ಅಭಿಪ್ರಾಯ / ಸಲಹೆಗಳು

ಅಜ್ಜಂಪುರ ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ ಪ್ರಕರಣ. 

ದಿನಾಂಕ:09/05/2021 ರಂದು ಅಜ್ಜಂಫುರ ಠಾಣಾ ಸರಹದ್ದಿನ ಅಜ್ಜಂಫುರ ಪಟ್ಟಣದ ಬೀರಲಿಂಗೇಶ್ವರ ಬಡಾವಣೆಯಲ್ಲಿ ಸುನೀತಾ ಎಂಬುವರು ಅವರ ಗುಡಿಸಲಿನ ಮುಂದೆ   ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಸುನಿತಾ ರವರು ತಮ್ಮ ಮನೆಯ ಮುಂದೆ ಒಂದು ಪ್ಲಾಸ್ಟಿಕ್  ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಆರೋಪಿಯು ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ನಮ್ಮಗಳನ್ನು ನೋಡಿ ಓಡಿ ಹೋಗಿದ್ದು, ಆರೋಪಿತಳು ಹೊಂದಿದ್ದ  ಬಳಿಯಿದ್ದ ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್. ರಾಜಾ ವಿಸ್ಕಿಯ  40  ಮದ್ಯದ ಟೆಟ್ರಾಪೌಚ್ಗಳು ಅಂದಾಜು ಬೆಲೆ 1405/- ರೂ ಅಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾಯಾಱಚರಣೆಯಲ್ಲಿ ಪಿ.ಎಸ್ ಐ. ತಿಪ್ಪೇಶ್ ಡಿ.ವಿ.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಬೀರೂರು ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ ಪ್ರಕರಣ. 

ದಿನಾಂಕ:09/05/2021 ರಂದು ಬೀರೂರು ಠಾಣಾ ಸರಹದ್ದಿನ ಅಂಡರ್ ಬ್ರೀಡ್ಜ್ ಬಳಿ ಪುರಿಭಟ್ಟಿ ರಸ್ತೆಯ ತಿರುವಿನಲ್ಲಿ  ಮಧುಕುಮಾರ್ ಎಂಬುವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಆರೋಪಿಯು ಅಕ್ರಮವಾಗಿ ಹೊಂದಿದ 90 ಎಂ.ಎಲ್. ರಾಜಾ ವಿಸ್ಕಿಯ  96  ಮದ್ಯದ ಟೆಟ್ರಾಪೌಚ್ಗಳು ಅಂದಾಜು ಬೆಲೆ 3372/- ರೂ ಅಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾಯಾಱಚರಣೆಯಲ್ಲಿ ಪಿ.ಎಸ್ ಐ. ಬಸವರಾಜ್ ಹೆಚ್.  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಲಿಂಗದಹಳ್ಳಿ   ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ ಪ್ರಕರಣ 

ದಿನಾಂಕ:09/05/2021 ರಂದು ಲಿಂಗದಹಳ್ಳಿ ಠಾಣಾ ಸರಹದ್ದಿನ ದೋರನಾಳು ಗ್ರಾಮದಿಂದ ಸುಣ್ಣದಹಳ್ಳಿ ಕಡೆಗೆ ಹೋಗುವ ರಸ್ತೆಯಲ್ಲಿ ಇಬ್ಬರು ಆಸಾಮಿಗಳು ಬೈಕಿನಲ್ಲಿ ಮದ್ಯದ ಬಾಕ್ಸ್ ಗಳನ್ನು ಮಾರಾಟ ಮಾಡಲು ತೆಗೆದುಕೊಂಡು  ಹೋಗುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ದಾಳಿ ಮಾಢಿದ್ದು  ಹೇಮಂತ ಬಿನ್ ನಾಗರಾಜು ಹಾಗೂ ದರ್ಶನ್ ಬಿನ್ ಚಂದ್ರಶೇಖರಪ್ಪ ಇವರುಗಳು ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದು  ವಶಕ್ಕೆ ಪಡದು  ಅವರ ಬಳಿಯಿದ್ದ  90 ಎಂ.ಎಲ್.ನ ನಂ. 1 ಮ್ಯಾಕ್ಸ್ ಡೋವೆಲ್ಸ್ ಇಂಡಿಯನ್ ಬ್ರಾಂಡಿಯ   94 ಮದ್ಯದ ಟೆಟ್ರಾಪೌಚ್ಗಳು ಹಾಗೂ 90 ಎಂ.ಎಲ್.ನ ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿಯ  96 ಟೆಟ್ರಾ ಪೌಚ್ಗಳು ಇವುಗಳ ಅಂದಾಜು ಬೆಲೆ 11,603/- ರೂ ಅಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿತರ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾಯಾಱಚರಣೆಯಲ್ಲಿ ಪಿಎಸ್ಐ ಎಂ. ರಫೀಕ್ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಗ್ರಾಮಾಂತರ   ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ ಪ್ರಕರಣ. 

