ಅಭಿಪ್ರಾಯ / ಸಲಹೆಗಳು

ಬಣಕಲ್  ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್-19ನಿಯಮ  ಉಲ್ಲಂಘನೆ ಪ್ರಕರಣ

ದಿನಾಂಕ:10/05/2021 ರಂದು ಬಣಕಲ್ ಬೆಟ್ಟಗೆರೆ ಗ್ರಾಮದ ವಾಸಿಯಾದ ಸುಂದರೇಶ ಎಂಬುವವರು ತಮ್ಮ  ದಿನಸಿ ಅಂಗಡಿಯ ಮುಂದೆ  ಅಕ್ರಮವಾಗಿ ಸಾರ್ವಜನಿಕರಿಗೆ  ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಸುಂದರೇಶನು ಅಕ್ರಮವಾಗಿ ಮದ್ಯ ಮಾಡುತ್ತಿದ್ದು ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸಕರ್ಾರವು ಹೊರಡಿಸಿರುವ ಕೊವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿದ   ಸುಂದರೇಶನನ್ನು  ಹಾಗೂ ಆನತ ಬಳಿಯಿದ್ದ ಮದ್ಯವನ್ನು ವಶಕ್ಕೆ ಪಡೆದು  ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾಯರ್ಾಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಸಖರಾಯಪಟ್ಟಣ    ಪೊಲೀಸ್  ಠಾಣೆ

ದಿನಾಂಕ:09/05/2021 ರಂದು ಸಖರಾಯಪಟ್ಟಣ  ಠಾಣಾ ಸರಹದ್ದಿನ ಅಯ್ಯನಕೆರೆ ಕ್ರಾಸ್ ನಿಂದ ಸ್ವಲ್ಪ ಮುಂದೆ ಒಬ್ಬ ವ್ಯಕ್ತಿಯು  ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಒಬ್ಬ ವ್ಯಕ್ತಿಯು ಪ್ಲಾಸ್ಟಿಕ್  ಚೀಲದಲ್ಲಿ ಮದ್ಯವನ್ನು ಹಿಡಿದುಕೊಂಡು ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ಯಿಯನ್ನು ವಶಕ್ಕೆ ಪಡೆದು ಆತನ ಹೆಸರು ವಿಳಾಸ ತಿಳಿಯಲಾಗಿ ರಂಗನಾಥ ಬಿನ್ ಸಿದ್ದಯ್ಯ ಎಂದು ತಿಳಿಸಿದ್ದು ಅಕ್ರಮವಾಗಿ ಮದ್ಯ ಮಾಡುತ್ತಿದ್ದು ಯಾವುದೇ ಪರವಾನಗಿ ಇಲ್ಲದೆ ಸಾರ್ವಜನಿಕರನ್ನು ಗುಂಪುಸೇರಿಸಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಸಕರ್ಾರವು ಹೊರಡಿಸಿರುವ ಕೊವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿದ ರಂಗನಾಥನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ ಪ್ಲಾಸ್ಟಿಕ್ ಚೀಲವನ್ನು ಪರಿಶೀಲಿಸಲಾಗಿ  90 ಎಂ.ಎಲ್.ರಾಜಾವಿಸ್ಕಿಯ ಲೇಬಲ್ ಇರುವ  34  ಮದ್ಯದ ಟೆಟ್ರಾಪೌಚ್ಗಳು ಮದ್ಯದ  ಅಂದಾಜು ಬೆಲೆ 1190/- ರೂ ಅಗಿದ್ದು, ಹಾಗೂ ಮದ್ಯ ಮಾರಾಟದಿಂದ ಬಂದ 180 /ರೂ ಹಣವನ್ನು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾಯರ್ಾಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

 

ಅಜ್ಜಂಪುರ  ಪೊಲೀಸ್  ಠಾಣೆ

ಕೊವಿಡ್-19ನಿಯಮ  ಉಲ್ಲಂಘನೆ ಪ್ರಕರಣ .  

 

ದಿನಾಂಕ:09/05/2021 ರಂದು ಪಿರ್ಯಾದುದಾರರಾದ ಭರತ್ ರವರು ಕೊವಿಡ್-19 ನಿಯಮಾವಳಿಗಳ ಕಟ್ಟುನಿಟ್ಟಾದ ಪಾಲನೆಗಾಗಿ ಗ್ರಾಮಗಳಲ್ಲಿ ಭೇಟಿ ಮಾಡುತ್ತಿರುವ  ಸಂದರ್ಭದಲ್ಲಿ ಅಜ್ಜಂಪುರ ಠಾಣಾ ವ್ಯಾಪ್ತಿಯ ಹೊಸಳ್ಳಿ ತಾಂಡ್ಯದ  ಚಂದ್ರಾನಾಯ್ಕ ರವರು ಕೊವಿಡ್-19 ನಿಯಾಮವಳಿಗಳನ್ನು ಮೀರಿ ಸುಮಾರು 75-80 ಜನರು  ಮದುವೆ ಕಾರ್ಯಕ್ರಮಕ್ಕೆ ಸೇರಿದ್ದು ಸಕರ್ಾರದ ಕೊವಿಡ್-19 ನಿಯಾಮವಳಿಗಳನ್ನು ಉಲ್ಲಂಘಿಸಿರುತ್ತಾರೆಂದು ಪಿರ್ಯಾದು ನೀಡಿದ ಮೇರೆಗೆ ಚಂದ್ರಾನಾಯ್ಕರವರ ವಿರುದ್ದ  ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ನಗರ  ಪೊಲೀಸ್  ಠಾಣೆ

ದಿನಾಂಕ:09/05/2021 ರಂದು ನಗರ ಠಾಣೆಯ ಎಎಸ್ ಧಮರ್ೆಗೌಡರವರು ಕೊವಿಡ್ ಸಂಬಂಧ ನಗರದಲ್ಲಿ ಗಸ್ತು ಮಾಡುತ್ತಿರುವಾಗ ನಗರದ ನೆಹರು ರಸ್ತೆಯಲ್ಲಿರುವ  ಲೇಡಿ ಲುಕ್ ,ಲೇಡಿಸ್ ಅಂಡ್ ಕಿಡ್ಸ್ ವೇರ್ ಬಟ್ಟೆ ಅಂಗಡಿ ತೆರೆದಿದ್ದು ,ಅಂಗಡಿಯೊಳಗೆ 4-5 ಜನರು ಸೇರಿಸಿಕೊಂಡು ವ್ಯಾಪಾರ ಮಾಡುತ್ತಿದ್ದು, ಕೊವಿಡ್ -19 ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಕರ್ಾರವು ಹೊರಡಿಸಿರುವ ಆದೇಶಗಳನ್ನು ಉಲ್ಲಂಘನೆ ಮಾಡಿದ ಲೇಡಿ ಲುಕ್ , ಲೇಡಿಸ್ ಅಂಡ್ ಕಿಡ್ಸ್ ವೇರ್ ಬಟ್ಟೆ ಅಂಗಡಿ ಮಾಲೀಕರಾದ ಶ್ರೀಮತಿ.ಫರ್ಜನಾ ಕೋಂ ಖುರಂ, ಚಿಕ್ಕಮಗಳೂರು ವಾಸಿರವರ ವಿರುದ್ದ   ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಇತ್ತೀಚಿನ ನವೀಕರಣ​ : 10-05-2021 06:33 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080