ಅಭಿಪ್ರಾಯ / ಸಲಹೆಗಳು

ಅಜ್ಜಂಪುರ  ಪೊಲೀಸ್  ಠಾಣೆ

ಅಕ್ರಮ ಜೂಜಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ

ದಿನಾಂಕ:11/05/2021 ರಂದು ಅಜ್ಜಂಪುರ  ಠಾಣಾ ವ್ಯಾಪ್ತಿಯ ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಆಸಂದಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಇಸ್ಪೀಟ್ ಜುಜಾಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗಆಸಂದಿ ಗ್ರಾಮದ ತ್ಯಾರಪ್ಪ ಎಂಬುವವರ ಮನೆಯ ಮುಂಭಾಗ ಸುಮಾರು ಜನರು ಸಾರ್ವಜನಿಕ ಸ್ಥಳದಲ್ಲಿ ಬೀದಿ ಲೈಟ್ ಬೆಳಕಿನಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್ ಜೂಜಾಟವಾಡುತ್ತಿದ್ದು ದಾಳಿ ಮಾಡಿದಾಗ ನಮ್ಮಗಳನ್ನು ನೋಡಿ ಸುಮಾರು ಜನರು ಓಡಿ ಹೊಗಿದ್ದು 6 ಜನರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ 52 ಇಸ್ಪೀಟ್ ಎಲೆಗಳು, ನಗದು ಹಣ 9,910/-ರೂ ಹಾಗೂ ಒಂದು ಚೆಕ್ಸ್ ಟವಲ್ ನ್ನು ವಶಕ್ಕೆ  ಪಡೆದು  ಅರೋಪಿತರ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಬಣಕಲ್   ಪೊಲೀಸ್  ಠಾಣೆ

ಅಕ್ರಮ ಮದ್ಯ ಮಾರಾಟ ಹಾಗೂ ಕೊವಿಡ್-19ನಿಯಮ  ಉಲ್ಲಂಘನೆ ಪ್ರಕರಣ . 

ದಿನಾಂಕ:11 /05/2021 ರಂದು ಬಣಕಲ್  ಠಾಣಾ ಸರಹದ್ದಿನ ಬಸಗೋಡು ಗ್ರಾಮದ ಔಆಸಿಯಾದ ಸಣ್ಣೇಗೌಡ  ಎಂಬುವರು ಅವರ ಮನೆಯ  ಮುಂದೆ   ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಸಣ್ಣೇಗೌಡರವರು  ಮದ್ಯವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿದ್ದು ಆರೋಪಿಯು ಕೋವಿಡ್ ನಿಯಮದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸಾರ್ವಜನಿಕರನ್ನು ಗುಂಪು ಸೇರಿಸಿಕೊಂಡು ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಮದ್ಯವನ್ನು ಅಮಾನತ್ತುಪಡಿಸಿಕೊಂಡು ಬಂದು ಅರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿ.ಎಸ್ಐ. ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

ಲಕ್ಕವಳ್ಳಿ    ಪೊಲೀಸ್  ಠಾಣೆ

ಅಕ್ರಮ ಜೂಜಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ

ದಿನಾಂಕ:11/05/2021 ರಂದು ಲಕ್ಕವಳ್ಳಿ ಠಾಣಾ ವ್ಯಾಪ್ತಿಯ ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಲಕ್ಕವಳ್ಳಿಯ ಅರಣ್ಯ ಪ್ರದೇಶದ ಖಾಲಿ ಪ್ರದೇಶದಲ್ಲಿ  ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಇಸ್ಪೀಟ್ ಜುಜಾಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಲಕ್ಕವಳ್ಳಿಯ ಅರಣ್ಯ ಪ್ರದೇಶದ ಖಾಲಿ ಪ್ರದೇಶದಲ್ಲಿ 03ಜನರು  ಇಸ್ಪೀಟ್ ಜೂಜಾಟವಾಡುತ್ತಿದ್ದು 3 ಜನರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ 52 ಇಸ್ಪೀಟ್ ಎಲೆಗಳು, ನಗದು ಹಣ 3600 /-ರೂ ಹಾಗೂ ಒಂದು ನ್ಯೂಸ್ ಪೇಪರ್ ನ್ನು ವಶಕ್ಕೆ  ಪಡೆದು  ಅರೋಪಿತರ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಲಕ್ಕವಳ್ಳಿ    ಪೊಲೀಸ್  ಠಾಣೆ

ಅಕ್ರಮ ಜೂಜಾಟ ಹಾಗೂ ಕೊವಿಡ್ 19 ನಿಯಮ ಉಲ್ಲಂಘನೆ  ಪ್ರಕರಣ

ದಿನಾಂಕ:11/05/2021 ರಂದು ಲಕ್ಕವಳ್ಳಿ ಠಾಣಾ ವ್ಯಾಪ್ತಿಯ ಕೊರೋನಾ ಸಂಬಂಧ ಗಸ್ತು ಮಾಡುತ್ತಿರುವಾಗ ಮಂಡ್ರವಳ್ಳಿ ಗ್ರಾಮದ ಕೃಷ್ಣಾ ರವರ ಮನೆಯ ಮುಂದಿನ ಸಿಮೆಂಟ್ ರಸ್ತೆಯಲ್ಲಿ ಜನರು ಗುಂಪುಕಟ್ಟಿಕೊಂಡು ಕೊವಿಡ್ ನಿಯಮಾವಳಿಗಳನ್ನು ಉಲ್ಲಂಘಿಸಿ ಇಸ್ಪೀಟ್ ಜುಜಾಟವಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಇಸ್ಪೀಟ್ ಜೂಜಾಟವಾಡುತ್ತಿದ್ದ  5 ಜನರಲ್ಲಿ 3 ಜನರನ್ನು ವಶಕ್ಕೆ ಪಡೆದಿದ್ದು 2 ಜನರು ಓಡಿ ಹೋಗಿರುತ್ತಾರೆ .  ಅವರ ಬಳಿಯಿದ್ದ 52 ಇಸ್ಪೀಟ್ ಎಲೆಗಳು, ನಗದು ಹಣ 5100 /-ರೂ ಹಾಗೂ ಒಂದು ಹರಿದ ಚಾಪೆಯನ್ನು  ನ್ನು ವಶಕ್ಕೆ  ಪಡೆದು  ಅರೋಪಿತರ  ವಿರುದ್ದ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ. ಈ ಕಾರ್ಯಾಚರಣೆಯಲ್ಲಿ ಪಿಎಸ್ಐ ಮತ್ತು ಸಿಬ್ಬಂದಿಯವರು ಪಾಲ್ಗೊಂಡಿರುತ್ತಾರೆ.

 

ಇತ್ತೀಚಿನ ನವೀಕರಣ​ : 12-05-2021 07:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080