ಅಭಿಪ್ರಾಯ / ಸಲಹೆಗಳು

ಚಾಲಕರಿಗೆ ಸಲಹೆ

ವಾಹನಗಳ ಚಾಲಕರಿಗೆ ಸಲಹೆಗಳು

ಅ) ದ್ವಿಚಕ್ರವಾಹನ ಚಾಲಕರಿಗೆ ಸಲಹೆಗಳು

ರಸ್ತೆಯಲ್ಲಿ ಅತಿ ಹೆಚ್ಚು ತೊಂದರೆಗೀಡಾಗುವವರು ನೀವೆಂಬುದನ್ನು ಗಮನಿಸಿ.

ದ್ವಿಚಕ್ರವಾಹನಗಳು ರಸ್ತೆಯಲ್ಲಿ ಕಡಿಮೆ ಸ್ಥಳವನ್ನು ಅಕ್ರಮಿಸಿಕೊಳ್ಳುತ್ತವೆ. ಕಡಿಮೆ ಇಂಧನವನ್ನು ಬಳಸುತ್ತವೆ. ರಸ್ತೆಗಳನ್ನು ಹದಗೆಡಿಸುವುದು ಅಪರೂಪ ಎಲ್ಲವೂ ಅನುಕೂಲಕರ/ಉತ್ತಮ ಅಂಶಗಳು ಆದರೆ ದುರದೃಷ್ಟವಶಾತ್ ಅನೇಕ ಬೇಜವಾಬ್ದಾರಿಯುತ ದ್ವಿಚಕ್ರ ವಾಹನ ಸವಾರರೆ ಈ ಕೆಳಗಿನ ನಿಮಯಗಳನ್ನು ಪಾಲಿಸಿದಲ್ಲಿ ನಿಮಗೆ ಮತ್ತು ಇತರರಿಗೆ ವಾಹನ ಚಾಲನಾೆ ಹಿತವಾಗಿರುತ್ತದೆ.
ಎಡಪಥಕ್ಕೆ ಅಂಟಿಕೊಂಡು ಸಾಗಿ ಮತ್ತು ಬಲಗಡೆಯ ಪಥವನ್ನು ವೇಗವಾಗಿ ಚಲಿಸುವ ವಾಹನಗಳಿಗೆ ಬಿಟ್ಟುಕೊಡಿ.
ಎಡಗಡೆಯಿಂದ ಮುನ್ನುಗ್ಗಬೇಡಿ.
ನಿಮ್ಮ ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ.
ನಿಮ್ಮ ವಾಹನದ ಇಂಜಿನ್ನ್ನು ಸುಸ್ಥಿತಿಯಲ್ಲಿಡಿ.
ಮಿತಿಮೀರಿದ ವೇಗದಿಂದ ವಾಹನವನ್ನು ಓಡಿಸಬೇಡಿ
ಅನಗತ್ಯವಾಗಿ ಶಬ್ಧ ಮಾಡಬೇಡಿ.
ಪ್ರಾಣ ಅಮೂಲ್ಯವಾದದ್ದು ಎಂಬುದನ್ನು ತಿಳಿಯಿರಿ, ಯಾವುದೇ ಅವಘಡ ಸಂಭವಿಸಿದರೆ ಕಾರು ಮತ್ತು ಬಸ್ಸುಗಳ ಚಾಲಕರಿಗಿಂತ ನೀವೇ ಹೆಚ್ಚು ತೊಂದರೆಗೆ ಒಳಗಾಗುವುದು ಎಂಬುದು ನಿಮಗೆ ತಿಳಿದಿರಲಿ.