ದಿನಾಂಕ:08/05/2021 ರಂದು ಗ್ರಾಮಾಂತರ  ಠಾಣಾ ಸರಹದ್ದಿನ ಕತಿಱಕೆರೆ ಗ್ರಾಮದಲ್ಲಿ ಒಬ್ಬ ವ್ಯಕ್ತಿಯು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಕತಿಱಕೆರೆ ಗ್ರಾಮದ ಲಕ್ಷ್ಮಣರಾಜುರವರು ತಮ್ಮ ಮನೆಯ ಮುಂದೆ ಒಂದು ಪ್ಲಾಸ್ಟಿಕ್  ಚೀಲದಲ್ಲಿ ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ನಮ್ಮಗಳನ್ನು ನೋಡಿ ಓಡಿ ಹೋಗಲು ಯತ್ನಿಸಿದವನನ್ನು ವಶಕ್ಕೆ ಪಡೆದು, ಆತನ ಬಳಿಯಿದ್ದ ಪ್ಲಾಸ್ಟಿಕ್ ಚೀಲದಲ್ಲಿ 90 ಎಂ.ಎಲ್.ಓರಿಜಿನಲ್ ಚಾಯ್ಸ್ನ 192  ಮದ್ಯದ ಟೆಟ್ರಾಪೌಚ್ಗಳು ಹಾಗೂ 90 ಎಂ.ಎಲ್ ನ ಕ್ಯಾಪ್ಟನ್ ಮಾಟರ್ನ್ ವಿಸ್ಕಿಯ 48 ಟೆಟ್ರಾ ಪೌಚ್ಗಳು ಅಂದಾಜು ಬೆಲೆ 8431/- ರೂ ಅಗಿದ್ದು, ಹಾಗೂ ಮದ್ಯ ಮಾರಾಟದಿಂದ ಬಂದ 450 /ರೂ ಹಣವನ್ನು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾಯಾಱಚರಣೆಯಲ್ಲಿ ಪಿ.ಐ. ಕೆ. ಸತ್ಯನಾರಾಯಣ ಡಿ.ಸಿ.ಐ.ಬಿ ಘಟಕ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬಣಕಲ್   ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ ಪ್ರಕರಣ 

ದಿನಾಂಕ:08/05/2021 ರಂದು ಬಣಕಲ್  ಠಾಣಾ ಸರಹದ್ದಿನ ಬಣಕಲ್ ಟೌನ್ನ ಸಂತೆ ಮೈದಾನದಲ್ಲಿ ಸುಭಾಷ್ ನಗರದವಾಸಿಯಾದ ಸುಭಾಷ್ ಪಾಯಿಸ್ ಎಂಬುವವರು  ಸಾರ್ವಜನಿಕರನ್ನು  ಗುಂಪುಸೇರಿಸಿಕೊಂಡು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಸುಭಾಷ್ ಪಾಯಿಸ್ ರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾಯಾಱಚರಣೆಯಲ್ಲಿ ಪಿ.ಎಸ್.ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ನಗರ   ಪೊಲೀಸ್  ಠಾಣೆ

ಅಕ್ರಮ ಮಟ್ಕಾ ಜೂಜಾಟ  ಪ್ರಕರಣ 

ದಿನಾಂಕ:08/05/2021 ರಂದು ನಗರ  ಠಾಣಾ ಸರಹದ್ದಿನ ಶಂಕರಪುರದಲ್ಲಿರುವ ಅಂಬೇಡ್ಕರ್ ಶಾಲೆಗೆ ಹೋಗುವ ರ್ಸತೆ ಕ್ರಾಸ್ ಬಳಿ  ಮಟ್ಕಾ ಆಡುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿದ್ದು ಒಬ್ಬ ಆಸಾಮಿಯು ಒಂದು ರೂಪಾಯಿಗೆ 80 ರೂ 10 ರೂಪಾಯಿಗೆ 800 ರೂ ನೀಡುತ್ತೇನೆ ಹಣ ಕಟ್ಟಿ ಆಟವಾಡಿ ಎಂದು ಪ್ರಚೋದನೆ ನೀಡುತ್ತಿದ್ದು ಆತನ್ನು ವಶಕ್ಕೆ ಪಡೆದಿದ್ದು ಆತನ ಹೆಸರು ಮಂಜ @ ಪಿಳ್ಳೆ ಮಂಜ ಎಂದು ತಿಳಿಸಿದ್ದು, ಹಣ ಕಟ್ಟಿತ್ತಿದ್ದವರು ಅಲ್ಲಿಂದ ನಮ್ಮಗಳನ್ನು ನೋಡಿ ಓಡಿಹೋಗಿರುತ್ತಾರೆ. ಆತನ ಜೇಬಿನಲ್ಲಿದ್ದ 1,460 ರೂ ಹಣ, ಒಂದು ಮಟ್ಕಾ ಚೀಟಿ ಹಾಗೂ ಒಂದು ಬಾಲ್ ಪೆನ್ನ್ನು  ಅಮಾನತ್ತುಪಡಿಸಿಕೊಂಡು ಬಂದು ಅರೋಪಿತನ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾಯಾಱಚರಣೆಯಲ್ಲಿ ಪಿ.ಎಸ್.ಐ. ಡಿ.ಸಿ.ಐ.ಬಿ ಘಟಕ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 09-05-2021 07:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080