ಅಭಿಪ್ರಾಯ / ಸಲಹೆಗಳು

ಜಯಪುರ   ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ ಪ್ರಕರಣ

ದಿನಾಂಕ:10/05/2021 ರಂದು ಜಯಪುರ ಠಾಣಾ ವ್ಯಾಪ್ತಿಯ ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಕುಂದೂರು ವಾಸಿಯಾದ ಸೀನಾ ಎಂಬುವವರು ತಮ್ಮ ವಾಸದ ಮನೆಯ ಮುಂದೆ ಅಕ್ರಮವಾಗಿ ಸಾರ್ವಜನಿಕರಿಗೆ  ಮದ್ಯ ಮಾರಾಟ ಮಾಡಲು ಮದ್ಯವನ್ನು ಸಂಗ್ರಹಿಸಿಟ್ಟುಕೊಂಡಿರುವ  ಬಗ್ಗೆ ಬಂದ  ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಸೀನಾ ಎಂಬುವವನು ಅಕ್ರಮವಾಗಿ ಮದ್ಯ ಮಾರಾಟ ಮಾಡಲು ಮದ್ಯವನ್ನು ಸಂಗ್ರಹಿಸಿಟ್ಟುಕೊಂಡಿದ್ದು ಆರೋಪಿಯನ್ನು ಹಾಗೂ ಆನತ ಬಳಿಯಿದ್ದ 90 ಎಂ.ಎಲ್.ಓರಿಜಿನಲ್ ಚಾಯ್ಸ್ ಡಿಲೆಕ್ಸ್ ವಿಸ್ಕಿ ಎಂದು ಲೇಬಲ್ ಇರುವ  32  ಮದ್ಯದ ಟೆಟ್ರಾಪೌಚ್ಗಳು, ಮದ್ಯದ  ಅಂದಾಜು ಬೆಲೆ 1124.16 /- ರೂ ಅಗಿದ್ದು, ಸದರಿ ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಕಡೂರು   ಪೊಲೀಸ್  ಠಾಣೆ

ಕೊವಿಡ್-19ನಿಯಮ  ಉಲ್ಲಂಘನೆ ಪ್ರಕರಣ . 

 

ದಿನಾಂಕ:10/05/2021 ರಂದು ಧಮರ್ೆಗೌಡ ,ಎಎಸ್ಐ ರವರು ಕೊವಿಡ್ ಸಂಬಂದ ರಾಜ್ಯಾದ್ಯಂತ ಲಾಕ್ ಡೌನ್ ಆದೇಶವಾಗಿದ್ದರಿಂದ  ನಗರದ ಬಸವೇಶ್ವರ ಸರ್ಕಲ್ ಬಳಿ ಅನಗತ್ಯವಾಗಿ ಓಡಾಡುವ ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ಮರವಂಜಿ ಸರ್ಕಲ್ ಕಡೆಯಿಂದ ಬಂದ ಕೆಎ-18 ಎಕ್ಸ್-8856 ಬೈಕಿನಲ್ಲಿ ಒಬ್ಬ ಆಸಾಮಿಯು ಹೆಲ್ಮೆಟ್ ಧರಿಸದೆ ಹಿಂಬದಿಯಲ್ಲಿ ಒಬ್ಬರನ್ನು ಕೂರಿಸಿಕೊಂಡು ಬರುತ್ತಿದ್ದು ವಾಹನವನ್ನು ನಿಲ್ಲಿಸಿ ಏಕೆ ಅನಗತ್ಯವಾಗಿ ಬೈಕಿನಲ್ಲಿ ಓಡಾಡುತ್ತಿದ್ದೀರಿ ಎಂದು ಕೇಳಿದ್ದಕ್ಕೆ ಬೈಕ್ ಚಾಲಕನಾದ ನಾಗರಾಜುರವರು ಏರುದ್ವನಿಯಲ್ಲಿ ಮಾತನಾಡಿದ್ದು ಅವರಿಗೆ ಹೆಲ್ಮೆಟ್ ಧರಿಸದಿದ್ದಕ್ಕೆ ಐಎಂವಿ ಕಾಯ್ತೆಯಡಿಯಲ್ಲಿ ದಂಡ ವಿಧಿಸಿದ್ದು ನಾಗರಾಜುರವರು ಸಿಪಿಐ ರವರ ಮೊಬೈಲ್ ಗೆ ಕರೆ ಮಾಡಿ ಏರುದ್ವನಿಯಲ್ಲಿ ಏಕವಚನದಲ್ಲಿ ಮಾತನಾಡಿದ್ದಲ್ಲದೆ ,ನನಗೂ ಸಹ ಪುನಃ ಮೊಬೈಲ್ ಗೆ ಕರೆ ಮಾಡಿ ಏರುದ್ವನಿಯಲ್ಲಿ ಏಕವಚನದಲ್ಲಿ ಮಾತನಾಡಿದ್ದು ನಾನು ಕರ್ತವ್ಯ ನಿರ್ವಹಿಸಲು ಆತ್ಮಸ್ಥೈರ್ಯವನ್ನು ಕುಂದಿಸುವ ರೀತಿಯಲ್ಲಿ ಮಾತನಾಡಿ ಸರ್ಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದು ,ಕೊವಿಡ್ ಸಂಬಂದ ರಾಜ್ಯಾದ್ಯಂತ ಲಾಕ್ ಡೌನ್ ಆದೇಶವಿದ್ದರೂ ಕೆಎ-18 ಎಕ್ಸ್-8856 ಬೈಕಿನಲ್ಲಿ ಹೆಲ್ಮೆಟ್ ಧರಿಸದೆ ಹಿಂಬದಿಯಲ್ಲಿ ಒಬ್ಬರನ್ನು ಕೂರಿಸಿಕೊಂಡು ಸಕರ್ಾರದ ಆದೇಶವನ್ನು ಉಲ್ಲಂಘಿಸಿದ ನಾಗರಾಜುರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಮಲ್ಲಂದೂರು   ಪೊಲೀಸ್  ಠಾಣೆ

