ಅಭಿಪ್ರಾಯ / ಸಲಹೆಗಳು

ಪತ್ರಿಕಾ ಪ್ರಕಟಣೆ

ದರೋಡೆಗೆ ಸಂಚು ಹಾಕುತ್ತಿದ್ದ ಆರೋಪಿಗಳು ವಶಕ್ಕೆ, ಎರಡು ಪಿಸ್ತೂಲ್, ಜೀವಂತ ಗುಂಡುಗಳು ಮತ್ತು ಮಾರಣಾಂತಿಕ ಆಯುಧಗಳು ವಶಕ್ಕೆ

    ದಿನಾಂಕ 18/07/2021 ರಂದು ಬೆಳಗ್ಗಿನ ಜಾವ ಸುಮಾರು 02.00 ಗಂಟೆಯ ಸಮಯದಲ್ಲಿ ಪಿ.ಎಸ್.ಐ. ಮೂಡಿಗೆರೆ ಪೊಲೀಸ್ ಠಾಣೆ ರವರು ರಾತ್ರಿ ಗಸ್ತು ನಿರ್ವಹಿಸುತ್ತಿದ್ದಾಗ ಮುದ್ರೆಮನೆ ಬಸ್ ನಿಲ್ದಾಣದ ರಸ್ತೆಯ ತಿರುವಿನಲ್ಲಿರುವ ಹಂಪ್ಸ್ ಹತ್ತಿರ ಯಾರೋ 4-5 ಜನರು ದಾರಿಯಲ್ಲಿ ಓಡಾಡುವ ವಾಹನಗಳನ್ನು ಅಡ್ಡಗಟ್ಟಿ ತಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ, ಪಿ.ಎಸ್.ಐ. ಮತ್ತು ಸಿಬ್ಬಂದಿಗಳು ಸದರಿ ಸ್ಥಳಕ್ಕೆ ಹೋದಾಗ ಪೊಲೀಸ್ ವಾಹನವನ್ನು ನೋಡಿ ಓಡಲು ಪ್ರಯತ್ನಿಸಿದ್ದು. 5 ಜನರ ಪೈಕಿ 4 ಜನರನ್ನು ಹಿಡಿದುಕೊಂಡಿದ್ದು, ಓರ್ವ ವ್ಯಕ್ತಿ ಕತ್ತಲೆಯಲ್ಲಿ ಓಡಿ ಹೋಗಿದ್ದು. ಸದರಿ ವ್ಯಕ್ತಿಗಳ ಹತ್ತಿರ ಪಿಸ್ತೂಲ್, ನಿಜ ಗುಂಡು, ಟಾರ್ಚ್, ಕಬ್ಬಿಣದ ರಾಡ್, ಡ್ಯಾಗರ್ ಮತ್ತು ಖಾರದ ಪುಡಿ ಇರುವುದು ಕಂಡು ಬಂದಿದ್ದು. ಸದರಿಯವರುಗಳು ಮಾರಾಕಾಸ್ತ್ರಗಳನ್ನು ಇಟ್ಟುಕೊಂಡು ರಾತ್ರಿ ಸಂಚರಿಸುವ ವಾಹನಗಳನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಅವರಿಂದ ಹಣ / ಬಂಗಾರವನ್ನು ದರೋಡೆ ಮಾಡಲು ಹೊಂಚು ಹಾಕಿರುವುದು ಕಂಡು ಬಂದಿದ್ದರಿಂದ ಎಲ್ಲರನ್ನು ವಶಕ್ಕೆ ತೆಗೆದುಕೊಂಡು, ಮೂಡಿಗೆರೆ ಪೊಲೀಸ್ ಠಾಣಾ ಮೊ. ನಂ. 145/2021 ಕಲಂ 399, 402 ಐಪಿಸಿ ಸಹಿತ 3 & 25 ಆಯುಧ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಲಾಗಿರುತ್ತದೆ.

