ಅಭಿಪ್ರಾಯ / ಸಲಹೆಗಳು

ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣ

ನಗರ   ಪೊಲೀಸ್  ಠಾಣೆ

ದಿನಾಂಕ:07 /05/2021 ರಂದು ಎಎಸ್ಐ  ಶಿವಸ್ವಾಮಿ ರವರು ಕೊವಿಡ್ ಸಂಬಂಧ ರೌಂಡ್ಸ್ ನಲ್ಲಿದ್ದಾಗ ಚಿಕ್ಕಮಗಳೂರು ನಗರದ ಮಾರ್ಕೇಟ್ ರಸ್ತೆಯಲ್ಲಿ ಪ್ರಚಾರ ಮಾಡುತ್ತಾ ಗಸ್ತು ಬಂದು   ದೀಪಾ ನರ್ಸಿಂಗ್ ಹೋಂ ಕ್ರಾಸ್ ನಲ್ಲಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಕೆ ಎ 18 ವೈ 83 94 ಡಿಯೋ ಬೈಕ್ ಚಾಲಕ ಪದೇ ಪದೇ ಅನಗತ್ಯವಾಗಿ ಅತ್ತಿಂದಿತ್ತ ಓಡಾಡುತ್ತಿದ್ದು, ಕೋವಿಡ್-19 2ನೇ ಅಲೆ ಹೆಚ್ಚು ಹೆಚ್ಚಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ  ಸರ್ಕಾರದ ಲಾಕ್ ಡೌನ್ ಅದೇಶ/ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ  ಕೆ ಎ 18 ವೈ8394 ಡಿಯೋ ಬೈಕಿನ ಚಾಲಕ ಸುಹಾಸ್ ಬಿನ್ ದೇವರಾಜ್ ರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 

ಮೂಡಿಗೆರೆ   ಪೊಲೀಸ್  ಠಾಣೆ

 ದಿನಾಂಕ 07.05.2021 ರಂದು ಮೂಡಿಗೆರೆ ವೃತ್ತದ  ಸಿಪಿಐ ರವರು  ಬಿಳಗುಳ ಗ್ರಾಮದ ಹೊಸನಗರದ ಕಡೆ ರೌಂಡ್ಸ್ ಮಾಡುತ್ತಿರುವಾಗ ಒಂದು ಮನೆ ಮುಂಭಾಗ ಮದುವೆ ಪೂರ್ವ ಕಾರ್ಯಕ್ರಮ ಆಯೋಜಿಸಿದ್ದು ಸದರಿ ಕಾರ್ಯಕ್ರಮದಲ್ಲಿ ಸುಮಾರು 50 ಜನರು ಸೇರಿದ್ದು, ಅಲ್ಲಿದ್ದ ಜನರಿಗೆ ವಿಚಾರಿಸಲಾಗಿ ಕ್ಲೆಮೆಂಟ್ ಪಾಯಿಸ್ ರವರ  ಮಗನ ವಿವಾಹವಿದ್ದು ಅದರ ಪ್ರಯುಕ್ತ ಇಂದು ಸಂತೋಷ ಕೂಟ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.  ಸರ್ಕಾರವು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮಾಡಿರುವ ರೋಗ ನಿರೋಧಕ ನಿರ್ಬಂಧ ನಿಯಮಗಳನ್ನು,  ಆದೇಶಗಳನ್ನು ಪಾಲಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ   ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದ ಸದರಿ ಕಾರ್ಯಕ್ರಮದ ಆಯೋಜಕರಾದ ಕ್ಲೆಮೆಂಟ್ ಪಾಯಿಸ್ ಬಿನ್ ಸಬಸ್ಟಿನ್ ಪಾಯಿಸ್ ರವರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 