ಕೊವಿಡ್-19ನಿಯಮ  ಉಲ್ಲಂಘನೆ ಪ್ರಕರಣ

 

ದಿನಾಂಕ:11/05/2021 ರಂದು ಪಿರ್ಯಾದುದಾರರು ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದುದಾರರು ಈಗ್ಗೆ 15 ವರ್ಷಗಳಿಂದ ಹಾಜರ್ಿಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕತರ್ೆಯಾಗಿ ಕೆಲಸ ಮಾಡುತ್ತಿದ್ದು , ದಿನಾಂಕ 10-05-2021 ರಂದು ಗರ್ಬಿಣಿಯರಿಗೆ, ಬಾಣಂತಿಯರಿಗೆ ಹಾಗೂ ಮಕ್ಕಳಿಗೆ ಆಹಾರ ವಿತರಣೆ ಮಾಡಲು ಅಂಗನವಾಡಿ ಕೇಂದ್ರಕ್ಕೆ ಹೋಗಿ ಕರ್ತವ್ಯ ಮುಗಿಸಿ ವಾಪಾಸ್ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಹಾರ್ಜಿಹಳ್ಳಿ ವಾಸಿಯಾದ ಕುಮಾರ ಬಿನ್ ರಾಮಯ್ಯ ರವರು ನನ್ನನ್ನು ಅಡ್ಡಹಾಕಿ ಊರಿನ ವಿಚಾರವನ್ನು ಅಂದರೆ ಕೊರೋನಾ ವಿಚಾರವನ್ನು ನಮ್ಮ ಊರಿನವರಿಗೆ ಇಂಥವರಿಗೆ  ಪಾಸಿಟಿವ್ ಬಂದಿದೆ ಎಂದು ಎಲ್ಲರಿಗೂ ಪೋನ್ ಮಾಡಿ ಹೇಳುತ್ತಿರುವೆ  ನಿನಗೆ ಬೇರೆ ಯಾವ ಕೆಲಸ ಇಲ್ಲವೇನೆ ಎಂದು ಬಾಯಿಗೆ ಬಂದಂತೆ ಅವಾಚ್ಯವಾಗಿ ಬೈದು ನನ್ನ ಕರ್ತವ್ಯಕ್ಕೆ ಅಡ್ಡಪಡಿಸಿದ್ದು ಕೊವಿಡ್ -19 ನಿಯಮಾವಳಿಗಳನ್ನು ಉಲ್ಲಂಘಿಸಿದ ಕುಮಾರರವರ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

 

ಮೂಡಿಗೆರೆ   ಪೊಲೀಸ್  ಠಾಣೆ

ಅಕ್ರಮ ಮರಳು ಕಳ್ಳತನ ಪ್ರಕರಣ

 

ದಿನಾಂಕ:11/05/2021 ರಂದು ಪಿರ್ಯಾದುದಾರರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಮಾಡುತ್ತಿರುವಾಗ ಕಾರಬೈಲು ಗ್ರಾಮದಲ್ಲಿ ಹರಿಯುವ  ಸಣ್ಣಹಳ್ಳದ ಬಳಿ ಯಾರೋ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಟ್ಟು ಟ್ರಾಕ್ಟರ್ನಲ್ಲಿ ಸಾಗಾಟ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಲಾಗಿ ಒಬ್ಬ ಆಸಾಮಿಯು ಮರಳನ್ನು ಟ್ರಾಕ್ಟರ್ನಲ್ಲಿ ಲೋಡ್ ಮಾಡುತ್ತಿದ್ದ ನಮ್ಮಗಳನ್ನು ನೋಡಿ ಓಡಿಹೋಗಿ ಪರಾರಿಯಾಗಿರುತ್ತಾನೆ. ಟ್ರಾಕ್ಟರ್ ನಂ ಕೆಎ18 ಟಿ 7497 ಹಾಗೂ  ಟ್ರೆಲರ್ನಂ ಕೆಎ 18 ಟಿ 7498 ಆಗಿದ್ದು ಸದರಿ ಆಸಾಮಿಯು ಸಕರ್ಾರದ ಸ್ವತ್ತಾದ ಮರಳನ್ನು ಹಳ್ಳದಿಂದ ಕಳ್ಳತನ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ಲೋಡ್ ಮಾಡುತ್ತಿದ್ದ ಸದರಿ ಆಸಾಮಿಯವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ

ಇತ್ತೀಚಿನ ನವೀಕರಣ​ : 11-05-2021 06:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080