    ಸದರಿ ಪ್ರಕರಣದಲ್ಲಿ ಆರೋಪಿಗಳ ವಿವರ ಮತ್ತು ಅವರ ವಿರುದ್ಧ ಈ ಹಿಂದೆ ದಾಖಲಾಗಿರುವ ಪ್ರಕರಣಗಳ ವಿವರ ಈ ಕೆಳಕಂಡಂತಿದೆ:

1)    ಶಿವಕುಮಾರ್ @ ಶಿವು ಬಿನ್ ಶ್ರೀಕಂಠ ಮೂರ್ತಿ, 29 ವರ್ಷ, ವ್ಯವಸಾಯ, ವಾಸ ಬಿ.ಹೊಸೂರು ಕಾಲೋನಿ, ಕೆರೆಗೋಡು ಅಂಚೆ, ಮಂಡ್ಯ ತಾಲ್ಲೂಕ್ ಮತ್ತು ಜಿಲ್ಲೆ. ನಿವೃತ್ತ ಮುಖ್ಯ ಶಿಕ್ಷಕರ 4 ನೇ ಮಗ, ಈತನು ಮಂಗಳೂರಿನಲ್ಲಿ ಡಿಪ್ಲೋಮ ಇನ್ ಆನಿಮೇಷನ್ ವಿದ್ಯಾಭ್ಯಾಸವನ್ನು ಮಾಡಿ ಕೊನೆಯಲ್ಲಿ ವಿದ್ಯಾಭ್ಯಾಸವನ್ನು ನಿಲ್ಲಿಸಿ, ವಾಪಸ್ ಮಂಡ್ಯಕ್ಕೆ ಬಂದು ಮೈಸೂರಿನಲ್ಲಿ ಟ್ರಾವೆಲ್ಸ್ ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದನು.
ಕ್ರ. ಸಂ.    ವರ್ಷ    ಜಿಲ್ಲೆ    ಪೊಲೀಸ್ ಠಾಣೆ    ಅಪರಾಧ
1    2016    ಮೈಸೂರು ನಗರ     ಎನ್.ಆರ್.ಮೊಹಲ್ಲ    ಎರಡು ವ್ಯಕ್ತಿಗಳ ಮೇಲೆ ಚಾಕುವಿನಿಂದ ಹಲ್ಲೆ
2    2017    ಬೆಂಗಳೂರು ನಗರ     ವಿದ್ಯಾರಣ್ಯಪುರ    ವ್ಯಕ್ತಿಯ ಮೇಲೆ ಹಲ್ಲೆ
3    2018    ಚಿಕ್ಕಮಗಳೂರು     ಆಲ್ದೂರು    ಚಾಕುವಿನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
4    2021    ಹಾಸನ ಜಿಲ್ಲೆ     ಚನ್ನರಾಯಪಟ್ಟಣ ಗ್ರಾಮಾಂತರ    ದರೋಡೆ ಪ್ರಕರಣ

ಈತನು ಇಂತಹ ಹಲವಾರು ಕೃತ್ಯಗಳಲ್ಲಿ ಭಾಗವಹಿಸಿ ಪಿಸ್ತೂಲ್ ನಂತರ ಆಯುಧಗಳನ್ನು ಉಪಯೋಗಿಸಲು ಶುರು ಮಾಡಿದ್ದು. ಈತನು ಮೈಸೂರು ಕಾರಾಗೃಹದಲ್ಲಿ ರೌಡಿ ಶೀಟರ್ ಮತ್ತು ಕೊಲೆ ಪ್ರಕರಣದ ಆರೋಪಿ ಯಾಚೇನಹಳ್ಳಿ ಚೇತನ್ ಪರಿಚಯ ಮಾಡಿಕೊಂಡು, ಆತನ ಸಹಾಯದಿಂದ ಉತ್ತರ ಪ್ರದೇಶಕ್ಕೆ ಹೋಗಿ ಪಿಸ್ತೂಲ್ ಮತ್ತು ಜೀವಂತ ಗುಂಡುಗಳನ್ನು ಖರೀದಿಸಿರುತ್ತಾನೆ. ಇತ್ತೀಚಿಗೆ ಇತರರೊಂದಿಗೆ ಸೇರಿಕೊಂಡು ಇದೇ ತಿಂಗಳು ಚನ್ನರಾಯಪಟ್ಟಣದಲ್ಲಿ ದರೋಡೆ ಮಾಡಿರುತ್ತಾನೆ. ಯಾಚೇನಹಳ್ಳಿ ಚೇತನ್ ಕಾರಾಗೃಹದಿಂದ ಬಿಡುಗಡೆಯಾದ ನಂತರ ತಲೆಮರೆಸಿಕೊಂಡಿರುತ್ತಾನೆ.

