ತಾರೆ. ಹಸಿರು ಬಣ್ಣದ ಚೂಡಿದಾರ್ ಧರಿಸಿದ್ದು   ಇವಳನ್ನು ಪತ್ತೆ ಮಾಡಿ ಕೊಡುವಂತೆ ಕೋರಿ ನೀಡಿದ ದೂರಿನ ಮೇರೆಗೆ ಕಡೂರು  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 ಕಳ್ಳತನ ಪ್ರಕರಣ

ಸಿಂಗಟಗೆರೆ ಪೊಲೀಸ್ ಠಾಣೆ

ದಿನಾಂಕ:31-12-20231 ರಂದು ಸಿಂಗಟಗೆರೆ ಠಾಣಾ ಸರಹದ್ದಿನ ಎಸ್. ಬಸವನಹಳ್ಳಿ ವಾಸಿ ಬಿ.ಕೆ. ದೆವರಾಜ್ ರವರು ನೀಡಿದ ದೂರಿನಲ್ಲಿ ಪಿರ್ಯಾದಿ ಯ ಬಾಬ್ತು ತೊಟದಲ್ಲಿ ತೆಂಗಿನ ಚಿಪ್ಪು ನ್ನು  ರಾಶಿ ಮಾಡಿದ್ದು  ಸದರಿ  ರಾಶಿಯಿಂದ ಚಿಪ್ಪುಗಳನ್ನು ಕೆಎ-13-ಎ-9521 ರ ಟಾಟಾ ಎಸಿ ವಾಹನದಲ್ಲಿ 2-3 ಜನ ಕಳ್ಳತನದಿಂದ  ತುಂಬಿಸುತ್ತಿದ್ದು ಪಿರ್ಯಾದಿಯವರನ್ನು ನೋಡಿ ಆರೋಪಿತರು ಓಡಿ ಹೋಗಿದ್ದು, ಟಾಟಾ ಎ.ಸಿ.ಯನ್ನು ಸ್ಥಳದಲ್ಲೇ ಬಿಟ್ಟು ಓಡಿ ಹೋಗಿದ್ದಾಗಿ ಕಳ್ಳತನ ಮಾಡಲು ಬಂದಿದ್ದ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸಿಂಗಟಗೆರೆ  ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 31-12-2021 07:10 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080