ಬಿ) ಕಾರು ಚಾಲಕರಿಗೆ ಸಲಹೆಗಳು:

ಪಾದಚಾರಿಗಳು ಮತ್ತು ಸೈಕಲ್ ಸವಾರರ ಬಗ್ಗೆ ಗಮನಹರಿಸಿ, ಅದರಲ್ಲೂ ಮಳೆ ಮುಂತಾದ ಹವಾಮಾನ ಉತ್ತಮವಾಗಿಲ್ಲದಿರುವಾಗ.
ನೀವು ಕಾರಿನ ಮಾಲೀಕರಾಗುವ ವಿಶೇಷ ಹಕ್ಕು ಹಾಗೂ ಸಾಮಥ್ರ್ಯವುಳ್ಳ ಕೆಲವೇ ಮಂದಿಯಲ್ಲಿ ಒಬ್ಬರು. ಕಾರು ನಡೆಸಲು ಕೆಲವು ಸರಳ ನಿಯಮಗಳನ್ನು ಪಾಲಿಸುವುದರಿಂದ ವಾಹನ ಚಾಲನಾೆ ಆನಂದವೆನ್ನಿಸಬಹುದು.
ಜಂಕ್ಷನ್ ಬಳಿ ಬಲಗಡೆಯ ವಾಹನಗಳಿಗೆ ದಾರಿ ಬಿಡಿ. ಪ್ರತಿಯೊಬ್ಬರು ಅನುಕೂಲಕ್ಕಾಗಿ ಹಾತೊರೆಯುವಾಗ ಉಂಟಾಗುವ ಪರಿಣಾಮವೆಂದರೆ ತಪ್ಪಿಸಿಕೊಳ್ಳಲಾಗದ ವಾಹನ ಸಂದಣಿಯ ಗಜಿಬಿಜಿ.
ಅನವಶ್ಯವಗಿ ಶಬ್ಧಮಾಡದಿರಿ. ಅಪಾಯದ ಮುನ್ಸೂಚನೆ ನೀಡಲು ಮಾತ್ರ ಅದನ್ನು ಬಳಸಿ, ಇಲ್ಲದಿದ್ದರೆ ಶಬ್ಧ ಮಾಲಿನ್ಯದ ಮಟ್ಟ ಏರುತ್ತದೆ. ವಾಹನ ಚಾಲನೆ ಶ್ರಮದಾಯಕವಾಗುತ್ತದೆ.
ಇಷ್ಟಾಗಿಯೂ ಮುಂದೆ ಚಲಿಸಲು ಸಿಗುವ ಅವಕಾಶ ಅಷ್ಟಕಷ್ಟೆ ಮಿತಿಮೀರಿದ ವೇಗ ಬೇಡ; ಅಥವಾ ಸಂಚಾರ ನಿಯಂತ್ರಣ ದೀಪಗಳನ್ನು ಜಿಗಿಯಬೇಡಿ, ನೀವು ಗಳಿಸುವ/ಉಳಿಸುವ ಸಮಯ ನಿಮ್ಮ ಜೀವ ಅಥವಾ ಅಂಗಾಂಗಗಳಿಗೆ ಒಡ್ಡುವ ಅಪಾಯಕ್ಕೆ ಸಾಟಿಯಿಲ್ಲ.
ನಿಮ್ಮ ವಾಹನವನ್ನು ಸುಸ್ಥಿತಿಯಲ್ಲಿಡಿ, ಹೊರಸೂಸುವ ಹೊಗೆ ಗಾಳಿಯ ಮಾಲಿನ್ಯಕ್ಕೆ ಕಾರಣವಾಗುತ್ತದೆ ಮತ್ತು ಆರೋಗ್ಯಕ್ಕೆ ಅಪಾಯಕಾರಿಯಾಗುತ್ತದೆ.
ನಿಮ್ಮಷ್ಟು ಅದೃಷ್ಟಶಾಲಿಗಳಲ್ಲದ ಪಾದಚಾರಿಗಳು, ಸೈಕಲ್ ಸವಾರರು, ಮತ್ತು ದ್ವಿಚಕ್ರ ವಾಹನದವರಿಗೆ ಸೌಜನ್ಯ ತೋರಿಸಿ ಮತ್ತು ಉದಾರವಂತರಾಗಿ

ಇತ್ತೀಚಿನ ನವೀಕರಣ​ : 18-10-2020 01:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಚಿಕ್ಕಮಗಳೂರು ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080