2)    ಕುಮಾರ ಸ್ವಾಮಿ @ ಚೇತು @ ಹುಲಿವಾಲ ಚೇತು ಬಿನ್ ನಂಜುಂಡೇಗೌಡ, 23 ವರ್ಷ, ಕೂಲಿ, ವಾಸ ಹುಲಿವಾಲ ಕೊಪ್ಪಲು, ಸಿಂಗಾಪುರ ಅಂಚೆ, ಹೊಳೆನರಸೀಪುರ ತಾಲ್ಲೂಕ್, ಹಾಸನ ಜಿಲ್ಲೆ. ಈತನು ವಿದ್ಯಾಭ್ಯಾಸವನ್ನು ನಿಲ್ಲಿಸಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುತ್ತಾನೆ.
ಕ್ರ. ಸಂ.    ವರ್ಷ    ಜಿಲ್ಲೆ    ಪೊಲೀಸ್ ಠಾಣೆ    ಅಪರಾಧ
1    2016    ಉಡುಪಿ     ಉಡುಪಿ ನಗರ    ದರೋಡೆ ಮಾಡಲು ಸಂಚು
2    2018    ಹಾಸನ    ಹೊಳೇನರಸೀಪುರ    ಓರ್ವ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ
3    2018    ಹಾಸನ     ಚನ್ನರಾಯಪಟ್ಟಣ ಗ್ರಾಮಾಂತರ    ದರೋಡೆ ಮಾಡಲು ಸಂಚು
4    2021    ಹಾಸನ    ಚನ್ನರಾಯಪಟ್ಟಣ ಗ್ರಾಮಾಂತರ    ದರೋಡೆ ಪ್ರಕರಣ

ಯಾಚೇನಹಳ್ಳಿ ಚೇತನ್ ಮುಖಾಂತರ ಪರಿಚಯವಾಗಿ ಈ ಪ್ರಕರಣದ ಆರೋಪಿ ಶಿವಕುಮಾರ್ ಮತ್ತು ಇತರರೊಂದಿಗೆ ಸೇರಿಕೊಂಡು ಇದೇ ತಿಂಗಳು ಚನ್ನರಾಯಪಟ್ಟಣದಲ್ಲಿ ದರೋಡೆ ಮಾಡಿರುತ್ತಾನೆ.

3)    ಅಜಯ್ ಕುಮಾರ್ ಸಿಂಗ್ @ ಅಜಯ್ ಸಿಂಗ್ @ ಬಾಲ ಮೂರ್ತಿ ಬಿನ್ ಸುನಿಲ್ ಸಿಂಗ್ ರಾಜ್‍ಪುತ್, 25 ವರ್ಷ, ಆಂದ್ರಹಳ್ಳಿ ಮುಖ್ಯ ರಸ್ತೆ, ಪೂಜಾರಮ್ಮ ದೇವಸ್ಥಾನದ ಹತ್ತಿರ, ಬೆಂಗಳೂರು. ಈತನು ಮೂಲತ ಜಾರ್ಖಂಡ್ ರಾಜ್ಯದವನಾಗಿದ್ದು.
ಕ್ರ. ಸಂ.    ವರ್ಷ    ಜಿಲ್ಲೆ    ಪೊಲೀಸ್ ಠಾಣೆ    ಅಪರಾಧ
1    2016    ಮಂಡ್ಯ    ಮಂಡ್ಯ ಗ್ರಾಮಾಂತರ    ಡಕಾಯಿತಿ ಪ್ರಕರಣ
2    2016    ಚಿಕ್ಕಮಗಳೂರು    ಬೀರೂರು    ಬಾಡಿಗೆ ಕಾರಿನ ಚಾಲಕನ ಮೇಲೆ ಹಲ್ಲೆ ಮಾಡಿ ವಾಹನ ತೆಗೆದುಕೊಂಡು ಹೋದ ಪ್ರಕರಣ
3    2021    ಹಾಸನ    ಚನ್ನರಾಯಪಟ್ಟಣ ಗ್ರಾಮಾಂತರ    ದರೋಡೆ ಪ್ರಕರಣ