ಮೂಡಿಗೆರೆ   ಪೊಲೀಸ್  ಠಾಣೆ

ದಿನಾಂಕ 07.05.2021 ರಂದು ಮೂಡಿಗೆರೆ ವೃತ್ತದ  ಸಿಪಿಐ ರವರು  ಬಿಳಗುಳ ಗ್ರಾಮದ ಹೊಸನಗರದ ಕಡೆ ರೌಂಡ್ಸ್ ಮಾಡುತ್ತಿರುವಾಗ ಒಂದು ಮನೆ ಮುಂಭಾಗ ಮದುವೆ ಪೂರ್ವ ಕಾರ್ಯಕ್ರಮ ಆಯೋಜಿಸಿದ್ದು ಸದರಿ ಕಾರ್ಯಕ್ರಮದಲ್ಲಿ ಸುಮಾರು 50 ಜನರು ಸೇರಿದ್ದು, ಅಲ್ಲಿದ್ದ ಜನರಿಗೆ ವಿಚಾರಿಸಲಾಗಿ ಕ್ಲೆಮೆಂಟ್ ಪಾಯಿಸ್ ರವರ  ಮಗನ ವಿವಾಹವಿದ್ದು ಅದರ ಪ್ರಯುಕ್ತ ಇಂದು ಸಂತೋಷ ಕೂಟ ಕಾರ್ಯಕ್ರಮವನ್ನು ಆಯೋಜಿಸಿರುತ್ತಾರೆ.  ಸರ್ಕಾರವು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮಾಡಿರುವ ರೋಗ ನಿರೋಧಕ ನಿರ್ಬಂಧ ನಿಯಮಗಳನ್ನು,  ಆದೇಶಗಳನ್ನು ಪಾಲಿಸದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೇ   ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿದ ಸದರಿ ಕಾರ್ಯಕ್ರಮದ ಆಯೋಜಕರಾದ ಕ್ಲೆಮೆಂಟ್ ಪಾಯಿಸ್ ಬಿನ್ ಸಬಸ್ಟಿನ್ ಪಾಯಿಸ್ ರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.

 

ತರೀಕೆರೆ   ಪೊಲೀಸ್  ಠಾಣೆ

ದಿನಾಂಕ:07/05/2021 ರಂದು ತರೀಕೆರೆ ಠಾಣಾ ಸರಹದ್ದಿನ ತರೀಕೆರೆ ಟೌನ್ ಮುಖ್ಯ ರಸ್ತೆಯಲ್ಲಿ  ರಂಗನಾಥ ಬಾರ್ ಮತ್ತು ರೆಸ್ಟೋರೆಂಟ್ ಪಕ್ಕದಲ್ಲಿರುವ  ಎ ಎಸ್ ಬೇಗ್ ಟಿ ವಿ ಮತ್ತು ರೆಪ್ರಿಜರೇಟರ್ ಅಂಗಡಿಯ   ಮುಂಭಾಗದಲ್ಲಿ ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸುಮಾರು 10-12 ಜನರು ಗುಂಪು ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಸಕರ್ಾರವು ಕೋವಿಡ್ ತಡೆಗಟ್ಟಲು ಮಾಡಿರುವ  ನಿಯಮಗಳನ್ನು ಉಲ್ಲಂಘಿಸಿದ ಅಂಗಡಿ ಮಾಲೀಕರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಅಕ್ರಮ ಮದ್ಯ ಮಾರಾಟ ಪ್ರಕರಣಗಳು

ಮೂಡಿಗೆರೆ   ಪೊಲೀಸ್  ಠಾಣೆ

ಈ ದಿವಸ ದಿನಾಂಕ 08.05.2021  ರಂದು  ಕೊವಿಡ್ ಸಂಬಂಧ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಮೂಡಿಗೆರೆ ಠಾಣಾ ವ್ಯಾಪ್ತಿಯ  ಕುನ್ನಳಿ ಗ್ರಾಮದ ವಾಸಿಯಾದ ವಿಶ್ವನಾಥ ಶೆಟ್ಟಿ ಬಿನ್ ಬಾಬು ಶೆಟ್ಟಿ, ವಾಸ ಕೃಷ್ಣಪ್ಪ ನಗರ, ಕುನ್ನಳ್ಳಿ ಗ್ರಾಮ  ರವರು ಅವರ ದಿನಸಿ ಅಂಗಡಿ ಮುಂದೆ ಸಾರ್ವಜನಿಕರಿಗೆ ಅಕ್ರಮವಾಗಿ  ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆಂದು   ಮಾಹಿತಿ   ಬಂದ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ  ವಿಶ್ವನಾಥ ಶೆಟ್ಟಿ ಬಿನ್ ಬಾಬು ಶೆಟ್ಟಿ,ರವರ ವಿರುದ್ದ ಮೂಡಿಗೆರೆ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ.  ಈ ಕಾಯಾಱಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಲಿಂಗದಹಳ್ಳಿ ಪೊಲೀಸ್ ಠಾಣೆ.