ಈತನು ಚಿಕ್ಕಮಗಳೂರು ಜಿಲ್ಲೆಯ ಬೀರೂರು ಪೊಲೀಸ್ ಠಾಣೆಯಲ್ಲಿ ದಾಖಲಾದ ದರೋಡೆ ಪ್ರಕರಣದಲ್ಲಿ ಕಾರಾಗೃಹದಲ್ಲಿದ್ದಾಗ ಆರೋಪಿ (1) ಶಿವಕುಮಾರ್ ಮಂಡ್ಯ ಮತ್ತು ಆರೋಪಿ (4) ಶಿವಕುಮಾರ್ @ ಶಿವ ರವರೊಂದಿಗೆ ಸ್ನೇಹ ಬೆಳಸಿ, ಇತ್ತೀಚಿಗೆ ಇತರರೊಂದಿಗೆ ಸೇರಿಕೊಂಡು ಚನ್ನರಾಯಪಟ್ಟಣದಲ್ಲಿ ದರೋಡೆ ಮಾಡಿರುತ್ತಾನೆ.

4)    ಶಿವಕುಮಾರ್ @ ಶಿವ ಬಿನ್ ರಾಮ ಪೂಜಾರಿ, ಅಡುಗೆ ಕೆಲಸ, ವಾಸ ಆಜಾದ್ ನಗರ, ತರುವೆ ಗ್ರಾಮ, ಮೂಡಿಗೆರೆ ತಾಲ್ಲೂಕ್, ಚಿಕ್ಕಮಗಳೂರು ಜಿಲ್ಲೆ.
ಕ್ರ. ಸಂ.    ವರ್ಷ    ಜಿಲ್ಲೆ    ಪೊಲೀಸ್ ಠಾಣೆ    ಅಪರಾಧ
1    2017    ಚಿಕ್ಕಮಗಳೂರು    ಮೂಡಿಗೆರೆ    ಹಲ್ಲೆ ಪ್ರಕರಣ
2    2018    ಚಿಕ್ಕಮಗಳೂರು    ಬಣಕಲ್    ಹಲ್ಲೆ ಪ್ರಕರಣ
    
ಈತನು ಚಿಕ್ಕಮಗಳೂರು ಕಾರಾಗೃಹದಲ್ಲಿದ್ದಾಗ ಆರೋಪಿ (1) ಶಿವಕುಮಾರ್ ಮಂಡ್ಯ ಪರಿಚಯವಾಗಿ ಈತನ ಜೊತೆ ಸೇರಿ ಮೂಡಿಗೆರೆಯಲ್ಲಿ ಈ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.

ಸ್ಥಳದಿಂದ ಓಡಿ ಹೋದ ವ್ಯಕ್ತಿಯ ಹೆಸರು ನಾಗಿ, ಕೋಳಿ ಅಂಗಡಿಯಲ್ಲಿ ಕೆಲಸ, ವಾಸ ಕಿಕ್ಕೇರಿ, ಮಂಡ್ಯ ಎಂಬುದಾಗಿ ತಿಳಿದು ಬಂದಿರುತ್ತದೆ. ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ನಾಗಿ ಮತ್ತು ಯಾಚೇನಹಳ್ಳಿ ಚೇತನ್ ರವರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಆರೋಪಿಗಳಿಂದ ಎರಡು ಪಿಸ್ತೂಲ್ (7.65 ಎಂ.ಎಂ.), ಎರಡು ನಿಜ ಗುಂಡು, ಒಂದು ಡ್ಯಾಗರ್, ಕಬ್ಬಿಣದ ರಾಡ್, ಎರಡು ಟಾರ್ಚ್, ಖಾರದ ಪುಡಿ, ರೂ. 10,000.00 ನಗದು ಮತ್ತು ಎರಡು ಮೋಟಾರ್ ಸೈಕಲ್ ನ್ನು ವಶಪಡಿಸಿಕೊಳ್ಳಲಾಗಿರುತ್ತದೆ.