ದಿನಾಂಕ:07/05/2021 ರಂದು ಲಿಂಗದಹಳ್ಳಿ ಠಾಣಾ ಸರಹದ್ದಿನ ಸಂತವೇರಿ ಗ್ರಾಮದ ವಾಸಿ ಮಂಜುನಾಥ ಬಿನ್ ಹುಲಿಯಪ್ಪ  ಎಂಬುವರು ಕುಂಬ್ರಿಗೇಟ್ ಹತ್ತಿರ ಅಕ್ರಮವಾಗಿ ಮಧ್ಯ ಮಾರಾಟ ಮಾಡುತ್ತಿದ್ದಾರೆಂದು  ಬಂದ ಖಚಿತ ಮಾಹಿತಿ ಮೇರೆಗೆ ಕುಂಬ್ರಿಗೇಟ್ ಹತ್ತಿರ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಆತನು ಹೊಂದಿದ್ದ  90 ಎಂ.ಎಲ್ ಓರಿಜಿನಲ್ ಚಾಯ್ಸ್  ಸ್ಪೇಷಲ್  ವಿಸ್ಕಿಯ 32 ಮದ್ಯದ ಪೌಚ್ ಅಂದಾಜು ಬೆಲೆ 1124/- ರೂ ಅಗಿದ್ದು ಹಾಗೂ ಮದ್ಯದ ಮಾರಾಟದಿಂದ ಬಂದ 80 ರೂ ಹಣವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್.ಐ. ಎಂ. ರಫೀಕ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಬಸವನಹಳ್ಳಿ   ಪೊಲೀಸ್ ಠಾಣೆ.

 ಅಕ್ರಮ  ಜೂಜಾಟ  ಹಾಗೂ ಕೊವಿಡ್ -19 ಉಲ್ಲಂಘನೆ ಪ್ರಕರಣ.  

ದಿನಾಂಕ:07-05-2021 ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದಾಗ ಗೌರಿಕಾಲುವೆ ರಾಮ ಮಂದಿರ ಮುಂಭಾಗದ ಹಿಂದೂ ಸ್ಮಶಾನದ ಮುಂಭಾಗದಲ್ಲಿ ಸುಮಾರು 04- ರಿಂದ 5 ಜನರು ಮಾಸ್ಕ್ ಧರಿಸದೆ ಹಾಗೂ ಸಮಾಜಿಕ ಅಂತರ ಕಾಯ್ದುಕೊಳ್ಳದೆ ಹಣವನ್ನು ಪಣವಾಗಿ ಕಟ್ಟಿಕೊಂಡು ಅಂದರ್ ಬಾಹರ್ ಇಸ್ಪೀಟ್ ಜೂಜಾಟವಾಡುತಿದ್ದಾರೆ ಎಂದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿದ್ದು ಹಿಂದೂ ಸ್ಮಶಾನದ  ಗೇಟ್ ನ ಮುಂಭಾಗದಲ್ಲಿ ಸುಮಾರು 4-5 ಜನರು ಗುಂಪು ಕಟ್ಟಿಕೊಂಡು ಮಾಸ್ಕ್ ಧರಿಸದೆ ಹಾಗೂ ಸಮಾಜಿಕ ಅಂತರ ಕಾಯ್ದುಕೊಳ್ಳದೆ  ಸಾಂಕ್ರಮಿಕ ರೋಗ ಹರಡುವ ಬಗ್ಗೆ ತಿಳಿದಿದ್ದರು ಕೈಯಲ್ಲಿ ಇಸ್ಪೀಟ್ ಎಲೆಗಳನ್ನು ಹಿಡಿದು ಹಣವನ್ನು ಪಣವಾಗಿ ಕಟ್ಟಿ  ಜೂಜಾಟವಾಡುತ್ತಿದ್ದು ಪರಿಶೀಲಿಸಿ ನೋಡಲಾಗಿ ಒಟ್ಟು ರೂ 6800/-ರೂ ಹಾಗೂ ಜೂಜಾಟಕ್ಕೆ ಬಳಸಿದ್ದ 52 ಇಸ್ಪೀಟ್ ಎಲೆಗಳು ಹಾಗೂ ಜೂಜಾಟಕ್ಕೆ ಬಳಸಿದ ನ್ಯೂಸ್ ಪೇಪರನ್ನು ವಶಕ್ಕ ಪಡೆದು  ಆರೋಪಿತರುಗಳ ವಿರುದ್ದ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತೆ. ಈ ಕಾರ್ಯಾಚರಣೆಯಲ್ಲಿ   ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 08-05-2021 06:37 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080