    ಮೇಲ್ಕಂಡ ಎಲ್ಲಾ ಆರೋಪಿಗಳು ವೃತ್ತಿಪರ ಡಕಾಯಿತಿ / ದರೋಡೆ, ಕೊಲೆಗೆ ಯತ್ನದಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುತ್ತಾರೆ.

    ಯಾಚೇನಹಳ್ಳಿ ಚೇತನ್ ಗ್ಯಾಂಗ್ ಮತ್ತು ಬರಗೂರು ವಿಜಿ, ಮಾಸ್ತಿ ಮತ್ತು ಬಾದು ಗ್ಯಾಂಗ್ ಮಧ್ಯ ಹಳೆಯ ದ್ವೇಷದ ಹಿನ್ನಲೆಯಲ್ಲಿ ಆಗಿಂದಾಗ್ಗೆ ಗ್ಯಾಂಗ್ ವಾರ್ ಗಳು ನಡೆಯುತ್ತಿದ್ದು. ಇಂತಹ ಗ್ಯಾಂಗ್ ವಾರ್ ಗಳಲ್ಲಿ ಬಹಳಷ್ಟು ಬಾರಿ ಯಾಚೇನಹಳ್ಳಿ ಚೇತನ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರುತ್ತದೆ. ಇದಕ್ಕಾಗಿ ಆತನು ಪಿಸ್ತೂಲ್ ಹೊಂದಿದ್ದನು.

    ಸದರಿ ಪ್ರಕರಣದಲ್ಲಿ ಯಶಸ್ವಿಯಾಗಿ ಆರೋಪಿಗಳನ್ನು ಬಂಧಿಸಲು ಮತ್ತು ಮಾರಣಾಂತಿಕ ಆಯುಧಗಳನ್ನು ವಶಪಡಿಕೊಳ್ಳಲು ಶ್ರಮವಹಿಸಿದ ಸಿ.ಪಿ.ಐ. ಮೂಡಿಗೆರೆ ಸೋಮಶೇಖರ್ ಜೆ. ಸಿ., ಪಿ.ಎಸ್.ಐ. ಮೂಡಿಗೆರೆ ರವಿ ಜಿ. ಎ., ಪಿ.ಎಸ್.ಐ. ಚಂದ್ರಶೇಖರ್ ಸಿ. ಎಲ್., ಪ್ರೊ.ಪಿ.ಎಸ್.ಐ. ಬರ್ಮಪ್ಪ ಮತ್ತು ಮಂಜುನಾಥ, ಎ.ಎಸ್.ಐ. ವೆಂಕಟೇಶ್ ಮೂರ್ತಿ, ತಿಮ್ಮಪ್ಪ ಮತ್ತು ಸಿಬ್ಬಂದಿಗಳಾದ ಗಿರೀಶ್, ವಿಜಯ್ ಕುಮಾರ್, ದಯಾನಂದ್, ಚೇತನ್, ರುದ್ರೇಶ್ ಮತ್ತು ಪ್ರದೀಪ್ ಕುಮಾರ್ ರವರನ್ನು ಪೊಲೀಸ್ ಅಧೀಕ್ಷಕರವರು ಶ್ಲಾಘಿಸಿರುತ್ತಾರೆ.

    ಇಂತಹ ಗಂಭೀರ ಅಪರಾಧವನ್ನು ತಡೆದು, ಆರೋಪಿಗಳನ್ನು ಬಂಧಿಸಿ, ಮಾರಣಾಂತಿಕ ಆಯುಧಗಳನ್ನು ವಶಪಡಿಸಿಕೊಂಡಿರುವ ನಿಟ್ಟಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿ.ಪಿ.ಐ. ಮೂಡಿಗೆರೆ ವೃತ್ತ ಮತ್ತು ತಂಡಕ್ಕೆ ಮಾನ್ಯ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನಿರೀಕ್ಷಕರು, ಕರ್ನಾಟಕ ರಾಜ್ಯ, ಬೆಂಗಳೂರು ರವರು ಒಂದು ಲಕ್ಷ ಬಹುಮಾನವನ್ನು ಘೋಷಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 20-07-2021 11:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080